ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಕ್ಯಾಬಿನೆಟ್ ಭಾರತೀಯ ರೈಲ್ವೆಯಾದ್ಯಂತ 6 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ: ರೈಲು ಪ್ರಯಾಣ ಸುಲಭಗೊಳಿಸಲು, ಸರಕು ಸಾಗಣೆ ವೆಚ್ಚ ಕಡಿಮೆ ಮಾಡಲು, ತೈಲ ಆಮದು ಕಡಿಮೆ ಮಾಡಲು ಮತ್ತು ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಲು ಇದು ಅನುವು ಮಾಡಲಿದೆ


ಈ ಯೋಜನೆಗಳು ರೈಲು ಕಾರ್ಯಾಚರಣೆ ಸುಗಮಗೊಳಿಸುತ್ತವೆ, ಸುಧಾರಿತ ಸಮಯಪ್ರಜ್ಞೆ ಉಂಟುಮಾಡುತ್ತವೆ, ಅಸ್ತಿತ್ವದಲ್ಲಿರುವ ಮಾರ್ಗಗಳ ಸಾಮರ್ಥ್ಯ ಹೆಚ್ಚಿಸುತ್ತದೆ ಮತ್ತು ರೈಲುಗಳ ಪುನಶ್ಚೇತನ ಸಮಯ ಕಾಪಾಡುತ್ತವೆ

ಸಂಚಾರ ದಟ್ಟಣೆ ಕಡಿಮೆ ಮಾಡಲು, ರೈಲು ಸಂಚಾರ ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತವೆ

ಯೋಜನೆಗಳು ನಿರ್ಮಾಣ ಸಮಯದಲ್ಲಿ ಸುಮಾರು 3 (ಮೂರು) ಕೋಟಿ ಮಾನವ ದಿನಗಳ ನೇರ ಉದ್ಯೋಗ ಸೃಷ್ಟಿಸುತ್ತವೆ

ಯೋಜನೆಯ ವೆಚ್ಚ ಗಾತ್ರ ಅಂದಾಜು 12,343 ಕೋಟಿ ರೂಪಾಯಿ; 2029-30ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ

Posted On: 08 FEB 2024 8:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರೈಲ್ವೆ ಸಚಿವಾಲಯದ 6 (ಆರು) ಯೋಜನೆಗಳಿಗೆ ಒಟ್ಟು ಅಂದಾಜು ವೆಚ್ಚ 12,343 ಕೋಟಿ  ರೂ. ಮೊತ್ತದ ಬಹು-ಟ್ರ್ಯಾಕಿಂಗ್ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳಿಗೆ ಕೇಂದ್ರ ಸರ್ಕಾರ 100% ಧನಸಹಾಯ ಮಾಡಲಿದೆ. ಈ ಯೋಜನೆಗಳು ರೈಲ್ವೆ ಕಾರ್ಯಾಚರಣೆಗಳನ್ನು ಸರಾಗಗೊಳಿಸುತ್ತವೆ, ಸಂಚಾರ ದಟ್ಟಣೆ ಕಡಿಮೆ ಮಾಡುತ್ತವೆ, ಭಾರತೀಯ ರೈಲ್ವೆಯಾದ್ಯಂತ ಅತ್ಯಂತ ಜನನಿಬಿಡ ವಿಭಾಗಗಳಲ್ಲಿ ಹೆಚ್ಚು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿ ಒದಗಿಸುತ್ತವೆ. ಈ ಯೋಜನೆಗಳು ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನವಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿವೆ. ಇದು ದೇಶದ ಜನತೆಯನ್ನು "ಆತ್ಮನಿರ್ಭರ್" ಮಾಡುವ ಮೂಲಕ ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ಅವರ ಉದ್ಯೋಗ, ಸ್ವಯಂ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತದೆ.

6 ರಾಜ್ಯಗಳಲ್ಲಿ ಅಂದರೆ, ರಾಜಸ್ಥಾನ, ಅಸ್ಸಾಂ, ತೆಲಂಗಾಣ, ಗುಜರಾತ್, ಆಂಧ್ರ ಪ್ರದೇಶ ಮತ್ತು ನಾಗಾಲ್ಯಾಂಡ್‌ನ 18 ಜಿಲ್ಲೆಗಳನ್ನು ಒಳಗೊಂಡಿರುವ 6 (ಆರು) ಯೋಜನೆಗಳು ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ರಾಲ್ವೆ ಜಾಲವನ್ನು 1,020 ಕಿಮೀ ಉದ್ದ ಹೆಚ್ಚಿಸುತ್ತವೆ. ಈ ರಾಜ್ಯಗಳ ಜನರಿಗೆ ಸುಮಾರು 3 (ಮೂರು) ಕೋಟಿ ಮಾನವ ದಿನಗಳ ಉದ್ಯೋಗ ಒದಗಿಸುತ್ತದೆ.

ಈ ಯೋಜನೆಗಳು ಬಹು-ಮಾದರಿ ಸಂಪರ್ಕಕ್ಕಾಗಿ ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನ ಫಲಿತಾಂಶವಾಗಿದೆ, ಇದು ಸಮಗ್ರ ಯೋಜನೆ ಮೂಲಕ ಸಾಧ್ಯವಾಗಿದೆ. ಜನರು, ಸರಕು ಮತ್ತು ಸೇವೆಗಳ ಚಲನೆಗೆ ತಡೆರಹಿತ ಸಂಪರ್ಕ ಒದಗಿಸುತ್ತದೆ.

 

ಸರಣಿ ಸಂಖ್ಯೆ

ಜೋಡಿ ರೈಲು ಮಾರ್ಗ ಹೊಂದುವ ವಿಭಾಗದ ಹೆಸರು

ಉದ್ದ (ಕಿ.ಮೀ.)

ಅಂದಾಜು ವೆಚ್ಚ(ರೂ.ಗಳಲ್ಲಿ)

ರಾಜ್ಯ

1

ಅಜ್ಮೀರ್-ಚಾಂದೇರಿಯಾ

178.28

1813.28

ರಾಜಸ್ಥಾನ

2

ಜೈಪುರ-ಸವಾಯಿ ಮಾಧೋಪುರ್

131.27

1268.57

ರಾಜಸ್ಥಾನ

3.

ಲುನಿ-ಸಮ್ದಾರಿ-ಭಿಲ್ಡಿ

271.97

3530.92

ಗುಜರಾತ್ & ರಾಜಸ್ಥಾನ

4

ಅಗ್ತೋರಿ-ಕಾಮಾಕ್ಯ ಹೊಸ ರೈಲು ಮಾರ್ಗ ಮತ್ತು ರಸ್ತೆ ಸೇತುವೆ

7.062

1650.37

ಅಸ್ಸಾಂ

5

ಲುಮ್ ದಿಂಗ್-ಫುರ್ಕಾಟಿಂಗ್

140

2333.84

ಅಸ್ಸಾಂ & ನಾಗಾಲ್ಯಾಂಡ್

6

ಮೋಟುಮಾರಿi-ವಿಷ್ಣುಪುರಂ ಮತ್ತು

ಮೋಟುಮರಿಯಲ್ಲಿ ರೈಲ್ ಓವರ್ ರೈಲ್

88.81

 

10.87

1746.20

ತೆಲಂಗಾಣ & ಆಂಧ್ರ ಪ್ರದೇಶ

ಆಹಾರ ಧಾನ್ಯಗಳು, ಆಹಾರ ಸರಕುಗಳು, ರಸಗೊಬ್ಬರಗಳು, ಕಲ್ಲಿದ್ದಲು, ಸಿಮೆಂಟ್, ಕಬ್ಬಿಣ, ಉಕ್ಕು, ಹಾರುಬೂದಿ, ಕ್ಲಿಂಕರ್, ಸುಣ್ಣದ ಕಲ್ಲು, ಪಿಒಎಲ್, ಕಂಟೈನರ್ ಮುಂತಾದ ಸರಕುಗಳ ಸಾಗಣೆಗೆ ಇವು ಅತ್ಯಗತ್ಯ ಮಾರ್ಗಗಳಾಗಿವೆ. ಸಾಮರ್ಥ್ಯ ವರ್ಧನೆಯ ಕಾರ್ಯಗಳು ವಾರ್ಷಿಕ 87 ದಶಲಕ್ಷ ಟನ್(MTPA) ಹೆಚ್ಚುವರಿ ಸರಕು ಸಾಗಣೆಗೆ ಕಾರಣವಾಗುತ್ತವೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷತೆಯ ಸಾರಿಗೆ ವಿಧಾನವಾಗಿದ್ದು, ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಸರಕು ಸಾಗಣೆ ವೆಚ್ಚ ಕಡಿಮೆ ಮಾಡಲು, ತೈಲ ಆಮದು ಮತ್ತು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

 

 

*********

 



(Release ID: 2004373) Visitor Counter : 60