ಹಣಕಾಸು ಸಚಿವಾಲಯ
ನವದೆಹಲಿಯಲ್ಲಿ ಡಾ.ಅರವಿಂದ್ ಪನಗರಿಯಾ ಅವರ ಅಧ್ಯಕ್ಷತೆಯಲ್ಲಿ 16ನೇ ಹಣಕಾಸು ಆಯೋಗದ ಮೊದಲ ಸಭೆ ನಡೆಯಿತು
Posted On:
14 FEB 2024 3:03PM by PIB Bengaluru
16ನೇ ಹಣಕಾಸು ಆಯೋಗವು (XVI-FC) ತನ್ನ ಮೊದಲ ಸಭೆಯನ್ನು ಡಾ. ಅರವಿಂದ್ ಪನಗರಿಯಾ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯ ಜನಪಥ್ ನ ಜವಾಹರ್ ವ್ಯಾಪಾರಿ ಭವನದಲ್ಲಿ ನಡೆಸಿತು. ಅದರ ಅಧ್ಯಕ್ಷರು ಮತ್ತು ಸದಸ್ಯರನ್ನು 16ನೇ ಹಣಕಾಸು ಆಯೋಗದ ಕಾರ್ಯದರ್ಶಿ, ಶ್ರೀ ಋತ್ವಿಕ್ ರಂಜನಮ್ ಪಾಂಡೆ ಮತ್ತು ಹಣಕಾಸು ಆಯೋಗದ ಇತರ ಅಧಿಕಾರಿಗಳು ಸ್ವಾಗತಿಸಿದರು.
16ನೇ ಹಣಕಾಸು ಆಯೋಗವು ಭಾರತದ ರಾಷ್ಟ್ರಪತಿಗಳು ಮಾಡಿದ ಆದೇಶ ಹಾಗೂ ಹಣಕಾಸು ಸಚಿವಾಲಯದ ಅಧಿಸೂಚನೆಯಾದ ಎಸ್ಒ 5533 (ಇ), 2023ರ ಡಿಸೆಂಬರ್ 31ರ ಪ್ರಕಾರ ತನ್ನ ಉಲ್ಲೇಖದ ನಿಯಮಗಳನ್ನು ಚರ್ಚಿಸಿತು.
ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು, ಭಾರತ ಸರ್ಕಾರದ ಸಚಿವಾಲಯಗಳು ಹಾಗೂ ತಜ್ಞರು ಸೇರಿದಂತೆ ವಿವಿಧ ಮಧ್ಯಸ್ಥಗಾರರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಲು 16ನೇ ಹಣಕಾಸು ಆಯೋಗವು ಒಪ್ಪಿಕೊಂಡಿದೆ.
16ನೇ ಹಣಕಾಸು ಆಯೋಗವು ವಿವರವಾದ ವಿಶ್ಲೇಷಣಾತ್ಮಕ ಕೆಲಸವನ್ನು ಕೈಗೊಳ್ಳಲಿದ್ದು, ಪ್ರಮುಖ ಸಂಶೋಧನಾ ಸಂಸ್ಥೆಗಳು, ಪ್ರಮುಖ ಚಿಂತಕರ ವೇದಿಕೆಗಳು ಮತ್ತು ಹಣಕಾಸಿನ ಫೆಡರಲ್ ಸಂಬಂಧಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಇತರ ಸಂಸ್ಥೆಗಳಿಂದ ಸಂಗ್ರಹಿಸಬಹುದಾದ ಎಲ್ಲಾ ವಿವರವನ್ನು ಬಳಸಿಕೊಳ್ಳುವ ಅಗತ್ಯವನ್ನು ಅನುಮೋದಿಸಿದೆ.
ನವದೆಹಲಿಯ ಜನಪಥ್ ನಲ್ಲಿರುವ ಜವಾಹರ್ ವ್ಯಾಪಾರಿ ಭವನದಲ್ಲಿ ತನ್ನ ಕಚೇರಿಯನ್ನು ಸ್ಥಾಪಿಸಲು 16ನೇ ಹಣಕಾಸು ಆಯೋಗವು ಅನುಮೋದನೆ ನೀಡಿದೆ.
16ನೇ ಹಣಕಾಸು ಆಯೋಗವು ತನ್ನ ಶಿಫಾರಸುಗಳನ್ನು 2025ರ ಅಕ್ಟೋಬರ್ 31ರೊಳಗೆ ಲಭ್ಯವಾಗುವಂತೆ ಮಾಡಲಿದ್ದು, ಇದು 2026ರ ಏಪ್ರಿಲ್ 1ರಿಂದ ಪ್ರಾರಂಭವಾಗುವ 5 ವರ್ಷಗಳ ಪಂಚವಾರ್ಷಿಕ ಅವಧಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಲಿದೆ.
*****
(Release ID: 2005940)
Visitor Counter : 194