ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಖ್ಯಾತ ರೇಡಿಯೋ  ಉದ್ಘೋಷಕ ಅಮೀನ್ ಸಯಾನಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ 

ಪ್ರಕಟಣಾ ದಿನಾಂಕ: 21 FEB 2024 1:02PM by PIB Bengaluru

ಹೆಸರಾಂತ ರೇಡಿಯೋ ಉದ್ಘೋಷಕ  ಅಮೀನ್ ಸಯಾನಿ ಅವರ ನಿಧನಕ್ಕೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಮೀನ್ ಸಯಾನಿ ಜಿ ಭಾರತೀಯ ರೇಡಿಯೋ ಮಾಧ್ಯಮವನ್ನು ಕ್ರಾಂತಿಕಾರಿಯಾಗಿ ಪರಿವರ್ತಿಸುವುದರಲ್ಲಿ  ಪ್ರಮುಖ ಪಾತ್ರ ವಹಿಸುವುದರ  ಜೊತೆಗೆ ತಮ್ಮ ಕೇಳುಗರೊಂದಿಗೆ ವಿಶೇಷವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು ಎಂದು ಶ್ರೀ ಮೋದಿ ಹೇಳಿದರು.

ಎಕ್ಸ್ ಪೋಸ್ಟ್‌ನಲ್ಲಿ ಪ್ರಧಾನಿ ಹೀಗೆ ಹೇಳಿದ್ದಾರೆ.

“ಆಕಾಶವಾಣಿಯಲ್ಲಿ ಬರುತ್ತಿದ್ದ ಶ್ರೀ ಅಮೀನ್ ಸಯಾನಿ ಜೀ ಅವರ ಮೋಡಿ ಮಾಡುವ ಚಿನ್ನದ ಧ್ವನಿಯು ಅವರನ್ನು ಎಲ್ಲ ವಯೋಮಾನದವರು ಇಷ್ಟಪಡುವಂತೆ ಮಾಡಿತ್ತು. ತಮ್ಮ ಅವಿರತ ಪರಿಶ್ರಮದಿಂದ ರೇಡಿಯೋ ಮಾಧ್ಯಮವನ್ನು ಕ್ರಾಂತಿಕಾರಿಯಾಗಿ ಪರಿವರ್ತಿಸುವುದರಲ್ಲಿ  ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಸಯಾನಿ ಜೀ  ಅವರು ತಮ್ಮ ಕೇಳುಗರೊಂದಿಗೆ ವಿಶೇಷವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಅವರ ನಿಧನ ತೀವ್ರ ದುಃಖ ತಂದಿದೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಎಲ್ಲಾ ರೇಡಿಯೋ ಪ್ರಿಯರಿಗೆ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ."

***


(ಪ್ರಕಟಣೆ ಐ.ಡಿ.: 2007710) ವಿಸಿಟರ್ ಕೌಂಟರ್ : 120