ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ವಿಕಸಿತ ಭಾರತ ಸಂಕಲ್ಪ ಯಾತ್ರೆ


65,300 ವಿಕಸಿತ ಭಾರತ ಆರೋಗ್ಯ ಶಿಬಿರಗಳಲ್ಲಿ ಒಟ್ಟು 1 ಕೋಟಿ ದಾಟಿದೆ

ಶಿಬಿರಗಳಲ್ಲಿ 84 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದೆ

36.4 ಲಕ್ಷಕ್ಕೂ ಹೆಚ್ಚು ಜನರು TB ಪರೀಕ್ಷೆ ಮಾಡಿಕೊಂಡಿದ್ದಾರೆ ಮತ್ತು 2.6 ಲಕ್ಷಕ್ಕೂ ಹೆಚ್ಚು ಜನರಿಗೆ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯ ಪಡೆಯಲು ತಿಳಿಸಲಾಗಿದೆ

3.8 ಲಕ್ಷಕ್ಕೂ ಹೆಚ್ಚು ಜನರನ್ನು ಸಿಕಲ್‌ ಸೆಲ್‌ (ಕುಡಗೋಲು ಕಣ ಕಾಯಿಲೆ) ಕಾಯಿಲೆಗಾಗಿ ಪರೀಕ್ಷಿಸಲಾಯಿತು ಮತ್ತು 18,000 ಕ್ಕೂ ಹೆಚ್ಚು ಜನರಿಗೆ ಹೆಚ್ಚಿನ ಸೌಲಭ್ಯ ಪಡೆಯಲು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಲು ಸೂಚಿಸಲಾಗಿದೆ.

Posted On: 19 DEC 2023 1:28PM by PIB Bengaluru

ಚಾಲ್ತಿಯಲ್ಲಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಡಿಯಲ್ಲಿ, ಇಲ್ಲಿಯವರೆಗೆ 3,156 ಗ್ರಾಮ ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಸಲಾದ 65,348 ಆರೋಗ್ಯ ಶಿಬಿರಗಳಿಗೆ ಭೇಟಿ ನೀಡಿದವರ ಸಂಖ್ಯೆ 1,03,55,555 ತಲುಪಿದೆ.

ಆರೋಗ್ಯ ಶಿಬಿರಗಳಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ

ಆಯುಷ್ಮಾನ್ ಭಾರತ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY): ವಿಕಸಿತ ಭಾರತ ಸಂಕಲ್ಪ ಯಾತ್ರೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಮುಖ ಯೋಜನೆಯಡಿ, ಆಯುಷ್ಮಾನ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದೆ ಮತ್ತು ಫಲಾನುಭವಿಗಳಿಗೆ ಭೌತಿಕ ಕಾರ್ಡ್‌ಗಳನ್ನು ವಿತರಿಸಲಾಯಿತು. ಇಲ್ಲಿಯವರೆಗೆ, 19,03,200 ಕ್ಕೂ ಹೆಚ್ಚು ಭೌತಿಕ ಕಾರ್ಡ್‌ಗಳನ್ನು ವಿತರಿಸಲಾಗಿದೆ.

ಒಂದೇ ದಿನ ಆರೋಗ್ಯ ಶಿಬಿರದಲ್ಲಿ ಒಟ್ಟು 5,31,025 ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದ್ದು, ಇಲ್ಲಿಯವರೆಗೆ 84,27,500 ಕಾರ್ಡ್‌ಗಳನ್ನು ನೀಡಲಾಗಿದೆ.

ಕ್ಷಯರೋಗ (TB): ಕ್ಷಯ ರೋಗಿಗಳ ಸ್ಕ್ರೀನಿಂಗ್ ಅನ್ನು ಹಾಗೂ ರೋಗಲಕ್ಷಣಗಳ ತಪಾಸಣೆ ಮಾಡಲಾಗಿದೆ. ಕಫ ಪರೀಕ್ಷೆ ಮತ್ತು ಲಭ್ಯವಿರುವಲ್ಲಿ NAAT ಯಂತ್ರಗಳನ್ನು ಬಳಸುವ ಮೂಲಕ ನಡೆಸಲಾಗುತ್ತದೆ. ಟಿಬಿ ಇರುವ ಶಂಕಿತ ಪ್ರಕರಣಗಳನ್ನು ಉನ್ನತ ಸೌಲಭ್ಯಗಳಿಗೆ ಉಲ್ಲೇಖಿಸಲಾಗುತ್ತದೆ. ದಿನದ ಅಂತ್ಯದ ವೇಳೆಗೆ, 36,48,700 ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ, ಅದರಲ್ಲಿ 2,63,000 ಕ್ಕೂ ಹೆಚ್ಚು ಜನರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಉಲ್ಲೇಖಿಸಲಾಗಿದೆ.

ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ (ಪಿಎಂಟಿಬಿಎಂಎ) ಅಡಿಯಲ್ಲಿ, ಟಿಬಿಯಿಂದ ಬಳಲುತ್ತಿರುವ ರೋಗಿಗಳಿಗೆ ನಿಕ್ಷಯ್ ಮಿತ್ರಸ್‌ನಿಂದ ನೆರವು ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ನಿಕ್ಷಯ್ ಮಿತ್ರರಾಗಲು ಸಿದ್ಧರಿರುವ ಪಾಲ್ಗೊಳ್ಳುವವರಿಗೆ ಸ್ಥಳದಲ್ಲೇ ನೋಂದಣಿಯನ್ನು ಸಹ ಒದಗಿಸಲಾಗುತ್ತಿದೆ. PMTBMBA ಅಡಿಯಲ್ಲಿ 1,19,500 ಕ್ಕೂ ಹೆಚ್ಚು ರೋಗಿಗಳು ಮತ್ತು 46,700 ಕ್ಕೂ ಹೆಚ್ಚು ಹೊಸ ನಿಕ್ಷಯ್ ಮಿತ್ರಗಳನ್ನು ನೋಂದಾಯಿಸಲಾಗಿದೆ.

ನಿಕ್ಷಯ್ ಪೋಶನ್ ಯೋಜನೆ (NPY) ಅಡಿಯಲ್ಲಿ, ನೇರ ಲಾಭ ವರ್ಗಾವಣೆ ಮೂಲಕ TB ರೋಗಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ ಬಾಕಿ ಇರುವ ಫಲಾನುಭವಿಗಳ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿ, ಖಾತೆಗಳಿಗೆ ಆಧಾರ್ ಸೀಡ್ ಮಾಡಲಾಗುತ್ತಿದೆ. ಇಂತಹ 31,300 ಫಲಾನುಭವಿಗಳ ವಿವರ ಸಂಗ್ರಹಿಸಲಾಗಿದೆ.

ಸಿಕಲ್‌ ಸೆಲ್‌ (ಕುಡಗೋಲು ಕಣ) ರೋಗ: ಪ್ರಧಾನ ಬುಡಕಟ್ಟು ಜನಸಂಖ್ಯೆಯಿರುವ ಪ್ರದೇಶಗಳಲ್ಲಿ, SCDಗಾಗಿ ಪಾಯಿಂಟ್ ಆಫ್ ಕೇರ್ (PoC) ಪರೀಕ್ಷೆಗಳ ಮೂಲಕ ಅಥವಾ ಸೊಲ್ಯುಬಿಲಿಟಿ ಮೂಲಕ ಸಿಕಲ್ ಸೆಲ್ ಡಿಸೀಸ್ (SCD) ಪತ್ತೆಗಾಗಿ (40 ವರ್ಷ ವಯಸ್ಸಿನವರೆಗೆ) ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಧನಾತ್ಮಕ ಪರೀಕ್ಷೆಯ ಪ್ರಕರಣಗಳನ್ನು ನಿರ್ವಹಣೆಗಾಗಿ ಉನ್ನತ ಕೇಂದ್ರಗಳಿಗೆ ಉಲ್ಲೇಖಿಸಲಾಗುತ್ತಿದೆ. ಇಲ್ಲಿಯವರೆಗೆ 3,83,000 ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ, ಅದರಲ್ಲಿ 18,300 ಜನರು ಧನಾತ್ಮಕ ಮತ್ತು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಉಲ್ಲೇಖಿಸಿದ್ದಾರೆ.

ಸಾಂಕ್ರಾಮಿಕವಲ್ಲದ ರೋಗಗಳು (NCD ಗಳು): ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಅರ್ಹ ಜನಸಂಖ್ಯೆಯ (30 ವರ್ಷ ಮತ್ತು ಮೇಲ್ಪಟ್ಟ) ಸ್ಕ್ರೀನಿಂಗ್ ಮಾಡಲಾಗುತ್ತಿದೆ ಮತ್ತು ಧನಾತ್ಮಕ ಎಂದು ಶಂಕಿಸಲಾದ ಪ್ರಕರಣಗಳನ್ನು ಉನ್ನತ ಕೇಂದ್ರಗಳಿಗೆ ಉಲ್ಲೇಖಿಸಲಾಗುತ್ತಿದೆ. ಸುಮಾರು 81,15,000 ಜನರನ್ನು ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ತಪಾಸಣೆ ಮಾಡಲಾಗಿದೆ. 3,74,000 ಕ್ಕೂ ಹೆಚ್ಚು ಜನರು ಅಧಿಕ ರಕ್ತದೊತ್ತಡಕ್ಕೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿದೆ ಮತ್ತು 2,69,800 ಕ್ಕೂ ಹೆಚ್ಚು ಜನರು ಮಧುಮೇಹ ಹೊಂದಿದ್ದಾರೆಂದು ಅಂದಾಜಿಸಲಾಗಿದೆ ಮತ್ತು 5,99,200 ಕ್ಕೂ ಹೆಚ್ಚು ಜನರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಉಲ್ಲೇಖಿಸಲಾಗಿದೆ.

 

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಪಲ್ನಾಡು, ಆಂಧ್ರಪ್ರದೇಶ

ಮೇಲಿನ ಸಿಯಾಂಗ್, ಅರುಣಾಚಲ ಪ್ರದೇಶ

ಉದಲ್ಗುರಿ, ಅಸ್ಸಾಂ

ದಕ್ಷಿಣ ಗೋವಾ, ಗೋವಾ

ರೋಹ್ಟಕ್, ಹರಿಯಾಣ

ಹಿನ್ನೆಲೆ

ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಗೌರವಾನ್ವಿತ ಪ್ರಧಾನಮಂತ್ರಿಯವರು ನವೆಂಬರ 15 ರಂದು ಜಾರ್ಖಂಡ್‌ನ ಖುಂಟಿಯಿಂದ ರಾಷ್ಟ್ರದಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳ ಬಗ್ಗೆ ತಿಳಿಸಲು ಹಸಿರು ನಿಶಾನೆ ನೀಡಿದರು. ವಿಕಸತ ಭಾರತ ಸಂಕಲ್ಪ ಯಾತ್ರೆಯಡಿಯಲ್ಲಿ ಆನ್-ಸ್ಪಾಟ್ ಸೇವೆಗಳ ಭಾಗವಾಗಿ, ಗ್ರಾಮ ಪಂಚಾಯತ್‌ಗಳಲ್ಲಿ ಐಇಸಿ ವ್ಯಾನ್ ನಿಲುಗಡೆಯ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

****



(Release ID: 1988270) Visitor Counter : 169