ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ ಇದರ 55 ನೇ ಘಟಿಕೋತ್ಸವದಲ್ಲಿ 700ಕ್ಕೂ ಅಧಿಕ ವಿದ್ಯಾರ್ಥಿಗಳು ಪಿಜಿ ಡಿಪ್ಲೋಮಾಗಳನ್ನು ಸ್ವೀಕರಿಸಿದರು
ಡೀಪ್ ಫೇಕ್ ಗಳು, ನಕಲಿ ಸುದ್ದಿಗಳು ಮತ್ತು ತಪ್ಪು ಮಾಹಿತಿಯು ಇಡೀ ಜಗತ್ತಿಗೆ ದೊಡ್ಡ ಸವಾಲಾಗಿದೆ; ಇದರ ವಿರುದ್ಧ ಹೋರಾಡಬೇಕು: ಎಂದು ಐಐಎಂಸಿ ಪದವೀಧರ ವಿದ್ಯಾರ್ಥಿಗಳಿಗೆ ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಸಲಹೆ ನೀಡಿದರು
“ಹೆಚ್ಚು ಟಿ.ಆರ್.ಪಿ. ಗಳಿಸಲು ಸಂವೇದನಾಶೀಲ ಸುದ್ದಿಗಳ ಪ್ರವೃತ್ತಿಯಿಂದ ದೂರವಿರಿ; ಪತ್ರಿಕೋದ್ಯಮದ ಮೌಲ್ಯಗಳನ್ನು ಕಾಪಾಡಿ: ಶ್ರೀ ರಾಮ್ ನಾಥ್ ಕೋವಿಂದ್
Posted On:
10 JAN 2024 3:25PM by PIB Bengaluru
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (ಐ.ಐ.ಎಂ.ಸಿ) ನ 55ನೇ ಘಟಿಕೋತ್ಸವ ಸಮಾರಂಭವು ಜನವರಿ 10, 2024 ರಂದು (ಇಂದು) ನವದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ನಡೆಯಿತು. ಭಾರತದ ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಐಐಎಂಸಿ ದೆಹಲಿ, ಐಐಎಂಸಿ ಧೆಂಕನಲ್, ಐಐಎಂಸಿ ಐಜ್ವಾಲ್, ಐಐಎಂಸಿ ಅಮರಾವತಿ, ಐಐಎಂಸಿ ಕೊಟ್ಟಾಯಂ ಮತ್ತು ಐಐಎಂಸಿ ಜಮ್ಮುವಿನ 2021–22 ಮತ್ತು 2022–23ರ ಬ್ಯಾಚ್ ಗಳಿಗೆ ಸೇರಿದ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಘಟಿಕೋತ್ಸವ ಸಮಾರಂಭದಲ್ಲಿ ಸ್ನಾತಕೋತ್ತರ ಡಿಪ್ಲೊಮಾಗಳನ್ನು ಪಡೆದರು. ವಿದ್ಯಾರ್ಥಿಗಳು ಹಿಂದಿ ಪತ್ರಿಕೋದ್ಯಮ, ಇಂಗ್ಲಿಷ್ ಪತ್ರಿಕೋದ್ಯಮ, ಒಡಿಯಾ ಪತ್ರಿಕೋದ್ಯಮ, ಮರಾಠಿ ಪತ್ರಿಕೋದ್ಯಮ, ಮಲಯಾಳಂ ಪತ್ರಿಕೋದ್ಯಮ, ಉರ್ದು ಪತ್ರಿಕೋದ್ಯಮ, ಜಾಹೀರಾತು ಮತ್ತು ಸಾರ್ವಜನಿಕ ಸಂಪರ್ಕಗಳು, ರೇಡಿಯೋ ಹಾಗೂ ದೂರದರ್ಶನ (ಟಿವಿ) ಪತ್ರಿಕೋದ್ಯಮ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾಗಳನ್ನು ಪಡೆದರು.
ಅಲ್ಲದೆ, ಈ ಎರಡೂ ಬ್ಯಾಚ್ ಗಳ 65 ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ (ಐಐಎಂಸಿ) ಇದರ 55 ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಭಾರತದ ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು “ಮುಂಬರುವ ದಿನಗಳಲ್ಲಿ ಐಐಎಂಸಿಯಂತಹ ಸಂಸ್ಥೆಗಳಿಂದ ಪದವಿ ಪಡೆಯುವ ಪತ್ರಕರ್ತರು ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯ ಹರಡುವಿಕೆಗಳ ವಿರುದ್ಧ ಹೋರಾಡುವುದನ್ನು ಖಚಿತಪಡಿಸಿಕೊಳ್ಳಬೇಕು. ಇಂದು, ಯಾರಾದರೂ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ಹರಡಲು ಡಿಜಿಟಲ್ ಮಾರ್ಗಗಳನ್ನು ಬಳಸಬಹುದು ಮತ್ತು 'ಡೀಪ್ಫೇಕ್ ಗಳು, ನಕಲಿ ಸುದ್ದಿಗಳು ಮತ್ತು ತಪ್ಪು ಮಾಹಿತಿಯು ಇಡೀ ಜಗತ್ತಿಗೆ ಮಹತ್ವದ ಸವಾಲಾಗಿದೆ ಎಂದು ಪದವೀಧರ ವಿದ್ಯಾರ್ಥಿಗಳಿಗೆ ಹೇಳಿದರು. ಪತ್ರಿಕೋದ್ಯಮ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳು ಈ ಸವಾಲುಗಳ ನಡುವೆ ನಾಗರಿಕರು ನಿಖರವಾದ ಮಾಹಿತಿಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ವೇಗವಾಗಿ ಮುಂದುವರಿಯುತ್ತಿರುವ ತಂತ್ರಜ್ಞಾನಗಳ ದುರುಪಯೋಗವನ್ನು ನಿಭಾಯಿಸಲು ಸಮರ್ಪಕವಾಗಿ ಸಿದ್ಧರಾಗಬೇಕು ಎಂದು ಅವರು ಪದವೀಧರ ವಿದ್ಯಾರ್ಥಿಗಳಿಗೆ ತಿಳಿಸಿದರು.
ಹೆಚ್ಚಿನ ಟಿಆರ್ ಪಿ ಗಳನ್ನು ಗಳಿಸಲು ಸಂವೇದನಾಶೀಲ ಸುದ್ದಿಗಳ ಪ್ರಸಾರ ಪ್ರವೃತ್ತಿಯಿಂದ ದೂರವಿರಬೇಕು ಎಂದು ಮಾಜಿ ರಾಷ್ಟ್ರಪತಿ ಪದವೀಧರ ವಿದ್ಯಾರ್ಥಿಗಳಿಗೆ ಹೇಳಿದರು. ಇಂತಹ ವಾಮಮಾರ್ಗ ಗಳನ್ನು ಬಳಸಿಕೊಳ್ಳದಂತೆ ಎಚ್ಚರಿಕೆ ವಹಿಸಿ, ಪತ್ರಿಕೋದ್ಯಮದ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರನ್ನು ಒತ್ತಾಯಿಸಿದರು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಶಕ್ತಿ ಯುವಕರ ಕೈಯಲ್ಲಿದೆ, ಈ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.
ಶ್ರೀ ಕೋವಿಂದ್ ಅವರು ಶಿಕ್ಷಣ ಮತ್ತು ಸಮೂಹ ಸಂವಹನದಲ್ಲಿ ತರಬೇತಿ ಕ್ಷೇತ್ರದಲ್ಲಿ ಐಐಎಂಸಿ 'ಉತ್ಕೃಷ್ಟತೆಯ ಕೇಂದ್ರ' ಎಂದು ಗುರುತಿಸುವಿಕೆಯನ್ನು ಉಲ್ಲೇಖಿಸಿದರು. ಅವರು ಭಾರತೀಯ ಪತ್ರಿಕೋದ್ಯಮಕ್ಕೆ ಐಐಎಂಸಿ ಹಳೆಯ ವಿದ್ಯಾರ್ಥಿಗಳ ಮಹತ್ವದ ಕೊಡುಗೆಯನ್ನು ಗಮನಿಸಿದರು ಮತ್ತು ಪತ್ರಿಕೋದ್ಯಮದಲ್ಲಿ ವೃತ್ತಿಜೀವನಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಸಂಸ್ಥೆಯ ಬದ್ಧತೆಯನ್ನು ಶ್ಲಾಘಿಸಿದರು.
ಐಐಎಂಸಿ ಅಧ್ಯಕ್ಷರಾದ ಶ್ರೀ ಆರ್. ಜಗನ್ನಾಥನ್; ಸಂಸ್ಥೆಯ ಅಧ್ಯಾಪಕರು ಮತ್ತು ಸಿಬ್ಬಂದಿಗಳೊಂದಿಗೆ ಐಐಎಂಸಿ ಮಹಾನಿರ್ದೇಶಕಿ ಡಾ. ಅನುಪಮಾ ಭಟ್ನಾಗರ್ ಮತ್ತು ಐಐಎಂಸಿಯ ಹೆಚ್ಚುವರಿ ಮಹಾನಿರ್ದೇಶಕ ಡಾ.ನಿಮಿಶ್ ರುಸ್ತಗಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಐಐಎಂಸಿ ಮಹಾನಿರ್ದೇಶಕಿ ಡಾ. ಅನುಪಮಾ ಭಟ್ನಾಗರ್ ಅವರು, ಪ್ರತಿ ವಿದ್ಯಾರ್ಥಿಗೆ ಅವರ ಒಟ್ಟಾರೆ ಬೆಳವಣಿಗೆಗೆ ಅಗತ್ಯವಾದ ಸಮಗ್ರ ಅಭಿವೃದ್ಧಿಗೆ ಅವಕಾಶಗಳನ್ನು ಒದಗಿಸುವ ಐಐಎಂಸಿ ಬದ್ಧತೆಯನ್ನು ತಿಳಿಸಿದರು.
55ನೇ ಘಟಿಕೋತ್ಸವ ಸಮಾರಂಭದ ವಿಡಿಯೊವನ್ನು ಇಲ್ಲಿ ವೀಕ್ಷಿಸಬಹುದು.
*****
(Release ID: 1994875)
Visitor Counter : 87