ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​2023ರ ರಾಷ್ಟ್ರೀಯ ಕ್ರೀಡೆ ಮತ್ತು ಸಾಹಸ ಪ್ರಶಸ್ತಿ ವಿಜೇತರನ್ನು ಪ್ರಧಾನಮಂತ್ರಿ ಅಭಿನಂದಿಸಿದ್ದಾರೆ

Posted On: 09 JAN 2024 7:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ರಾಷ್ಟ್ರೀಯ ಕ್ರೀಡೆ ಮತ್ತು ಸಾಹಸ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ. ಆಟಗಾರರ ಗಮನಾರ್ಹ ಸಾಧನೆಗಳು ಮತ್ತು ಅಚಲ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ತಮ್ಮ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಜಾಗತಿಕ ಹಂತದಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಏರಿಸಿದ್ದಾರೆ ಎಂದು ಹೇಳಿದರು. 

ರಾಷ್ಟ್ರಪತಿ ಭವನದಲ್ಲಿ 2023 ರ ರಾಷ್ಟ್ರೀಯ ಕ್ರೀಡೆ ಮತ್ತು ಸಾಹಸ ಪ್ರಶಸ್ತಿಗಳ ಕಾರ್ಯಕ್ರಮದ ಕುರಿತು ಭಾರತದ ರಾಷ್ಟ್ರಪತಿಗಳ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಅವರು ಎಕ್ಸ್ ಸಂದೇಶ ನೀಡಿದ್ದಾರೆ.

"ರಾಷ್ಟ್ರೀಯ ಕ್ರೀಡೆ ಮತ್ತು ಸಾಹಸ ಪ್ರಶಸ್ತಿಗಳು 2023 ರ ಶ್ರೇಷ್ಠ ವಿಜೇತರಿಗೆ ಅಭಿನಂದನೆಗಳು. ಅವರ ಗಮನಾರ್ಹ ಸಾಧನೆಗಳು ಮತ್ತು ಅಚಲವಾದ ಸಮರ್ಪಣೆ ನಮ್ಮ ರಾಷ್ಟ್ರಕ್ಕೆ ಸ್ಫೂರ್ತಿಯಾಗಿದೆ. ಅವರು ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವುದು ಮಾತ್ರವಲ್ಲದೆ ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಏರಿಸಿದ್ದಾರೆ" ಎಂದು ಪ್ರಧಾನಮಂತ್ರಿಗಳು ಸಂದೇಶ ನೀಡಿದ್ದಾರೆ.

*********

 


(Release ID: 1994846) Visitor Counter : 124