ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಭಾರತದ ಸಂಗೀತ ಇತಿಹಾಸವು ವೈವಿಧ್ಯತೆಯ ಸ್ವರಮೇಳವಾಗಿದ್ದು, ಸಾವಿರಾರು ವರ್ಷಗಳಿಂದ ವಿಕಸನಗೊಂಡ ಲಯಗಳ ಮೂಲಕ ಪ್ರತಿಧ್ವನಿಸುತ್ತದೆ: ಪ್ರಧಾನ ಮಂತ್ರಿಗಳು

प्रविष्टि तिथि: 14 NOV 2023 9:43AM by PIB Bengaluru

ಸಿಂಗಾಪುರದ ಉಪ ಪ್ರಧಾನ ಮಂತ್ರಿಗಳ ಸಿತಾರ್ ನುಡಿಸುವ ಅಭಿರುಚಿಯನ್ನು ಪ್ರಧಾನ ಮಂತ್ರಿಗಳು ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಗಾಪುರದ ಉಪ ಪ್ರಧಾನಿ ಶ್ರೀ ಲಾರೆನ್ಸ್ ವಾಂಗ್ ಅವರ ಸಿತಾರ್ ವಾದನದ ಸುಮಧುರ ಪ್ರಯತ್ನಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಶ್ರೀ ವಾಂಗ್ ಅವರ ಪೋಸ್ಟ್‌ಗೆ ಪ್ರತ್ಯುತ್ತರವಾಗಿ ಶ್ರೀ ಮೋದಿ ಪೋಸ್ಟ್ ಮಾಡಿದ್ದಾರೆ:

"ಸಿತಾರ್‌ ನುಡಿಸುವ ನಿಮ್ಮ ಉತ್ಸಾಹವು ಈ ಪ್ರಯತ್ನದಲ್ಲಿ ಇನ್ನಷ್ಟು ಬೆಳೆಯಲುಮತ್ತು ಇತರರಿಗೆ ಸ್ಫೂರ್ತಿ ನೀಡಲಿ. ಈ ಸುಮಧುರ ಪ್ರಯತ್ನಕ್ಕೆ ಅಭಿನಂದನೆಗಳು. ಭಾರತದ ಸಂಗೀತ ಇತಿಹಾಸವು ವೈವಿಧ್ಯತೆಯ ಸ್ವರಮೇಳವಾಗಿದೆ, ಸಾವಿರಾರು ವರ್ಷಗಳಿಂದ ವಿಕಸನಗೊಂಡ ಲಯಗಳ ಮೂಲಕ ಪ್ರತಿಧ್ವನಿಸುತ್ತದೆ," ಎಂದು ಬಣ್ಣಿಸಿದ್ದಾರೆ

 

****


(रिलीज़ आईडी: 1976863) आगंतुक पटल : 143
इस विज्ञप्ति को इन भाषाओं में पढ़ें: Gujarati , English , Urdu , हिन्दी , Marathi , Manipuri , Bengali , Assamese , Punjabi , Odia , Tamil , Telugu , Malayalam