ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ವರ್ಷಾಂತ್ಯದ ಪರಾಮರ್ಶೆ - ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
29.23 ಕೋಟಿಗೂ ಹೆಚ್ಚಿನ ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ
ರಾಷ್ಟ್ರೀಯ ವೃತ್ತಿ ಸೇವಾ ವೇದಿಕೆಯು 2015ರಲ್ಲಿ ಪ್ರಾರಂಭವಾದಾಗಿನಿಂದ 3.64 ಕೋಟಿಗಿಂತ ಹೆಚ್ಚಿನ ನೋಂದಾಯಿತ ಉದ್ಯೋಗಾಕಾಂಕ್ಷಿಗಳು, 19.15 ಲಕ್ಷ ಉದ್ಯೋಗದಾತರು ಮತ್ತು 1.92 ಕೋಟಿಗಿಂತ ಹೆಚ್ಚಿನ ಖಾಲಿ ಹುದ್ದೆಗಳನ್ನು ಹೊಂದಿದೆ.
ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆ ಅಡಿ 1,52,499 ಸಂಸ್ಥೆಗಳ ಮೂಲಕ 60.48 ಲಕ್ಷ ಫಲಾನುಭವಿಗಳಿಗೆ 10,043.02 ಕೋಟಿ ರೂ. ನೀಡಲಾಗಿದೆ.
161 ಆಸ್ಪತ್ರೆಗಳು ಮತ್ತು 1574 ಔಷಧಾಲಯಗಳ ಜಾಲದೊಂದಿಗೆ ಇಎಸ್ಐಸಿ, ಲಕ್ಷದ್ವೀಪ ಸೇರಿದಂತೆ 611 ಜಿಲ್ಲೆಗಳಿಗೆ ತನ್ನ ವ್ಯಾಪ್ತಿ ವಿಸ್ತರಿಸಿದೆ; 12 ಕೋಟಿಗಿಂತ ಹೆಚ್ಚಿನ ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಒದಗಿಸಿದ್ದು, ವಿಮಾದಾರರ ಸಂಖ್ಯೆಯೇ 3.72 ಕೋಟಿಗಿಂತ ಹೆಚ್ಚಿದೆ.
ಇಪಿಎಫ್ಒ ಸಂಘಟನೆಯು 24 ಕೋಟಿಗೂ ಹೆಚ್ಚು ಖಾತೆಗಳಿಗೆ 8.15% ಬಡ್ಡಿ ಜಮಾ ಮಾಡಿದೆ
ಭಾರತದ ಜಿ-20 ಅಧ್ಯಕ್ಷತೆಯ ಅಡಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಒಟ್ಟು 75ಕ್ಕಿಂತ ಹೆಚ್ಚಿನ ದ್ವಿಪಕ್ಷೀಯ ಸಭೆಗಳನ್ನು ನಡೆಸಿದೆ
Posted On:
22 DEC 2023 3:40PM by PIB Bengaluru
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ರಾಷ್ಟ್ರೀಯ ಡೇಟಾ ಬೇಸ್(ದತ್ತಾಂಶ ನೆಲೆ) ಸೃಜಿಸಲು 26.08.2021ರಂದು ಇ-ಶ್ರಮ್ ಪೋರ್ಟಲ್ ಆರಂಭಿಸಲಾಗಿದೆ. ಡಿಜಿಟಲ್ ಇಂಡಿಯಾ ಅವಾರ್ಡ್-2022ರಲ್ಲಿ "ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು - ಕೇಂದ್ರ ಸಚಿವಾಲಯಗಳ ಇಲಾಖೆಗಳು" ವಿಭಾಗದಲ್ಲಿ ಇ-ಶ್ರಮ್ "ಸ್ವರ್ಣ ಪ್ರಶಸ್ತಿ" ಗೆದ್ದಿದೆ. ಭಾರತದ ರಾಷ್ಟ್ರಪತಿ ಅವರು ಈ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ 2023 ಜನವರಿ 7ರಂದು ಪ್ರಶಸ್ತಿ ಪ್ರದಾನ ಮಾಡಿದರು.
2023 ಜನವರಿಯಿಂದ ನವೆಂಬರ್ ವರೆಗೆ ಒಟ್ಟು 69.26 ಲಕ್ಷ ಅಸಂಘಟಿತ ವಲಯದ ಕಾರ್ಮಿಕರನ್ನು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ. ಒಟ್ಟಾರೆ, 2023 ಡಿಸೆಂಬರ್ 17ಕ್ಕೆ ಅನ್ವಯವಾಗುವಂತೆ, 29.23 ಕೋಟಿಗೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇ-ಶ್ರಮ್ ಪೋರ್ಟಲ್ ಅನ್ನು ಎನ್ ಸಿಎಸ್ಸ ಎಸ್ಐಡಿ ಪೋರ್ಟಲ್, ಪಿಎಂ-ಎಸ್ ವೈಎಂ, ಮೈಸ್ಕೀಂ & ದಿಶಾ ಪೋರ್ಟಲ್‌ನೊಂದಿಗೆ ಸಂಯೋಜಿಸಲಾಗಿದೆ.
ಇ-ಶ್ರಮ್ ಪೋರ್ಟಲ್ ಗೆ ಸಂಬಂಧಿಸಿದಂತೆ ಇತರ ಉಪಕ್ರಮಗಳು ಮತ್ತು ಸಾಧನೆಗಳು ಈ ಕೆಳಗಿನಂತಿವೆ:
- ಇತರ ಯೋಜನೆಗಳನ್ನು ಅಧಿಕೃತಗೊಳಿಸಲು ಅಥವಾ ಔಪಚಾರಿಕಗೊಳಿಸಲು ಇ-ಶ್ರಮ್ ದತ್ತಾಂಶ ಬಳಸಲಾಗುತ್ತಿದೆ.
- ಪ್ರಧಾನಮಂತ್ರಿ-ವಿಶ್ವಕರ್ಮ ಯೋಜನೆಯನ್ನು ಅಧಿಕೃತಗೊಳಿಸಲು ಇ-ಶ್ರಮ್ ನೋಂದಣಿದಾರರ ಮಾಹಿತಿಯನ್ನು ಎಂಎಸ್ಎಂಇ ಜತೆ ಹಂಚಿಕೊಳ್ಳಲಾಗಿದೆ.
- ದತ್ತಾಂಶ ಹಂಚಿಕೆಯ ಮಾರ್ಗಸೂಚಿಗಳು, ಪ್ರಮಾಣಿತ ಕಾರ್ಯಾಚರಣೆಯ ವಿಧಾನಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಿದ್ಧಪಡಿಸಲಾಗಿದೆ.
- ದತ್ತಾಂಶ ಹಂಚಿಕೆ ಪೋರ್ಟಲ್ ಅಭಿವೃದ್ಧಿಪಡಿಸಿ, ಅನಾವರಣಗೊಳಿಸಲಾಗಿದೆ. ಎಲ್ಲಾ 36 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ದತ್ತಾಂಶ ಹಂಚಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿವೆ. ಅವು ಆಯಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಇ-ಶ್ರಮ್ ನೋಂದಣಿದಾರರ ಮಾಹಿತಿಗೆ ಪ್ರವೇಶ ಹೊಂದಿವೆ.
- ದತ್ತಾಂಶ ಹಂಚಿಕೆ ಮಾರ್ಗಸೂಚಿಗಳು ಮತ್ತು ಪ್ರಮಾಣಿತ ಕಾರ್ಯಾಚರಣೆ ವಿಧಾನದಳನ್ನು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸಿದ್ಧಪಡಿಸಲಾಗಿದೆ.
- ಇಶ್ರಾಮ್‌ನಲ್ಲಿ ನೋಂದಣಿಯಾಗಿರುವ ಕಟ್ಟಡ ನಿರ್ಮಾಣ ಕ್ಷೇತ್ರದ ಕಾರ್ಮಿಕರಿಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಲಾಗಿದೆ. ಇದು ಕಾರ್ಮಿಕರ ಅರ್ಹತೆಯ ಆಧಾರದ ಮೇಲೆ ರಾಜ್ಯಗಳ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗಳಿಗೆ ಎಲ್ಲಾ ಕಾರ್ಮಿಕರನ್ನು ಗುರುತಿಸಲು ಮತ್ತು ನೋಂದಾಯಿಸಲು ಅನುಕೂಲವಾಗುತ್ತದೆ.
- ಒಂದು ನಿರ್ದಿಷ್ಟ ಅವಧಿಯಲ್ಲಿ ಅಪಘಾತಕ್ಕೆ ಒಳಗಾಗಿ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದ ಸಂದರ್ಭದಲ್ಲಿ ಇ-ಶ್ರಮ್ ನೋಂದಣಿದಾರರಿಗೆ ಪ್ರಯೋಜನಗಳನ್ನು ಒದಗಿಸಲು ಎಕ್ಸ್-ಗ್ರೇಷಿಯಾ ಮಾಡ್ಯೂಲ್ ಪ್ರಾರಂಭಿಸಲಾಗಿದೆ.
ರಾಷ್ಟ್ರೀಯ ವೃತ್ತಿ ಸೇವೆ (ಎನ್ ಸಿಎಸ್)
- ರಾಷ್ಟ್ರೀಯ ವೃತ್ತಿ ಸೇವೆ (ಎನ್ ಸಿಎಸ್) ಯೋಜನೆಯು 20.07.2015ರಂದು ಆರಂಭವಾದ ಕಾರ್ಯಾಚರಣೆ ಮಾದರಿಯ ಸ್ವರೂಪ ಹೊಂದಿದೆ. ಉದ್ಯೋಗ ಹೊಂದಾಣಿಕೆ, ವೃತ್ತಿ ಸಮಾಲೋಚನೆ, ವೃತ್ತಿಪರ ಮಾರ್ಗದರ್ಶನ, ಕೌಶಲ್ಯ ಮಾಹಿತಿಯಂತಹ ಆನ್‌ಲೈನ್ ಮೋಡ್‌ನಲ್ಲಿ ವಿವಿಧ ಉದ್ಯೋಗ ಸಂಬಂಧಿತ ಸೇವೆಗಳನ್ನು ಒದಗಿಸಲು ರಾಷ್ಟ್ರೀಯ ಉದ್ಯೋಗ ಸೇವೆಯ ಪರಿವರ್ತನೆಗಾಗಿ 20.07.2015 ರಂದು ಪ್ರಾರಂಭಿಸಲಾಗಿದೆ. ಡಿಜಿಟಲ್ ವೇದಿಕೆ ಮೂಲಕ [www.ncs.gov.in] ಅಭಿವೃದ್ಧಿ ಕೋರ್ಸ್‌ಗಳು, ಅಪ್ರೆಂಟಿಸ್‌ಶಿಪ್, ಇಂಟರ್ನ್‌ಶಿಪ್ ಇತ್ಯಾದಿ ಒದಗಿಸಲಾಗುತ್ತಿದೆ. 2023 ನವೆಂಬರ್ 30ಕ್ಕೆ ಅನ್ವಯವಾಗುವಂತೆ, ಎನ್ ಸಿಎಸ್ ವೇದಿಕೆಯು 2015ರಲ್ಲಿ ಆರಂಭವಾದಾಗಿನಿಂದ 3.64 ಕೋಟಿಗೂ ಹೆಚ್ಚು ನೋಂದಾಯಿತ ಉದ್ಯೋಗಾಕಾಂಕ್ಷಿಗಳು, 19.15 ಲಕ್ಷ ಉದ್ಯೋಗದಾತರು ಮತ್ತು 1.92 ಕೋಟಿಗೂ ಹೆಚ್ಚು ಖಾಲಿ ಹುದ್ದೆಗಳನ್ನು ಹೊಂದಿದೆ. 2023 ನವೆಂಬರ್ ನಲ್ಲಿ ಈ ಪೋರ್ಟಲ್ ಹಿಂದೆಂದೂ ಕಾಣದ 13.49 ಲಕ್ಷಕ್ಕಿಂತ ಹೆಚ್ಚಿನ ಸಕ್ರಿಯ ಖಾಲಿ ಹುದ್ದೆಗಳನ್ನು ನೋಂದಾಯಿಸಿದೆ.
- ಸಮಗ್ರ ಪ್ಯಾನ್-ಇಂಡಿಯಾ ಜಾಲವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಎನ್ ಸಿಎಸ್ ಪೋರ್ಟಲ್ ಅನ್ನು 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಯೋಜಿಸಲಾಗಿದೆ. ರಾಜ್ಯಗಳ ಜತೆಗೆ ಎನ್ ಸಿಎಸ್, monster.com, Freshersworld, HireMee, TCS-iON, Quikr, Quess Corp ಮುಂತಾದ ಬಹು ಖಾಸಗಿ ಪೋರ್ಟಲ್‌ಗಳೊಂದಿಗೆ ಏಕೀಕರಣ ಸ್ಥಾಪಿಸಿದೆ. ಎನ್ ಸಿಎಸ್ ಪೋರ್ಟಲ್‌ನಿಂದ ಗರಿಷ್ಠ ಪ್ರಯೋಜನ ಪಡೆಯಲು ಎನ್ ಸಿಎಸ್ ಪಾಲುದಾರರಿಗೆ ಸುಲಭತೆ ಸೃಷ್ಟಿಸುವ ಗುರಿ ಹೊಂದಿರುವ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಸ್ಕಿಲ್ ಇಂಡಿಯಾ ಪೋರ್ಟಲ್, ಉದ್ಯಮ್ ಪೋರ್ಟಲ್(ಎಂಎಸ್ಎಂಇ), ಇ-ಶ್ರಮ್, ಇಪಿಎಫ್ಒ,ಇಎಸ್ಐಸಿ, ಡಿಜಿಲಾಕರ್ ಇತ್ಯಾದಿಗಳೊಂದಿಗೆ ಅಂತರ್ ಸಂಪರ್ಕ ಹೊಂದಿದೆ.
- ಇತ್ತೀಚಿನ ತಂತ್ರಜ್ಞಾನಗಳ ಬಳಕೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ಮತ್ತು ಮೆಷಿನ್ ಲರ್ನಿಂಗ್ ಮೂಲಕ ಕೌಶಲ್ಯಕ್ಕಾಗಿ ಶಿಫಾರಸು ಮಾಡಲಾಗುವ ಎಂಜಿನ್ ಜತೆಗೆ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ಹೊಂದಾಣಿಕೆ ಮತ್ತು ಹುಡುಕಾಟ ಸೌಲಭ್ಯ ಸುಗಮಗೊಳಿಸಲು ಸಚಿವಾಲಯವು ಎನ್ ಸಿಎಸ್ 2.0 ಎಂಬ ಮುಂಗಡ ಆವೃತ್ತಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಆ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಅವರ ಕೌಶಲ್ಯಕ್ಕೆ ಅನುಗುಣವಾಗಿ ಯೋಗ್ಯವಾದ ಉದ್ಯೋಗಗಳನ್ನು ಪಡೆಯಲು ಅನುಕೂಲವಾಗುತ್ತದೆ. ಜತೆಗೆ, ಉದ್ಯೋಗದಾತರಿಗೆ ಅವರ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ.
ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆ(ಎಬಿಆರ್ ವೈ) ಉದ್ಯೋಗ ಸೃಷ್ಟಿ ಹೆಚ್ಚಿಸಲು ಮತ್ತು ಕೋವಿಡ್-19 ಸಾಂಕ್ರಾಮಿಕದ ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ಕಡಿಮೆ ಮಾಡಲು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 30.12.2020ರಂದು ಇಪಿಎಫ್ಒ-ಸಂಯೋಜಿತ ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆ (ಎಬಿಆರ್ ವೈ) ಯೋಜನೆ ಆರಂಭಿಸಿ, ಅಧಿಸೂಚನೆ ಹೊಂರಡಿಸಿದೆ. 2023 ಡಿಸೆಂಬರ್ 05ಕ್ಕೆ ಅನ್ವಯವಾಗುವಂತೆ ಎಬಿಆರ್ ವೈ ಯೋಜನೆ ಅಡಿ, 1,52,499 ಸಂಸ್ಥೆಗಳ ಮೂಲಕ 60.48 ಲಕ್ಷ ಫಲಾನುಭವಿಗಳಿಗೆ ಒಟ್ಟು 10,043.02 ಕೋಟಿ ರೂ. ಮೌಲ್ಯದ ಪ್ರಯೋಜನಗಳನ್ನು ಒದಗಿಸಲಾಗಿದೆ.
ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ)
- ಇಎಸ್ಐಸಿ 161 ಆಸ್ಪತ್ರೆಗಳು ಮತ್ತು 1,574 ಔಷಧಾಲಯಗಳ ಜಾಲದೊಂದಿಗೆ ಲಕ್ಷದ್ವೀಪ ಸೇರಿದಂತೆ ದೇಶದ 611 ಜಿಲ್ಲೆಗಳಿಗೆ ತನ್ನ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಿದೆ.
- 12 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಜತೆಗೆ, ವಿಮಾದಾರರ ಸಂಖ್ಯೆ 3.72 ಕೋಟಿಗೂ ಏರಿಕೆ ಆಗಿದೆ.
- ಉತ್ತಮವಾದ ಕ್ಯಾನ್ಸರ್ ಚಿಕಿತ್ಸೆ ಒದಗಿಸಲು, 2023 ಮೇನಿಂದ ಇಎಸ್ಐಸಿ, ದೇಶಾದ್ಯಂತ 100 ಹಾಸಿಗೆಗಳು ಅಥವಾ ನ್ನೂ ಹೆಚ್ಚಿನ ಹಾಸಿಗೆಗಳುಳ್ಳ ತನ್ನ 38 ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಸೇವೆಗಳನ್ನು ಪರಿಚಯಿಸಿದೆ.
- ಇಎಸ್ಐಸಿ ವೈದ್ಯಕೀಯ ಮೂಲಸೌಕರ್ಯವನ್ನು ಸಕ್ರಿಯವಾಗಿ ಸುಧಾರಿಸುತ್ತಿದೆ, ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು 8ಕ್ಕೆ ಹೆಚ್ಚಿಸಲಾಗಿದೆ, ಎಂಬಿಬಿಎಸ್ ಸೀಟುಗಳನ್ನು 950ಕ್ಕೆ ಹೆಚ್ಚಿಸಲಾಗಿದೆ, ಎಂಡಿ, ಎಂಎಸ್ ಸೀಟುಗಳನ್ನು 275ಕ್ಕೆ ಹೆಚ್ಚಿಸಲಾಗಿದೆ.
- ಇತರ ಉಪಕ್ರಮಗಳು "ಕಹಿಂ ಭಿ, ಕಭಿ ಭಿ" ಅನ್ನು ಒಳಗೊಂಡಿವೆ; ವೈದ್ಯರು, ವಿಶೇಷವಾರು ರೆಫರಲ್‌ಗಳಿಗಾಗಿ ನೈಜ-ಸಮಯದ ಡ್ಯಾಶ್‌ಬೋರ್ಡ್‌ನೊಂದಿಗೆ ರೆಫರಲ್ ಪಾಲಿಸಿ, ಔಷಧಿಗಳ ಮನೆ ವಿತರಣೆ ಮತ್ತು ವಿಮಾದಾರ ವ್ಯಕ್ತಿಗಳು(ಐಪಿ) ಅಥವಾ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದ ಫಲಾನುಭವಿಗಳಿಗೆ ಟೆಲಿಮೆಡಿಸಿನ್.
- ತಡೆಗಟ್ಟುವ ರೋಗಗಳಿಗಾಗಿ ಇಎಸ್ಐಸಿ, ಸಾರ್ವಜನಿಕ ಆರೋಗ್ಯ ಘಟಕಗಳನ್ನು ಸ್ಥಾಪಿಸಿದೆ ಮತ್ತು ಔದ್ಯೋಗಿಕ ರೋಗಗಳ ಮ್ಯಾಪಿಂಗ್ ಅನ್ನು ಕೈಗೊಂಡಿದೆ.
- 5ಜಿ ಆಂಬ್ಯುಲೆನ್ಸ್ ಸೇವೆಯ ಪ್ರಾರಂಭವು ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿರುವ ರೋಗಿಗಳ ಬಗ್ಗೆ ಸುಧಾರಿತ ಮಾಹಿತಿಯನ್ನು ಒದಗಿಸುತ್ತದೆ.
- ವಿಮಾದಾರ ವ್ಯಕ್ತಿಗಳು(ಐಪಿಗಳು) ಪಿಎಂಜೆಎವೈ ಯೋಜನೆಯಡಿ, ಪಟ್ಟಿ ಮಾಡಲಾದ(ಗುರುತಿಸಿರುವ) ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.
ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಐ)
- ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ತನ್ನ ಫಲಾನುಭವಿಗಳಿಗೆ ಅಥವಾ ಚಂದಾದಾರರಿಗೆ ಸುಲಭವಾಗಿ ಅನುಕೂಲಗಳನ್ನು ಒದಗಿಸಲು ವಿವಿಧ ಪ್ರಮುಖ ಸುಧಾರಣೆಗಳನ್ನು ಕೈಗೊಂಡಿದೆ. ಈ ಸುಧಾರಣೆಗಳಲ್ಲಿ ಪಾರದರ್ಶಕ ಕಂಪ್ಯೂಟರ್-ರಚಿತ ತಪಾಸಣಾ ವ್ಯವಸ್ಥೆ, ಇ-ಪಾಸ್‌ಬುಕ್ ಪರಿಚಯ, UMANG ನೊಂದಿಗೆ ಆನ್‌ಬೋರ್ಡಿಂಗ್, ಆಡಳಿತಾತ್ಮಕ ಶುಲ್ಕಗಳಲ್ಲಿ ಕಡಿತ, ಸರಳೀಕೃತ ಮಾಸಿಕ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ಇತ್ಯಾದಿ ಸೇರಿವೆ.
- ಜೊತೆಗೆ, ಇಪಿಎಫ್ಒ 24 ಕೋಟಿ ಖಾತೆಗಳಿಗೆ 8.15% ಬಡ್ಡಿ ಜಮಾ ಮಾಡಿದೆ.
- ಸದಸ್ಯರಿಗೆ ಮಾರ್ಗದರ್ಶನ ನೀಡಲು, ಹೆಚ್ಚಿನ ಪಿಂಚಣಿ ಅನುಷ್ಠಾನ ಕುರಿತು ಪದೇಪದೆ ಕೇಳಲಾಗುವ ಪ್ರಶ್ನೆ(FAQ) ಗಳನ್ನು ಬಿಡುಗಡೆ ಮಾಡಲಾಗಿದೆ.
- ಸಂಸ್ಥೆಯು 2023 ಜನವರಿ 27ರಂದು ಭಾರತದ ಎಲ್ಲಾ 692 ಜಿಲ್ಲೆಗಳಲ್ಲಿ ನಿಧಿ ಆಪ್ಕೆ ನಿಕಾತ್ 2.0 ಕಾರ್ಯಕ್ರಮ ಪ್ರಾರಂಭಿಸಿತು. ಪ್ರತಿ ಇಪಿಎಫ್ಒ ಕಚೇರಿಯು ಪ್ರತಿ ತಿಂಗಳ 27ರಂದು ಜಿಲ್ಲಾ ಮಟ್ಟದಲ್ಲಿ ಜನಸಂಪರ್ಕ(ಔಟ್ರೀಚ್) ಕಾರ್ಯಕ್ರಮ ನಡೆಸುತ್ತದೆ.
ಭಾರತ ಜಿ-20 ಅಧ್ಯಕ್ಷತೆ
- ಜಿ-20 ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆ 2023 ಜುಲೈ 20-21 ರಂದು ಇಂದೋರ್‌ನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು, ಜಿ-20 ಶೃಂಗದ ನೀತಿಯ ಆದ್ಯತೆಗಳ ಮೇಲೆ 3 ಜಿ-20 ಫಲಿತಾಂಶ ದಾಖಲೆಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಕೌಶಲ್ಯಗಳ ಕಂದಕವನ್ನು ನಿವಾರಿಸುವ ಕಾರ್ಯತಂತ್ರ ಮತ್ತು ತಾತ್ಕಾಲಿಕ(ಗಿಗ್) ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರಿಗೆ ಯೋಗ್ಯವಾದ ಕೆಲಸ ಮತ್ತು ಸಾಮಾಜಿಕ ರಕ್ಷಣೆಯ ಸುಸ್ಥಿರ ಹಣಕಾಸು ಒದಗಿಸುವ ಜಿ-20 ನೀತಿ ಆಯ್ಕೆಗಳು ಈ ದಾಖಲೆಗಳಲ್ಲಿ ಸೇರಿವೆ.
- ಭಾರತದ G20 ಪ್ರೆಸಿಡೆನ್ಸಿಯ ಅಡಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಒಟ್ಟು 75+ ದ್ವಿಪಕ್ಷೀಯ ಸಭೆಗಳನ್ನು ನಡೆಸಿತು.
- ಜಿ-20 ನಾಯಕರ ಶೃಂಗಸಭೆಯು 2023 ಸೆಪ್ಟೆಂಬರ್ 09-10ರಂದು ನವದೆಹಲಿಯಲ್ಲಿ ನಡೆಯಿತು. ಇದು ಜಿ-20 ನವದೆಹಲಿ ನಾಯಕರ ಘೋಷಣೆಯನ್ನು(NDLD) ಸರ್ವಾನುಮತದಿಂದ ಅಂಗೀಕರಿಸುವುದರೊಂದಿಗೆ ಮುಕ್ತಾಯವಾಯಿತು. ಜಿ-20 ನಾಯಕರ ಶೃಂಗಸಭೆಯಲ್ಲಿ 'ಕೆಲಸದ ಭವಿಷ್ಯಕ್ಕಾಗಿ ತಯಾರಿ' ಕುರಿತ ಪ್ಯಾರಾ ನಂ.20 ಮತ್ತು EWG ಆದ್ಯತೆಯ ಕ್ಷೇತ್ರಗಳಿಗೆ ಸಂಬಂಧಿಸಿದ 'ಆರ್ಥಿಕ ಮತ್ತು ಸಾಮಾಜಿಕ ಸಬಲೀಕ ಹೆಚ್ಚಿಸುವುದು' ಕುರಿತು ಪ್ಯಾರಾ 64 ಅನ್ನು NDLDನಲ್ಲಿ, ಅಳವಡಿಸಿಕೊಳ್ಳಲಾಗಿದೆ.
17.11.2023ರಂದು ಕಾರ್ಮಿಕ ಮತ್ತು ಉದ್ಯೋಗ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಕೇಂದ್ರ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿ, ವಿವಿಧ ಸಂಸ್ಥೆಗಳ ಒಮ್ಮುಖ ಕುರಿತ ಕೈಪಿಡಿ ಬಿಡುಗಡೆ ಮಾಡಿದರು. ಮಾಹಿತಿ ವಿನಿಮಯ, ಕಾರ್ಮಿಕರ ಕುಂದುಕೊರತೆ ಪರಿಹಾರ ಮತ್ತು ಸಚಿವಾಲಯ ಮತ್ತು ಅದರ ಸಂಸ್ಥೆಗಳ ವಿವಿಧ ಸೇವೆಗಳ ಲಭ್ಯತೆಯ ಬಗ್ಗೆ ಅರಿವು ಮೂಡಿಸಲು ಸಹಭಾಗಿತ್ವದ ಪ್ರಯತ್ನಗಳ ಮೂಲಕ ಕ್ಷೇತ್ರ ಮಟ್ಟದಲ್ಲಿ ಒಮ್ಮುಖ ಸಾಧಿಸಲು ಕೈಪಿಡಿಯು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯ ವಿಧಾನಗಳನ್ನು (SoPs) ಒಳಗೊಂಡಿದೆ.
ಲೆಕ್ಕಪತ್ರಗಳು
- ಮುಖ್ಯ ಸೆಕ್ರೆಟರಿಯೇಟ್: 2022-23ರ ಆರ್ಥಿಕ ವರ್ಷದ ಆರಂಭದಲ್ಲಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 95 ಬಾಕಿ ಉಳಿದಿರುವ ಲೆಕ್ಕಪತ್ರಗಳ(ಆಡಿಟ್) ತಪಾಸಣೆ ಪ್ರಕರಣ(ಪ್ಯಾರಾ)ಗಳನ್ನು ಹೊಂದಿತ್ತು(2020-21 ಆರ್ಥಿಕ ಸಾಲಿನ ವಹಿವಾಟಿನ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ). ದಶಕಗಳಿಂದ ಬಾಕಿ ಉಳಿದಿರುವ ಕೆಲವು ಪ್ಯಾರಾಗಳು ಇದರಲ್ಲಿ ಸೇರಿವೆ. ಹಳೆಯ ದಾಖಲೆ ಪತ್ರಗಳನ್ನು(ಫೈಲ್) ಹುಡುಕಲು, ಹಿಂದಿನ ಡೇಟಾ ಪರಿಶೀಲಿಸಲು ಮತ್ತು ಸ್ಪಷ್ಟ ಮತ್ತು ಸಮಗ್ರ ಪ್ರತ್ಯುತ್ತರಗಳನ್ನು ರೂಪಿಸಲು ಆಂದೋಲನಗಳನ್ನು ಕೈಗೊಳ್ಳಲಾಗಿದೆ. ಲೆಕ್ಕ ಪರಿಶೋಧನೆಯ ಮಹಾ ನಿರ್ದೇಶಕರೊಂದಿಗೆ 2 ಕಾರ್ಯಾಗಾರಗಳನ್ನು ಸಹ ಆಯೋಜಿಸಲಾಗಿದೆ(ಆಡಿಟ್ ಟೀಮ್). ಇದರ ಪರಿಣಾಮವಾಗಿ, 95ರಲ್ಲಿ 84(88%) ಬಾಕಿ ಉಳಿದಿರುವ ತಪಾಸಣೆ ಪ್ಯಾರಾಗಳನ್ನು ಇತ್ಯರ್ಥಪಡಿಸಬಹುದು. ಪ್ರಸ್ತುತ ಆರ್ಥಿಕ ಸಾಲಿನಲ್ಲಿ, ಮಹಾ ಲೆಕ್ಕ ಪರಿಶೋಧಕರ ಕಚೇರಿಯು 2021-22 ಆರ್ಥಿಕ ಸಾಲಿನ ವಹಿವಾಟು ಲೆಕ್ಕ ಪರಿಶೋಧನೆ ನಡೆಸಿದೆ. ಇದರಲ್ಲಿ 2023 ಜುಲೈನಲ್ಲಿ ಕೇವಲ 10 ಹೊಸ ಆಡಿಟ್ ತಪಾಸಣೆ ಪ್ರಕರಣಗಳನ್ನು ಸ್ವೀಕರಿಸಲಾಗಿದೆ, 9 ಪ್ರಕರಣಗಳಿಗೆ ಉತ್ತರ ಒದಗಿಸಲಾಗಿದೆ. ಇದಲ್ಲದೆ, 1979ರಿಂದ ಸಚಿವಾಲಯದಲ್ಲಿ 129.95 ಕೋಟಿ ರೂ. ಮೊತ್ತದ ಎಲ್ಲಾ ಬಾಕಿ ಇರುವ 1068 ನಿರುದ್ಯೋಗ ಪರಿಹಾರ(UC) ಪ್ರಕರಣಗಳನ್ನು ದಾಖಲೆಗಳಿಂದ ಪತ್ತೆ ಹಚ್ಚಲಾಗಿದೆ. ಇದಲ್ಲದೆ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ(NCLP)ಯ 117.43 ಕೋಟಿ ರೂ. ಮೊತ್ತದ ನಿರುದ್ಯೋಗ ಪರಿಹಾರ ಪ್ರಕರಣಗಳ ಇತ್ಯರ್ಥ ಆಂದೋಲನವನ್ನು ಸಹ ಕೈಗೊಳ್ಳಲಾಗಿದೆ. ಇದರ ಪರಿಣಾಮವಾಗಿ, ಬಾಕಿ ಉಳಿದಿದ್ದ 28% ಪ್ರಕರಣಗಳು ಇತ್ಯರ್ಥವಾಗಿವೆ.
- ಕ್ಷೇತ್ರ ಘಟಕಗಳ ತಪಾಸಣೆ ಪ್ಯಾರಾಗಳ ಇತ್ಯರ್ಥಕ್ಕಾಗಿ ಲೆಕ್ಕ ಪತ್ರ ಕಾರ್ಯಾಗಾರಗಳನ್ನು ನಡೆಸಲಾಯಿತು: ಆಯಾ ಅಧಿಕಾರ ವ್ಯಾಪ್ತಿಯಲ್ಲಿರುವ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿ ಬರುವ ಸಂಸ್ಥೆಗಳ ಕ್ಷೇತ್ರ ಘಟಕಗಳಿಗಾಗಿ ಆಡಿಟ್ ಇತ್ಯರ್ಥ ಕಾರ್ಯಾಗಾರಗಳನ್ನು ನಡೆಸಲಾಯಿತು.
- ಕೋಲ್ಕತ್ತಾ ವಲಯ: 2022 ಡಿಸೆಂಬರ್ ನಲ್ಲಿ ಒಟ್ಟು 175 ಪ್ರಕರಣಗಳು ಬಾಕಿ ಉಳಿದಿವೆ. ಅದರಲ್ಲಿ 96 ಪ್ರಕರಣಗಳನ್ನು (54.86%) ಇತ್ಯರ್ಥಪಡಿಸಲಾಗಿದೆ ಮತ್ತು ಉಳಿದವುಗಳಿಗೆ ಉತ್ತರಿಸಲಾಗಿದೆ. ಪ್ರಸ್ತುತ ಆರ್ಥಿಕ ಸಾಲಿನಲ್ಲಿ 158 ತಪಾಸಣೆ ಪ್ರಕರಣಗಳನ್ನು ಸ್ವೀಕರಿಸಲಾಗಿದೆ, ಅದರಲ್ಲಿ 66 ಪ್ರಕರಣಗಳನ್ನು (41.77%) ಇತ್ಯರ್ಥಗೊಳಿಸಲಾಗಿದೆ ಮತ್ತು ಉಳಿದ ಪ್ರಕರಣಗಳಿಗೆ ಉತ್ತರ ಒದಗಿಸಲಾಗಿದೆ.
- ಲಕ್ನೋ ವಲಯ: 2023-24ರ ಆರಂಭದಲ್ಲಿ, ಒಟ್ಟು 146 ಪ್ರಕರಣಗಳು ಬಾಕಿ ಉಳಿದಿವೆ, ಅದರಲ್ಲಿ 35 ಪ್ರಕರಣ(23.97%)ಗಳನ್ನು ಇತ್ಯರ್ಥಪಡಿಸಲಾಗಿದೆ ಮತ್ತು ಉಳಿದವುಗಳಿಗೆ ಉತ್ತರಿಸಲಾಗಿದೆ. 34 ಪ್ರಕರಣಗಳು ಲೆಕ್ಕಪರಿಶೋಧನೆ ಮಾಡಿದ ಕಚೇರಿಗಳಿಗೆ ಸಂಬಂಧಿಸಿಲ್ಲ.
*******
(Release ID: 1989927)
Visitor Counter : 83