ಹಣಕಾಸು ಸಚಿವಾಲಯ
azadi ka amrit mahotsav

ಮಾಸಿಕ ನಿವ್ವಳ ಜಿ.ಎಸ್.ಟಿ ಸರಾಸರಿ ಸಂಗ್ರಹ ದ್ವಿಗುಣ, ₹1.66 ಲಕ್ಷ ಕೋಟಿಗೆ ಏರಿಕೆ


ರಾಜ್ಯಗಳ ಎಸ್.ಜಿ.ಎಸ್.ಟಿ ಆದಾಯ ಜಿ.ಎಸ್.ಟಿ ಜಾರಿ ನಂತರದ ಅವಧಿಯಲ್ಲಿ 1.22 ಕ್ಕೆ  ಹೆಚ್ಚಳ 

ಜಿ.ಎಸ್.ಟಿಯ ಅತಿ ದೊಡ್ಡ ಫಲಾನುಭವಿಗಳು ಗ್ರಾಹಕರು; ಹಣಕಾಸು ಸಚಿವರ ಹೇಳಿಕೆ

Posted On: 01 FEB 2024 12:39PM by PIB Bengaluru

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ಸಚಿವೆ ‍ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ಇಂದು ಸಂಸತ್ತಿನಲ್ಲಿ 2024 – 25 ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡಿಸಿ, ಭಾರತದಲ್ಲಿ ಹೆಚ್ಚು ವಿಭಜಿತವಾಗಿದ್ದ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಏಕೀಕರಿಸುವ ಮೂಲಕ ವ್ಯಾಪಾರ ಮತ್ತು ಉದ್ಯಮದ ಮೇಲಿನ ಹೊರೆಯನ್ನು ಜಿ.ಎಸ್.ಟಿ ತಗ್ಗಿಸಿದೆ ಎಂದು ಪ್ರಾತಿಪಾದಿಸಿದ್ದಾರೆ.   

“ಇತ್ತೀಚೆಗೆ ಪ್ರಮುಖ ಸಲಹಾ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಶೇ 94 ರಷ್ಟು ಉದ್ಯಮ ವಲಯದ ನಾಯಕರು ಜಿ.ಎಸ್.ಟಿ ಪರಿವರ್ತನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಧನಾತ್ಮಕವಾಗಿ ನೋಡುತ್ತಾರೆ ಮತ್ತು ಶೇ 80 ರಷ್ಟು ಮಂದಿ ಇದು ಪೂರೈಕೆ ಸರಪಳಿಗೆ ಹೊಂದುವಂತೆ ಮಾಡಿದೆ” ಎಂದಿದ್ದಾರೆ. ಇದೇ ಕಾಲಕ್ಕೆ ಜಿ.ಎಸ್.ಟಿ ತೆರಿಗೆ ವಲಯ ಎರಡು ಪಟ್ಟಿಗೂ ಅಧಿಕವಾಗಿದೆ ಮತ್ತು ಮಾಸಿಕ ನಿವ್ವಳ ಜಿ.ಎಸ್.ಟಿ ಸಂಗ್ರಹ ಈ ವರ್ಷ ಸರಾಸರಿ ಬಹುತೇಕ ದ್ವಿಗುಣಗೊಂಡಿದ್ದು, ₹ 1.66 ಲಕ್ಷ ಕೊಟಿ ರೂಪಾಯಿಗೆ ತಲುಪಿದೆ. 

ರಾಜ್ಯಗಳ ತೆರಿಗೆ ಸಂಗ್ರಹ ಏರಿಕೆ ಕುರಿತು ಮಾತನಾಡಿದ ಹಣಕಾಸು ಸಚಿವರು, ರಾಜ್ಯ ಎಸ್.ಜಿ.ಎಸ್.ಟಿ ಆದಾಯ ಹೆಚ್ಚಿದ್ದು, ರಾಜ್ಯಗಳಿಗೆ ಪರಿಹಾರದ ಮೊತ್ತ ಬಿಡುಗಡೆ ಮಾಡಲಾಗಿದೆ. ಜಿ.ಎಸ್.ಟಿ ಜಾರಿಗೆ ಬಂದ 2017-18 ರಿಂದ 2022-23 ರ ಅವಧಿಯಲ್ಲಿ 1.22 ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಇದಕ್ಕೆ ವ್ಯತಿರಿಕ್ತವಾಗಿ 2012-13 ರಿಂದ 2015-16 ರ ಜಿ.ಎಸ್.ಟಿ ಜಾರಿಯ ಪೂರ್ವದ 4 ವರ್ಷಗಳ ಅವಧಿಯಲ್ಲಿ ರಾಜ್ಯಗಳ ಆದಾಯ ಏರಿಕೆ 0.72 ರಷ್ಟಿತ್ತು. ಇದರ ಪ್ರಮುಖ ಫಲಾನುಭವಿಗಳು ಎಂದರೆ ಗ್ರಾಹಕರು, ಜಿ.ಎಸ್.ಟಿ ಜಾರಿಯಿಂದ ಸಾಗಾಣೆ ದರ ತಗ್ಗಿದೆ ಮತ್ತು ಸರಕು ಮತ್ತು ಸೇವೆಗಳ ತೆರಿಗೆ ಕಡಿಮೆಯಾಗಿದೆ ಎಂದರು. 

ನ್ಯಾಷನಲ್‌ ಟೈಮ್‌ ಅಧ್ಯಯದ ಪ್ರಕಟಣೆಯನ್ನು ಉಲ್ಲೇಖಿಸಿರುವ ಸಚಿವರು, ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಅನುಕೂಲವಾಗುವಂತೆ ಕಸ್ಟಮ್ಸ್‌ ನಲ್ಲಿ ತೆಗೆದುಕೊಂಡ ಕ್ರಮಗಳ ಪರಿಣಾಮವಾಗಿ ಒಳನಾಡು ಕಂಟೈನರ್‌ ಡಿಪೋಗಳಲ್ಲಿ ಆಮದು ಮಾಡಿಕೊಳ್ಳುವ ಅವಧಿ 47 ರಷ್ಟು ಅಂದರೆ 71 ಗಂಟೆಗೆ ಇಳಿಕೆಯಾಗಿದೆ. ವಾಯುಯಾನದ ಕಾರ್ಗೋ ಸಂಕೀರ್ಣಗಳಲ್ಲಿ ಶೇ 28 ರಷ್ಟು ಅಂದರೆ 44 ಗಂಟೆಗೆ ಮತ್ತು 2019 ರಿಂದ  ಕಳೆದ ನಾಲ್ಕು ವರ್ಷಗಳಲ್ಲಿ ಸಮುದ್ರ ಬಂದರುಗಳಲ್ಲಿ ಶೇ 27 ರಷ್ಟು ಅಂದರೆ 85 ಗಂಟೆಗಳ ವರೆಗೆ ಅವಧಿ ತಗ್ಗಿದೆ ಎಂದು ಸಚಿವರು ಹೇಳಿದರು.  

*****


(Release ID: 2001448) Visitor Counter : 110