ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಡಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಯೋಜನೆಗಳ 63,000 ಕ್ಕೂ ಹೆಚ್ಚು ಸ್ಥಳದಲ್ಲೇ ನೋಂದಣಿ ಕಾರ್ಯ ನಡೆಯುತ್ತಿದೆ.
'ಸ್ವಸ್ಥ ಬಾಲಕ ಸ್ಪರ್ಧೆ’ಯಲ್ಲಿ 57000 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ
Posted On:
20 DEC 2023 12:17PM by PIB Bengaluru
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಯೋಜನೆಗಳ 63,000 ಕ್ಕೂ ಹೆಚ್ಚು ಸ್ಥಳದಲ್ಲೇ (ಆನ್-ಸ್ಪಾಟ್) ನೋಂದಣಿಗಳು ವಿಕಸಿತ ಭಾರತ ಸಂಕಲ್ಪ ಯಾತ್ರೆ (ವಿ.ಬಿ.ಎಸ್.ವೈ) ಅಂಗವಾಗಿ ನಡೆದಿವೆ.
ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯಕರ ಭವಿಷ್ಯವನ್ನು ವಿ.ಬಿ.ಎಸ್.ವೈ ಉತ್ತೇಜಿಸುತ್ತಿದೆ. ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ಕೇಂದ್ರೀಕೃತ ಜಾಗೃತಿ ಅಭಿಯಾನವನ್ನು ಆಯೋಜಿಸುತ್ತಿವೆ. ಯಾತ್ರೆ ಆರಂಭವಾದಾಗಿನಿಂದ 57000ಕ್ಕೂ ಹೆಚ್ಚು ಮಕ್ಕಳು 'ಸ್ವಸ್ಥ ಬಾಲಕ ಸ್ಪರ್ಧೆ’ಯಲ್ಲಿ ಪಾಲ್ಗೊಂಡಿದ್ದಾರೆ.
ವಿ.ಬಿ.ಎಸ್.ವೈ.ನಲ್ಲಿ ಭಾಗವಹಿಸುವವರಲ್ಲಿ 50% ರಷ್ಟು ಮಹಿಳೆಯರಿದ್ದಾರೆ, ಇದು ಅವರ ಪ್ರಗತಿ ಮತ್ತು ಸಬಲೀಕರಣ ಹಾಗೂ ಸಮರ್ಪಿತ ಅನ್ವೇಷಣೆಯನ್ನು ಎತ್ತಿ ತೋರಿಸುತ್ತದೆ.
ದೇಶಾದ್ಯಂತ ವಿಕ್ಷಿತ ಭಾರತ ಸಂಕಲ್ಪ ಯಾತ್ರೆಯನ್ನು ಬೆಂಬಲಿಸಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಕ್ರಿಯವಾಗಿ ತೊಡಗಿಸಿಕೊಂಡಿದೆ. "ಮೇರಿ ಕಹಾನಿ ಮೇರಿ ಜುಬಾನಿ " ಉಪಕ್ರಮದ ಅಡಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಭಾಗವಹಿಸುತ್ತಿದೆ, ಇದರಲ್ಲಿ ಪ್ರತಿ ಗ್ರಾಮ ಪಂಚಾಯತ್ ಗಳ ಫಲಾನುಭವಿಗಳು ತಮ್ಮ ಅನುಭವಗಳು ಮತ್ತು ಅಂಗನವಾಡಿ ಸೇವೆಗಳು ಅವರ ಜೀವನದ ಮೇಲೆ ಬೀರಿದ ಪ್ರಭಾವದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ.
***
(Release ID: 1988722)
Visitor Counter : 93