ಪ್ರಧಾನ ಮಂತ್ರಿಯವರ ಕಛೇರಿ

ಮತ್ಸ್ಯ ಸಂಪದ ಮೂಲಕ ತನ್ನ ಆದಾಯವನ್ನು ದ್ವಿಗುಣಗೊಳಿಸಿದ ಹರಿದ್ವಾರದ ರೈತನಿಗೆ ಪ್ರಧಾನಮಂತ್ರಿಯವರ ಮೆಚ್ಚುಗೆ  

Posted On: 27 DEC 2023 2:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

 ದೇಶಾದ್ಯಂತ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಾವಿರಾರು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪ್ರಧಾನಮಂತ್ರಿಯವರು ಹರಿದ್ವಾರದ ಫಲಾನುಭವಿ ಗುರುದೇವ್ ಸಿಂಗ್ ಜಿ ಅವರನ್ನು 'ಹರ್ ಹರ್ ಗಂಗೆ' ಎಂದು ಹೇಳುವ ಮೂಲಕ ಸ್ವಾಗತಿಸಿದರು ಮತ್ತು ನೆರೆದಿದ್ದ ಜನಸಮೂಹವು 'ಹರ್ ಹರ್ ಗಂಗೆ' ಎಂದು ಘೋಷಣೆ ಕೂಗಿದವು. ಶ್ರೀ ಸಿಂಗ್ ಒಬ್ಬ ರೈತ ಮತ್ತು ಮೀನುಗಾರಿಕೆಯಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.

ಶ್ರೀ ಸಿಂಗ್ ತಮ್ಮ ಆದಾಯವನ್ನು ದ್ವಿಗುಣಗೊಳಿಸುವ ಮತ್ಸ್ಯ ಸಂಪದ ಯೋಜನೆಯ ಲಾಭವನ್ನು ಹೇಗೆ ಪಡೆದರು ಎಂಬುದರ ಕುರಿತು ಪ್ರಧಾನಮಂತ್ರಿಯವರಿಗೆ ತಿಳಿಸಿದರು. ತಮ್ಮ ಒಂದು ಎಕರೆ ಜಮೀನಿನಲ್ಲಿ 60 ಸಾವಿರ ರೂಪಾಯಿ ಗಳಿಸುತ್ತಿದ್ದ ಅವರು, ಈಗ ಅದೇ ಜಮೀನಿನಲ್ಲಿ ಮೀನುಗಾರಿಕೆ ಮೂಲಕ 1.5 ಲಕ್ಷ ರೂಪಾಯಿ ಗಳಿಸಬಹುದು ಎಂದು ಮಾಹಿತಿ ನೀಡಿದರು. ಸರ್ಕಾರದ ಯೋಜನೆಗಳನ್ನು ಅಧ್ಯಯನ ಮಾಡುತ್ತಲೇ ಹೊಸ ಆವಿಷ್ಕಾರವನ್ನು ಮಾಡಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅವರನ್ನು ಹೊಗಳಿದರು.

 ಪಶುಸಂಗೋಪನೆ, ಮೀನುಗಾರಿಕೆ, ಜೇನು ಉತ್ಪಾದನೆಯ ಮೂಲಕ ಕೃಷಿ ಆದಾಯವನ್ನು ಹೆಚ್ಚಿಸುವ ಉಪಯುಕ್ತತೆಯನ್ನು ಪ್ರಧಾನ ಮಂತ್ರಿಯವರು ಪುನರುಚ್ಚರಿಸಿದರು. ಹಸಿರು ಶ್ವೇತ ಕ್ರಾಂತಿಯೊಂದಿಗೆ ಸಿಹಿ ಕ್ರಾಂತಿ ಮತ್ತು ನೀಲಿ ಕ್ರಾಂತಿಯ ಮಹತ್ವವನ್ನೂ ಅವರು ಒತ್ತಿ ಹೇಳಿದರು.

****



(Release ID: 1990847) Visitor Counter : 50