ಹಣಕಾಸು ಸಚಿವಾಲಯ
2024-25ನೇ ಸಾಲಿನ ಮಧ್ಯಂತರ ಕೇಂದ್ರ ಬಜೆಟ್ ನ ಮುಖ್ಯಾಂಶಗಳು
Posted On:
01 FEB 2024 12:54PM by PIB Bengaluru
‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್’ ಮಂತ್ರದೊಂದಿಗೆ ಮತ್ತು ಇಡೀ ರಾಷ್ಟ್ರದ ‘ಸಬ್ ಕಾ ಪ್ರಯಾಸ್’ ವಿಧಾನದೊಂದಿಗೆ ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಇಂದು 2024-25ನೇ ಸಾಲಿನ ಮಧ್ಯಂತರ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಬಜೆಟ್ ನ ಪ್ರಮುಖಾಂಶಗಳು ಈ ಕೆಳಗಿನಂತಿವೆ.
ಭಾಗ-ಎ
ಸಾಮಾಜಿಕ ನ್ಯಾಯ
- ಪ್ರಧಾನಮಂತ್ರಿ ಅವರು ನಾಲ್ಕು ಪ್ರಮುಖ ವರ್ಗದವರು ಅಂದರೆ ಗರೀಬ್ (ಬಡವರು), ಮಹಿಳೆಯರು (ವುಮೆನ್) ಯುವ (ಯುವಜನತೆ) ಮತ್ತು ಅನ್ನದಾತ (ರೈತರ) ಅಭ್ಯುದಯಕ್ಕೆ ಹೆಚ್ಚಿನ ಒತ್ತು
‘ಬಡವರ ಕಲ್ಯಾಣ ದೇಶದ ಕಲ್ಯಾಣ’
- ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಬರಲು ಸರ್ಕಾರದಿಂದ ನೆರವು.
- ಪಿಎಂ-ಜನ್ ಧನ್ ಖಾತೆಗಳನ್ನು ಬಳಸಿಕೊಂಡು 34 ಲಕ್ಷ ಕೋಟಿ ಡಿಬಿಟಿ ರೂ.ಗಳ ವರ್ಗಾವಣೆ, ಇದರಿಂದ ಸರಕಾರಕ್ಕೆ 2.7 ಲಕ್ಷ ಕೋಟಿ ರೂ. ಉಳಿತಾಯಕ್ಕೆ ಕಾರಣ.
- ಪಿಎಂ-ಸ್ವನಿಧಿಯಡಿ 78 ಲಕ್ಷ ಬೀದಿ ವ್ಯಾಪಾರಿಗಳಿಗೆ ಸಾಲದ ನೆರವು, 2.3 ಲಕ್ಷ ಮಂದಿ ಮೂರನೇ ಬಾರಿಗೆ ಸಾಲ ಪಡೆದಿದ್ದಾರೆ.
- ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಜಿಟಿ) ಅಭಿವೃದ್ಧಿಗೆ ಸಹಾಯ ಮಾಡಲು ಪಿಎಂ ಜನ-ಮನ್ ಯೋಜನೆ
- ಪಿಎಂ-ವಿಶ್ವಕರ್ಮ ಯೋಜನೆಯು 18 ವೃತ್ತಿಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಮತ್ತು ಕರಕುಶಲ ಜನರಿಗೆ ಆರಂಭದಿಂಧ ಅಂತ್ಯದಯವರೆಗೆ ಬೆಂಬಲ ಒದಗಿಸುತ್ತದೆ
‘ಅನ್ನದಾತ’ನ ಕಲ್ಯಾಣ
- ಪಿಎಂ-ಕಿಸಾನ್ ಸಮ್ಮಾನ್ ಯೋಜೆನಯಡಿ 11.8 ಕೋಟಿ ರೈತರಿಗೆ ಹಣಕಾಸು ನೆರವು
- ಪಿಎಂ ಫಸಲ್ ಬಿಮಾ ಯೋಜನೆಯಡಿ 4 ಕೋಟಿ ರೈತರಿಗೆ ಬೆಳೆ ವಿಮಾ ಯೋಜನೆ
- ಎಲೆಕ್ಟ್ರಾನಿಕ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನ್ಯಾಮ್) ಮೂಲಕ 1361 ಮಂಡಿಗಳ ಸಂಯೋಜನೆ, ಸುಮಾರು 3 ಲಕ್ಷ ಕೋಟಿ ಪ್ರಮಾಣದ ವ್ಯಾಪಾರದ ಮೂಲಕ 1.8 ಕೋಟಿ ರೈತರಿಗೆ ಸೇವೆಗಳನ್ನು ಒದಗಿಸುವುದು.
ನಾರಿಶಕ್ತಿಗೆ ವೇಗ
- 30 ಕೋಟಿ ಮುದ್ರಾ ಸಾಲ ಯೋಜನೆಯನ್ನು ಮಹಿಳೆಯರಿಗಾಗಿ ನೀಡಲಾಗಿದೆ.
- ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕಕ್ಕಳ ನೋಂದಣಿ ಶೇ.28ಕ್ಕೆ ಏರಿಕೆ
- ಎಸ್ ಇಟಿಎಂ ಕೋರ್ಸ್‌ಗಳಲ್ಲಿ, ಹುಡುಗಿಯರು ಮತ್ತು ಮಹಿಳೆಯರು ದಾಖಲಾತಿಯಲ್ಲಿ ಶೇ.43 ರಷ್ಟಿದ್ದು, ಇದು ವಿಶ್ವದಲ್ಲೇ ಅತ್ಯಧಿಕ.
- ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಶೇ.70ಕ್ಕಿಂತ ಅಧಿಕ ಮನೆಗಳನ್ನು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ನೀಡಲಾಗಿದೆ.
ಪಿಎಂ ಆವಾಸ್ ಯೋಜನೆ (ಗ್ರಾಮೀಣ)
- ಕೋವಿಡ್ ಸವಾಲಿನ ನಡುವೆಯೂ ಪಿಎಂ ಆವಾಸ್ ಯೋಜನೆ (ಗ್ರಾಮೀಣ)ದ ಮೂರು ಕೋಟಿ ಮನೆಗಳ ಸವಾಲಿನ ಗುರಿ ಶೀಘ್ರ ಸಾಧನೆ
- ಮುಂದಿನ 5 ವರ್ಷಗಳಲ್ಲಿ ಇನ್ನೂ ಎರಡು ಕೋಟಿ ಹೆಚ್ಚುವರಿ ಮನೆಗಳ ನಿರ್ಮಾಣ
ಮೇಲ್ಛಾವಣಿ ಸೌರೀಕರಣ ಮತ್ತು ಮುಫತ್ ಬಿಜ್ಲಿ
- ಮೇಲ್ಛಾವಣಿ ಸೌರೀಕರಣದ ಮೂಲಕ 1 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್
- ಪ್ರತಿ ಕುಟುಂಬಕ್ಕೆ ವಾರ್ಷಿಕ 15000 ಸಾವಿರದಿಂದ 18000 ಸಾವಿರ ರೂ. ಉಳಿತಾಯ ನಿರೀಕ್ಷೆ.
ಆಯುಷ್ಮಾನ್ ಭಾರತ್
- ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ರಕ್ಷಣೆ ವ್ಯಾಪ್ತಿ ಆಶಾ ಕಾರ್ಯಕರ್ತರು, ಅಂಗನವಾಗಿ ಕಾರ್ಯಕರ್ತರು ಮತ್ತು ಸಹಾಯರಿಯರಿಗೆ ವಿಸ್ತರಣೆ.
ಕೃಷಿ ಮತ್ತು ಆಹಾರ ಸಂಸ್ಕರಣೆ
- ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆಯು 38 ಲಕ್ಷ ರೈತರಿಗೆ ಪ್ರಯೋಜನವನ್ನು ನೀಡಿದೆ ಮತ್ತು 10 ಲಕ್ಷ ಉದ್ಯೋಗ ಸೃಷ್ಟಿಸಿದೆ.
- ಪ್ರಧಾನಮಂತ್ರಿ ಕಿರು ಅಹಾರ ಸಂಸ್ಕರಣಾ ಉದ್ಯಮದ ಸಾಂಸ್ಥೀಕರಣವು 2.4 ಲಕ್ಷ ಸ್ವಸಹಾಯ ಗುಂಪುಗಳು ಮತ್ತು 60000 ವ್ಯಕ್ತಿಗಳಿಗೆ ಸಾಲದ ಸಂಯೋಜನೆಗೆ ಸಹಾಯ ಮಾಡಿದೆ.
ಬೆಳವಣಿಗೆ, ಉದ್ಯೋಗ ಮತ್ತು ಅಭಿವೃದ್ಧಿಗೆ ವೇಗವರ್ಧಕ ಸಂಶೋಧನೆ ಮತ್ತು ನಾವೀನ್ಯತೆ
- ದೀರ್ಘಾವಧಿಯ ಹಣಕಾಸು ಅಥವಾ ದೀರ್ಘಾವಧಿಯ ಅವಧಿ ಮತ್ತು ಕಡಿಮೆ ಅಥವಾ ಶೂನ್ಯ ಬಡ್ಡಿದರಗಳೊಂದಿಗೆ ಮರುಹಣಕಾಸು ಒದಗಿಸಲು ಐವತ್ತು ವರ್ಷಗಳ ಬಡ್ಡಿ ರಹಿತ ಸಾಲದೊಂದಿಗೆ 1 ಲಕ್ಷ ಕೋಟಿ ರೂಪಾಯಿ ಆವರ್ತ ನಿಧಿಯನ್ನು ಸ್ಥಾಪಿಸಲಾಗುವುದು.
- ರಕ್ಷಣಾ ಉದ್ದೇಶಗಳಿಗಾಗಿ ಡೀಪ್-ಟೆಕ್ ತಂತ್ರಜ್ಞಾನಗಳನ್ನು ಬಲಪಡಿಸಲು ಮತ್ತು 'ಆತ್ಮನಿರ್ಭರ'ವನ್ನು ವೇಗಗೊಳಿಸಲು ಹೊಸ ಯೋಜನೆ ಆರಂಭಿಸಲಾಗುವುದು
ಮೂಲಸೌಕರ್ಯ
- ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಬಂಡವಾಳ ವೆಚ್ಚ ಶೇ.1.11 ರಿಂದ 11,11,111 ಕೋಟಿಗೆ ಏರಿಕೆ ಅಂದರೆ ಜಿಡಿಪಿಯ ಶೇ.3.4ರಷ್ಟು
ರೈಲ್ವೆ
- ಸಾರಿಗೆ ದಕ್ಷತೆ ಮತ್ತು ಸಾಗಾಣೆ ವೆಚ್ಚ ತಗ್ಗಿಸಲು ಪಿಎಂಗತಿ ಶಕ್ತಿ ಯೋಜನೆಯಡಿ ಮೂರು ಪ್ರಮುಖ ರೈಲ್ವೆ ಕಾರಿಡಾರ್ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು
- ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್ ಗಳು
- ಬಂದರು ಸಂಪರ್ಕ ಕಾರಿಡಾರ್ ಗಳು
- ಅಧಿಕ ವಾಹನ ದಟ್ಟಣೆ ಕಾರಿಡಾರ್ ಗಳು
40,000 ಸಾಮಾನ್ಯ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಗುಣಮಟ್ಟಕ್ಕೆ ಪರಿವರ್ತನೆ
ವೈಮಾನಿಕ ವಲಯ
- ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದುಪ್ಪಟ್ಟಾಗಿ 149ಕ್ಕೆ ಏರಿದೆ.
- 517 ಹೊಸ ಮಾರ್ಗಗಳಲ್ಲಿ 1.3 ಕೋಟಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ.
- ಭಾರತೀಯ ವಿಮಾನಯಾನ ಕಂಪನಿಗಳು ಸುಮಾರು 1000 ಹೊಸ ವಿಮಾನಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ.
ಹಸಿರು ಇಂಧನ
- 2030 ರ ವೇಳೆಗೆ ಕಲ್ಲಿದ್ದಲು ಅನಿಲೀಕರಣ ಮತ್ತು 100 ಎಂಟಿ ದ್ರವೀಕರಣ ಸಾಮರ್ಥ್ಯವನ್ನು ಸ್ಥಾಪಿಸಲಾಗುವುದು.
- ಸಾಗಾಣಿಕೆಗಾಗಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ಕಂಪ್ರೆಸ್ಡ್ ಜೈವಿಕ ಅನಿಲದ (ಸಿಬಿಜಿ) ಹಂತಹಂತವಾಗಿ ಮಿಶ್ರಣ ಮತ್ತು ಗೃಹಬಳಕೆಯ ಉದ್ದೇಶಗಳಿಗಾಗಿ ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್ ಜಿ) ಕಡ್ಡಾಯಗೊಳಿಸಬೇಕು
ಪ್ರವಾಸೋದ್ಯಮ ವಲಯ
- ಜಾಗತಿಕ ಮಟ್ಟದಲ್ಲಿ ಅವುಗಳ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಸೇರಿದಂತೆ ಐಕಾನಿಕ್ ಪ್ರವಾಸಿ ಕೇಂದ್ರಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ರಾಜ್ಯಗಳನ್ನು ಪ್ರೋತ್ಸಾಹಿಸುವುದು.
- ಗುಣಮಟ್ಟದ ಸೌಕರ್ಯಗಳು ಮತ್ತು ಸೇವೆಗಳನ್ನು ಒದಗಿಸುವುದನ್ನು ಆಧರಿಸಿ ಪ್ರಮುಖ ಪ್ರವಾಸಿ ಕೇಂದ್ರಗಳಿಗೆ ರೇಟಿಂಗ್ ನೀಡಲು ನೀತಿ ರೂಪಿಸುವುದು.
- ಪ್ರವಾಸಿ ಕೇಂದ್ರಗಳ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡಲು ರಾಜ್ಯಗಳಿಗೆ ದೀರ್ಘಾವಧಿಯ ಬಡ್ಡಿರಹಿತ ಸಾಲ ಒದಗಿಸುವುದು
ಹೂಡಿಕೆಗಳು
- ಎಫ್ ಡಿಐ ಒಳಹರಿವು ದುಪ್ಪಟ್ಟು ಹೆಚ್ಚಳ, 2005-14ಕ್ಕೆ ಹೋಲಿಸಿದರೆ 2014-23ರ ನಡುವೆ 596 ಅಮೆರಿಕನ್ ಡಾಲರ್ ಗೆ ಹೆಚ್ಚಳ
‘ವಿಕಸಿತ ಭಾರತ’ಕ್ಕಾಗಿ ರಾಜ್ಯಗಳಲ್ಲಿ ಸುಧಾರಣೆಗಳು
- ರಾಜ್ಯ ಸರ್ಕಾರಗಳ ಮೈಲಿಗಲ್ಲು ಸಂಬಂಧಿತ ಸುಧಾರಣೆಗಳನ್ನು ಬೆಂಬಲಿಸಲು ಐವತ್ತು ವರ್ಷಗಳ ಬಡ್ಡಿ ರಹಿತ ಸಾಲವಾಗಿ ರೂ.75,000 ಕೋಟಿ ರೂ. ಒದಗಿಸಲು ಪ್ರಸ್ತಾಪಿಸಲಾಗಿದೆ.
ಪರಿಷ್ಕೃತ ಅಂದಾಜುಗಳು (ಆರ್ ಇ) 2023-24
- ಸಾಲವನ್ನು ಹೊರತುಪಡಿಸಿ ಪರಿಷ್ಕೃತ ಅಂದಾಜಿನಂತರ ಒಟ್ಟು ಸ್ವೀಕೃತಿ 27.56 ಲಕ್ಷ ಕೋಟಿ ರೂ. ಆ ಪೈಕಿ 23.34 ಲಕ್ಷ ಕೋಟಿ ತೆರಿಗೆ ಸ್ವೀಕೃತಿಯಾಗಿದೆ.
- ಪರಿಷ್ಕೃತ ಅಂದಾಜಿನಮಂತೆ ಒಟ್ಟು ವೆಚ್ಚ 44.90 ಲಕ್ಷ ಕೋಟಿ ರೂ.
- ಬಜೆಟ್ ನಲ್ಲಿ ಅಂದಾಜಿಸಿದ್ದಕ್ಕಿಂತ 30.03 ಲಕ್ಷ ಕೋಟಿ ರೂ.ಗಳ ಆದಾಯದ ಸ್ವೀಕೃತಿಯು ಹೆಚ್ಚಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ, ಇದು ಆರ್ಥಿಕತೆಯ ಬಲವಾದ ಬೆಳವಣಿಗೆಯ ವೇಗ ಮತ್ತು ಸಾಂಸ್ಥೀಕರಣವನ್ನು ಪ್ರತಿಬಿಂಬಿಸುತ್ತದೆ.
- ಪರಿಷ್ಕೃತ ಅಂದಾಜಿನಂತೆ ವಿತ್ತೀಯ ಕೊರತೆಯ 2023-24 ರ ಜಿಡಿಪಿ ಯ ಶೇ. 5.8.
ಬಜೆಟ್ ಅಂದಾಜುಗಳು 2024-25
- ಸಾಲಗಳು ಮತ್ತು ಒಟ್ಟು ವೆಚ್ಚವನ್ನು ಹೊರತುಪಡಿಸಿದರೆ ಒಟ್ಟು ಸ್ವೀಕೃತಿಗಳು ಕ್ರಮವಾಗಿ 30.80 ,ಮತ್ತು 47.66 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
- ತೆರಿಗೆ ಸ್ವೀಕೃತಿಗಳು 26.02 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
- ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಈ ವರ್ಷವೂ ಮುಂದುವರಿಸಲಾಗುದು, ಅದಕ್ಕಾಗಿ 1.3 ಲಕ್ಷ ಕೋಟಿ ಮೀಸಲಿಡಲಾಗಿದೆ.
- 2024-25ರಲ್ಲಿ ವಿತ್ತೀಯ ಕೊರತೆ ಜಿಡಿಪಿಯ ಶೇ. 5.1ರಷ್ಟು ಆಗಬಹುದೆಂದು ಅಂದಾಜಿಸಲಾಗಿದೆ.
- 2024-25 ರ ಅವಧಿಯಲ್ಲಿ ದಿನಾಂಸೆಕ್ಯೂರಿಟಿಗಳ ಮೂಲಕ ಒಟ್ಟು ಮತ್ತು ನಿವ್ವಳ ಮಾರುಕಟ್ಟೆ ಸಾಲವನ್ನು ಕ್ರಮವಾಗಿ 14.13 ಮತ್ತು .11.75 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ
ಭಾಗ-ಬಿ
ನೇರ ತೆರಿಗೆಗಳು
- ನೇರ ತೆರಿಗೆಗಳಿಗೆ ತೆರಿಗೆ ದರಗಳಲ್ಲಿ ಯಥಾಸ್ಥಿತಿ ಕಾಯ್ದಕೊಳ್ಳಲು ಹಣಕಾಸು ಸಚಿವರು ಉದ್ದೇಶಿಸಿದ್ದಾರೆ.
- ಕಳೆದ 10 ವರ್ಷಗಳಲ್ಲಿ ನೇರ ತೆರಿಗೆ ಸಂಗ್ರಹ ಮೂರು ಪಟ್ಟು ಹೆಚ್ಚಾಗಿದೆ, ರಿಟರ್ನ್ಸ್ ಸಲ್ಲಿಕೆ 2.4 ಪಟ್ಟು ಹೆಚ್ಚಳವಾಗಿದೆ.
- ಸರ್ಕಾರ ತೆರಿಗೆ ಪಾವತಿದಾರರ ಸೇವೆಗಳನ್ನು ಸುಧಾರಿಸಲು ಕ್ರಮ ಕೈಗೊಂಡಿದೆ.
- ಹಣಕಾಸು ವರ್ಷ 2009-10 ರವರೆಗಿನ ಅವಧಿಗೆ ಸಂಬಂಧಿಸಿದಂತೆ 25000 ರೂ. ವರೆಗಿನ ಬಾಕಿ ಇರುವ ನೇರ ತೆರಿಗೆ ಬೇಡಿಕೆಗಳನ್ನು ಹಿಂತೆಗೆದುಕೊಳ್ಳಲಾಗಿದೆ
- 2010-11 ರಿಂದ 2014-15 ರ ಆರ್ಥಿಕ ವರ್ಷಗಳಿಗೆ ರೂ 10000 ವರೆಗಿನ ಬಾಕಿ ಇರುವ ನೇರ ತೆರಿಗೆ ಬೇಡಿಕೆಗಳನ್ನು ಹಿಂತೆಗೆದುಕೊಳ್ಳಲಾಗಿದೆ
- ಇದು ಒಂದು ಕೋಟಿ ತೆರಿಗೆ ಪಾವತಿದಾರರಿಗೆ ಅನುಕೂಲ ಒದಗಿಸಲಿದೆ.
- ಸ್ಟಾರ್ಟ್-ಅಪ್‌ಗಳಿಗೆ ತೆರಿಗೆ ಪ್ರಯೋಜನಗಳು, ಸಾವರಿನ್ ವೆಲ್ತ್ ಫಂಡ್ ಗಳಿಂದ ಮಾಡಿದ ಹೂಡಿಕೆಗಳು ಅಥವಾ ಪಿಂಚಣಿ ನಿಧಿಗಳು 31.03.2025 ರವರೆಗೆ ವಿಸ್ತರಿಸಲಾಗಿದೆ
- ಐಎಫ್ ಎಸ್ ಇ ಯೂನಿಟ್‌ಗಳ ಕೆಲವು ಆದಾಯದ ಮೇಲಿನ ತೆರಿಗೆ ವಿನಾಯಿತಿಯನ್ನು 31.03.2024 ರಿಂದ 31.03.2025 ಕ್ಕೆ ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ
ಪರೋಕ್ಷ ತೆರಿಗೆಗಳು
- ಪರೋಕ್ಷ ತೆರಿಗೆಗಳು ಮತ್ತು ಆಮದು ಸುಂಕಗಳ ಮೇಲಿನ ತೆರಿಗೆಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ.
- ಭಾರತದಲ್ಲಿ ಜಿಎಸ್ ಟಿಯಿಂದ ಅತ್ಯುತ್ತಮ ಪರೋಕ್ಷ ತೆರಿಗೆ ಪದ್ದತಿ ಜಾರಿಯಾಗಿದೆ.
- ಈ ವರ್ಷ ಪ್ರತಿ ತಿಂಗಳು ಸರಾಸರಿ ಜಿಎಸ್ ಟಿ ಸಂಗ್ರಹ ದುಪ್ಪಟ್ಟು ಹೆಚ್ಚಾಗಿ 1.66 ಲಕ್ಷ ಕೋಟಿ ತಲುಪಿದೆ.
- ಜಿಎಸ್ ಟಿ ತೆರಿಗೆ ವ್ಯಾಪ್ತಿ ಎರಡು ಪಟ್ಟು ಹೆಚ್ಚಾಗಿದೆ.
- ರಾಜ್ಯಗಳ ಆದಾಯದ ತೆರಿಗೆ ಪಾವತಿ ಪುನಃಶ್ಚೇತನ 0.72 (2012-13ರಿಂದ 2015-16) ಇದ್ದದ್ದು ಜಿಎಸ್ ಟಿ ಜಾರಿ ನಂತರ 1.22ಕ್ಕೆ (2017-18ರಿಂದ 2022-23)ಹೆಚ್ಚಳವಾಗಿದೆ.
- ಜಿಎಸ್ ಟಿ ವಹಿವಾಟಿನ ಕುರಿತು ಶೇ.94 ರಷ್ಟು ಉದ್ಯಮದ ನಾಯಕರು ಸಾಕಾರಾತ್ಮಕ ಭಾವನೆ ವ್ಯಕ್ತಪಡಿಸಿದ್ದಾರೆ.
- ಜಿಎಸ್ ಟಿ ಆಧಾರಿತ ಪೂರೈಕೆ ಸರಣಿ ಗರಿಷ್ಠ ಬಳಕೆ
- ಜಿಎಸ್ ಟಿಯಿಂದ ವ್ಯಾಪಾರ ಮತ್ತು ಉದ್ಯಮದ ಅನುಪಾಲನಾ ಹೊರೆ ಇಳಿಕೆ
- ಬಹುತೇಕ ಸರಕು ಮತ್ತು ಸೇವೆಗಳ ಸಾಗಾಣೆ ವೆಚ್ಚ ಮತ್ತು ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಪ್ರಯೋಜನ
ವರ್ಷಗಳಲ್ಲಿ ತೆರಿಗೆ ಏಕರೂಪಗೊಳಿಸಲು ಪ್ರಯತ್ನಗಳು
- 2013-14 ಹಣಕಾಸು ವರ್ಷದಲ್ಲಿ 2.2 ಲಕ್ಷದಿಂದ 7 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಹೊಣೆಗಾರಿಕೆ ಇಲ್ಲ
- ಚಿಲ್ಲರೆ ವ್ಯಾಪಾರಗಳಿಗೆ ಪ್ರಿಸಂಟಿವ್ ತೆರಿಗೆ ಮಿತಿಯನ್ನು 2 ಕೋಟಿ ರೂ.ಗಳಿಂದ 3 ಕೋಟಿ ರೂ. ಗೆ ಹೆಚ್ಚಿಸಲಾಗಿದೆ
- ವೃತ್ತಿಪರರಿಗೆ ಪ್ರಿಸಂಟಿವ್ ತೆರಿಗೆ ಮಿತಿಯನ್ನು 50 ಲಕ್ಷ ರೂ.ಗಳಿಂದ 75 ಲಕ್ಷಕ್ಕೆ ರೂ.ಗೆ ಹೆಚ್ಚಿಸಲಾಗಿದ.
- ಕಾರ್ಪೊರೇಟ್ ಆದಾಯ ತೆರಿಗೆಯನ್ನು ಅಸ್ತಿತ್ವದಲ್ಲಿರುವ ದೇಶೀಯ ಕಂಪನಿಗಳಿಗೆ ಶೇ.30 ರಿಂದ 22 ಕ್ಕೆ ಇಳಿಸಲಾಗಿದೆ
- ಹೊಸ ಉತ್ಪಾದನಾ ಕಂಪನಿಗಳಿಗೆ ಕಾರ್ಪೊರೇಟ್ ಆದಾಯ ತೆರಿಗೆ ದರ ಶೇ. 15.
ತೆರಿಗೆ ಪಾವತಿದಾರರ ಸೇವೆಗಳಲ್ಲಿನ ಸಾಧನೆಗಳು
- ತೆರಿಗೆ ರಿಟರ್ನ್ಸ್ ಪ್ರೊಸೆಸಿಂಗ್ ಸರಾಸರಿ ಸಮಯ 2013-14ರಲ್ಲಿ 93 ದಿನ ಇದ್ದದ್ದು 2023-24ರಲ್ಲಿ 10 ದಿನಕ್ಕೆ ಇಳಿಕೆ.
- ಹೆಚ್ಚಿನ ದಕ್ಷತೆಗಾಗಿ ಮುಖರಹಿತ ಮೌಲ್ಯಮಾಪನ ಮತ್ತು ಮೇಲ್ಮನವಿ ಸಲ್ಲಿಕೆ ಆರಂಭ.
- ನವೀಕರಿಸಿದ ಆದಾಯ ತೆರಿಗೆ ರಿಟರ್ನ್ಸ್, ಹೊಸ ಫಾರ್ಮ್ 26ಎಎಸ್ ಮತ್ತು ಮೊದಲೇ ಭರ್ತಿ ಮಾಡಿದ ಸರಳೀಕೃತ ರಿಟರ್ನ್ ಫೈಲಿಂಗ್‌ಗಾಗಿ ತೆರಿಗೆ ರಿಟರ್ನ್ಸ್
- ಕಸ್ಟಮ್ಸ್ ನಲ್ಲಿನ ಸುಧಾರಣೆಗಳಿಂದಾಗಿ ಆಮದು ರಿಲೀಸ್ ಸಮಯ ಇಳಿಕೆ
- ಇನ್ ಲ್ಯಾಂಡ್ ಕಂಟೈನರ್ ಡಿಪೋಗಳಲ್ಲಿ 71 ದಿನಗಳಿಗೆ ಅಂದರೆ ಶೇ.47ರಷ್ಟು ಇಳಿಕೆ
- ಏರ್ ಕಾರ್ಗೋ ಕಾಂಪ್ಲೆಕ್ಸ್ ಗಳಲ್ಲಿ 44 ಗಂಟೆಗಳಿಗೆ ಅಂದರೆ ಶೇ.28 ರಷ್ಟು ಇಳಿಕೆ
- ಸಮುದ್ರದ ಬಂದರುಗಳಲ್ಲಿ 85 ಗಂಟೆಗಳು ಅಂದರೆ ಶೇ. 27ರಷ್ಟು ಇಳಿಕೆ
ಆರ್ಥಿಕತೆ ಹಿಂದೆ ಮತ್ತು ಈಗ
- 2014ರಲ್ಲಿ ಆರ್ಥಿಕತೆಯನ್ನು ಸುಸ್ಥಿರತೆಗೆ ತರುವ ಹೊಣೆಗಾರಿಕೆ ಮತ್ತು ಸರ್ಕಾರದ ವ್ಯವಸ್ಥೆಯನ್ನು ಸರಿಪಡಿಸುವ ಹೊಣೆಗಾರಿಕೆ ಇತ್ತು. ಆಗ ತಕ್ಷಣಕ್ಕೆ ಮಾಡಬೇಕಾದ ಕೆಲಸ;
- ಬಂಡವಾಳ ಆಕರ್ಷಣೆ
- ತುಂಬಾ ಅಗತ್ಯವಿದ್ದ ಸುಧಾರಣೆಗಳಿಗೆ ಬೆಂಬಲ
- ಜನರಿಗೆ ವಿಶ್ವಾಸವನ್ನು ತುಂಬುವುದು
- ಸರ್ಕಾರ “ರಾಷ್ಟ್ರ ಮೊದಲು’’ ಎಂಬ ನಂಬಿಕೆ ಹುಟ್ಟಿಸುವಲ್ಲಿ ಯಶಸ್ವಿ
- “ಇದೀಗ ನಾವು 2014ರವರೆಗೆ ಎಲ್ಲಿದ್ದೆವು ಮತ್ತು ಈಗ ಎಲ್ಲಿದ್ದೀವಿ ಎಂಬುದುನ್ನು ನೋಡುವುದಕ್ಕೆ ಸೂಕ್ತ ಕಾಲ”; ಎಂಎಫ್
- ಸರ್ಕಾರ ಆರ್ಥಿಕತೆ ಕುರಿತು ಸದನದ ಮುಂದೆ ಶ್ವೇತಪತ್ರವನ್ನು ಮಂಡಿಸಲಿದೆ.
***
(Release ID: 2001476)
Read this release in:
Malayalam
,
Assamese
,
English
,
Urdu
,
Hindi
,
Hindi
,
Nepali
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu