ಪ್ರಧಾನ ಮಂತ್ರಿಯವರ ಕಛೇರಿ

ಅಖಿಲ ಭಾರತ ವಿಧಾನಸಭೆ ಸಭಾಧ್ಯಕ್ಷರು, ವಿಧಾನಪರಿಷತ್ ಸಭಾಪತಿಗಳ(ಪ್ರಿಸೈಡಿಂಗ್ ಆಫೀಸರ್ಸ್) ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ಸಾಂವಿಧಾನಿಕ ಅಸೆಂಬ್ಲಿಗಳ ಸದಸ್ಯರಿಗೆ ಗೌರವ ಸಲ್ಲಿಕೆ

"ಸದನದಲ್ಲಿ ಸದಸ್ಯರ ನಡವಳಿಕೆ ಮತ್ತು ಅದರಲ್ಲಿರುವ ಅನುಕೂಲಕರ ವಾತಾವರಣವು ಸಭೆಯ ಉತ್ಪಾದಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ"

"ಕೆಲವು ಪಕ್ಷಗಳು ತಮ್ಮ ಸದಸ್ಯರಿಗೆ ಸಲಹೆ ನೀಡುವ ಬದಲು ಅವರ ಆಕ್ಷೇಪಾರ್ಹ ನಡವಳಿಕೆಯನ್ನು ಬೆಂಬಲಿಸುತ್ತಿವೆ"

"ನಾವೀಗ ಅಪರಾಧಿ ಭ್ರಷ್ಟರನ್ನು ಸಾರ್ವಜನಿಕವಾಗಿ ವೈಭವೀಕರಿಸುವುದನ್ನು ನೋಡುತ್ತಿದ್ದೇವೆ, ಇದು ಕಾರ್ಯಾಂಗ, ನ್ಯಾಯಾಂಗ ಮತ್ತು ಸಂವಿಧಾನದ ಸಮಗ್ರತೆಗೆ ಹಾನಿಕಾರಕ"

“ಭಾರತದ ಪ್ರಗತಿಯು ನಮ್ಮ ರಾಜ್ಯಗಳ ಪ್ರಗತಿಯ ಮೇಲೆ ನಿಂತಿದೆ.  ರಾಜ್ಯಗಳ ಪ್ರಗತಿಯು ಅದರ ಶಾಸಕಾಂಗ ಮತ್ತು ಕಾರ್ಯಾಂಗ ಸಂಸ್ಥೆಗಳು ತಮ್ಮ ಅಭಿವೃದ್ಧಿ ಗುರಿಗಳನ್ನು ಒಟ್ಟಾಗಿ ವ್ಯಾಖ್ಯಾನಿಸಲು ನಿರ್ಧರಿಸುವುದರ ಮೇಲೆ ಅವಲಂಬಿತವಾಗಿದೆ.

"ನ್ಯಾಯಾಂಗ ವ್ಯವಸ್ಥೆಯ ಸರಳೀಕರಣವು ಸಾಮಾನ್ಯ ಜನರು ಎದುರಿಸುತ್ತಿರುವ ಸವಾಲುಗಳನ್ನು ಸರಾಗಗೊಳಿಸಿದೆ, ಜೀವನ ಸೌಕರ್ಯ ಹೆಚ್ಚಿಸಿದೆ"

Posted On: 27 JAN 2024 4:35PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಅಖಿಲ ಭಾರತ ವಿಧಾನಸಭೆ ಸಭಾಧ್ಯಕ್ಷರು, ವಿಧಾನಪರಿಷತ್ ಸಭಾಪತಿಗಳ(ಪ್ರಿಸೈಡಿಂಗ್ ಆಫೀಸರ್ಸ್) ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.

75ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಮ್ಮೇಳನದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ, “ನಮ್ಮ ಸಂವಿಧಾನದ 75ನೇ ವರ್ಷವನ್ನು ಗುರುತಿಸುವ ಮೂಲಕ 75ನೇ ಗಣರಾಜ್ಯೋತ್ಸವದ ನಂತರ ಈ ಸಮ್ಮೇಳನವು ಹೆಚ್ಚಿನ ಮಹತ್ವ ಹೊಂದಿದೆ” ಎಂದ ಮೋದಿ ಅವರು, ಸಾಂವಿಧಾನಿಕ ಅಸೆಂಬ್ಲಿಯ ಸದಸ್ಯರಿಗೆ ಗೌರವ ಸಲ್ಲಿಸಿದರು.

 “ನಮ್ಮ ಸಾಂವಿಧಾನಿಕ ಸಭೆಗಳಿಂದ ಕಲಿಯುವುದ ಬಹಳಷ್ಟಿದೆ. ಸಾಂವಿಧಾನಿಕ ಸಭೆಗಳ ಸದಸ್ಯರು ವಿವಿಧ ಆಲೋಚನೆಗಳು, ವಿಷಯಗಳು ಮತ್ತು ಅಭಿಪ್ರಾಯಗಳ ನಡುವೆ ಒಮ್ಮತ ರೂಪಿಸುವ ಜವಾಬ್ದಾರಿ ಹೊಂದಿದ್ದರು ಮತ್ತು ಅವರು ಅದಕ್ಕೆ ತಕ್ಕಂತೆ ಬದುಕಿದರು. ಸಮ್ಮೇಳನದಲ್ಲಿ ಹಾಜರಿದ್ದ ಪೀಠಾಧಿಪತಿಗಳ ಪಾತ್ರವನ್ನು ಎತ್ತಿ ಹಿಡಿದ ಪ್ರಧಾನಿ ಮೋದಿ, ಮತ್ತೊಮ್ಮೆ ಸಂವಿಧಾನ ರಚನಾ ಸಭೆಯ ಆದರ್ಶಗಳಿಂದ ಸ್ಫೂರ್ತಿ ಪಡೆಯುವಂತೆ ಒತ್ತಾಯಿಸಿದರು. "ನಿಮ್ಮ ಅಧಿಕಾರಾವಧಿಯಲ್ಲಿ, ಭವಿಷ್ಯದ ಪೀಳಿಗೆಗೆ ಪರಂಪರೆಯಾಗಿ ಸೇವೆ ಸಲ್ಲಿಸುವ ಪರಂಪರೆಯನ್ನು ಮುಂದುವರಿಸಲು ಶ್ರಮಿಸಬೇಕು" ಎಂದು ಸಲಹೆ ನೀಡಿದರು.

ಶಾಸಕಾಂಗ ಸಂಸ್ಥೆಗಳ ಕಾರ್ಯ ಚಟುವಟಿಕೆ ಹೆಚ್ಚಿಸುವ ಅಗತ್ಯತೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, "ಇಂದಿನ ಸನ್ನಿವೇಶದಲ್ಲಿ ಜಾಗರೂಕ ನಾಗರಿಕರು ಪ್ರತಿ ಪ್ರತಿನಿಧಿಯನ್ನು ಕೂಲಂಕಷವಾಗಿ ಪರಿಶೀಲಿಸುವ ಪರಿಸ್ಥಿತಿ ಇದೆ. ಹಾಗಾಗಿ, ಶಾಸಕಾಂಗ ಸಭೆಗಳು ಮತ್ತು ಸಮಿತಿಗಳ ದಕ್ಷತೆ ಹೆಚ್ಚಿಸುವುದು ನಿರ್ಣಾಯಕವಾಗಿದೆ" ಎಂದರು.

ಶಾಸಕಾಂಗ ಸಭೆಗಳಲ್ಲಿ ಸಜ್ಜನಿಕೆ ಕಾಪಾಡಿಕೊಳ್ಳುವ ವಿಷಯ ಪ್ರಸ್ತಾಪಿಸಿದ ಪ್ರಧಾನಿ ಮೋದಿ, “ಸದನದಲ್ಲಿ ಸದಸ್ಯರ ನಡವಳಿಕೆ ಮತ್ತು ಅಲ್ಲಿನ ಅನುಕೂಲಕರ ವಾತಾವರಣವು ವಿಧಾನಸಭೆಯ ಉತ್ಪಾದಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಸಮ್ಮೇಳನದಿಂದ ಹೊರಹೊಮ್ಮುವ ಸಂಕೀರ್ಣ ಸಲಹೆಗಳು ಉತ್ಪಾದಕತೆ ಶಾಸನಸಭೆಗಳ ಹೆಚ್ಚಿಸಲು ಸಹಕಾರಿಯಾಗುತ್ತವೆ. ಸದನದಲ್ಲಿ ಪ್ರತಿನಿಧಿಗಳ ನಡವಳಿಕೆಯು ಸದನದ ಚಿತ್ರಣವನ್ನು ನಿರ್ಧರಿಸುತ್ತದೆ. ತಮ್ಮ ಸದಸ್ಯರ ಆಕ್ಷೇಪಾರ್ಹ ವರ್ತನೆಗೆ ಕಡಿವಾಣ ಹಾಕುವ ಬದಲು ಕೆಲವು ಪಕ್ಷಗಳು ಅವರ ಬೆಂಬಲಕ್ಕೆ ನಿಲ್ಲುತ್ತಿವೆ. ಇದು ವಿಷಾದಕರ ಸಂಗತಿ. "ಇದು ಸಂಸತ್ತಿಗೆ ಅಥವಾ ಅಸೆಂಬ್ಲಿಗಳಿಗೆ ಉತ್ತಮ ಬೆಳವಣಿಗೆ ಅಲ್ಲ" ಎಂದು ಅವರು ಹೇಳಿದರು.

ಸಾರ್ವಜನಿಕ ಜೀವನದಲ್ಲಿ ವಿಕಸನಗೊಳ್ಳುತ್ತಿರುವ ರೂಢಿಗಳನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಹೊಣೆಗಾರಿಕೆಯ ಅಗತ್ಯವನ್ನು ಒತ್ತಿ ಹೇಳಿದರು. “ಹಿಂದೆ, ಮನೆಯ ಸದಸ್ಯರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಂದಾಗ, ಸಾರ್ವಜನಿಕ ಜೀವನದಿಂದ ಅವರನ್ನು ಹೊರಹಾಕಲಾಗುತ್ತಿತ್ತು. ಆದರೆ, ಈಗ ನಾವು ಅಪರಾಧಿ ಭ್ರಷ್ಟರನ್ನು ಸಾರ್ವಜನಿಕವಾಗಿ ವೈಭವೀಕರಿಸುವುದನ್ನು ನೋಡುತ್ತಿದ್ದೇವೆ, ಇದು ಕಾರ್ಯಾಂಗ, ನ್ಯಾಯಾಂಗ ಮತ್ತು ಸಂವಿಧಾನದ ಸಮಗ್ರತೆಗೆ ಹಾನಿಕಾರಕವಾಗಿದೆ. ಸಮಾವೇಶದ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿ ಸಕೀರ್ಣ ಸಲಹೆಗಳನ್ನು ನೀಡಬೇಕು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಭಾರತದ ಪ್ರಗತಿ ರೂಪಿಸುವಲ್ಲಿ ರಾಜ್ಯ ಸರ್ಕಾರಗಳು ಮತ್ತು ಅವರ ಶಾಸಕಾಂಗ ಸಭೆಗಳ ಪ್ರಮುಖ ಪಾತ್ರ ಗುರುತಿಸಿದ ಪ್ರಧಾನಿ ಮೋದಿ, “ಭಾರತದ ಪ್ರಗತಿಯು ನಮ್ಮ ರಾಜ್ಯಗಳ ಪ್ರಗತಿಯ ಮೇಲೆ ಅವಲಂಬಿತವಾಗಿದೆ. ರಾಜ್ಯಗಳ ಪ್ರಗತಿಯು ಅವರ ಶಾಸಕಾಂಗ ಮತ್ತು ಕಾರ್ಯಾಂಗ ಸಂಸ್ಥೆಗಳು ತಮ್ಮ ಅಭಿವೃದ್ಧಿ ಗುರಿಗಳನ್ನು ಸಾಮೂಹಿಕವಾಗಿ ವ್ಯಾಖ್ಯಾನಿಸಲು ನಿರ್ಧರಿಸುವುದರ ಮೇಲೆ ಅವಲಂಬಿತವಾಗಿದೆ. ಆರ್ಥಿಕ ಪ್ರಗತಿಗಾಗಿ ಸಮಿತಿಗಳ ಸಬಲೀಕರಿಸುವ ಮಹತ್ವವಿದೆ. “ನಿಮ್ಮ ರಾಜ್ಯದ ಆರ್ಥಿಕ ಪ್ರಗತಿಗೆ ಸಮಿತಿಗಳ ಸಬಲೀಕರಣವು ನಿರ್ಣಾಯಕವಾಗಿದೆ. ನಿಗದಿತ ಗುರಿಗಳನ್ನು ಸಾಧಿಸಲು ಈ ಸಮಿತಿಗಳು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಿದರೆ,  ರಾಜ್ಯವು ಹೆಚ್ಚು ಮುನ್ನಡೆಯುತ್ತದೆ ಎಂದರು.

ಕಾನೂನುಗಳನ್ನು ಸುವ್ಯವಸ್ಥಿತಗೊಳಿಸುವ ಅಗತ್ಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಅನಗತ್ಯ ಕಾನೂನುಗಳನ್ನು ರದ್ದುಗೊಳಿಸುವಲ್ಲಿ ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ. “ಕಳೆದ ದಶಕದಲ್ಲಿ ಕೇಂದ್ರ ಸರ್ಕಾರವು ನಮ್ಮ ವ್ಯವಸ್ಥೆಗೆ ಹಾನಿಕಾರಕವಾದ 2 ಸಾವಿರಕ್ಕೂ ಹೆಚ್ಚಿನ ಕಾನೂನುಗಳನ್ನು ರದ್ದುಗೊಳಿಸಿದೆ. ನ್ಯಾಯಾಂಗ ವ್ಯವಸ್ಥೆಯ ಈ ಸರಳೀಕರಣವು ಸಾಮಾನ್ಯ ಜನರು ಎದುರಿಸುತ್ತಿರುವ ಸವಾಲುಗಳನ್ನು ಸರಾಗಗೊಳಿಸಿದೆ ಮತ್ತು ಜೀವನ ಸೌಕರ್ಯವನ್ನು ಹೆಚ್ಚಿಸಿದೆ. ಅನವಶ್ಯಕ ಕಾನೂನುಗಳು ಮತ್ತು ನಾಗರಿಕರ ಜೀವನದ ಮೇಲೆ ಅವುಗಳ ಪ್ರಭಾವದ ಬಗ್ಗೆ ಗಮನ ಹರಿಸುವಂತೆ ಪ್ರಧಾನಿ ಮೋದಿ ಅವರು ಸಭಾಧ್ಯಕ್ಷರು ಮತ್ತು ಸಭಾಪತಿಗಳಿಗೆ ಕರೆ ನೀಡಿದರು, ಅವುಗಳನ್ನು ತೆಗೆದುಹಾಕಿದರೆ ಗಮನಾರ್ಹ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಒತ್ತಿ ಹೇಳಿದರು.

ನಾರಿ ಶಕ್ತಿ ವಂದನ್ ಅಧಿನಿಯಮ್ ಉಲ್ಲೇಖಿಸಿದ ಪ್ರಧಾನಿ ಮೋದಿ, ಮಹಿಳೆಯರ ಭಾಗವಹಿಸುವಿಕೆ ಮತ್ತು ಪ್ರಾತಿನಿಧ್ಯ ಹೆಚ್ಚಿಸುವ ಗುರಿ ಹೊಂದಿರುವ ಸಲಹೆಗಳ ಕುರಿತು ಚರ್ಚೆ ನಡೆಸಬೇಕು. "ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರ ಪ್ರಾತಿನಿಧ್ಯ ಹೆಚ್ಚಿಸುವ ಪ್ರಯತ್ನಗಳನ್ನು ಭಾರತದಂತಹ ದೇಶದಲ್ಲಿ ಸಮಿತಿಗಳ ಮೂಲಕ ಹೆಚ್ಚಿಸಬೇಕು. ಅದೇ ರೀತಿ ಸಮಿತಿಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಅಗತ್ಯವಿದೆ. "ನಮ್ಮ ಯುವ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ನೀತಿ ರಚನೆಯಲ್ಲಿ ಭಾಗವಹಿಸಲು ಗರಿಷ್ಠ ಅವಕಾಶ ಪಡೆಯಬೇಕು" ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಸಮಾರೋಪದಲ್ಲಿ, ಪ್ರಧಾನ ಮಂತ್ರಿ ಮೋದಿ ಅವರು ತಮ್ಮ 2021ರ ಸಭಾಧ್ಯಕ್ಷರು, ಸಭಾಪತಿಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮಂಡಿಸಲಾದ ಒಂದು ರಾಷ್ಟ್ರ-ಒಂದು ಶಾಸಕಾಂಗ ವೇದಿಕೆಯ ಪರಿಕಲ್ಪನೆ ನೆನಪಿಸಿಕೊಂಡರು. ಇ-ವಿಧಾನ್ ಮತ್ತು ಡಿಜಿಟಲ್ ಸಂಸತ್ ವೇದಿಕೆಗಳ ಮೂಲಕ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳು ಈ ಗುರಿ ಸಾಧಿಸುತ್ತಿವೆ ಎಂದು ಸಂತೋಷ ವ್ಯಕ್ತಪಡಿಸಿದರು.

***

 



(Release ID: 2000362) Visitor Counter : 77