ಹಣಕಾಸು ಸಚಿವಾಲಯ

ಐದು ಅಕ್ವಾಪಾರ್ಕ್‌ಗಳ ಸ್ಥಾಪನೆಗೆ ಕ್ರಮ


2013-14 ರಿಂದ ಸಮುದ್ರ ಆಹಾರ (ಸೀ ಫುಡ್‌) ರಫ್ತು ದ್ವಿಗುಣಗೊಂಡಿದೆ

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು  ಉತ್ಪಾದಕತೆಯನ್ನು ಹೆಚ್ಚಿಸಲು ಹೆಜ್ಜೆ ಹಾಕುತ್ತಿದೆ, ` 1 ಲಕ್ಷ ಕೋಟಿಗೆ ದುಪ್ಪಟ್ಟು ರಫ್ತು ಮತ್ತು 55 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ

ಬ್ಲೂ ಎಕಾನಮಿ 2.0 ಗಾಗಿ ಹೊಸ ಸ್ಥಿತಿಸ್ಥಾಪಕ ಯೋಜನೆ ಪ್ರಾರಂಭಿಸಲಾಗುವುದು

ಹೈನುಗಾರರನ್ನು ಬೆಂಬಲಿಸುವ ಸಮಗ್ರ ಕಾರ್ಯಕ್ರಮ ರೂಪಿಸಲಾಗುವುದು

Posted On: 01 FEB 2024 12:45PM by PIB Bengaluru

ಮೀನುಗಾರಿಕೆ ವಲಯವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಐದು ಇಂಟಿಗ್ರೇಟೆಡ್ ಅಕ್ವಾಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಇಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ 2024-25 ಅನ್ನು ಮಂಡಿಸಿದ ಸಚಿವರು, “ಮೀನುಗಾರರಿಗೆ ಸಹಾಯ ಮಾಡುವ ಮಹತ್ವವನ್ನು ಅರಿತು ಮೀನುಗಾರಿಕೆಗಾಗಿ ಪ್ರತ್ಯೇಕ ಇಲಾಖೆಯನ್ನು ನಮ್ಮ ಸರ್ಕಾರ ಸ್ಥಾಪಿಸಿದೆ. ಇದು ಒಳನಾಡು ಮತ್ತು ಜಲಕೃಷಿ ಉತ್ಪಾದನೆಯನ್ನು ದ್ವಿಗುಣಗೊಳಿಸಿದೆ. 2013-14 ರಿಂದ ಸಮುದ್ರ ಆಹಾರ (ಸೀ ಫುಡ್‌) ರಫ್ತು ಕೂಡ ದ್ವಿಗುಣಗೊಂಡಿದೆ ಎಂದು ಸಚಿವರು ತಿಳಿಸಿದರು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಅನುಷ್ಠಾನವನ್ನು ಈ ಕೆಳಗಿನಂತೆ ಹೆಚ್ಚಿಸಲಾಗುವುದು ಎಂದು ಸಚಿವರು ಘೋಷಿಸಿದರು: 
(i) ಅಸ್ತಿತ್ವದಲ್ಲಿರುವ ಅಕ್ವಾಕಲ್ಚರ್ ಉತ್ಪಾದಕತೆಯನ್ನು ಪ್ರತಿ ಹೆಕ್ಟೇರಿಗೆ 3 ರಿಂದ 5 ಟನ್ ಹೆಚ್ಚಳ; 
(ii) 1 ಲಕ್ಷ ಕೋಟಿಗೆ ದ್ವಿಗುಣ ರಫ್ತು; 
(iii) ಸದ್ಯದಲ್ಲಿಯೇ 55 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.

ನೀಲಿ ಆರ್ಥಿಕತೆ 2.0

ನೀಲಿ ಆರ್ಥಿಕತೆ 2.0 ಗಾಗಿ ಸ್ಥಿತಿಸ್ಥಾಪಕ ಚಟುವಟಿಕೆಗಳನ್ನು ಉತ್ತೇಜಿಸಲು, ಮರುಸ್ಥಾಪನೆ ಮತ್ತು ಹೊಂದಾಣಿಕೆಯ ಕ್ರಮಗಳ ಯೋಜನೆ, ಮತ್ತು ಸಮಗ್ರ ಮತ್ತು ಬಹು-ವಲಯ ವಿಧಾನದೊಂದಿಗೆ ಕರಾವಳಿ ಜಲಕೃಷಿ ಮತ್ತು ಜಲಚರ ಸಾಕಣೆ (ಮಾರಿಕಲ್ಚರ್) ಅನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ಘೋಷಿಸಿದರು.

ಡೈರಿ ಅಭಿವೃದ್ಧಿ

ಹೈನುಗಾರರನ್ನು ಬೆಂಬಲಿಸಲು ಸಮಗ್ರ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ಸಚಿವರು ಘೋಷಿಸಿದರು. ಕಾಲುಬಾಯಿ ರೋಗವನ್ನು ನಿಯಂತ್ರಿಸಲು ಈಗಾಗಲೇ ಪ್ರಯತ್ನಗಳು ಮುಂದುವರಿದಿವೆ. "ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶ. ಆದರೆ ಹಾಲು-ಪ್ರಾಣಿಗಳ ಕಡಿಮೆ ಉತ್ಪಾದಕತೆ ಇರುವುದು ಕಂಡುಬಂದಿದೆ ಅಸ್ತಿತ್ವದಲ್ಲಿರುವ ಯೋಜನೆಗಳಾದ ರಾಷ್ಟ್ರೀಯ ಗೋಕುಲ್ ಮಿಷನ್, ರಾಷ್ಟ್ರೀಯ ಜಾನುವಾರು ಮಿಷನ್ ಮತ್ತು ಡೈರಿ ಸಂಸ್ಕರಣೆ ಮತ್ತು ಪಶುಸಂಗೋಪನೆಗಾಗಿ ಮೂಲಸೌಕರ್ಯ ಅಭಿವೃದ್ಧಿ ನಿಧಿಗಳ ಯಶಸ್ಸಿನ ಮೇಲೆ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.

*****



(Release ID: 2001410) Visitor Counter : 65