ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
(i) ಸಿಐಎಲ್ &ಜಿಎಐಎಲ್ ನ ಜೆವಿ ಮೂಲಕ ಇಸಿಎಲ್ ಕಮಾಂಡ್ ಪ್ರದೇಶದಲ್ಲಿ ಕಲ್ಲಿದ್ದಲಿನಿಂದ ಹಿಡಿದು ಎಸ್ ಎಲ್ ಜಿ ಯೋಜನೆಯನ್ನು ಸ್ಥಾಪಿಸಲು ಸಿಐಎಲ್ ನಿಂದ ಷೇರು ಹೂಡಿಕೆಗೆ ಸಂಪುಟ ಅನುಮೋದನೆ; ಮತ್ತು (ii) ಸಿಐಎಲ್ & ಬಿಹೆಚ್ ಇಎಲ್ ನ ಜೆವಿ ಮೂಲಕ ಎಂಸಿಎಲ್ ಕಮಾಂಡ್ ಪ್ರದೇಶದಲ್ಲಿ ಕಲ್ಲಿದ್ದಲಿನಿಂದ ಹಿಡಿದು ಅಮೋನಿಯಂ ನೈಟ್ರೇಟ್ ಯೋಜನೆ ಸ್ಥಾಪನೆ
Posted On:
24 JAN 2024 6:10PM by PIB Bengaluru
ಕೋಲ್ ಇಂಡಿಯಾ ಲಿಮಿಟೆಡ್ (CIL) ಕಲ್ಲಿದ್ದಲಿನಿಂದ ಹಿಡಿದು ಎಸ್ ಎನ್ ಜಿ (ಸಿಂಥೆಟಿಕ್ ನ್ಯಾಚುರಲ್ ಗ್ಯಾಸ್)ವರೆಗೆ ಯೋಜನೆಯನ್ನು ಸಿಐಎಲ್ ಮತ್ತು ಜಿಎಐಎಲ್ GAIL(India) ಜೆವಿ ಮೂಲಕ ಇಸಿಎಲ್ ಕಮಾಂಡ್ ಪ್ರದೇಶದಲ್ಲಿ ಸ್ಥಾಪಿಸಲು ಷೇರು ಹೂಡಿಕೆಯ ಪ್ರಸ್ತಾವನೆಗೆ ಮತ್ತು (ii) ಸಿಐಎಲ್ & ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ನ ಜಂಟಿ ಉದ್ಯಮ(Jv) ಮೂಲಕ ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್(MCL) ಕಮಾಂಡ್ ಏರಿಯಾದಲ್ಲಿ ಕಲ್ಲಿದ್ದಲಿನಿಂದ ಅಮೋನಿಯಂ ನೈಟ್ರೇಟ್ ಯೋಜನೆಯನ್ನು ಸ್ಥಾಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಸಮಿತಿ ಸಭೆ ಈ ಕೆಳಗಿನಂತೆ ಸಿಐಎಲ್ ನಿಂದ ಷೇರು ಹೂಡಿಕೆಯ ಪ್ರಸ್ತಾಪವನ್ನು ಅನುಮೋದಿಸಿದೆ:
ಎ. 70:30 ರ ಸಾಲ-ಷೇರು ಅನುಪಾತವನ್ನು ಪರಿಗಣಿಸಿ ಸಿಐಎಲ್ ನಿಂದ .1,997.08 ಕೋಟಿ ರೂಪಾಯಿ ಷೇರು ಬಂಡವಾಳ (±25%), ಮತ್ತು ಜಂಟಿ ಉದ್ಯಮ ಕಂಪನಿಯಲ್ಲಿ ಶೇಕಡಾ 51 ಷೇರು ಹೂಡಿಕೆಯು 13,052.81 ಕೋಟಿ ರೂಪಾಯಿಗಳ ಅಂದಾಜು ಪ್ರಾಜೆಕ್ಟ್ ಕ್ಯಾಪೆಕ್ಸ್‌ನೊಂದಿಗೆ (±25% ನಿಖರತೆ) ಸಿಐಎಲ್ ಮತ್ತು ಜಿಎಐಎಲ್ ನ ಜೆವಿ ಮೂಲಕ ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (ECL) ಸೋನೆಪುರ್ ಬಜಾರಿ ಪ್ರದೇಶದಲ್ಲಿ ಪ್ರಸ್ತಾವಿತ ಕಲ್ಲಿದ್ದಲು-ಸಿಂಥೆಟಿಕ್ ನೈಸರ್ಗಿಕ ಅನಿಲ (SNG)
ಬಿ. 70:30 ರ ಸಾಲ-ಷೇರು ಅನುಪಾತವನ್ನು ಪರಿಗಣಿಸಿ ಸಿಐಎಲ್ ನಿಂದ 1,802.56 ಕೋಟಿ ರೂಪಾಯಿ ಷೇರು ಬಂಡವಾಳ (± 25%), ಮತ್ತು ಜೆವಿ ಕಂಪನಿಯಲ್ಲಿ ಶೇಕಡಾ 51ರಷ್ಟು ಷೇರು ಹೂಡಿಕೆಯು ಅಂದಾಜು 11,782.05 ಕೋಟಿ ರೂಪಾಯಿಗಳ ಪ್ರಾಜೆಕ್ಟ್ ಕ್ಯಾಪೆಕ್ಸ್‌ನೊಂದಿಗೆ (± 25% ನಿಖರತೆ) ಸಿಐಎಲ್ ಮತ್ತು ಬಿಹೆಚ್ ಇಎಲ್ ನ ಜೆವಿ ಮೂಲಕ ಒಡಿಶಾದ ಝಾರ್ಸುಗುಡಾ ಜಿಲ್ಲೆಯ ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (MCL) ಲಖನ್‌ಪುರ್ ಪ್ರದೇಶದಲ್ಲಿ ಪ್ರಸ್ತಾವಿತ ಕಲ್ಲಿದ್ದಲು-ಅಮೋನಿಯಂ ನೈಟ್ರೇಟ್ ಯೋಜನೆ(AN)
ಸಿ. ಮೇಲಿನ ಹಂತದಲ್ಲಿ (ಎ) ಮತ್ತು ಸಿಐಎಲ್-ಬಿಹೆಚ್ ಇಎಲ್ ನ ಜೆವಿಯಲ್ಲಿ ಮೇಲಿನ ಹಂತದಲ್ಲಿ (ಬಿ) ನಲ್ಲಿರುವಂತೆ ಸಿಐಎಲ್-ಜಿಎಐಎಲ್ ನ ಜೆವಿಯಲ್ಲಿ ಅದರ ನಿವ್ವಳ ಮೌಲ್ಯದ ಶೇಕಡಾ 30ರಷ್ಟು ಸಿಐಎಲ್ನಿಂದ ಷೇರು ಹೂಡಿಕೆಗೆ ಅನುಮೋದನೆ.
2030 ರ ವೇಳೆಗೆ 100 ಮಿಲಿಯನ್ ಟನ್ ಕಲ್ಲಿದ್ದಲು ಅನಿಲೀಕರಣದ ಗುರಿಯನ್ನು ಸಾಧಿಸಲು, ಸ್ವಾವಲಂಬನೆ ಮತ್ತು ಇಂಧನ ಸ್ವಾತಂತ್ರ್ಯ ಭಾರತದ ಉದ್ದೇಶಗಳನ್ನು ಪೂರೈಸಲು ಕೋಲ್ ಇಂಡಿಯಾ ಲಿಮಿಟೆಡ್ (CIL) ಎರಡು ಕಲ್ಲಿದ್ದಲು ಅನಿಲೀಕರಣ ಘಟಕಗಳನ್ನು ಸ್ಥಾಪಿಸುತ್ತದೆ.
ಎ.ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (ECL) ಸೋನೆಪುರ್ ಬಜಾರಿ ಪ್ರದೇಶದಲ್ಲಿ ಕಲ್ಲಿದ್ದಲು-ಎಸ್ ಎನ್ ಜಿ ಯೋಜನೆಯನ್ನು ಸ್ಥಾಪಿಸಲು ಸಿಐಎಲ್-ಜಿಎಐಎಲ್ ನೊಂದಿಗೆ ಒಪ್ಪಂದಗಳಿಗೆ ಸಹಿ ಮಾಡಿದೆ. (±25%) ಸಾಲವನ್ನು ಪರಿಗಣಿಸಿ: 70:30 ರವರೆಗಿನ ಷೇರು ಅನುಪಾತ.
ಬಿ. ಒಡಿಶಾದ ಝಾರ್ಸುಗುಡಾ ಜಿಲ್ಲೆಯ ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (MCL) ಲಖನ್‌ಪುರ್ ಪ್ರದೇಶದಲ್ಲಿ ಕಲ್ಲಿದ್ದಲು-ಅಮೋನಿಯಂ ನೈಟ್ರೇಟ್ ಯೋಜನೆಯನ್ನು ಸ್ಥಾಪಿಸಲು ಬಿಹೆಚ್ ಇಎಲ್ ನೊಂದಿಗೆ ಸಿಐಎಲ್ ಒಪ್ಪಂದಗಳಿಗೆ ಸಹಿ ಹಾಕಿದೆ. (±25%) ಸಾಲವನ್ನು ಪರಿಗಣಿಸಿ: 70:30 ರವರೆಗಿನ ಷೇರು ಅನುಪಾತ.
******
*****
(Release ID: 1999368)
Visitor Counter : 92
Read this release in:
Telugu
,
Malayalam
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil