ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಕಾಶಿ ತಮಿಳು ಸಂಗಮದ ಎರಡನೇ ಆವೃತ್ತಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಾಳೆ  ಚಾಲನೆ

Posted On: 16 DEC 2023 11:58AM by PIB Bengaluru

ಏಕ್ ಭಾರತ್ ಶ್ರೇಷ್ಠ ಭಾರತ್ ಯೋಜನೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 17 ರಂದು ನಮೋ ಘಾಟ್‌ನಲ್ಲಿ ಕಾಶಿ ತಮಿಳು ಸಂಗಮಮ್ 2023 ಅನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಕನ್ಯಾಕುಮಾರಿ - ವಾರಣಾಸಿ ತಮಿಳು ಸಂಗಮಂ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್; ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್; ಮತ್ತು ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ.

ಕಾಶಿ ತಮಿಳು ಸಂಗಮಮ್ ಎರಡನೇ ಆವೃತ್ತಿಯು ಡಿಸೆಂಬರ್ 17 ರಿಂದ 30 ರವರೆಗೆ ಪವಿತ್ರ ನಗರವಾದ ಕಾಶಿಯಲ್ಲಿ (ವಾರಣಾಸಿ) ನಡೆಯಲಿದೆ. ತಮಿಳು ನಿಯೋಗದ ಮೊದಲ ಬ್ಯಾಚ್ 15ನೇ ಡಿಸೆಂಬರ್ 2023 ರಂದು ಚೆನ್ನೈನಿಂದ ಪ್ರಯಾಣ ಬೆಳೆಸಿದೆ. ಸುಮಾರು 1400 (ತಲಾ 200 ಮಂದಿಯ 7 ಗುಂಪುಗಳು) ಜನರು ತಮಿಳುನಾಡಿನ ವಿವಿಧ ಭಾಗಗಳಿಂದ ಆಗಮಿಸುವ ನಿರೀಕ್ಷೆಯಿದೆ. ಈ ಪ್ರವಾಸದ ಸಂದರ್ಭದಲ್ಲಿ ಪ್ರಯಾಗ್‌ ರಾಜ್‌ ಮತ್ತು ಅಯೋಧ್ಯೆಗೂ ಭೇಟಿ ನೀಡಲಿದ್ದಾರೆ. 

ವಿದ್ಯಾರ್ಥಿಗಳು (ಗಂಗಾ), ಶಿಕ್ಷಕರು (ಯಮುನಾ), ವೃತ್ತಿಪರರು (ಗೋದಾವರಿ), ಆಧ್ಯಾತ್ಮಿಕ (ಸರಸ್ವತಿ), ರೈತರು ಮತ್ತು ಕುಶಲಕರ್ಮಿಗಳು (ನರ್ಮದಾ), ಬರಹಗಾರರು (ಸಿಂಧು) ಮತ್ತು ವ್ಯಾಪಾರಿಗಳು ಮತ್ತು ಉದ್ಯಮಿಗಳು (ಕಾವೇರಿ) ಇರುವ 7 ಗುಂಪುಗಳಿಗೆ ಏಳು ಪವಿತ್ರ ನದಿಗಳ ಹೆಸರನ್ನು ಇಡಲಾಗಿದೆ. ಈ ರೈಲು ಚೆನ್ನೈ, ಕೊಯಮತ್ತೂರು ಮತ್ತು ಕನ್ಯಾಕುಮಾರಿಯಿಂದ ಕಾಶಿಗೆ ಆಗಮಿಸಲಿದೆ. 8ನೇ ಡಿಸೆಂಬರ್, 2023 ರಂದು ಕೊನೆಗೊಂಡ ನೋಂದಣಿಯಲ್ಲಿ 42,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ ಪ್ರತಿ ಗುಂಪಿನಲ್ಲಿ 200 ಜನರನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ.

ಸಂಸ್ಕೃತಿ, ಪ್ರವಾಸೋದ್ಯಮ, ರೈಲ್ವೆ, ಜವಳಿ, ಆಹಾರ ಸಂಸ್ಕರಣೆ (ODOP), MSME, ಮಾಹಿತಿ ಮತ್ತು ಪ್ರಸಾರ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ, IRCTC ಮತ್ತು ಸಚಿವಾಲಯಗಳ ಭಾಗವಹಿಸುವಿಕೆಯೊಂದಿಗೆ ಕೇಂದ್ರ ಶಿಕ್ಷಣ ಸಚಿವಾಲಯವು ಹಾಗೂ ಉತ್ತರ ಪ್ರದೇಶ ಸರ್ಕಾರದ ಸಂಬಂಧಿತ ಇಲಾಖೆಗಳು ಈ ಕಾರ್ಯಕ್ರಮಕ್ಕೆ ನೋಡಲ್ ಏಜೆನ್ಸಿಯಾಗಿರುತ್ತದೆ. ಮೊದಲ ಆವೃತ್ತಿಯ ಯಶಸ್ಸಿನ ನಂತರ IIT ಮದ್ರಾಸ್ ತಮಿಳುನಾಡು ಮತ್ತು ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU) ನಲ್ಲಿ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಎರಡು ದಿನಗಳ ಪ್ರಯಾಗ್‌ರಾಜ್ ಮತ್ತು ಅಯೋಧ್ಯೆಗೆ ಪ್ರವಾಸ, 2-ದಿನ ಬನಾರಸ್‌ ಹಾಗೂ ಮತ್ತೊಂದು ದಿನ ನಗರ ಪರ್ಯಟನೆ ಒಳಗೊಂಡಿರುತ್ತದೆ. ಕಲೆ ಮತ್ತು ಸಂಸ್ಕೃತಿ, ಕೈಮಗ್ಗ, ಕರಕುಶಲ ವಸ್ತುಗಳು, ತಿನಿಸು ಮತ್ತು ತಮಿಳುನಾಡು ಮತ್ತು ಕಾಶಿಯ ಇತರ ವಿಶೇಷ ಉತ್ಪನ್ನಗಳನ್ನು ಪ್ರದರ್ಶಿಸುವ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಕಾಶಿಯ ನಮೋ ಘಾಟ್‌ನಲ್ಲಿ ತಮಿಳುನಾಡು ಮತ್ತು ಕಾಶಿಯ ಸಂಸ್ಕೃತಿಗಳನ್ನು ಸಂಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಕಾರ್ಯಕ್ರಮದ ಸಂಪೂರ್ಣ ಅವಧಿಯಲ್ಲಿ, ಸಾಹಿತ್ಯ, ಪ್ರಾಚೀನ ಗ್ರಂಥಗಳು, ತತ್ವಶಾಸ್ತ್ರ, ಆಧ್ಯಾತ್ಮಿಕತೆ, ಸಂಗೀತ, ನೃತ್ಯ, ನಾಟಕ, ಯೋಗ, ಆಯುರ್ವೇದ, ಕೈಮಗ್ಗ, ಕರಕುಶಲ ಮುಂತಾದ ಜ್ಞಾನದ ವಿವಿಧ ಅಂಶಗಳ ಕುರಿತು ವಿಚಾರಗೋಷ್ಠಿಗಳು, ಚರ್ಚೆಗಳು, ಉಪನ್ಯಾಸಗಳು ಇತ್ಯಾದಿಗಳನ್ನು ಆಯೋಜಿಸಲಾಗುತ್ತದೆ. ನಾವೀನ್ಯತೆಗಳು, ವ್ಯಾಪಾರ ವಿನಿಮಯಗಳು, EdTech ಮತ್ತು ಇತರ ಮುಂದಿನ-ಪೀಳಿಗೆಯ ತಂತ್ರಜ್ಞಾನಗಳು. ಇದಲ್ಲದೆ, ತಜ್ಞರು ಮತ್ತು ವಿದ್ವಾಂಸರು, ತಮಿಳುನಾಡು ಮತ್ತು ಕಾಶಿಯ ವಿವಿಧ ವಿಭಾಗಗಳು/ವೃತ್ತಿಗಳ ಸ್ಥಳೀಯ ವೃತ್ತಿಪರರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ, ಇದರಿಂದ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಕಲಿಕೆಯಿಂದ ಪ್ರಾಯೋಗಿಕ ಜ್ಞಾನ / ನಾವೀನ್ಯತೆಯ ವಿನಿಮಯ ಆಗಲಿದೆ.

ಕಾಶಿ ತಮಿಳು ಸಂಗಮಮ್‌ನ ಮೊದಲ ಆವೃತ್ತಿಯು 16ನೇ ನವೆಂಬರ್‌ನಿಂದ 16ನೇ ಡಿಸೆಂಬರ್ 2022 ರವರೆಗೆ ಆಯೋಜಿಸಲಾಗಿತ್ತು. ಶಿಕ್ಷಣ ಸಚಿವಾಲಯವು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿತ್ತು. ತಮಿಳುನಾಡಿನಿಂದ 12 ಗುಂಪುಗಳನ್ನು ಪ್ರತಿನಿಧಿಸುವ 2500 ಕ್ಕೂ ಹೆಚ್ಚು ಜನರು ಆಗಮಿಸಿದ್ದರು. 8 ದಿನಗಳ ಅವಧಿಯಲ್ಲಿ ಕಾಶಿ, ಪ್ರಯಾಗರಾಜ್ ಮತ್ತು ಅಯೋಧ್ಯೆಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ವಿವಿಧ ಪ್ರದೇಶಗಳಲ್ಲಿನ ಜೀವನದ  ಅನುಭವವನ್ನು ಸವಿಯುವ ಅವಕಾಶವನ್ನು ಪಡೆದಿದ್ದರು.

Image

Image

***


(Release ID: 1987166) Visitor Counter : 71