ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರಿಂದ "ಲಿಂಗ – ಅಂತರ್ಗತ ಸಂವಹನ ಮಾರ್ಗದರ್ಶಿ" ಬಿಡುಗಡೆ
ಏಕತಾನತೆಯ ಸವಾಲು ನಿವಾರಿಸುವ ಮತ್ತು ಎಲ್ಲರಿಗೂ ಹೆಚ್ಚು ಗೌರವ ತರುವ, ಸಮಾನ ವಾತಾವರಣವನ್ನು ಉತ್ತೇಜಿಸುವ ಲಿಂಗ-ಅಂತರ್ಗತ ಭಾಷೆಯನ್ನು ಅಳವಡಿಸಿಕೊಳ್ಳುವಂತೆ ಕಿವಿ ಮಾತು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕರೆಯಂತೆ ಮಹಿಳಾ ಆಧಾರಿತ ಅಭಿವೃದ್ಧಿ ದೇಶದ ರಾಷ್ಟ್ರೀಯ ಪ್ರಧಾನ ಆದ್ಯತೆಯಾಗಿದೆ - ಶ್ರೀಮತಿ ಸ್ಮೃತಿ ಜುಬಿನ್ ಇರಾನಿ
ಲಿಂಗ ಅಂತರ್ಗತ ಭಾಷೆಯನ್ನು ಬಳಸಲು ಈ ಮಾರ್ಗದರ್ಶಿ ಶಿಫಾರಸು ಮಾಡುತ್ತದೆ ಮತ್ತು ನಿರ್ದಿಷ್ಟವಾದ ಲಿಂಗ ಅಥವಾ ಸಾಮಾಜಿಕವಾಗಿ ಪರಿಗಣಿಸಲ್ಪಟ್ಟ ಲಿಂಗದ ನಡುವೆ ತಾರತಮ್ಯವಿಲ್ಲದಂತೆ ಮಾತನಾಡಲು ಉದಾಹರಣೆಗಳನ್ನು ನೀಡುತ್ತದೆ
ಇದು ಜಾಗೃತಿಯನ್ನು ಹೆಚ್ಚಿಸುತ್ತದೆ, ಲಿಂಗ ತಟಸ್ಥತೆ ಮತ್ತು ಒಳಗೊಳ್ಳುವಿಕೆಯ ಬದ್ಧತೆಯೊಂದಿಗೆ ದೈನಂದಿನ ಸಂವಹನದಲ್ಲಿ ಮಾರ್ಗದರ್ಶನ ಮಾಡಲು ವ್ಯಕ್ತಿಗಳಿಗೆ ಅಧಿಕಾರ ನೀಡುತ್ತದೆ
Posted On:
29 NOV 2023 11:27AM by PIB Bengaluru
ನವದೆಹಲಿಯ ವಿಜ್ಞಾನ ಭವನದಲ್ಲಿ 2023ರ ನವೆಂಬರ್ 28 ರಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಎಂಡಬ್ಲ್ಯೂಸಿಡಿ) ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು "ಲಿಂಗ - ಅಂತರ್ಗತ ಸಂವಹನ ಮಾರ್ಗದರ್ಶಿ"ಯನ್ನು ಲೋಕಾರ್ಪಣೆ ಮಾಡಿದರು. ಈ ಮಾರ್ಗದರ್ಶಿಯನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (ಎಲ್.ಬಿ.ಎನ್.ಎ.ಎ), ವಿಶ್ವ ಸಂಸ್ಥೆಯ ಮಹಿಳಾ ಮತ್ತು ಬಿಲ್ ಅಂಡ್ ಮಿಲಿಂದಾ ಗೇಟ್ಸ್ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ.
ಲಿಂಗ - ಅಂತರ್ಗತ ಭಾಷೆ ಬಳಕೆಗೆ ಈ ಮಾರ್ಗದರ್ಶಿ ಶಿಫಾರಸು ಮಾಡುತ್ತದೆ ಮತ್ತು ನಿರ್ದಿಷ್ಟವಾದ ಲಿಂಗ ಅಥವಾ ಸಾಮಾಜಿಕವಾಗಿ ಪರಿಗಣಿಸಲ್ಪಟ್ಟ ಲಿಂಗದ ನಡುವೆ ತಾರತಮ್ಯವಿಲ್ಲದಂತೆ ಮಾತನಾಡಲು ಉದಾಹರಣೆಗಳನ್ನು ನೀಡುತ್ತದೆ.
ಮಾರ್ಗದರ್ಶಿಯನ್ನು ಇಂಗ್ಲೀಷ್, ಹಿಂದಿ ಮತ್ತು ಇತರೆ ಪ್ರಾದೇಶಿಕ ಭಾಷೆಗಳಲ್ಲಿ ಬಳಸಬಹುದಾಗಿದ್ದು, ಭಾರತದ ಸುಪ್ರೀಂ ಕೋರ್ಟ್ ನ “ಹ್ಯಾಂಡ್ ಬುಕ್ ಆನ್ ಕಂಬಾಟಿಂಗ್ ಜಂಡರ್ ಸ್ಟ್ರೀರಿಯೋ ಟೈಪ್ಸ್” ನಿರ್ದೇಶನದ ಆಧಾರಿತವಾಗಿದೆ. ಜಾಗತಿಕವಾಗಿ ಉತ್ತಮ ಅಭ್ಯಾಸಗಳನ್ನು ಅನುಕ್ರಮವಾಗಿ ನಾಗರಿಕರಿಗೆ, ಗ್ರಾಹಕರಿಗೆ ದೊರಕಿಸಲಾಗುತ್ತದೆ. ಮಾರ್ಗದರ್ಶಿಯು ಲಿಂಗ ಸಂಬಂಧಿತ ಪರಿಷ್ಕರಣೆಗಳಿಗಾಗಿ ಪರಿಶೀಲನಾ ಪಟ್ಟಿ ಮತ್ತು ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಮುಖ ಸಂಪನ್ಮೂಲಗಳನ್ನು ಸಹ ಒಳಗೊಂಡಿದೆ. ಸರ್ಕಾರಿ ಅಧಿಕಾರಿಗಳು, ನಾಗರಿಕ ಸೇವೆಕರು, ಮಾಧ್ಯಮ ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ಇತರೆ ಮಧ್ಯಸ್ಥಿಕೆದಾರರಿಂದ ಲಿಂಗ ಮತ್ತು ಅವರನ್ನೊಳಗೊಂಡ ಬರವಣಿಗೆ, ಪರಿಶೀಲನೆ ಮತ್ತು ಸಂವಹನಗಳ ಅನುವಾದಕ್ಕೆ ಸಹಾಯ ಮಾಡುವ ಉದ್ದೇಶವನ್ನು ಈ ಮಾರ್ಗದರ್ಶಿ ಒಳಗೊಂಡಿದೆ. ಜಾಗೃತಿ ಹೆಚ್ಚಿಸುವುದು, ಲಿಂಗತಟಸ್ಥತೆ ಮತ್ತು ಒಳಗೊಳ್ಳುವಿಕೆಯ ಬದ್ಧತೆಯೊಂದಿಗೆ ದೈನಂದಿನ ಸಂವಹನಕ್ಕೆ ಮಾರ್ಗದರ್ಶನ ಮಾಡಲು, ವ್ಯಕ್ತಿಗಳನ್ನು ಸಶಕ್ತಗೊಳಿಸಲು ಭಾಷೆ ಬದಲಾವಣೆಗಾಗಿ ಏಜೆಂಟ್ ಆಗುವ ಮೂಲಕ ಸಮಾಜದ ಕಡೆಗೆ ನಿರೂಪಣೆಯನ್ನು ಮೂಲಭೂತವಾಗಿ ಮರು ರೂಪಿಸುವ ಗುರಿ ಹೊಂದಿದೆ. ದೈನಂದಿನ ಭಾಷೆಯಲ್ಲಿ ಪಕ್ಷಪಾತವನ್ನು ಎತ್ತಿ ತೋರಿಸುವ ಮತ್ತು ಅಂಗೀಕರಿಸುವ ಮೂಲಕ ಬದಲಾವಣೆಯಲ್ಲಿ ವೇಗ ವರ್ಧಕವಾಗಿ ಈ ಮಾರ್ಗದರ್ಶಿ ಕಾರ್ಯನಿರ್ವಹಿಸಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರಾದ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಡಾ. ಮಹೇಂದ್ರಭಾಯಿ ಮಂಜ್ಪಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀ ಇಂದೇವರ್ ಪಾಂಡೆ, ಅಲ್ಪ ಸಂಖ್ಯಾತ ವ್ಯವಹಾರಗಳ ಕಾರ್ಯದರ್ಶಿ ಶ್ರೀ ಕೆ.ಶ್ರೀನಿವಾಸ್, ಎಲ್.ಬಿ.ಎಸ್.ಎನ್.ಎ.ಎ ನಿರ್ದೇಶಕ ಶ್ರೀ ಶ್ರೀರಾಮನ್ ತರಕಿಕಂಟಿ, ರಾಷ್ಟ್ರೀಯ ಲಿಂಗ ಮತ್ತು ಮಕ್ಕಳ ಕೇಂದ್ರದ ಅಧ್ಯಕ್ಷರಾದ ಕುಮಾರಿ ಸುಸಾನ್ ಫೆರ್ಗೋಸನ್, ವಿಶ್ವ ಸಂಸ್ಥೆಯ ಮಹಿಳಾ ವಿಭಾಗದ ಪ್ರತಿನಿಧಿ, ರಾಷ್ಟ್ರೀಯ ನಿರ್ದೇಶಕರು, ಬಿಲ್ ಅಂಡ್ ಮಿಲಿಂದಾ ಗೇಟ್ಸ್ ಶ್ರೀ ಹರಿಮೆನನ್, ರಾಷ್ಟ್ರೀಯ ಲಿಂಗ ಮತ್ತು ಮಕ್ಕಳ ಕೇಂದ್ರ ಎಲ್.ಬಿ.ಎಸ್.ಎನ್.ಎ.ಎ ಉಪ ನಿರ್ದೇಶಕರು ಮತ್ತು ಕಾರ್ಯಕಾರಿ ನಿರ್ದೇಶಕರಾದ ಕುಮಾರಿ ದಿಶಾ ಪನ್ನು, ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳು, ವಿಶ್ವ ಸಂಸ್ಥೆಯ ವಿವಿಧ ಪರಿಣಿತರು, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರತಿನಿಧಿಗಳು, ಇತರೆ ಗಣ್ಯರು ಮತ್ತು ತಜ್ಞರು ಭಾಗವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಡಾ. ಮಹೇಂದ್ರಭಾಯಿ ಮಂಜ್ಪಾರ ಅವರು ಮಹಿಳೆಯರು ಸಮಾನ ಪಾಲುದಾರರಾಗುವುದಲ್ಲದೇ ಮಹಿಳೆಯರು ನಾಯಕರಾಗಿರುವ ಮಾದರಿ ಬದಲಾವಣೆ ಹೊಂದಿರುವ ಸಮಾಜ ನಿರ್ಮಾಣದ ಪಯಣದಲ್ಲಿ ಈ ಮಾರ್ಗದರ್ಶಿ ಹೇಗೆ ಮಹತ್ವದ ಮೈಲಿಗಲ್ಲಾಗಿದೆ ಎಂಬುದುನ್ನು ವಿವರಿಸುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀ ಇಂದೇವರ್ ಪಾಂಡೆ ಮಾತನಾಡಿ, ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಕೈಗೊಂಡಿರುವ ಪ್ರಯತ್ನಗಳ ಕುರಿತು ವಿಸ್ತೃತವಾಗಿ ಮಾಹಿತಿ ನೀಡಿದರು. ಲಿಂಗತ್ವ ಅಂತರ್ಗತ ಸಂವಹನದ ಈ ಮಾರ್ಗದರ್ಶಿ ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ದೇಶದ ಪ್ರಯತ್ನಗಳಲ್ಲಿ ಹೇಗೆ ಆಸ್ತಿಯಾಗಲಿದೆ ಎನ್ನುವ ಕುರಿತು ಬೆಳಕು ಚೆಲ್ಲಿದರು.
ಅಲ್ಪ ಸಂಖ್ಯಾತ ವ್ಯವಹಾರಗಳ ಕಾರ್ಯದರ್ಶಿ ಶ್ರೀ ಕೆ.ಶ್ರೀನಿವಾಸ್ ಮಾತನಾಡಿ, ಎಲ್.ಬಿ.ಎಸ್.ಎನ್.ಎ.ಎ ನಿರ್ದೇಶಕರಾಗಿದ್ದಾಗ ಇಂತಹ ಮಾರ್ಗದರ್ಶಿಯನ್ನು ತರುವ ಚಿಂತನೆ ಮೂಡಲಾಗಿತ್ತು. ಸಚಿವರಾದ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು ಈ ಆಲೋಚನೆಯನ್ನು ಒಪ್ಪಿದ್ದರು. ಈ ಪ್ರಮುಖ ಕೆಲಸವನ್ನು ಮಾಡಿದ್ದು ನಮ್ಮ ಸೌಭಾಗ್ಯ ಎಂದರು. ಈ ನಿಘಂಟು ಬಿಡುಗಡೆಯು ಮಹತ್ವದ್ದಾಗಿದ್ದು, ಏಕೆಂದರೆ ಇದು ಬಹುಶಃ ವಿಶ್ವದ ಮೊದಲ ಅಭ್ಯಾಸವಾಗಿದೆ ಎಂದರು. ಎಲ್.ಬಿ.ಎಸ್.ಎನ್.ಎ.ಎ ನಿರ್ದೇಶಕ ಶ್ರೀ ಶ್ರೀರಾಮನ್ ತರಕಿಕಂಟಿ ಮಾತನಾಡಿ, ರಾಷ್ಟ್ರೀಯ ಲಿಂಗ ಮತ್ತು ಮಕ್ಕಳ ಪ್ರಾಮುಖ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ ಮತ್ತು “ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾವು ಎಲ್ಲಾ ಮಾದರಿಯ ಲಿಂಗ ಸಮಾನತೆ ಕುರಿತು ಸೂಕ್ತ ಭಾಷಾ ಸಂವಹನದ ಬಗ್ಗೆ ಮಾತನಾಡುತ್ತಿದ್ದೇವೆ. ಭಾಷೆ ಅದು ಸಂವಹನ ನಡೆಸಿದಾಗ ಶ್ರೇಯಾಂಕಗಳನ್ನು ನಿಗದಿಪಡಿಸುತ್ತದೆ ಮತ್ತು ಸಂಬಂಧಗಳನ್ನು ನಿಗದಿಪಡಿಸುತ್ತದೆ” ಎಂದು ಹೇಳಿದರು.
ಬಿಎಂಜಿಎಫ್ ನಿರ್ದೇಶಕ ಶ್ರೀ ಹರಿ ಮೆನನ್ ತಮ್ಮ ಭಾಷಣದಲ್ಲಿ ಕಳೆದ ಕೆಲವು ಸಮಯ ಅಂದರೆ ನಿರ್ದಿಷ್ಟವಾಗಿ ಭಾರತದ ಅಧ್ಯಕ್ಷತೆಯ ಜಿ20 ಸಮಯದಲ್ಲಿ ಭಾರತದ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಭಾರತ ದೃಷ್ಟಿ ನೀಡಿದೆ. ಇದರಿಂದ ಭಾರತ ಮಹಿಳಾ ನೇತೃತ್ವದ ಅಭಿವೃದ್ಧಿಯ ಸಂಭಾಷಣೆಯನ್ನು ಜಾಗತಿಕಮಟ್ಟಕ್ಕೆ ಕೊಂಡೊಯ್ಯಲು ಸಹಾಯ ಮಾಡಿದೆ ಎಂದರು.
ಪ್ರಮುಖ ಭಾಷಣ ಮಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು, ಲಿಂಗ – ಎಲ್ಲರನ್ನೊಳಗೊಂಡ ಭಾಷೆಯನ್ನು ಉತ್ತೇಜಿಸಲು ಇದು ಸಕಾಲ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕರೆಯಂತೆ ಮಹಿಳಾ ಆಧಾರಿತ ಅಭಿವೃದ್ಧಿ ದೇಶದ ರಾಷ್ಟ್ರೀಯ ಪ್ರಧಾನ ಆದ್ಯತೆಯಾಗಿದೆ. ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ಲಿಂಗ ಹೊರತುಪಡಿಸಿದಂತೆ ಎಲ್ಲರ ಸುರಕ್ಷತೆ, ಸಮಾನ ಮತ್ತು ನ್ಯಾಯಯುತ ಪರಿಸರ ವ್ಯವಸ್ಥೆಯನ್ನು ರಚಿಸುವಲ್ಲಿ ನಾವು ತ್ವರಿತವಾಗಿ ದಾಪುಗಾಲಿಡುತ್ತಿದ್ದೇವೆ. ಸೂಕ್ತ ಭಾಷೆಯ ಬಳಕೆಯು ಈ ಪ್ರಯಾಣದ ಪ್ರಮುಖ ಅಂಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಚೇತನರಾಗಿ “ದಿವ್ಯಾಂಗ” ಎಂಬ ಪದ ಬಳಸಿರುವುದು ಸಮುದಾಯದ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡಿದೆ ಮತ್ತು ಅನುಸರಿಸಲು ಉತ್ತಮ ಉದಾಹರಣೆಯಾಗಿದೆ. ಸಚಿವಾಲಯ “ದಿವ್ಯಾಂಗ ಮಕ್ಕಳಿಗಾಗಿ ಅಂಗನವಾಡಿ ಶಿಷ್ಟಾಚಾರ” ಮತ್ತು ಮಧ್ಯಾಹ್ನ “ಲಿಂಗ ಅಂತರ್ಗತ ಸಂವಹನ” ಕುರಿತ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದ್ದರಿಂದಾಗಿ ಇಂದಿನ ದಿನ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಈ ಮಾರ್ಗದರ್ಶಿಯಿಂದಾಗಿ ಇಂದು ಅಧಿಕಾರದ ಭಾಷೆ ಹೇಗೆ ಸಹಾನುಭೂತಿ ಮತ್ತು ಸಮಾನತೆಯಿಂದ ಕೂಡಿದೆ ಎಂಬ ಕುರಿತು ಶ್ರೀಮತಿ ಸ್ಮತಿ ಇರಾನಿ ಬೆಳಕು ಚೆಲ್ಲಿದರು. ಈ ನಿಘಂಟು ಶೀಘ್ರದಲ್ಲೇ ಪ್ರಾದೇಶಿಕ ಭಾಷೆಗಳಲ್ಲಿ ದೇಶಾದ್ಯಂತ ದೊರೆಯಲಿದ್ದು, ಸಕಾರಾತ್ಮಕ ಬದಲಾವಣೆ ತರಲಿದೆ. ಲಿಂಗ – ಅಂತರ್ಗತ ಭಾಷೆ ಅಳವಡಿಸಿಕೊಳ್ಳುವ ಮೂಲಕ ಎಲ್ಲರಿಗೂ ಗೌರವಯುತ ಮತ್ತು ಸಮಾನ ವಾತಾವರಣವನ್ನು ಉತ್ತೇಜಿಸಬಹುದಾಗಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಭಾಷೆ ಎಂಬುದು ಕೇವಲ ಅಭಿವ್ಯಕ್ತಿಯಲ್ಲ, ಅದು ನಮ್ಮ ಮೌಲ್ಯ ಮತ್ತು ಸಿದ್ಧಾಂತದ ಪ್ರತಿಬಿಂಬವಾಗಿದೆ. ನಮ್ಮ ಸಮಾಜದಲ್ಲಿ ಗುರುತು ನೀಡುವ ಮತ್ತು ಪ್ರತಿಕೂಲ ದೃಷ್ಟಿಕೋನಗಳ ವಿಚಾರದಲ್ಲಿ ಸೂಕ್ಷ್ಮತೆಯನ್ನು ಎತ್ತಿ ತೋರಿಸಲು, ಸಮರ್ಥವಾಗಿ ಸಂವಹನ ನಡೆಸಲು, ನಮ್ಮ ನಾಗರಿಕ ಸಮುದಾಯವನ್ನು ಸಬಲೀಕರಣಗೊಳಿಸುವಲ್ಲಿ ಈ ಮಾರ್ಗದರ್ಶಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಣಿತರು ಹೇಳಿದರು. ಗೌರವ ಮತ್ತು ತಿಳಿವಳಿಕೆಯ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಅದರ ಕಾರ್ಯನಿರ್ವಹಣೆಯಲ್ಲಿ ಪರಿಣಾಮಕಾರಿಯಾದ ಆಡಳಿತಾತ್ಮಕ ವಾತಾವರಣವನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ. ಆದರೆ ಒಳಗೊಳ್ಳುವಿಕೆ ಮತ್ತು ಅನುಭೂತಿಯೊಂದಿಗೆ ಇದು ಅನುರಣಿಸುತ್ತದೆ. ನಮ್ಮ ನಾಗರಿಕ ಸೇವಕರಿಗೆ ನಿರ್ದಿಷ್ಟವಾಗಿ ಈ ಮಾರ್ಗದರ್ಶಿ ಮಾರ್ಗನಕ್ಷೆಯಾಗಿದೆ ಮತ್ತು ಸಾಮಾನ್ಯ ನಾಗರಿಕರು, ಅವರ ಸಂವಹನ ಎಲ್ಲರಿಗೂ ಸಮಾನ, ಸಾಮಾಜಿಕ ಬದಲಾವಣೆಗೆ ವೇಗವರ್ಧಕವಾಗಿರಬೇಕು ಎಂಬುದನ್ನು ಇದು ಖಚಿತಪಡಿಸಿಕೊಳ್ಳಲಿದೆ ಎಂದು ಹೇಳಿದರು.
*****
(Release ID: 1980809)
Visitor Counter : 95