ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ದಿನ 1- "ನೀರಿಗಾಗಿ ಮಹಿಳೆಯರು, ಮಹಿಳೆಯರಿಗಾಗಿ ನೀರು" ಅಭಿಯಾನವು ರಾಷ್ಟ್ರವ್ಯಾಪಿ ಉತ್ಸಾಹಿ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ


ದೇಶಾದ್ಯಂತ 4,100ಕ್ಕಿಂತ ಹೆಚ್ಚಿನ ಮಹಿಳೆಯರು ಅಭಿಯಾನದಲ್ಲಿ ಭಾಗವಹಿಸಿದ್ದಾರೆ

Posted On: 08 NOV 2023 10:14AM by PIB Bengaluru

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ಮಹತ್ವಾಕಾಂಕ್ಷಿ ಅಮೃತ ಕಾರ್ಯಕ್ರಮ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (NULM) ಮತ್ತು ಒಡಿಶಾ ಅರ್ಬನ್ ಅಕಾಡೆಮಿ ಸಹಭಾಗಿತ್ವದಲ್ಲಿ "ನೀರಿಗಾಗಿ ಮಹಿಳೆಯರು, ಮಹಿಳೆಯರಿಗೆ ನೀರು" ಮಹತ್ವಾಕಾಂಕ್ಷಿ ಉಪಕ್ರಮದ ಉದ್ಘಾಟನಾ ದಿನ(ಅಂದರೆ ನವೆಂಬರ್ 7, 2023)ವು ಅಪಾರ ಯಶಸ್ಸಿನೊಂದಿಗೆ ಮುಕ್ತಾಯವಾಯಿತು. ಈ ಅಭಿಯಾನವು ನಿನ್ನೆ ಅಂದರೆ 2023 ನವೆಂಬರ್ 7ರಂದು ಪ್ರಾರಂಭವಾಗಿದ್ದು, ಇದು 2023 ನವೆಂಬರ್ 9ರ ವರೆಗೆ ಮುಂದುವರಿಯಲಿದೆ.

 

"ನೀರಿಗಾಗಿ ಮಹಿಳೆಯರು, ಮಹಿಳೆಯರಿಗಾಗಿ ನೀರು" ಅಭಿಯಾನವು ನೀರಿನ ಆಡಳಿತದಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳಲು ವೇದಿಕೆಯನ್ನು ಒದಗಿಸುವ ಸ್ಪಷ್ಟ ಗುರಿ ಹೊಂದಿದೆ. ಆಯಾ ನಗರಗಳಲ್ಲಿನ ಜಲ ಸಂಸ್ಕರಣಾ ಘಟಕಗಳಿಗೆ (WTPs) ಭೇಟಿ ನೀಡುವ ಮೂಲಕ ನೀರಿನ ಸಂಸ್ಕರಣಾ ಪ್ರಕ್ರಿಯೆಗಳ ಬಗ್ಗೆ ಅವರಿಗೆ ನೇರ ಅನುಭವದ ಜ್ಞಾನ ಅಥವಾ ಮಾಹಿತಿ ನೀಡಲಾಗುತ್ತದೆ.

"ಜಲ್ ದೀಪಾವಳಿ" ಸಮಯದಲ್ಲಿ ಎಲ್ಲಾ ರಾಜ್ಯಗಳಿಂದ (ಚುನಾವಣೆಗೆ ಒಳಪಡುವ ರಾಜ್ಯಗಳನ್ನು ಹೊರತುಪಡಿಸಿ) 4,100ಕ್ಕಿಂತ ಹೆಚ್ಚಿನ ಮಹಿಳೆಯರು ಅಭಿಯಾನದ ಹೃದಯ ಭಾಗದಲ್ಲಿ ತೊಡಗಿಸಿಕೊಂಡಿದ್ದರಿಂದ ಅಭಿಯಾನದ ಮೊದಲ ದಿನ ಉತ್ಸಾಹದ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಈ ಸಶಕ್ತ ಮಹಿಳೆಯರು ದೇಶಾದ್ಯಂತ 250ಕ್ಕೂ ಹೆಚ್ಚು ನೀರು ಸಂಸ್ಕರಣಾ ಘಟಕಗಳಿಗೆ (WTPs) ಭೇಟಿ ನೀಡುತ್ತಾರೆ. ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ತಲುಪಿಸುವ ಸಂಕೀರ್ಣ ಪ್ರಕ್ರಿಯೆಗಳ ಅಮೂಲ್ಯವಾದ ಜ್ಞಾನ ಪಡೆಯುತ್ತಾರೆ. ರಾಜ್ಯ ಅಧಿಕಾರಿಗಳು ಸ್ವಸಹಾಯ ಗುಂಪಿನ ಮಹಿಳೆಯರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಅವರಿಗೆ ನೀರಿನ ಬಾಟಲಿಗಳು, ಸಿಪ್ಪರ್‌ಗಳು, ಗ್ಲಾಸ್‌ಗಳು, ಪರಿಸರಸ್ನೇಹಿ ಬ್ಯಾಗ್‌ಗಳು, ಬ್ಯಾಡ್ಜ್‌ಗಳು ಇತ್ಯಾದಿ ಒಳಗೊಂಡಂತೆ ಕ್ಷೇತ್ರ ಭೇಟಿಯ ಕಿಟ್‌ಗಳನ್ನು ನೀಡಲಾಯಿತು.

ಇಡೀ ದಿನ, ಮಹಿಳೆಯರು ನೀರಿನ ಮೂಲಸೌಕರ್ಯ ಲೋಕದಲ್ಲಿ ಮುಳುಗಿದರು, ನೀರಿನ ಗುಣಮಟ್ಟ ಪರೀಕ್ಷಾ ವಿಧಾನಗಳ ಕುರಿತು ಅವರು ತಜ್ಞರಿಂದ ಮಾರ್ಗದರ್ಶನ ಪಡೆದರು. ತಮ್ಮ ಸಮುದಾಯಗಳಿಗೆ ನೀರಿನ ಶುದ್ಧತೆಯ ಉನ್ನತ ಗುಣಮಟ್ಟ ಖಾತ್ರಿಪಡಿಸಿಕೊಂಡರು. ಮಹಿಳಾ ಪ್ರತಿನಿಧಿಗಳು ನೀರಿನ ಮೂಲಸೌಕರ್ಯದ ಮಾಲೀಕತ್ವ ಮತ್ತು ಜವಾಬ್ದಾರಿಯ ಆಳವಾದ ಪ್ರಜ್ಞೆ ಇಲ್ಲದ ಈ ಮಹಿಳೆಯರಿಗೆ ಜ್ಞಾನದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಅಭಿಯಾನದ ಗುರಿ ಸಾಧಿಸಲಾಯಿತು.

ದಿನದ ಕೇಂದ್ರೀಕೃತ ಕ್ಷೇತ್ರಗಳು ಅಮೃತ್ ಯೋಜನೆ ಮತ್ತು ಅದರ ವ್ಯಾಪಕ ಪರಿಣಾಮದ ಬಗ್ಗೆ ಮಹಿಳೆಯರಿಗೆ ಪರಿಚಯ ಮತ್ತು ಶಿಕ್ಷಣ ನೀಡುವುದು, ಜಲ ಸಂಸ್ಕರಣಾ ಘಟಕಗಳಿಗೆ ಸಮಗ್ರವಾದ ಮಾನ್ಯತೆ ಒದಗಿಸುವುದು, ಮಹಿಳಾ ಸ್ವ-ಸಹಾಯ ಗುಂಪುಗಳು (ಎಸ್‌ಎಚ್‌ಜಿಗಳು) ರೂಪಿಸಿದ ಸ್ಮಾರಕಗಳು ಮತ್ತು ಲೇಖನಗಳ ಮೂಲಕ ಎಲ್ಲರ ಒಳಗೊಳ್ಳುವಿಕೆ ಅಥವಾ ಭಾಗವಹಿಸುವಿಕೆ ಉತ್ತೇಜಿಸುವುದು ಮತ್ತು ನೀರಿನ ವ್ಯವಸ್ಥೆಯ ಅಳವಡಿಕೆಗೆ ಉತ್ತೇಜನ ನೀಡುವುದು. ಮನೆಗಳಲ್ಲಿ ನೀರಿನ ಸಮರ್ಥ ಫಿಕ್ಚರ್‌ಗಳ ಅಳವಡಿಕೆ ಬಗ್ಗೆ ಮಾಹಿತಿ ಒದಗಿಸಲಾಯಿತು. ಮಹಿಳಾ ಪ್ರತಿನಿಧಿಗಳು ನೀರಿನ ಸಂಪನ್ಮೂಲಗಳನ್ನು ಬುದ್ಧಿವಂತಿಕೆಯಿಂದ ಸಂರಕ್ಷಿಸಲು ಮತ್ತು ಬಳಸಲು ಚಿಂತನಶೀಲ ಕ್ರಮಗಳು ಮತ್ತು ಆತ್ಮಸಾಕ್ಷಿಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಮೂಲ್ಯ ಸಂಪನ್ಮೂಲವನ್ನು ರಕ್ಷಿಸುವ ಬದ್ಧತೆ ಪ್ರದರ್ಶಿಸಿದರು.

ಸ್ವಸಹಾಯ ಗುಂಪುಗಳು ಮತ್ತು ರಾಜ್ಯ ಅಧಿಕಾರಿಗಳ ಪ್ರಯತ್ನಗಳು ಅಭಿಯಾನದ 1ನೇ ದಿನದಲ್ಲಿ ಅದ್ಭುತ ಯಶಸ್ಸು ನೀಡಿತು. ಅಮೃತ್ 2.0 ಉಪಕ್ರಮದ ಅಡಿ, ನೀರಿನ ಮೂಲಸೌಕರ್ಯದ ನಿರ್ಣಾಯಕ ವಲಯದಲ್ಲಿ ಭಾಗವಹಿಸುವಿಕೆ ಮತ್ತು ಸಬಲೀಕರಣದತ್ತ ಮಹತ್ವದ ದಾಪುಗಾಲು ಹಾಕಿದೆ. ಅಭಿಯಾನದ 2 ಮತ್ತು 3ನೇ ದಿನದಲ್ಲಿ 400ಕ್ಕೂ ಹೆಚ್ಚು ನೀರು ಸಂಸ್ಕರಣಾ ಘಟಕಗಳಿಗೆ (WTPs) ಭೇಟಿ ನೀಡುವ ನಿರೀಕ್ಷೆಯಿದೆ. ಜತೆಗೆ 10,000ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳು ಹೆಚ್ಚುವರಿ ಭಾಗವಹಿಸುವಿಕೆಯೊಂದಿಗೆ "ಜಲ್ ದೀಪಾವಳಿ" ಆಚರಿಸಲು ಒಟ್ಟಾಗಿ ಸೇರಲಿವೆ. ಅಭಿಯಾನವು 2023 ನವೆಂಬರ್ 9ರ ವರೆಗೆ ಮುಂದುವರಿಯಲಿದೆ.

 

 

https://static.pib.gov.in/WriteReadData/userfiles/image/image0013N26.jpg

ಚಿತ್ರ 1 ಉತ್ತರಾಖಂಡ

https://static.pib.gov.in/WriteReadData/userfiles/image/image002Z4Z3.jpg

ಚಿತ್ರ 2 ಅಸ್ಸಾಂ

https://static.pib.gov.in/WriteReadData/userfiles/image/image003ULJZ.jpg

 

ಚಿತ್ರ 3 ಜಮ್ಮು-ಕಾಶ್ಮೀರ

 

https://static.pib.gov.in/WriteReadData/userfiles/image/image004BTQJ.jpg

 

ಚಿತ್ರ 4 ಕರ್ನಾಟಕ

https://static.pib.gov.in/WriteReadData/userfiles/image/image005ZG3G.jpg

ಚಿತ್ರ 5 ಕರ್ನಾಟಕ

 

https://static.pib.gov.in/WriteReadData/userfiles/image/image0067XKU.jpg

 

ಚಿತ್ರ 6 ಜಾರ್ಖಂಡ್

 

https://static.pib.gov.in/WriteReadData/userfiles/image/image007ETG3.jpg

 

ಚಿತ್ರ 7 ಜಾರ್ಖಂಡ್

 

https://static.pib.gov.in/WriteReadData/userfiles/image/image0082I2F.jpg

ಚಿತ್ರ 8 ಉತ್ತರಾಖಂಡ

 

https://static.pib.gov.in/WriteReadData/userfiles/image/image0093K1S.jpg

ಚಿತ್ರ 9 ಉತ್ತರ ಪ್ರದೇಶ

 

 

https://static.pib.gov.in/WriteReadData/userfiles/image/image010FSUV.jpg

 

ಚಿತ್ರ 10 ಉತ್ತರ ಪ್ರದೇಶ

https://static.pib.gov.in/WriteReadData/userfiles/image/image011C2SQ.jpg

 

ಚಿತ್ರ 11 ಗುಜರಾತ್

https://static.pib.gov.in/WriteReadData/userfiles/image/image012I0SI.jpg

 

ಚಿತ್ರ 12 ತಮಿಳುನಾಡು

https://static.pib.gov.in/WriteReadData/userfiles/image/image013FRMS.jpg

 

ಚಿತ್ರ 13 ನಾಗಾಲ್ಯಾಂಡ್

https://static.pib.gov.in/WriteReadData/userfiles/image/image014TZLZ.jpg

 

ಚಿತ್ರ 14 ನಾಗಾಲ್ಯಾಂಡ್

 

https://static.pib.gov.in/WriteReadData/userfiles/image/image015CZJC.jpg

 

ಚಿತ್ರ 15 ಮೇಘಾಲಯ

 

*****

 


(Release ID: 1975668) Visitor Counter : 110