ಪ್ರಧಾನ ಮಂತ್ರಿಯವರ ಕಛೇರಿ

​​​​​​​ಹಿಂದಿ ಮತ್ತು ಒಡಿಯಾ ಚಿತ್ರರಂಗದ ದಿಗ್ಗಜ ಶ್ರೀ ಸಾಧು ಮೆಹರ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 03 FEB 2024 2:17PM by PIB Bengaluru

ಹಿಂದಿ ಮತ್ತು ಒಡಿಯಾ ಚಿತ್ರರಂಗದ ದಿಗ್ಗಜರಾದ ಶ್ರೀ ಸಾಧು ಮೆಹರ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನ ಮಂತ್ರಿ ಪೋಸ್ಟ್ ಮಾಡಿದ್ದಾರೆ.

“ಶ್ರೀ ಸಾಧು ಮೆಹರ್ ಜಿ ಅವರ ನಿಧನವು ಚಲನಚಿತ್ರ ಜಗತ್ತಿಗೆ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಗೆ ನಷ್ಟವಾಗಿದೆ. ಹಿಂದಿ ಮತ್ತು ಒಡಿಯಾ ಚಿತ್ರರಂಗದಲ್ಲಿ ಧೀಮಂತರಾಗಿದ್ದವರು. ಅವರ ಅಸಾಧಾರಣ ಪ್ರತಿಭೆ ಮತ್ತು ಸಮರ್ಪಣೆ ಅನುಕರಣೀಯವಾಗಿತ್ತು. ಅವರ ಕುಟುಂಬ ಸದಸ್ಯರು, ಸಹೋದ್ಯೋಗಿಗಳು ಮತ್ತು ಅನೇಕ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಅವರು ಬಿಟ್ಟುಹೋದ ಶ್ರೀಮಂತ ಕಲಾ ಪರಂಪರೆಯನ್ನು ನಾವು ಗೌರವಿಸುತ್ತೇವೆ. ಓಂ ಶಾಂತಿ

***



(Release ID: 2002487) Visitor Counter : 49