ಸಂಸದೀಯ ವ್ಯವಹಾರಗಳ ಸಚಿವಾಲಯ
azadi ka amrit mahotsav

ಸಂಸದೀಯ ವ್ಯವಹಾರಗಳ ಸಚಿವರು ಜನವರಿ 30 ರಂದು ಸಂಸತ್ತಿನಲ್ಲಿ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿಯಾಗಲಿದ್ದಾರೆ


ಸಂಸತ್ತಿನ ಅಧಿವೇಶನವು 2024 ರ ಜನವರಿ 31 ರಿಂದ ಫೆಬ್ರವರಿ 9 ರವರೆಗೆ ನಡೆಯಲಿದೆ.

Posted On: 29 JAN 2024 2:53PM by PIB Bengaluru

ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಸಂಸತ್ತಿನ ಅಧಿವೇಶನ ಪ್ರಾರಂಭವಾಗುವ ಮೊದಲು ಸಂಸತ್ತಿನ ಉಭಯ ಸದನಗಳ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಸರ್ವಪಕ್ಷ ಸಭೆ ನಾಳೆ,ಅಂದರೆ2024 ರ ಜನವರಿ 30 ರಂದು ಬೆಳಿಗ್ಗೆ 11:30 ಕ್ಕೆ ನವದೆಹಲಿಯ ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ ನಡೆಯಲಿದೆ.

ಸಂಸತ್ತಿನ ಅಧಿವೇಶನವು 2024 ರ ಜನವರಿ 31 ರಂದು ರಾಷ್ಟ್ರಪತಿಗಳ ಭಾಷಣದೊಂದಿಗೆಪ್ರಾರಂಭವಾಗುತ್ತದೆ ಮತ್ತು ಸರ್ಕಾರಿ ವ್ಯವಹಾರದ ಅಗತ್ಯಗಳಿಗೆ ಒಳಪಟ್ಟು, ಅಧಿವೇಶನವು 2024 ರ ಫೆಬ್ರವರಿ 9 ರಂದು ಕೊನೆಗೊಳ್ಳಬಹುದು. ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2024 ರ ಫೆಬ್ರವರಿ 1 ರಂದು ಮಧ್ಯಂತರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.

****


(Release ID: 2000380) Visitor Counter : 99