ಹಣಕಾಸು ಸಚಿವಾಲಯ

ಸರ್ಕಾರ ಸಮಗ್ರ ‘ಜಿಡಿಪಿ’- ಆಡಳಿತ, ಅಭಿವೃದ್ಧಿ ಮತ್ತು ಜನ ಕೇಂದ್ರಿತ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧನೆಗೆ ಹೆಚ್ಚಿನ ಗಮನ- ಕೇಂದ್ರ ಹಣಕಾಸು ಸಚಿವರ ಹೇಳಿಕೆ  


ಎಲ್ಲಾ ಕ್ಷೇತ್ರಗಳಲ್ಲಿ ಸರ್ವತೋಮುಖ ಅಭಿವೃದ್ಧಿಯ ಪರಿಣಾಮ ಸ್ಪಷ್ಟವಾಗಿರುವುದರಿಂದ ಆರ್ಥಿಕತೆಯು ಉತ್ತಮ ಕಾರ್ಯನಿರ್ವಹಣೆ: ಸಚಿವೆ ನಿರ್ಮಲಾ ಸೀತಾರಾಮನ್

ಸರ್ಕಾರವು ಪಾರದರ್ಶಕ, ಜವಾಬ್ದಾರಿಯುತ, ಜನ-ಕೇಂದ್ರಿತ ಮತ್ತು ಅತ್ಯಂತ ವಿಶ್ವಾಸ ಆಧಾರಿತ ಆಡಳಿತವನ್ನು ‘ನಾಗರಿಕ-ಪ್ರಥಮ’ ಮತ್ತು ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ರೂಪದಲ್ಲಿ ಒದಗಿಸಿದೆ: ಎಫ್ ಎಂ 

Posted On: 01 FEB 2024 12:35PM by PIB Bengaluru

ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ವಿಷಯದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುವ ಜತೆಗೆ ಹೆಚ್ಚಿನ ಸಮಗ್ರ ‘ಜಿಡಿಪಿ” ಅಂದರೆ ಆಡಳಿತ, ಅಭಿವೃದ್ಧಿ ಮತ್ತು ಸಾಧನೆಗೆ ಸರ್ಕಾರ ಸಮಾನ ಒತ್ತು ನೀಡಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ ನಲ್ಲಿಂದು 2024ರನೇ ಸಾಲಿನ ಮಧ್ಯಂತರ ಕೇಂದ್ರ ಬಜೆಟ್ ಮಂಡನೆ ವೇಳೆ ತಿಳಿಸಿದರು. 

ಸರ್ಕಾರವು ಪಾರದರ್ಶಕ, ಉತ್ತರದಾಯಿ, ಜನಕೇಂದ್ರಿತ ಮತ್ತು ತ್ವರಿತ ನಂಬಿಕೆ ಆಧಾರಿತ ಆಡಳಿತವನ್ನು 'ನಾಗರಿಕ-ಪ್ರಥಮ' ಮತ್ತು 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ವಿಧಾನದೊಂದಿಗೆ ಒದಗಿಸಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.

ಆರ್ಥಿಕತೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ, ಹೂಡಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಹರಿದುಬರುತ್ತಿರುವುದನ್ನು ಕಾಣಬಹುದಾಗಿದೆ ಮತ್ತು ಬಾಹ್ಯ ವಲಯ ಸೇರಿದಂತೆ ಸ್ಥೂಲ ಆರ್ಥಿಕ ಸ್ಥಿರತೆಯ ಜತೆಗೆ ಎಲ್ಲಾ ವಲಯಗಳಲ್ಲಿ ಸರ್ವಾಂಗೀಣ ಅಭಿವೃದ್ಧಿಯ ಪರಿಣಾಮವನ್ನು ಕಾಣಬಹುದಾಗಿದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು. 

ಜನರು ತಮ್ಮ ಆಕಾಂಕ್ಷೆಗಳನ್ನು ಮುಂದುವರಿಸಲು ಸಬಲರಾಗುತ್ತಿದ್ದಾರೆ, ಸಿದ್ಧರಾಗುತ್ತಿದ್ದಾರೆ ಮತ್ತು ಶಕ್ತರಾಗುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು. ಜನರು ಉತ್ತಮವಾಗಿ ಬದುಕುತ್ತಿದ್ದಾರೆ ಮತ್ತು ಉತ್ತಮ ರೀತಿಯಲ್ಲಿ ಆದಾಯ ಗಳಿಸುತ್ತಿದ್ದಾರೆ, ಭವಿಷ್ಯಕ್ಕಾಗಿ ಇನ್ನೂ ಹೆಚ್ಚಿನ ಆಕಾಂಕ್ಷೆಗಳನ್ನು ಹೊಂದಿರುವುದು ಗೋಚರಿಸುತ್ತದೆ; ಜನರ ಸರಾಸರಿ ನೈಜ ಆದಾಯವು ಶೇ.50ರಷ್ಟು ಹೆಚ್ಚಳವಾಗಿದೆ; ಹಣದುಬ್ಬರ ಮಧ್ಯಮ ಸ್ಥಿತಿಯಲ್ಲಿದೆ; ಮತ್ತು ಕಾರ್ಯಕ್ರಮಗಳ ಮತ್ತು ದೊಡ್ಡ ಯೋಜನೆಗಳ ಪರಿಣಾಮಕಾರಿ ಮತ್ತು ಸಕಾಲದಲ್ಲಿ ಜಾರಿಗೊಳ್ಳುತ್ತಿವೆ ಎಂದು ಹೇಳಿದ್ದಾರೆ.  

ಆರ್ಥಿಕ ನಿರ್ವಹಣೆ 

ಕಳೆದ 10 ವರ್ಷಗಳಲ್ಲಿ ಕೈಗೊಂಡ ಬಹುಮುಖಿ ಆರ್ಥಿಕ ನಿರ್ವಹಣಾ ಕ್ರಮಗಳಿಂದಾಗಿ ಜನ-ಕೇಂದ್ರಿತ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು ಮತ್ತುಈ  ಕೆಳಗಿನವು ಅದರ ಕೆಲವು ಪ್ರಮುಖ ಅಂಶಗಳಾಗಿವೆ:

1.    ಭೌತಿಕ, ಡಿಜಿಟಲ್ ಮತ್ತು ಸಾಮಾಜಿಕ ಸೇರಿ ಎಲ್ಲಾ ಬಗೆಯ ಮೂಲಸೌಕರ್ಯವನ್ನು ದಾಖಲೆಯ ಅವಧಿಯಲ್ಲಿ ನಿರ್ಮಾಣ.
2.    ಅರ್ಥಿಕ ಪ್ರಗತಿಯಲ್ಲಿ ದೇಶದ ಎಲ್ಲಾ ಭಾಗಗಳು ಸಕ್ರಿಯ ಭಾಗಿದಾರರಾಗಿವೆ. 
3.    ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ 21ನೇ ಶತಮಾನದಲ್ಲಿ “ಉತ್ಪಾದನೆಗೆ ಹೊಸ ಅಂಶ’’ ವಾಗಿ ಸೇರ್ಪಡೆಯಾಗಿದ್ದು, ಅದು ಆರ್ಥಿಕತೆಯನ್ನು ಸಾಂಸ್ಥೀಕರಣಗೊಳಿಸುವಲ್ಲಿ ಮಹತ್ವದ್ದಾಗಿದೆ. 
4.    ಸರಕು ಮತ್ತು ಸೇವಾ ತೆರಿಗೆಯು ‘ಒಂದು ರಾಷ್ಟ್ರ, ಒಂದು ಮಾರುಕಟ್ಟೆ, ಒಂದು ತೆರಿಗೆ’ಯನ್ನು ಸಕ್ರಿಯಗೊಳಿಸಿದೆ. ತೆರಿಗೆ ಸುಧಾರಣೆಗಳು ತೆರಿಗೆ ಮೂಲವನ್ನು ಆಳವಾಗಿಸಲು ಮತ್ತು ಮತ್ತಷ್ಟು ವಿಸ್ತರಿಸಲು ಕಾರಣವಾಗಿವೆ.
5.    ಹಣಕಾಸು ವಲಯದ ಬಲವರ್ಧನೆಯು ಉಳಿತಾಯ, ಸಾಲ ಮತ್ತು ಹೂಡಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಹಾಯ ಮಾಡಿದೆ.
6.    ಜಿಐಎಫ್ ಟಿ-ಐಎಫ್ ಎಸ್ ಸಿ ಮತ್ತು ಏಕೀಕೃತ ನಿಯಂತ್ರಣ ಪ್ರಾಧಿಕಾರ, ಐಎಫ್ ಎಸ್ ಸಿಎ (ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ) ಜಾಗತಿಕ ಬಂಡವಾಳ ಮತ್ತು ಆರ್ಥಿಕತೆಗಾಗಿ ಹಣಕಾಸು ಸೇವೆಗಳಿಗೆ ದೃಢವಾದ ಗೇಟ್‌ವೇ ಅನ್ನು ನಿರ್ಮಿಸಿದೆ.
7.    ಸಕ್ರಿಯ ಹಣದುಬ್ಬರ ನಿರ್ವಹಣೆಯು ಹಣದುಬ್ಬರವನ್ನು ನೀತಿ ಮಿತಿಯ ವ್ಯಾಪ್ತಿಯೊಳಗೆ ಇರಿಸಲು ಸಹಾಯ ಮಾಡಿದೆ. 

****



(Release ID: 2001464) Visitor Counter : 71