ಸಂಪುಟ

​​​​​​​ಪ್ರಸಾರ ಭಾರತಿ ಮತ್ತು ರೇಡಿಯೊ ಟೆಲಿವಿಸಿಯನ್ ಮಲೇಷಿಯಾ (ಆರ್ ಟಿ ಎಂ), ಮಲೇಷ್ಯಾ ನಡುವೆ ಪ್ರಸಾರ ಸಹಕಾರಕ್ಕಾಗಿ ಭಾರತ ಮತ್ತು ಮಲೇಷ್ಯಾ ಒಪ್ಪಂದಕ್ಕೆ ಸಹಿ ಹಾಕಲು  ಕೇಂದ್ರ ಸಚಿವ ಸಂಪುಟದ ಅನುಮೋದನೆ

Posted On: 27 DEC 2023 3:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2023ರ ನವೆಂಬರ್ 7ರಂದು ಸಹಿ ಮಾಡಲಾದ ತಿಳಿವಳಿಕೆ ಒಪ್ಪಂದ/ಒಪ್ಪಂದದ (ಎಂಒಯು) ಕುರಿತು ಮಾಹಿತಿ ನೀಡಲಾಯಿತು, ಇದು ಪ್ರಸಾರ, ಸುದ್ದಿ ವಿನಿಮಯ ಮತ್ತು ದೃಶ್ಯ ಶ್ರಾವ್ಯ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಲು ಅಪಾರ ಸಾಮರ್ಥ್ಯವನ್ನು ಹೊಂದಿದೆ ಹಾಗು ಆ ದೇಶದೊಂದಿಗಿನ ಭಾರತದ ಸೌಹಾರ್ದ ಸಂಬಂಧವನ್ನು ಗಣನೀಯವಾಗಿ ವೃದ್ಧಿಸುತ್ತದೆ. ಇದರೊಂದಿಗೆ ಪ್ರಸಾರ ಭಾರತಿ ವಿವಿಧ ದೇಶಗಳೊಂದಿಗೆ ಸಹಿ ಹಾಕಿರುವ ಒಪ್ಪಂದಗಳ ಒಟ್ಟು ಸಂಖ್ಯೆ 46ಕ್ಕೆ ಏರಿಕೆಯಾಗಿದೆ.

ರಾಷ್ಟ್ರ ನಿರ್ಮಾಣದಲ್ಲಿ ಪ್ರಸಾರ ಭಾರತಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ದೇಶ ಮತ್ತು ವಿದೇಶಗಳಲ್ಲಿ ಎಲ್ಲರಿಗೂ ಅರ್ಥಪೂರ್ಣ ಮತ್ತು ನಿಖರವಾದ ವಿಷಯವನ್ನು ಒದಗಿಸುವಲ್ಲಿ ನಿರಂತರ ಗಮನವನ್ನು ನೀಡುತ್ತದೆ. ಈ ತಿಳುವಳಿಕಾ ಒಪ್ಪಂದಗಳು ಇತರ ದೇಶಗಳಲ್ಲಿ ವಿಷಯದ ವಿತರಣೆಯಲ್ಲಿ, ಅಂತಾರಾಷ್ಟ್ರೀಯ ಪ್ರಸಾರಕರೊಂದಿಗೆ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಹೊಸ ತಂತ್ರಜ್ಞಾನಗಳ ಬೇಡಿಕೆಗಳನ್ನು ಪರಿಹರಿಸಲು ಹೊಸ ತಂತ್ರಗಳನ್ನು ಅನ್ವೇಷಿಸುವಲ್ಲಿ ಮುಖ್ಯವಾಗುತ್ತವೆ. ಎಂಒಯುಗಳಿಗೆ ಸಹಿ ಹಾಕುವುದರಿಂದ ಉಂಟಾಗುವ ಪ್ರಮುಖ ಪ್ರಯೋಜನವೆಂದರೆ ಸಂಸ್ಕೃತಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಸುದ್ದಿ ಮತ್ತು ಇತರ ಕ್ಷೇತ್ರಗಳಲ್ಲಿ ಉಚಿತ / ಉಚಿತವಲ್ಲದ ಆಧಾರದ ಮೇಲೆ ಕಾರ್ಯಕ್ರಮಗಳ ವಿನಿಮಯ.

ಭಾರತದ ಸಾರ್ವಜನಿಕ ಪ್ರಸಾರ ಸೇವಾ ಸಂಸ್ಥೆ, ಪ್ರಸಾರ ಭಾರತಿಯು ರೇಡಿಯೋ ಮತ್ತು ದೂರದರ್ಶನ ಕ್ಷೇತ್ರದಲ್ಲಿ ಸಾರ್ವಜನಿಕ ಪ್ರಸಾರದಲ್ಲಿ ಸಹಕಾರವನ್ನು ಉತ್ತೇಜಿಸುವ ಸಲುವಾಗಿ ಮಲೇಷ್ಯಾದ ಸಾರ್ವಜನಿಕ ಪ್ರಸಾರ ಸೇವಾ ಸಂಸ್ಥೆ ರೇಡಿಯೊ ಟೆಲಿವಿಸಿಯೆನ್ ಮಲೇಷಿಯಾದೊಂದಿಗೆ ತಿಳುವಳಿಕೆ ಒಪ್ಪಂದವನ್ನು ಮಾಡಿಕೊಂಡಿದೆ.

***



(Release ID: 1990833) Visitor Counter : 59