ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಕಸಿತ ಭಾರತ ಸಂಕಲ್ಪ ಯಾತ್ರೆ
ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದುವ ಮಹತ್ವಾಕಾಂಕ್ಷೆಯೊಂದಿಗೆ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಡಿಯಲ್ಲಿ 1 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದೆ.
79,487 ವಿಕಸಿತ ಭಾರತ ಆರೋಗ್ಯ ಶಿಬಿರಗಳಲ್ಲಿ ಒಟ್ಟು ಸಂಖ್ಯೆ 1,31,66,365 ದಾಟಿದೆ
49 ಲಕ್ಷಕ್ಕೂ ಹೆಚ್ಚು ಜನರು ಟಿಬಿ ತಪಾಸಣೆಗೆ ಒಳಪಟ್ಟಿದ್ದಾರೆ ಮತ್ತು 3.4 ಲಕ್ಷಕ್ಕೂ ಹೆಚ್ಚು ಜನರಿಗೆ ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯ ಪಡೆಯಲು ಸೂಚಿಸಲಾಗಿದೆ.
5 ಲಕ್ಷಕ್ಕೂ ಹೆಚ್ಚು ಜನರನ್ನು ಸಿಕಲ್ ಸೆಲ್ ಕಾಯಿಲೆ (ಕುಡಗೋಲು ಕಣ ರೋಗ) ಗಾಗಿ ಪರೀಕ್ಷಿಸಲಾಯಿತು ಮತ್ತು 21,000 ಕ್ಕೂ ಹೆಚ್ಚು ಜನರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯ ಪಡೆಯುವಂತೆ ತಿಳಿಸಲಾಗಿದೆ.
Posted On:
22 DEC 2023 12:52PM by PIB Bengaluru
ದೇಶದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ಭಾರತದಲ್ಲಿ ಆರೋಗ್ಯ ಸೇವೆಯ ಉತ್ಕೃಷ್ಟತೆಯನ್ನು ಹೆಚ್ಚಿಸುವ ಮಹತ್ವದ ಮೈಲಿಗಲ್ಲು, ಭಾರತವು ಶ್ಲಾಘನೀಯ ಹೆಗ್ಗುರುತನ್ನು ಸಾಧಿಸಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ 1,02,23,619 ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದೆ.
ವಿಕಸಿತ ಭಾರತ ಸಂಕಲ್ಪ ಯಾತ್ರೆಯಡಿಯಲ್ಲಿ, ಇಲ್ಲಿಯವರೆಗೆ 3,462 ಗ್ರಾಮ ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಸಲಾದ 79,487 ಆರೋಗ್ಯ ಶಿಬಿರಗಳಿಗೆ ಒಟ್ಟು 1,31,66,365 ಜನ ಭೇಟಿ ನೀಡಿದ್ದಾರೆ.
ಆರೋಗ್ಯ ಶಿಬಿರಗಳಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY): ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಗಾಗಿ MoHFW ನ ಪ್ರಮುಖ ಯೋಜನೆಯಡಿ, ಆಯುಷ್ಮಾನ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಮತ್ತು ಫಲಾನುಭವಿಗಳಿಗೆ ಭೌತಿಕ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ, 23,83,473 ಕ್ಕೂ ಹೆಚ್ಚು ಭೌತಿಕ ಕಾರ್ಡ್‌ಗಳನ್ನು ವಿತರಿಸಲಾಗಿದೆ.
ನಿನ್ನೆ ನಡೆದ ಆರೋಗ್ಯ ಶಿಬಿರದಲ್ಲಿ ಒಟ್ಟು 6,34,168 ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದೆ.
ಕ್ಷಯರೋಗ (TB): ಕ್ಷಯ ರೋಗಿಗಳ ಸ್ಕ್ರೀನಿಂಗ್ ಅನ್ನು ರೋಗಲಕ್ಷಣಗಳ ತಪಾಸಣೆ, ಕಫ ಪರೀಕ್ಷೆ ಮತ್ತು ಲಭ್ಯವಿರುವಲ್ಲಿ NAAT ಯಂತ್ರಗಳನ್ನು ಬಳಸುವ ಮೂಲಕ ನಡೆಸಲಾಗುತ್ತದೆ. ಟಿಬಿ ಇರುವ ಶಂಕಿತರನ್ನು ಹೆಚ್ಚಿನ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ. ಒಟ್ಟು 49, 17,356 ಕ್ಕಿಂತ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ, ಅದರಲ್ಲಿ 3,41,499 ಕ್ಕೂ ಹೆಚ್ಚು ಜನರನ್ನು ಹೆಚ್ಚಿನ ಆರೋಗ್ಯ ಸೌಲಭ್ಯ ಪಡೆಯುವಂತೆ ತಿಳಿಸಲಾಗಿದೆ.
ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ (ಪಿಎಂಟಿಬಿಎಂಎ) ಅಡಿಯಲ್ಲಿ, ಟಿಬಿಯಿಂದ ಬಳಲುತ್ತಿರುವ ರೋಗಿಗಳಿಗೆ ನಿಕ್ಷಯ್ ಮಿತ್ರಸ್‌ನಿಂದ ನೆರವು ಪಡೆಯಲು ಒಪ್ಪಿಗೆಯನ್ನು ತೆಗೆದುಕೊಳ್ಳಲಾಗುತ್ತಿದೆ. ನಿಕ್ಷಯ್ ಮಿತ್ರರಾಗಲು ಸಿದ್ಧರಿರುವ ಪಾಲ್ಗೊಳ್ಳುವವರಿಗೆ ಸ್ಥಳದಲ್ಲೇ ನೋಂದಣಿಯನ್ನು ಸಹ ಒದಗಿಸಲಾಗುತ್ತಿದೆ. PMTBMBA ಅಡಿಯಲ್ಲಿ 1,17,734 ಕ್ಕೂ ಹೆಚ್ಚು ರೋಗಿಗಳು ನೋಂದಣಿಯಾಗಿದ್ದಾರೆ ಮತ್ತು 39,819 ಕ್ಕೂ ಹೆಚ್ಚು ಹೊಸ ನಿಕ್ಷಯ್ ಮಿತ್ರಗಳನ್ನು ನೋಂದಾಯಿಸಲಾಗಿದೆ.
ನಿಕ್ಷಯ್ ಪೋಶನ್ ಯೋಜನೆ (NPY) ಅಡಿಯಲ್ಲಿ, ನೇರ ಲಾಭ ವರ್ಗಾವಣೆ ಮೂಲಕ TB ರೋಗಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ ಬಾಕಿ ಇರುವ ಫಲಾನುಭವಿಗಳ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿ, ಖಾತೆಗಳಿಗೆ ಆಧಾರ್ ಸೀಡ್ ಮಾಡಲಾಗುತ್ತಿದೆ. ಅಂತಹ 30,093 ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಲಾಗಿದೆ.
ಸಿಕಲ್ ಸೆಲ್ ಡಿಸೀಸ್ (ಕುಡಗೋಲು ಕಣ ರೋಗ): ಪ್ರಧಾನ ಬುಡಕಟ್ಟು ಜನಸಂಖ್ಯೆಯಿರುವ ಪ್ರದೇಶಗಳಲ್ಲಿ, SCD ಗಾಗಿ ಪಾಯಿಂಟ್ ಆಫ್ ಕೇರ್ (PoC) ಪರೀಕ್ಷೆಗಳ ಮೂಲಕ ಅಥವಾ ಸೊಲ್ಯುಬಿಲಿಟಿ ಮೂಲಕ ಸಿಕಲ್ ಸೆಲ್ ಡಿಸೀಸ್ (SCD) ಪತ್ತೆಗಾಗಿ 40 ವರ್ಷ ವಯಸ್ಸಿನವರೆಗೆ ಕೆಲವು ವ್ಯಕ್ತಿಗಳನ್ನು ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಧನಾತ್ಮಕ ಪರೀಕ್ಷೆಯ ಪ್ರಕರಣಗಳ ನಿರ್ವಹಣೆಗಾಗಿ ಉನ್ನತ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಇಲ್ಲಿಯವರೆಗೆ 5,08,701 ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ, ಅವರಲ್ಲಿ 21,793 ಜನರನ್ನು ಹೆಚ್ಚಿನ ಚಿಕಿತ್ಸೆಗೆ ಉಲ್ಲೇಖಿಸಲಾಗಿದೆ.
ಸಾಂಕ್ರಾಮಿಕವಲ್ಲದ ರೋಗಗಳು (NCD ಗಳು): ಅಧಿಕ ರಕ್ತದೊತ್ತಡ ಮತ್ತು ಮಧುಮೇಹಿಗಳ (30 ವರ್ಷ ಮತ್ತು ಮೇಲ್ಪಟ್ಟ) ಸ್ಕ್ರೀನಿಂಗ್ ಮಾಡಲಾಗುತ್ತಿದೆ ಮತ್ತು ಧನಾತ್ಮಕ ಎಂದು ಶಂಕಿತರಾದ ವ್ಯಕ್ತಿಗಳನ್ನು ಉನ್ನತ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕಾಗಿ ಸುಮಾರು 10,297,809 ಜನರನ್ನು ಪರೀಕ್ಷಿಸಲಾಗಿದೆ. 4,82,667 ಕ್ಕೂ ಹೆಚ್ಚು ಜನರು ಅಧಿಕ ರಕ್ತದೊತ್ತಡಕ್ಕೆ ಧನಾತ್ಮಕರಾಗಿದ್ದಾರೆ ಮತ್ತು 3,45,898 ಕ್ಕೂ ಹೆಚ್ಚು ಜನರು ಮಧುಮೇಹವನ್ನು ಹೊಂದಿದ್ದಾರೆಂದು ಶಂಕಿಸಲಾಗಿದೆ ಮತ್ತು 7,59,451 ಕ್ಕೂ ಹೆಚ್ಚು ಜನರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಉಲ್ಲೇಖಿಸಲಾಗಿದೆ.
ಹಿನ್ನೆಲೆ: ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಗೌರವಾನ್ವಿತ ಪ್ರಧಾನಮಂತ್ರಿಯವರು ನವೆಂಬರ್ 15 ರಂದು ಜಾರ್ಖಂಡ್‌ನ ಖುಂಟಿಯಿಂದ ರಾಷ್ಟ್ರದಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳ ಬಗ್ಗೆ ತಿಳಿಸಲು ಹಸಿರು ನಿಶಾನೆ ನೀಡಿದರು. ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯಡಿಯಲ್ಲಿ ಆನ್-ಸ್ಪಾಟ್ ಸೇವೆಗಳ ಭಾಗವಾಗಿ, ಗ್ರಾಮ ಪಂಚಾಯತ್‌ಗಳಲ್ಲಿ ಐಇಸಿ ವ್ಯಾನ್ ನಿಲುಗಡೆಯ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.
*****
(Release ID: 1989604)
Visitor Counter : 688
Read this release in:
English
,
Urdu
,
Hindi
,
Marathi
,
Bengali-TR
,
Bengali
,
Assamese
,
Punjabi
,
Odia
,
Tamil
,
Telugu