ವಾರ್ತಾ ಮತ್ತು ಪ್ರಸಾರ ಸಚಿವಾಲಯ

54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಯಲಿದೆ



ಉತ್ಸವದಲ್ಲಿ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಶ್ರೀ ಮೈಕೆಲ್ ಡಗ್ಲಾಸ್ ಸ್ವೀಕರಿಸಲಿದ್ದಾರೆ

ಅಂತಾರಾಷ್ಟ್ರೀಯ ವಿಭಾಗಕ್ಕೆ ಭಾರೀ ಪ್ರತಿಕ್ರಿಯೆ, ಕ್ರಿಯೇಟಿವ್ ಮೈಂಡ್ಸ್ ಫಾರ್ ಟುಮಾರೊಗೆ 600 ನಮೂದುಗಳು

ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಗಾಗಿ 15 ಒಟಿಟಿ ಪ್ಲಾಟ್‌ ಫಾರ್ಮ್‌ ಗಳಿಂದ 10 ಭಾಷೆಗಳಲ್ಲಿ 32 ನಮೂದುಗಳು: ಶ್ರೀ ಅನುರಾಗ್ ಠಾಕೂರ್

Posted On: 06 NOV 2023 3:02PM by PIB Bengaluru

2023 ರ ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ 54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಇಂದು ಘೋಷಿಸಿದರು. ಜಾಗತಿಕವಾಗಿ 5 ನೇ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ಪರಿಗಣಿಸಬೇಕಾದ ಶಕ್ತಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಈ ಮಾರುಕಟ್ಟೆಯು ಪ್ರತಿ ವರ್ಷ ಸರಾಸರಿ ಶೇ.20 ವಾರ್ಷಿಕ ಪ್ರಗತಿಯೊಂದಿಗೆ ಬೆಳೆಯುತ್ತಿದೆ ಎಂದು ಅವರು ಹೇಳಿದರು. ಭಾರತದಲ್ಲಿ ತಯಾರಾದ ಸಿನಿಮಾಗಳು ದೇಶದ ಮೂಲೆ ಮೂಲೆಯನ್ನು ಆವರಿಸಿ ಈಗ ಜಗತ್ತಿನ ಮೂಲೆಗಳನ್ನು ತಲುಪುತ್ತಿವೆ ಎಂದು ಅವರು ಹೇಳಿದರು.

ವಿಶ್ವ ಚಿತ್ರರಂಗದ ಖ್ಯಾತ ತಾರೆ ಮತ್ತು ಸಿನಿಮಾ ಜಗತ್ತಿಗೆ ಅಪಾರ ಕೊಡುಗೆ ನೀಡಿರುವ ಶ್ರೀ ಮೈಕೆಲ್ ಡಗ್ಲಾಸ್ ಅವರಿಗೆ ಈ ವರ್ಷ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಐ ಎಫ್‌ ಎಫ್‌ ಐ ನ ಅಂತಾರಾಷ್ಟ್ರೀಯ ವಿಭಾಗವು ಸ್ವೀಕರಿಸಿದ ಚಲನಚಿತ್ರಗಳ ಸಂಖ್ಯೆಯಲ್ಲಿ ಮೂರು ಪಟ್ಟು ಏರಿಕೆಯಾಗಿದೆ ಮತ್ತು ಇದು ಐ ಎಫ್‌ ಎಫ್‌ ಐ ಬಗ್ಗೆ ಅಂತಾರಾಷ್ಟ್ರೀಯ ಚಲನಚಿತ್ರೋದ್ಯಮಕ್ಕಿರುವ ಆಕರ್ಷಣೆಯ ಫಲವಾಗಿದೆ ಎಂದು ಶ್ರೀ ಠಾಕೂರ್ ತಿಳಿಸಿದರು.

ಹೊಸದಾಗಿ ಪರಿಚಯಿಸಲಾದ ಒಟಿಟಿ ಪ್ರಶಸ್ತಿಗಳ ಕುರಿತು ಮಾತನಾಡಿದ ಅವರು, ಕೋವಿಡ-19 ಸಾಂಕ್ರಾಮಿಕ ಸಮಯದಿಂದ ಒಟಿಟಿ ಉದ್ಯಮವು ಭಾರತದಲ್ಲಿ ಏರಿಕೆಯನ್ನು ಕಂಡಿದೆ ಮತ್ತು ಭಾರತದಲ್ಲಿ ರಚಿಸಲಾದ ಮೂಲ ಕಂಟೆಂಟ್ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ ಎಂದು ಹೇಳಿದರು. ಈ ವಲಯದ ಡೈನಾಮಿಕ್ ಚಿತ್ರಣಕ್ಕೆ ಪ್ರತಿಕ್ರಿಯೆಯಾಗಿ, ಅದರ ಬೆಳವಣಿಗೆಯು ವಾರ್ಷಿಕವಾಗಿ ಶೇ.28 ರಷ್ಟಿದೆ, ಒಟಿಟಿ ಪ್ಲಾಟ್‌ ಫಾರ್ಮ್‌ ಗಳಲ್ಲಿ ಅತ್ಯುತ್ತಮ ಕಂಟೆಂಟ್‌ ರಚನೆಕಾರರನ್ನು ಸಂಭ್ರಮಿಸಲು ಸಚಿವಾಲಯವು ಈ ಪ್ರಶಸ್ತಿಯನ್ನು ಪರಿಚಯಿಸಿದೆ. 15 ಒಟಿಟಿ ಪ್ಲಾಟ್‌ ಫಾರ್ಮ್‌ ಗಳಿಂದ 10 ಭಾಷೆಗಳಲ್ಲಿ ಒಟ್ಟು 32 ನಮೂದುಗಳನ್ನು ಸ್ವೀಕರಿಸಲಾಗಿದೆ ಮತ್ತು ವಿಜೇತರಿಗೆ ಹತ್ತು ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.

ದೇಶದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟ್ಅಪ್ ಪೂರಕ ವ್ಯವಸ್ಥೆಯ ಬಗ್ಗೆ ಮಾತನಾಡಿದ ಶ್ರೀ ಅನುರಾಗ್ ಠಾಕೂರ್, ಅಂತಹ ಸ್ಟಾರ್ಟ್ಅಪ್ ಗಳನ್ನು ಪೋಷಿಸುವ ಬೆಂಬಲ ವ್ಯವಸ್ಥೆಯನ್ನು ರಚಿಸಲು ಸರ್ಕಾರಗಳು ಗಮನಹರಿಸುತ್ತವೆ. ಚಲನಚಿತ್ರ ವಲಯದಲ್ಲಿ ಸ್ಟಾರ್ಟ್‌ಅಪ್ ಪೂರಕ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ದೇಶದ ಮೂಲೆ ಮೂಲೆಗಳಿಂದ ಪ್ರತಿಭೆಗಳನ್ನು ಗುರುತಿಸಲು ನಾವು ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು. ಈ ವರ್ಷ ಈ ವಿಭಾಗದಲ್ಲಿ 600 ಕ್ಕೂ ಹೆಚ್ಚು ನಮೂದುಗಳು ಬಂದಿವೆ ಎಂದು ಸಚಿವರು ಮಾಹಿತಿ ನೀಡಿದರು. ಈ ವರ್ಷದ 75 ವಿಜೇತರ ಆಯ್ಕೆಯು 3 ವರ್ಷಗಳಲ್ಲಿ ಅಂತಹ ವಿಜೇತರ ಒಟ್ಟು ಸಂಖ್ಯೆಯನ್ನು 225 ಕ್ಕೆ ತಲುಪಿಸುತ್ತದೆ ಎಂದು ಅವರು ಹೇಳಿದರು.

ಈ ವರ್ಷದ ಐ ಎಫ್‌ ಎಫ್‌ ಐ ನ ಎಲ್ಲಾ ಸ್ಥಳಗಳು ವಿಶೇಷಚೇತನರಿಗೆ ಎಲ್ಲಾ ಸೌಲಭ್ಯಗಳು ಮತ್ತು ಪ್ರವೇಶವನ್ನು ಒಳಗೊಂಡಿರುತ್ತವೆ ಎಂದು ಸಚಿವರು ವಿಶೇಷ ಉಲ್ಲೇಖ ಮಾಡಿದರು. ದೃಷ್ಟಿಹೀನರಿಗೆ ಆಡಿಯೋ ವಿವರಣೆ, ಶ್ರವಣದೋಷವುಳ್ಳವರಿಗೆ ಸಂಕೇತ ಭಾಷೆ, ಬಹು ಭಾಷೆಗಳಲ್ಲಿ ವಿಷಯಗಳ ಡಬ್ಬಿಂಗ್, ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಂತ್ರದ ಸಂಕೇತವಾಗಿರುತ್ತದೆ ಎಂದು ಅವರು ಹೇಳಿದರು.

ರಾಜ್ಯ ಸಚಿವ ಡಾ ಎಲ್ ಮುರುಗನ್ ಮಾತನಾಡಿ, ಐ ಎಫ್‌ ಎಫ್‌ ಐ ವಿಶ್ವದ ಅತಿದೊಡ್ಡ ಚಲನಚಿತ್ರ ಮತ್ತು ಸಾಂಸ್ಕೃತಿಕ ಸಂಭ್ರಮಗಳಲ್ಲಿ ಒಂದಾಗಿದೆ. ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಶೇಖರ್ ಕಪೂರ್ ಅವರು ಅಂತಾರಾಷ್ಟ್ರೀಯ ತೀರ್ಪುಗಾರ ತಂಡದ ಮುಖ್ಯಸ್ಥರಾಗಿದ್ದಾರೆ ಎಂದು ತಿಳಿಸಿದರು.

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 54 ನೇ ಆವೃತ್ತಿಯ ವೈಶಿಷ್ಟ್ಯಗಳ ಒಂದು ನೋಟ ಇಲ್ಲಿದೆ:

  1. ಐ ಎಫ್‌ ಎಫ್‌ ಐ ಮುಖ್ಯಾಂಶಗಳಲ್ಲಿ ಒಂದಾದ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ (SRLTA) ಯನ್ನು ವಿಶ್ವ ಸಿನಿಮಾದಲ್ಲಿನ ಶ್ರೇಷ್ಠತೆಗಾಗಿ ನೀಡಲಾಗುತ್ತದೆ. ಹಾಲಿವುಡ್ ನಟ ಮತ್ತು ನಿರ್ಮಾಪಕ ಮೈಕೆಲ್ ಡಗ್ಲಾಸ್, ಪ್ರಸ್ತುತ ವಿಶ್ವ ಚಿತ್ರರಂಗದ ಶ್ರೇಷ್ಠ ಅಂತಾರಾಷ್ಟ್ರೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ, ಐ ಎಫ್‌ ಎಫ್‌ ಐ ನಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ತಮ್ಮ ಪತ್ನಿ ಮತ್ತು ಹೆಸರಾಂತ ನಟಿ ಕ್ಯಾಥರೀನ್ ಝೀಟಾ-ಜೋನ್ಸ್ ಅವರೊಂದಿಗೆ ಆಗಮಿಸಲಿದ್ದಾರೆ.

50 ವರ್ಷಗಳಿಂದ ಚಲನಚಿತ್ರ ಮತ್ತು ದೂರದರ್ಶನ ಉದ್ಯಮದಲ್ಲಿರುವ "ಮೈಕೆಲ್ ಡಗ್ಲಾಸ್", 2 ಆಸ್ಕರ್‌, 5 ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು, ಪ್ರೈಮ್‌ ಟೈಮ್ ಎಮ್ಮಿ ಪ್ರಶಸ್ತಿ ಮತ್ತು ಲೆಕ್ಕವಿಲ್ಲದಷ್ಟು ಇತರ ಗೌರವಗಳನ್ನು ಪಡೆದಿದ್ದಾರೆ. 2023 ರಲ್ಲಿ, ಅವರು 76 ನೇ ಕಾನ್‌ ನಲ್ಲಿ ಜೀವಮಾನದ ಸಾಧನೆಗಾಗಿ ಪಾಮ್ ಡಿ'ಓರ್ ಪಡೆದರು. 'ವಾಲ್ ಸ್ಟ್ರೀಟ್' ಚಿತ್ರದಲ್ಲಿ ಗಾರ್ಡನ್ ಗೆಕ್ಕೊ ಆಗಿ ಅಕಾಡೆಮಿ ಪ್ರಶಸ್ತಿ ವಿಜೇತ ಅಭಿನಯದಿಂದ ಹಿಡಿದು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರಗಳಾದ ಫೇಟಲ್ ಅಟ್ರಾಕ್ಷನ್, ದಿ ಅಮೇರಿಕನ್ ಪ್ರೆಸಿಡೆಂಟ್, ಬೇಸಿಕ್ ಇನ್‌ಸ್ಟಿಂಕ್ಟ್, ಟ್ರಾಫಿಕ್ ಮತ್ತು ರೊಮ್ಯಾನ್ಸಿಂಗ್ ದಿ ಸ್ಟೋನ್‌ ಗಳವರೆಗೆ ಅವರು ತಮ್ಮ ಅಪ್ರತಿಮ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಮೈಕೆಲ್ ಒಬ್ಬ ನಟ ಮಾತ್ರವಲ್ಲದೆ ಉತ್ತಮ ನಿರ್ಮಾಪಕ ಕೂಡ ಆಗಿದ್ದಾರೆ. ಅವರು ಒನ್ ಫ್ಲ್ಯೂ ಓವರ್ ದಿ ಕಕ್ಕೂಸ್ ನೆಸ್ಟ್ ಮತ್ತು ದಿ ಚೈನಾ ಸಿಂಡ್ರೋಮ್‌ನಂತಹ ಪ್ರಬಲ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಶ್ರೀ ಡಗ್ಲಾಸ್ ತಮ್ಮ ಮಾನವೀಯ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ನ್ಯೂಕ್ಲಿಯರ್ ಥ್ರೆಟ್ ಇನಿಶಿಯೇಟಿವ್ ಸಂಘಟನೆಯಲ್ಲಿದ್ದಾರೆ, ಇದು ಮಾನವೀಯತೆಯನ್ನು ದುರ್ಬಲಗೊಳಿಸುವ ಪರಮಾಣು ಮತ್ತು ಜೈವಿಕ ಬೆದರಿಕೆಗಳನ್ನು ಕಡಿಮೆ ಮಾಡಲು ಕೇಂದ್ರೀಕರಿಸಿದೆ. ಅವರು 1998 ರಲ್ಲಿ ವಿಶ್ವಸಂಸ್ಥೆಯ ಶಾಂತಿ ಸಂದೇಶವಾಹಕರಾಗಿ ನೇಮಕಗೊಂಡರು.

2. ಉತ್ಸವದ ಸಮಯದಲ್ಲಿ 4 ಸ್ಥಳಗಳಲ್ಲಿ 270 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ - INOX ಪಣಜಿ (4), ಮ್ಯಾಕ್ವಿನೆಜ್ ಪ್ಯಾಲೇಸ್ (1), INOX ಪೊರ್ವೊರಿಮ್ (4), ಝಡ್‌ ಸ್ಕ್ವೇರ್ ಸಾಮ್ರಾಟ್ ಅಶೋಕ್ (2).

3. 54 ನೇ ಐ ಎಫ್‌ ಎಫ್‌ ಐ ನ 'ಅಂತಾರಾಷ್ಟ್ರೀಯ ವಿಭಾಗ' 198 ಚಲನಚಿತ್ರಗಳನ್ನು ಹೊಂದಿರುತ್ತದೆ, ಇದು 53 ನೇ ಐ ಎಫ್‌ ಎಫ್‌ ಐ ಗಿಂತ 18 ಹೆಚ್ಚು. ಇದು 13 ವಿಶ್ವ ಪ್ರೀಮಿಯರ್‌ ಗಳು, 18 ಅಂತಾರಾಷ್ಟ್ರೀಯ ಪ್ರೀಮಿಯರ್‌ ಗಳು, 62 ಏಷ್ಯಾ ಪ್ರೀಮಿಯರ್‌ಗಳು ಮತ್ತು 89 ಇಂಡಿಯಾ ಪ್ರೀಮಿಯರ್‌ ಗಳನ್ನು ಹೊಂದಿರುತ್ತದೆ. ಈ ವರ್ಷ ಐ ಎಫ್‌ ಎಫ್‌ ಐ 105 ದೇಶಗಳಿಂದ ದಾಖಲೆಯ 2926 ನಮೂದುಗಳನ್ನು ಸ್ವೀಕರಿಸಿದೆ, ಇದು ಕಳೆದ ವರ್ಷಕ್ಕಿಂತ 3 ಪಟ್ಟು ಹೆಚ್ಚು ಅಂತಾರಾಷ್ಟ್ರೀಯ ಸಲ್ಲಿಕೆಯಾಗಿದೆ.

4. ‘ಭಾರತೀಯ ಪನೋರಮಾ’ವಿಭಾಗವು ಭಾರತದ 25 ಚಲನಚಿತ್ರಗಳು ಮತ್ತು 20 ನಾನ್- ಫೀಚರ್ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಫೀಚರ್ ವಿಭಾಗದಲ್ಲಿ ಮಲಯಾಳಂ ಚಲನಚಿತ್ರ, ಆಟಂ, ಮತ್ತು ನಾನ್-ಫೀಚರ್ ವಿಭಾಗದಲ್ಲಿ ಮಣಿಪುರದ ಆಂಡ್ರೋ ಡ್ರೀಮ್ಸ್ ಚಲನಚಿತ್ರಗಳು ಮೊದಲ ಚಿತ್ರಗಳಾಗಿ ಪ್ರದರ್ಶನಗೊಳ್ಳುತ್ತವೆ.‌

5. ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿ: ಈ ವರ್ಷ ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿಯನ್ನು ಪರಿಚಯಿಸಲಾಗಿದೆ. ಇದು ಪ್ರವರ್ಧಮಾನಕ್ಕೆ ಬರುತ್ತಿರುವ ಒಟಿಟಿ ಪ್ಲಾಟ್‌ ಫಾರ್ಮ್‌ ಗಳ ಕಂಟೆಂಟ್ ಮತ್ತು ಅದರ ರಚನೆಕಾರರನ್ನು ಗುರುತಿಸುವವ, ಪ್ರೋತ್ಸಾಹಿಸುವ ಮತ್ತು ಗೌರವಿಸುವ ಗುರಿಯನ್ನು ಹೊಂದಿದೆ. 15 ಒಟಿಟಿ ಪ್ಲಾಟ್‌ ಫಾರ್ಮ್‌ಗಳಿಂದ 10 ಭಾಷೆಗಳಲ್ಲಿ 32 ನಮೂದುಗಳನ್ನು ಸ್ವೀಕರಿಸಲಾಗಿದೆ. ವಿಜೇತ ಸರಣಿಗೆ ಪ್ರಮಾಣಪತ್ರ ಮತ್ತು 10 ಲಕ್ಷ ನಗದು ಬಹುಮಾನವನ್ನು ನೀಡಲಾಗುವುದು, ವಿಜೇತರನ್ನು ಸಮಾರೋಪ ಸಮಾರಂಭದಲ್ಲಿ ಪ್ರಕಟಿಸಲಾಗುವುದು.

6. ಈ ವರ್ಷದ ಐ ಎಫ್‌ ಎಫ್‌ ಐ ನ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗವು 8 ಕ್ಯುರೇಟೆಡ್ ವಿಭಾಗಗಳನ್ನು ಹೊಂದಿರುತ್ತದೆ. ಪ್ರಮುಖ ಚಲನಚಿತ್ರಗಳ ಮುಖ್ಯಾಂಶಗಳು ಕೆಳಕಂಡಂತಿವೆ:

  • ಓಪನಿಂಗ್ ಫಿಲ್ಮ್: ಕ್ಯಾಚಿಂಗ್ ಡಸ್ಟ್ | ನಿರ್ದೇಶಕ: ಸ್ಟುವರ್ಟ್ ಗ್ಯಾಟ್ | ಯುನೈಟೆಡ್ ಕಿಂಗ್‌ಡಮ್ | (ಅಂತಾರಾಷ್ಟ್ರೀಯ ಪ್ರೀಮಿಯರ್) - ಇದು ಡ್ರಾಮಾ/ ಥ್ರಿಲ್ಲರ್ ಆಗಿದ್ದು, ಖ್ಯಾತ ಅಂತಾರಾಷ್ಟ್ರೀಯ ನಟರಾದ ಎರಿನ್ ಮೊರಿಯಾರ್ಟಿ, ಜೈ ಕರ್ಟ್ನಿ, ದಿನಾ ಶಿಹಾಬಿ, ರಿಯಾನ್ ಕಾರ್, ಜೋಸ್ ಅಲ್ಟಿಟ್, ಗ್ಯಾರಿ ಫ್ಯಾನಿನ್ ಮತ್ತು ಓಲ್ವೆನ್ ಫೌರೆ ಸೇರಿದಂತೆ ಹಲವರ ತಾರಾಗಣವಿದೆ. ಸ್ಟುವರ್ಟ್ ಗ್ಯಾಟ್ ಅವರು ಏಷ್ಯಾದ ಪರಂಪರೆಯ ಪ್ರಶಸ್ತಿ-ವಿಜೇತ ಬ್ರಿಟಿಷ್ ಚಲನಚಿತ್ರ ನಿರ್ದೆಶಕರಾಗಿದ್ದು, ಅವರ ಕಥೆಗಳು ಸಾಮಯಿಕ ಸಾಮಾಜಿಕ ವಿಷಯಗಳಿಂದ ಪ್ರಭಾವಿತವಾಗಿವೆ.
  • ಮಿಡ್-ಫೆಸ್ಟ್ ಫಿಲ್ಮ್: ಅಬೌಟ್‌ ಡ್ರೈ ಗ್ರಾಸ್ | ನಿರ್ದೇಶನ: ನೂರಿ ಬಿಲ್ಗೆ ಸಿಲಾನ್ | ಫ್ರಾನ್ಸ್ | (ಇಂಡಿಯಾ ಪ್ರೀಮಿಯರ್) - ಇದು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿರುವ ಮೆಚ್ಚುಗೆ ಪಡೆದ ನಿರ್ದೇಶಕರ ಟರ್ಕಿಶ್ ಡ್ರಾಮಾವಾಗಿದೆ. ಅವರ ಚಲನಚಿತ್ರ ವಿಂಟರ್ ಸ್ಲೀಪ್ (2014) ಕಾನ್ ಚಲನಚಿತ್ರೋತ್ಸವದಲ್ಲಿ ಪಾಮ್ ಡಿ'ಓರ್ ಅನ್ನು ಗೆದ್ದುಕೊಂಡಿದೆ, ಅಲ್ಲದೆ ಅವರ ಆರು ಚಲನಚಿತ್ರಗಳು ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದ ಅಕಾಡೆಮಿ ಪ್ರಶಸ್ತಿಗಾಗಿ ಟರ್ಕಿಯ ಸಲ್ಲಿಕೆಯಾಗಿ ಆಯ್ಕೆಯಾಗಿವೆ, ಇದರಲ್ಲಿ ' ಅಬೌಟ್‌ ಡ್ರೈ ಗ್ರಾಸ್' ಸಹ ಸೇರಿದೆ. ಈ ಚಿತ್ರವು ಈ ವರ್ಷ ಕಾನ್ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿಯೂ ಇತ್ತು. ನಟಿ ಮೆರ್ವೆ ಡಿಜ್ದಾರ್‌ ಅವರಿಗೆ ಈ ಚಲನಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು.
  • ಕ್ಲೋಸಿಂಗ್ ಫಿಲ್ಮ್: ದಿ ಫೆದರ್‌ವೈಟ್ | ನಿರ್ದೇಶನ: ರಾಬರ್ಟ್ ಕೊಲೊಡ್ನಿ | ಯುನೈಟೆಡ್ ಸ್ಟೇಟ್ಸ್ | (ಏಷ್ಯಾ ಪ್ರೀಮಿಯರ್) - ಇದು 2023 ರ ಅಮೇರಿಕನ್ ಜೀವನಚರಿತ್ರೆಯ ಕ್ರೀಡಾ ಡ್ರಾಮಾ ಚಲನಚಿತ್ರವಾಗಿದ್ದು, ಇದು ಸ್ಟಾರ್ ಅಥ್ಲೀಟ್‌ ಒಬ್ಬರ ಜೀವನಚರಿತ್ರೆಯನ್ನು ಬಿಚ್ಚಿಡುತ್ತದೆ, ಇದನ್ನು ಕ್ಲಾಸಿಕ್ “ಸಿನೆಮಾ ವೆರಿಟೆ”(ಟ್ರೂಥ್ಫುಲ್‌ ಸಿನಿಮಾ) ಶೈಲಿಯಲ್ಲಿ ನಿರ್ಮಿಸಲಾಗಿದೆ. ರಾಬರ್ಟ್ ಕೊಲೊಡ್ನಿ ಬಹುಮುಖ ಪ್ರತಿಭೆಯ ಅಮೆರಿಕನ್ ನಿರ್ದೇಶಕ, ಬರಹಗಾರ ಮತ್ತು ಸಿನಿಮಾಟೋಗ್ರಾಫರ್. ಚಲನಚಿತ್ರವು ಸೆಪ್ಟೆಂಬರ್, 2023 ರಲ್ಲಿ ನಡೆದ 80 ನೇ ವೆನಿಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ರಾಬರ್ಟ್ ಅನೇಕ ಚಲನಚಿತ್ರಗಳಿಗೆ ಛಾಯಾಗ್ರಹಣ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಹಲವಾರು ಪ್ರಶಸ್ತಿ ವಿಜೇತ ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ.
  • ಅಂತಾರಾಷ್ಟ್ರೀಯ ಸ್ಪರ್ಧೆಯ ವಿಭಾಗ -15 ಚಲನಚಿತ್ರಗಳನ್ನು (12 ಅಂತಾರಾಷ್ಟ್ರೀಯ + 3 ಭಾರತೀಯ) ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ, ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಮತ್ತು 40 ಲಕ್ಷ ರೂ.ಗಳಿಗಾಗಿ ಸ್ಪರ್ಧಿಸಲು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಅತ್ಯುತ್ತಮ ಚಲನಚಿತ್ರದ ಹೊರತಾಗಿ ತೀರ್ಪುಗಾರರು ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ (ಪುರುಷ), ಅತ್ಯುತ್ತಮ ನಟ (ಮಹಿಳೆ), ವಿಶೇಷ ತೀರ್ಪುಗಾರರ ಪ್ರಶಸ್ತಿಗಳನ್ನು ನಿರ್ಧರಿಸುತ್ತಾರೆ. ಚಲನಚಿತ್ರಗಳ ಪಟ್ಟಿಯನ್ನು ಅನುಬಂಧದಲ್ಲಿ ನೀಡಲಾಗಿದೆ ಮತ್ತು ಅವುಗಳ ವಿವರಗಳನ್ನು ಐ ಎಫ್‌ ಎಫ್‌ ಐ ನ ಅಧಿಕೃತ ವೆಬ್‌ ಸೈಟ್‌ ನಲ್ಲಿ ಅಪ್‌ ಲೋಡ್ ಮಾಡಲಾಗುತ್ತದೆ.
  • ಅತ್ಯುತ್ತಮ ಚಲನಚಿತ್ರ ಚೊಚ್ಚಲ ನಿರ್ದೇಶಕ - 5 ಅಂತಾರಾಷ್ಟ್ರೀಯ + 2 ಭಾರತೀಯ ಚಲನಚಿತ್ರಗಳು ಈ ವಿಭಾಗದಲ್ಲಿ ಪ್ರತಿಷ್ಠಿತ ಸಿಲ್ವರ್ ಪೀಕಾಕ್, 10 ಲಕ್ಷ ರೂ ನಗದು ಬಹುಮಾನ ಮತ್ತು ಪ್ರಮಾಣಪತ್ರಕ್ಕಾಗಿ ಸ್ಪರ್ಧಿಸುತ್ತವೆ. ಚಲನಚಿತ್ರಗಳ ಪಟ್ಟಿಯನ್ನು ಅನುಬಂಧದಲ್ಲಿ ನೀಡಲಾಗಿದೆ ಮತ್ತು ಅವುಗಳ ವಿವರಗಳನ್ನು ಐ ಎಫ್‌ ಎಫ್‌ ಐ ನ ಅಧಿಕೃತ ವೆಬ್‌ ಸೈಟ್‌ ನಲ್ಲಿ ಅಪ್‌ ಲೋಡ್ ಮಾಡಲಾಗುತ್ತದೆ.
  • ಅಂತಾರಾಷ್ಟ್ರೀಯ ತೀರ್ಪುಗಾರರು - ಶ್ರೀ. ಶೇಖರ್ ಕಪೂರ್ (ಅಧ್ಯಕ್ಷರು), ಖ್ಯಾತ ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ನಟ, ಜೋಸ್ ಲೂಯಿಸ್ ಅಲ್ಕೇನ್, ಸ್ಪ್ಯಾನಿಷ್ ಛಾಯಾಗ್ರಾಹಕ, ಜೆರೋಮ್ ಪೈಲಾರ್ಡ್, ಮಾರ್ಚೆ ಡು ಕಾನೆಯ ಮಾಜಿ ಮುಖ್ಯಸ್ಥ, ಕ್ಯಾಥರೀನ್ ಡಸ್ಸಾರ್ಟ್, ಫ್ರಾನ್ಸ್‌ನ ಹೆಸರಾಂತ ಚಲನಚಿತ್ರ ನಿರ್ಮಾಪಕ; ಹೆಲೆನ್ ಲೀಕ್, ಆಸ್ಟ್ರೇಲಿಯಾದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕಿ.
  • ಫೆಸ್ಟಿವಲ್ ಕೆಲಿಡೋಸ್ಕೋಪ್ - ಈ ವರ್ಷದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ಪ್ರಶಸ್ತಿ ವಿಜೇತ ಚಲನಚಿತ್ರಗಳಲ್ಲಿ ಅತ್ಯುತ್ತಮವಾದವುಗಳನ್ನು ಐ ಎಫ್‌ ಎಫ್‌ ಐ ಕೆಲಿಡೋಸ್ಕೋಪ್‌ ನಲ್ಲಿ ವಿಂಗಡಿಸಲಾಗಿದೆ. 19 ಚಲನಚಿತ್ರಗಳು ಕಾನ್, ವೆನಿಸ್, ಸಾವೊ ಪಾಲೊ, ರೋಟರ್‌‌ ಡ್ಯಾಮ್, ಸಾಂಟಾ ಬಾರ್ಬರಾ, ಸ್ಟಾಕ್‌ ಹೋಮ್, ಇತ್ಯಾದಿ ಉತ್ಸವಗಳಿಂದ ಬಂದಿವೆ.
  • ಸಿನಿಮಾ ಆಫ್‌ ದ ವರ್ಲ್ಡ್‌ ವಿಭಾಗವು 103 ಚಲನಚಿತ್ರಗಳನ್ನು ಒಳಗೊಂಡಿದೆ, ಪ್ರಪಂಚದಾದ್ಯಂತದ ಸಿನಿಮಾಗಳ ಸೌಂದರ್ಯ ಮತ್ತು ನಿರೂಪಣೆಗಳ ದಿಗ್ಭ್ರಮೆಗೊಳಿಸುವ ವೈವಿಧ್ಯತೆಯನ್ನು ಅನ್ವೇಷಿಸುವ ಚಲನಚಿತ್ರಗಳ ಸಂಖ್ಯೆಯಲ್ಲಿ ಹಿಂದಿನ ವರ್ಷಗಳಿಗಿಂತ (77) ಗಮನಾರ್ಹ ಏರಿಕೆಯಾಗಿದೆ.
  • ಪ್ರಪಂಚದಾದ್ಯಂತದ ಬಲವಾದ ಸಾಕ್ಷ್ಯಚಿತ್ರಗಳನ್ನು ಒಳಗೊಂಡಿರುವ DOCU-MONTAGE ವಿಭಾಗವನ್ನು ಪರಿಚಯಿಸಲಾಗಿದೆ.
  • ಚಿತ್ರೋತ್ಸವದ ಅನಿಮೇಷನ್ ವಿಭಾಗವನ್ನು ಅಂತಾರಾಷ್ಟ್ರೀಯ ಮತ್ತು ಭಾರತೀಯ ಅನಿಮೇಷನ್ ಚಲನಚಿತ್ರಗಳನ್ನು ಕ್ಯುರೇಟ್ ಮಾಡಲು ವಿಸ್ತರಿಸಲಾಗಿದೆ, ಪೋಲೆಂಡ್‌ ನ ಅಧಿಕೃತ ಆಸ್ಕರ್ ಪ್ರವೇಶ - ದಿ ಪೀಸೆಂಟ್ಸ್ (ನಿರ್ದೇಶನ: ಡಿಕೆ ವೆಲ್ಚ್‌ಮನ್, ಹಗ್ ವೆಲ್ಚ್‌ಮನ್) ಸೇರಿದಂತೆ ಕಲಾತ್ಮಕವಾಗಿ ಚತುರ ಮತ್ತು ನಿರೂಪಣೆಯ ಭಾರತೀಯ ಅನಿಮೇಷನ್ ಚಲನಚಿತ್ರಗಳ ವ್ಯಾಪಕ ಶ್ರೇಣಿಯನ್ನು ಒಳಗೊಂಡಿದೆ.
  • ಇಂಡಿಯನ್ ಕ್ಲಾಸಿಕ್ಸ್‌ನ ಹಾನಿಗೊಳಗಾದ ಸೆಲ್ಯುಲಾಯ್ಡ್ ರೀಲ್‌ಗಳಿಂದ ನ್ಯಾಷನಲ್ ಫಿಲ್ಮ್ ಹೆರಿಟೇಜ್ ಮಿಷನ್ (NFHM) ಅಡಿಯಲ್ಲಿ NFDC-NFAI ಮಾಡಿದ ವಿಶ್ವ ದರ್ಜೆಯ ಮರುಸ್ಥಾಪನೆಗಳ 7 ವಿಶ್ವ ಪ್ರಥಮ ಪ್ರದರ್ಶನಗಳನ್ನು ಒಳಗೊಂಡ ಮರುಸ್ಥಾಪಿತ ಕ್ಲಾಸಿಕ್ಸ್ ವಿಭಾಗವನ್ನು ಪರಿಚಯಿಸಲಾಗಿದೆ.
  • ವಿದ್ಯಾಪತಿ (1937) ಬಂಗಾಳಿ, ನಿರ್ದೇಶಕರು: ದೇಬಕಿ ಬೋಸ್
  • ಶ್ಯಾಮ್ಚಿ ಆಯಿ (1953), ಮರಾಠಿ, ನಿರ್ದೇಶಕ: ಪಿ.ಕೆ. ಅತ್ರೆ
  • ಪಾತಾಳ ಭೈರವಿ (1951), ತೆಲುಗು, ನಿರ್ದೇಶಕ: ಕೆ.ವಿ. ರೆಡ್ಡಿ
  • ಗೈಡ್ (1965), ಹಿಂದಿ, ನಿರ್ದೇಶಕ: ವಿಜಯ್ ಆನಂದ್
  • ಹಕೀಕತ್ (1964), ಹಿಂದಿ, ನಿರ್ದೇಶಕ: ಚೇತನ್ ಆನಂದ್
  • ಕೋರಸ್ (1974) ಬೆಂಗಾಲಿ, ನಿರ್ದೇಶಕರು: ಮೃಣಾಲ್ ಸೇನ್
  • ಬೀಸ್ ಸಾಲ್ ಬಾದ್ (1962), ಹಿಂದಿ, ನಿರ್ದೇಶಕ: ಬಿರೇನ್ ನಾಗ್
  • ಇದಲ್ಲದೆ, ವೆನಿಸ್‌ನಿಂದ ದಿ ಎಕ್ಸಾರ್ಸಿಸ್ಟ್ ಎಕ್ಸ್‌ಟೆಂಡೆಡ್ ಡೈರೆಕ್ಟರ್ಸ್ ಕಟ್ ಮತ್ತು ಸೆರ್ಗೆಯ್ ಪರಾಜನೋವ್ ಅವರ ಶಾಡೋಸ್ ಆಫ್ ಫರ್ಗಾಟನ್ ಅನ್ಸೆಸ್ಟರ್ಸ್ ಸೇರಿದಂತೆ 3 ಅಂತಾರಾಷ್ಟ್ರೀಯ ಮರುಸ್ಥಾಪಿತ ಚಲನಚಿತ್ರಗಳನ್ನು ಸಹ ಈ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ.‌
  • ಯುನೆಸ್ಕೊ ಚಲನಚಿತ್ರಗಳು - ಯುನೆಸ್ಕೊದ ಆದರ್ಶಗಳನ್ನು ಪ್ರತಿಬಿಂಬಿಸುವ ಚಲನಚಿತ್ರಗಳು: 7 ಅಂತಾರಾಷ್ಟ್ರೀಯ + 3 ಭಾರತೀಯ ಚಲನಚಿತ್ರಗಳು. ಚಲನಚಿತ್ರಗಳ ಪಟ್ಟಿಯನ್ನು ಅನುಬಂಧದಲ್ಲಿ ನೀಡಲಾಗಿದೆ ಮತ್ತು ಅವುಗಳ ವಿವರಗಳನ್ನು ಐ ಎಫ್‌ ಎಫ್‌ ಐ ನ ಅಧಿಕೃತ ವೆಬ್‌ ಸೈಟ್‌ ನಲ್ಲಿ ಅಪ್‌ ಲೋಡ್ ಮಾಡಲಾಗುತ್ತದೆ.
  • ಅಕ್ಸೆಸಿಬಲ್ ಚಲನಚಿತ್ರಗಳು - 54 ನೇ ಐ ಎಫ್‌ ಎಫ್‌ ಐ ನಲ್ಲಿ ವಿಶೇಷ ಚೇತನ ಪ್ರತಿನಿಧಿಗಳು ಎಲ್ಲಾ ಸ್ಕ್ರೀನಿಂಗ್ ಮತ್ತು ಇತರ ಸ್ಥಳಗಳನ್ನು ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು ಸೌಲಭ್ಯಗಳಿವೆ. ಉತ್ಸವವನ್ನು ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರವೇಶಿಸಬಹುದಾದ ಮಾರ್ಗವನ್ನಾಗಿ ಮಾಡುವುದು ಒಳಗೊಳ್ಳುವಿಕೆಯ ಕಡೆಗೆ ತೆಗೆದುಕೊಂಡ ಹೆಜ್ಜೆಯಾಗಿದೆ.
  • ವಿಶೇಷ ಚೇತನ ಪ್ರತಿನಿಧಿಗಳು
  • ದೃಷ್ಟಿಹೀನರಿಗಾಗಿ: ಎಂಬೆಡೆಡ್ ಆಡಿಯೊ ವಿವರಣೆಗಳೊಂದಿಗೆ ಚಲನಚಿತ್ರಗಳು - ಸಿರ್ಫ್ ಏಕ್ ಬಂದಾ ಕಾಫಿ ಹೈ ಮತ್ತು ಶೇರ ಶಾ
  • ಶ್ರವಣದೋಷವುಳ್ಳವರಿಗೆ: ಎಂಬೆಡೆಡ್ ಸಂಕೇತ ಭಾಷೆಯ ಚಲನಚಿತ್ರಗಳು - 83 ಮತ್ತು ಭಾಗ್ ಮಿಲ್ಕಾ ಭಾಗ್
  • ಬಹು ಭಾಷೆಯ ಡಬ್ಬಿಂಗ್ - ಅನೇಕ ಭಾರತೀಯ ಪನೋರಮಾ ಚಲನಚಿತ್ರಗಳು "ಸ್ಮಾರ್ಟ್‌ಫೋನ್ ಮತ್ತು ಇಯರ್‌ ಫೋನ್‌" ಬಳಸಿಕೊಂಡು ಆದ್ಯತೆಯ ಭಾಷೆಯಲ್ಲಿ ಡಬ್ಬಿಂಗ್ ಜೊತೆಗೆ ವೀಕ್ಷಿಸಲು ಲಭ್ಯವಿರುತ್ತವೆ. ಐ ಎಫ್‌ ಎಫ್‌ ಐ ಇದಕ್ಕಾಗಿ ‘ಸಿನೆಡಬ್ಸ್’ ಆ್ಯಪ್‌ ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗಿದೆ. ಥಿಯೇಟರ್‌ ನಲ್ಲಿ ಚಲನಚಿತ್ರವನ್ನು ಪ್ರದರ್ಶಿಸುವ ಭಾಷೆಯ ಹೊರತಾಗಿ ಹಲವಾರು ಡಬ್‌ ಗಳು ಅಪ್ಲಿಕೇಶನ್ ಮೂಲಕ ಲಭ್ಯವಿರುತ್ತವೆ.
  • ವಿವರಗಳನ್ನು ಐ ಎಫ್‌ ಎಫ್‌ ಐ ನ ಅಂತಾರಾಷ್ಟ್ರೀಯ ಕಾರ್ಯಕ್ರಮದಾದ್ಯಂತ 40 ಕ್ಕೂ ಹೆಚ್ಚು ಮಹಿಳಾ ಚಲನಚಿತ್ರ ನಿರ್ಮಾಪಕರ ಚಲನಚಿತ್ರಗಳು ಇವೆ.

7. ಮಾಸ್ಟರ್ ತರಗತಿಗಳು ಮತ್ತು ಸಂವಾದ ಅಧಿವೇಶನಗಳು - ಪ್ರಖ್ಯಾತ ಚಲನಚಿತ್ರ ನಿರ್ಮಾಪಕರು, ಛಾಯಾಗ್ರಾಹಕರು ಮತ್ತು ನಟರೊಂದಿಗೆ 20 ಕ್ಕೂ ಹೆಚ್ಚು ‘ಮಾಸ್ಟರ್‌ ಕ್ಲಾಸ್‌ಗಳು’ಮತ್ತು ‘ಸಂವಾದ’ಸೆಷನ್‌ಗಳೊಂದಿಗೆ, ಇದೊಂದು ಅತ್ಯಾಕರ್ಷಕ ವಾರವಾಗಲಿದೆ. ಗೋವಾದ ಪಣಜಿಯ ಫೆಸ್ಟಿವಲ್ ಮೈಲ್ ನಲ್ಲಿರುವ ನವೀಕರಿಸಿದ ಕಲಾ ಅಕಾಡೆಮಿಯಲ್ಲಿ ಇರುತ್ತದೆ. ಮೈಕೆಲ್ ಡಗ್ಲಾಸ್, ಬ್ರೆಂಡನ್ ಗಾಲ್ವಿನ್, ಬ್ರಿಲಾಂಟೆ ಮೆಂಡೋಜಾ, ಸನ್ನಿ ಡಿಯೋಲ್, ರಾಣಿ ಮುಖರ್ಜಿ, ವಿದ್ಯಾ ಬಾಲನ್, ಜಾನ್ ಗೋಲ್ಡ್ ವಾಟರ್, ವಿಜಯ್ ಸೇತುಪತಿ, ಸಾರಾ ಅಲಿ ಖಾನ್, ಪಂಕಜ್ ತ್ರಿಪಾಠಿ, ನವಾಜುದ್ದೀನ್ ಸಿದ್ಧಿಕಿ, ಕೇಕೇ ಮೆನನ್, ಕರಣ್ ಜೋಹರ್, ಮಧುರ್ ಭಂಡಾರ್ಕರ್, ಮನೋಜ್ ಬಾಜಪೇಯಿ, ಕಾರ್ತಿಕಿ ಗೋನ್ಸಾಲ್ವೇಸ್, ಬೋನಿ ಕಪೂರ್, ಅಲ್ಲು ಅರವಿಂದ್, ಥಿಯೋಡೋರ್ ಗ್ಲಕ್, ಗುಲ್ಶನ್ ಗ್ರೋವರ್ ಮತ್ತು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ತಾರೆಗಳನ್ನು ಒಳಗೊಂಡ ಪಟ್ಟಿಯು ಮುಂದುವರಿಯುತ್ತದೆ.

8. ಗಾಲಾ ಪ್ರೀಮಿಯರ್‌ಗಳು - ಕಳೆದ ವರ್ಷ ಪ್ರಾರಂಭವಾದ ಗಾಲಾ ಪ್ರೀಮಿಯರ್‌ ಗಳನ್ನು ವಿಸ್ತರಿಸಲಾಗುತ್ತಿದೆ. ಐ ಎಫ್‌ ಎಫ್‌ ಐ ನಲ್ಲಿನ ಪ್ರೀಮಿಯರ್‌ ಚಲನಚಿತ್ರಗಳ ನಟರು ಮತ್ತು ಪ್ರತಿಭೆಗಳು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು ಐ ಎಫ್‌ ಎಫ್‌ ಐ ರೆಡ್ ಕಾರ್ಪೆಟ್‌ ನಲ್ಲಿ ನಡೆಯುತ್ತಾರೆ.

9. ವರ್ಚುವಲ್ ಐ ಎಫ್‌ ಎಫ್‌ ಐ - ಮಾಸ್ಟರ್‌ ಕ್ಲಾಸ್‌ಗಳು, ಸಂವಾದ ಅವಧಿಗಳಲ್ಲಿ, ಪ್ಯಾನೆಲ್ ಚರ್ಚೆಗಳು ಮತ್ತು ಐ ಎಫ್‌ ಎಫ್‌ ಐ ನ 54 ನೇ ಆವೃತ್ತಿಯ ಆರಂಭಿಕ / ಮುಕ್ತಾಯ ಸಮಾರಂಭವನ್ನು ಬುಕ್ ಮೈ ಶೋ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ ನಲ್ಲಿ ನೋಂದಣಿ ಮಾಡಬಹುದು. ನೋಂದಣಿಯನ್ನು ನಾಮಮಾತ್ರದಲ್ಲಿ ಇರಿಸಲಾಗುವುದು.

10.   ಫಿಲ್ಮ್ ಬಜಾರ್: ಐ ಎಫ್‌ ಎಫ್‌ ಐ ಮೂಲಭೂತವಾಗಿ "ವಿಶ್ವ ಸಿನಿಮಾದ ಆಚರಣೆ" ಆಗಿದೆ. ಅದರೊಂದಿಗೆ, ಚಲನಚಿತ್ರ ಬಜಾರ್ ಅನ್ನು ಎನ್‌ ಎಫ್‌ ಡಿ ಸಿ "ಬಿಸಿನೆಸ್ ಆಫ್ ಸಿನೆಮಾ" ಗಾಗಿ ಆಯೋಜಿಸಿದೆ. ಐ ಎಫ್‌ ಎಫ್‌ ಐ ನ ಫಿಲ್ಮ್ ಬಜಾರ್ ದಕ್ಷಿಣ ಏಷ್ಯಾದ ಅತಿದೊಡ್ಡ ಜಾಗತಿಕ ಚಲನಚಿತ್ರ ಮಾರುಕಟ್ಟೆಯಾಗಿ ವಿಕಸನಗೊಂಡಿದೆ. ಇದು ಅಂತಾರಾಷ್ಟ್ರೀಯ ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು, ಮಾರಾಟ ಏಜೆಂಟ್ರು ಅಥವಾ ಉತ್ಸವದ ಪ್ರೋಗ್ರಾಮರ್‌ ಗಳಿಗೆ ಸಂಭಾವ್ಯ ಸೃಜನಶೀಲ ಮತ್ತು ಆರ್ಥಿಕ ಸಹಯೋಗಕ್ಕಾಗಿ ಪರಿಪೂರ್ಣ ಪೂರಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಈ "ಎನ್‌ ಏಫ್‌ ಡಿ ಸಿ ಫಿಲ್ಮ್ ಬಜಾರ್‌ ನ 17 ನೇ ಆವೃತ್ತಿ" ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.

  • ಫಿಲ್ಮ್ಸ್ ಬಜಾರ್‌ನಲ್ಲಿ ಪೆವಿಲಿಯನ್‌ ಗಳು ಮತ್ತು ಸ್ಟಾಲ್‌ಗಳು -

i.  ವಿ ಎಫ್‌ ಎಕ್ಸ್ ಮತ್ತು ಟೆಕ್ ಪೆವಿಲಿಯನ್ - ಹೊಸದಾಗಿ ರಚಿಸಲಾದ “ವಿ ಎಫ್‌ ಎಕ್ಸ್ ಮತ್ತು ಟೆಕ್ ಪೆವಿಲಿಯನ್” ಅನ್ನು ಫಿಲ್ಮ್ ಬಜಾರ್‌ ನೊಂದಿಗೆ ಸಂಯೋಜಿಸಲಾಗಿದೆ, ಇದನ್ನು ಸಮುದ್ರಕ್ಕೆ ಎದುರಾಗಿರುವ ಕಾಲುಹಾದಿಯ ಉದ್ದಕ್ಕೂ ಇರಿಸಲಾಗುತ್ತದೆ. ಇದು ಚಲನಚಿತ್ರ ತಯಾರಕರಿಗೆ ಇತ್ತೀಚಿನ ಆವಿಷ್ಕಾರಗಳ ಬಗ್ಗೆ ಅರಿವು ಮೂಡಿಸುತ್ತದೆ, ಕೇವಲ ಸಾಂಪ್ರದಾಯಿಕ ರೀತಿಯಲ್ಲಿ ಮಾತ್ರವಲ್ಲದೆ "ಟೇಕಿಂಗ್ ದಿ ಶಾಟ್" ಆದರೆ "ಶಾಟ್ ಅನ್ನು ರಚಿಸುವ" ಅನಂತ ಸಾಧ್ಯತೆಗಳೊಂದಿಗೆ ಕಥೆ ಹೇಳುವ ಸಾಧ್ಯತೆಗಳನ್ನು ಅನ್ವೇಷಿಸುತ್ತದೆ.

ii  ಅಂತಾರಾಷ್ಟ್ರೀಯ ಚಲನಚಿತ್ರ ಆಯೋಗಗಳು ಮತ್ತು ಭಾರತೀಯ ರಾಜ್ಯಗಳ ಹಲವಾರು  ಮಳಿಗೆಗಳು ತಮ್ಮ ಸ್ಥಳಗಳು ಮತ್ತು ಪ್ರೋತ್ಸಾಹಕ ಯೋಜನೆಗಳನ್ನು ಪ್ರಚಾರ ಮಾಡಲು ಇರುತ್ತವೆ.

iii  ಚಲನಚಿತ್ರ ಸಂಬಂಧಿತ ನಿರ್ಮಾಣಗಳ ಹಲವಾರು ಮಳಿಗೆಗಳು, ಸಂಸ್ಥೆಗಳು, ಸಂಘಗಳು, ಇತ್ಯಾದಿಗಳು ಇರುತ್ತವೆ.

  • ಸಾಕ್ಷ್ಯಚಿತ್ರ ಮತ್ತು ನಾನ್-ಫೀಚರ್ ಯೋಜನೆಗಳು/ಚಲನಚಿತ್ರಗಳ ಪರಿಚಯ
  • ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯ ಪ್ರಮುಖ ಅಂಶಗಳ ಜೊತೆಗೆ ಆಯ್ದ ಚಲನಚಿತ್ರ ನಿರ್ದೇಶಕರು, ದೇಶಗಳು ಮತ್ತು ರಾಜ್ಯಗಳಿಂದ ಪಿಚಿಂಗ್ ಸೆಷನ್‌ ಗಳನ್ನು ಸೇರಿಸಲು "ಜ್ಞಾನ ಸರಣಿ" ಅನ್ನು ಯೋಜಿಸಲಾಗಿದೆ.
  • ಕಳೆದ ವರ್ಷ ಪ್ರಾರಂಭವಾದ, 'ಬುಕ್ ಟು ಬಾಕ್ಸ್ ಆಫೀಸ್' ವಿಭಾಗವು 'ದಿ ಸ್ಟೋರಿ ಇಂಕ್' ನೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ, ಇದು ಸೃಜನಶೀಲ ಲೇಖಕರಿಗೆ ತಮ್ಮ ಕೃತಿಗಳನ್ನು ಸಲ್ಲಿಸಲು ವೇದಿಕೆಯನ್ನು ಒದಗಿಸುವುದು ಮತ್ತು ಈ ಕಥೆಗಳನ್ನು ನಿರ್ಮಾಪಕರು ಮತ್ತು ವೇದಿಕೆಯ ಮುಖ್ಯಸ್ಥರಿಗೆ ಪರಿಚಯಿಸುವುದು ಮುಖ್ಯ ಉದ್ದೇಶವಾಗಿದೆ.
  • ಒಟ್ಟಾರೆಯಾಗಿ, ನಿರ್ಮಾಣ, ವಿತರಣೆ ಅಥವಾ ಮಾರಾಟಕ್ಕಾಗಿ ಫಿಲ್ಮ್ ಬಜಾರ್‌ ನ 17 ನೇ ಆವೃತ್ತಿಯಲ್ಲಿ ಈ ವರ್ಷ 300 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಲನಚಿತ್ರ ಯೋಜನೆಗಳನ್ನು ರೂಪಿಸಲಾಗುತ್ತದೆ ಮತ್ತು ಪ್ರದರ್ಶಿಸಲಾಗುತ್ತದೆ.

6. 75 ನಾಳಿನ ಸೃಜನಶೀಲ ಮನಸ್ಸುಗಳು (CMOT): ಗೌರವಾನ್ವಿತ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರ ಸೃಜನಶೀಲತೆಯ ಕೂಸು, ಈ ಉಪಕ್ರಮವು ಚಲನಚಿತ್ರ ನಿರ್ಮಾಣದ ವಿವಿಧ ವಹಿವಾಟುಗಳ ಯುವ ಸೃಜನಶೀಲ ಪ್ರತಿಭೆಗಳನ್ನು ಗುರುತಿಸುವ, ಪ್ರೋತ್ಸಾಹಿಸುವ ಮತ್ತು ಪೋಷಿಸುವ ಗುರಿಯನ್ನು ಹೊಂದಿದೆ. Shorts TV ಪ್ರೋಗ್ರಾಮಿಂಗ್ ಪಾಲುದಾರರಾಗಿದ್ದು, ಇದು ಟಿವಿ, ಮೊಬೈಲ್, ಆನ್‌ಲೈನ್ ಮತ್ತು ಥಿಯೇಟರ್‌ಗಳಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಕಿರು ಚಲನಚಿತ್ರಗಳು ಮತ್ತು ಸರಣಿಗಳ ವಿಶ್ವದ ಅತಿದೊಡ್ಡ ಕ್ಯಾಟಲಾಗ್ ಆಗಿದೆ. ಈ ಆಯ್ದ 'ಸೃಜನಶೀಲ ಮನಸ್ಸು'ಗಳನ್ನು 'ಫಿಲ್ಮ್ ಚಾಲೆಂಜ್' ಗಾಗಿ ಪ್ರತಿಯೊಂದೂ 48 ಗಂಟೆಗಳಲ್ಲಿ ಕಿರುಚಿತ್ರ ಮಾಡಲು 5 ತಂಡಗಳಾಗಿ ವಿಂಗಡಿಸಲಾಗಿದೆ. ಈ ವರ್ಷ ಅಭ್ಯರ್ಥಿಗಳು ವೃತ್ತಿಪರ ತರಗತಿಗಳನ್ನು ವಿಶೇಷವಾಗಿ ಸಿನೆಮಾದ ಮಾಸ್ಟರ್‌ ಗಳಿಂದ ಪಡೆಯುತ್ತಾರೆ ಮತ್ತು ನೇಮಕಾತಿಗಾಗಿ "ಟ್ಯಾಲೆಂಟ್ ಕ್ಯಾಂಪ್" ಅನ್ನು 20 ಕ್ಕೂ ಹೆಚ್ಚು ಪ್ರಮುಖ ಕಂಪನಿಗಳೊಂದಿಗೆ ಆಯೋಜಿಸಲಾಗುತ್ತದೆ.

7. ಐ ಎಫ್‌ ಎಫ್‌ ಐ ಸಿನಿ-ಮೇಳ: ಐ ಎಫ್‌ ಎಫ್‌ ಐ ಕೇವಲ ಸಿನಿಮಾ ಶ್ರೇಷ್ಠತೆಯ ಪ್ರದರ್ಶನವಲ್ಲ, ಸಾಂಸ್ಕೃತಿಕ ವೈವಿಧ್ಯತೆಯ ಆಚರಣೆಯೂ ಆಗಿದೆ. ಈ ವರ್ಷ, ಐ ಎಫ್‌ ಎಫ್‌ ಐ ಸಿನಿ-ಮೇಳವು ಸಿನಿಮೀಯ ಉತ್ಸವಗಳಿಗೆ ಅದ್ಭುತವಾದ ಸೇರ್ಪಡೆಯಾಗಲಿದೆ, ಅಲ್ಲಿ ಐ ಎಫ್‌ ಎಫ್‌ ಐ ನಲ್ಲಿ ಪಾಲ್ಗೊಳ್ಳುವವರು ಮತ್ತು ಐ ಎಫ್‌ ಎಫ್‌ ಐ ಗೆ ನೋಂದಾಯಿಸದ ಸ್ಥಳೀಯರು ಮತ್ತು ಪ್ರವಾಸಿಗರು ಸಹ ಸಿನಿಮಾ, ಕಲೆ, ಸಂಸ್ಕೃತಿ, ಕುಶಲತೆಗಳ ಮಾಂತ್ರಿಕತೆಯನ್ನು ಆಚರಿಸುವ ರೋಮಾಂಚಕಾರಿ ಚಟುವಟಿಕೆಗಳನ್ನು ಆನಂದಿಸಬಹುದು

8. ಇತರ ಆಕರ್ಷಣೆಗಳು: ಓಪನ್ ಏರ್ ಸ್ಕ್ರೀನಿಂಗ್‌ ಗಳು, ಕಾರವಾನ್‌ ಗಳು, ಶಿಗ್ಮೋತ್ಸವ್, ಗೋವಾ ಕಾರ್ನೀವಲ್, ಸೆಲ್ಫಿ ಪಾಯಿಂಟ್‌ ಗಳು, ಐ ಎಫ್‌ ಎಫ್‌ ಐ ಉಡುಪುಗಳು ಇತ್ಯಾದಿಗಳು ಐ ಎಫ್‌ ಎಫ್‌ ಐ ಅನ್ನು ವಿಶ್ವದಲ್ಲಿ ಭಾರತದ ಅತಿದೊಡ್ಡ ಸಾಂಸ್ಕೃತಿಕ ಸಂಭ್ರಮದಲ್ಲಿ ಒಂದಾನ್ನಾಗಿಸುತ್ತದೆ.

9. ಉತ್ಸವದ ಸ್ಥಳಗಳ ಬ್ರ್ಯಾಂಡಿಂಗ್ ಮತ್ತು ಅಲಂಕಾರ – ಎನ್‌ ಎಫ್‌ ಡಿ ಸಿ ಮತ್ತು ಇ ಎಸ್‌ ಜಿ ಉತ್ಸವದ ಸ್ಥಳಗಳ ಸಂಪೂರ್ಣ ಅಲಂಕಾರ ಮತ್ತು ಬ್ರ್ಯಾಂಡಿಂಗ್‌ಗಾಗಿ ಎನ್‌ ಐ ಡಿ ಅಹಮದಾಬಾದ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿವೆ.

10. ಸೆಲೆಬ್ರೇಟಿಂಗ್ ಕಲ್ಚರ್ಸ್ ಆಫ್ ಇಂಡಿಯಾ (5 ದಿನಗಳು) - ಚಲನಚಿತ್ರ ಪ್ರದರ್ಶನ, ಗಾಲಾ ಪ್ರೀಮಿಯರ್‌ ಗಳು ಮತ್ತು ಅವರ ಪ್ರದೇಶಗಳ ಚಲನಚಿತ್ರ ಪ್ರತಿಭೆಗಳನ್ನು ಪ್ರದರ್ಶಿಸಲು ಭೇಟಿ ಮಾಡುವುದು.

  • 22ರಂದು: ಪೂರ್ವ: ಬೆಂಗಾಲಿ, ಒರಿಯಾ, ಅಸ್ಸಾಮಿ, ಮಣಿಪುರಿ ಮತ್ತು ಈಶಾನ್ಯ ಉಪಭಾಷೆಗಳು
  • 23 ರಂದು: ದಕ್ಷಿಣ 1: ತಮಿಳು ಮತ್ತು ಮಲಯಾಳಂ
  • 24 ರಂದು: ಉತ್ತರ: ಪಂಜಾಬಿ, ಡೋಗ್ರಿ, ಭೋಜ್‌ಪುರಿ, ರಾಜಸ್ಥಾನಿ, ಉರ್ದು, ಛತ್ತೀಸ್‌ಗಢಿ
  • 25 ರಂದು: ಪಶ್ಚಿಮ: ಕೊಂಕಣಿ, ಮರಾಠಿ, ಗುಜರಾತಿ
  • 26 ರಂದು: ದಕ್ಷಿಣ 2: ಕನ್ನಡ ಮತ್ತು ತೆಲುಗು

11.    ದೈನಂದಿನ ಪ್ರಕಟಣೆಗಳು ಮತ್ತು ಅಪ್‌ ಡೇಟ್‌ ಗಳನ್ನು ಐ ಎಫ್‌ ಎಫ್‌ ಐ ನ ಅಧಿಕೃತ ವೆಬ್‌ಸೈಟ್ https://iffigoa.org/ ನಲ್ಲಿ ನೋಡಬಹುದು.

12. ವಾರ್ತಾ ಮತ್ತು ಪ್ರಸಾರ ಸಚಿವಾಲಯ, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ ಎಫ್‌ ಡಿ ಸಿ) ಮೂಲಕ ಭಾರತ ಸರ್ಕಾರವು, ಗೋವಾ ರಾಜ್ಯ ಸರ್ಕಾರದೊಂದಿಗೆ ಜಂಟಿಯಾಗಿ ಅದರ ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾ (ESG) ಮೂಲಕ 54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು 20 ರಿಂದ 28 ನವೆಂಬರ್, 2023 ರವರೆಗೆ ಗೋವಾದಲ್ಲಿ ಆಯೋಜಿಸುತ್ತಿದೆ

13. ಐ ಎಫ್‌ ಎಫ್‌ ಐ ಪ್ರಪಂಚದ 14 ದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ 'ಅಂತಾರಾಷ್ಟ್ರೀಯ ಸ್ಪರ್ಧೆಯ ವೈಶಿಷ್ಟ್ಯ ಚಲನಚಿತ್ರೋತ್ಸವಗಳಲ್ಲಿ' ಒಂದಾಗಿದೆ, ಇದು ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಒಕ್ಕೂಟದ (FIAPF) ಮಾನ್ಯತೆ ಪಡೆದಿದೆ, ಇದು ಜಾಗತಿಕವಾಗಿ ಚಲನಚಿತ್ರೋತ್ಸವಗಳನ್ನು ನಿಯಂತ್ರಿಸುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಕಾನ್, ಬರ್ಲಿನ್ ಮತ್ತು ವೆನಿಸ್‌‌ ನಂತಹ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು ಈ ವರ್ಗದ ಅಡಿಯಲ್ಲಿ FIAPF ನಿಂದ ಮಾನ್ಯತೆ ಪಡೆದ ಇತರ ಪ್ರತಿಷ್ಠಿತ ಉತ್ಸವಗಳಾಗಿವೆ.

14. ವಾರ್ಷಿಕ ಸಿನಿಮಾ ಸಂಭ್ರಮಾಚರಣೆಯು ಭಾರತದ ಚಲನಚಿತ್ರೋದ್ಯಮ ಮತ್ತು ಪ್ರಪಂಚದಾದ್ಯಂತದ ಪ್ರತಿನಿಧಿಗಳು, ಅತಿಥಿಗಳು ಮತ್ತು ಭಾಷಣಕಾರರಾಗಿ ಅಲಂಕರಿಸುವ ಮೂಲಕ ವರ್ಷಗಳಿಂದ ವಿಶ್ವ ಮತ್ತು ಭಾರತೀಯ ಚಲನಚಿತ್ರಗಳಿಗೆ ಅತ್ಯುತ್ತಮ ನೆಲೆಯಾಗಿದೆ.

ಅನುಬಂಧ

54ನೇ ಐ ಎಫ್‌ ಎಫ್‌ ಐ 2023

ಚಲನಚಿತ್ರಗಳ ಪಟ್ಟಿ – ಸ್ಪರ್ಧೆಗಳು

 

ಅಂತಾರಾಷ್ಟ್ರೀಯ ಸ್ಪರ್ಧೆ (IC) - 15 ಚಲನಚಿತ್ರಗಳು

ಆಂಡ್ರಾಗೋಗಿ | ನಿರ್ದೇಶನ: ರೆಗಾಸ್ ಭಾನುತೇಜ | ಇಂಡೋನೇಷ್ಯಾ | 2023 | ಇಂಡೋನೇಷಿಯನ್ | 110'| IC

ಬ್ಲಾಗಾಸ್‌ ಲೆಸನ್ಸ್ | ನಿರ್ದೇಶನ: ಸ್ಟೀಫನ್ ಕೊಮಾಂಡರೇವ್ | ಬಲ್ಗೇರಿಯಾ, ಜರ್ಮನಿ | 2023 | ಬಲ್ಗೇರಿಯನ್ | 114' | IC

ಬೋಸ್ನಿಯನ್ ಪಾಟ್ | ನಿರ್ದೇಶನ: ಪಾವೊ ಮರಿಂಕೋವಿಕ್ | ಕ್ರೊಯೇಷಿಯಾ | 2023 | ಕ್ರೊಯೇಷಿಯನ್, ಜರ್ಮನ್ | 103' | IC

ಎಂಡ್‌ ಲೆಸ್‌ ಬಾರ್ಡರ್ಸ್‌ | ನಿರ್ದೇಶನ: ಅಬ್ಬಾಸ್ ಅಮಿನಿ | ಇರಾನ್, ಇಸ್ಲಾಮಿಕ್ ರಿಪಬ್ಲಿಕ್ ಆಫ್ | 2023 | ಪರ್ಷಿಯನ್ | 111' | IC

ಹಾಫ್‌ಮನ್‌ನ ಫೇರಿ ಟೇಲ್ಸ್ | ನಿರ್ದೇಶನ: ಟೀನಾ ಬರ್ಕಲಯ | ರಷ್ಯಾದ ಒಕ್ಕೂಟ | 2023 | ರಷ್ಯನ್ | 88' | IC

ಲುಬೊ | ನಿರ್ದೇಶನ: ಜಾರ್ಜಿಯೊ ದಿರಿಟ್ಟಿ | ಇಟಲಿ, ಸ್ವಿಜರ್ಲ್ಯಾಂಡ್ | 2023 | ಇಟಾಲಿಯನ್, ಸ್ವಿಸ್ ಜರ್ಮನ್, ಜೆನಿಶ್ | 181' | IC

ಮೆಷರ್ಸ್‌ ಆಫ್‌ ಮೆನ್ | ನಿರ್ದೇಶನ: ಲಾರ್ಸ್ ಕ್ರೌಮ್ | ಜರ್ಮನಿ | 2023 | ಜರ್ಮನ್ | 116' | IC

 

ಪಾರ್ಟಿ ಆಫ್‌ ಫೂಲ್ಸ್ | ನಿರ್ದೇಶಕ: ಅರ್ನಾಡ್ ಡೆಸ್ ಪಾಲಿಯೆರ್ಸ್ | ಫ್ರಾನ್ಸ್ | 2023 | ಫ್ರೆಂಚ್ | 122' | IC

ದ ಅದರ್‌ ವಿಡೊ | ನಿರ್ದೇಶನ: ಮಾ'ಅಯನ್ ರೈಪ್ | ಇಸ್ರೇಲ್ | 2022 | ಹೀಬ್ರೂ | 83' | IC

ವುಮಾನ್‌ ಆಫ್ | ನಿರ್ದೇಶನ: ಮಾಲ್ಗೊರ್ಜಾಟಾ ಸ್ಜುಮೊವ್ಸ್ಕಾ, ಮೈಕೆಲ್ ಎಂಗ್ಲರ್ಟ್ | ಪೋಲೆಂಡ್ | 2023 | ಪೋಲಿಷ್ | 132' | IC

ಅಸೋಗ್ | ನಿರ್ದೇಶನ: ಸೀನ್ ಡೆವ್ಲಿನ್ | ಕೆನಡಾ | 2023 | ಇತರೆ, ಟ್ಯಾಗಲೋಗ್ | 99' | IC

ಡೈ ಬಿಫೋರ್‌ ಡೆತ್‌ | ನಿರ್ದೇಶನ: ಅಹ್ಮದ್ ಇಮಾಮೊವಿಕ್ | ಬೋಸ್ನಿಯಾ ಮತ್ತು ಹರ್ಜೆಗೋವಿನಾ | 2023 | ಬೋಸ್ನಿಯನ್ | 94' | IC

ಕಾಂತಾರ | ನಿರ್ದೇಶನ: ರಿಷಬ್ ಶೆಟ್ಟಿ | ಭಾರತ | 2022 | ಕನ್ನಡ | 150‘ | IC

ಸನಾ | ನಿರ್ದೇಶನ: ಸುಧಾಂಶು ಸರಿಯಾ | ಭಾರತ | 2023 | ಹಿಂದಿ | 119’ | IC

ಮಿರ್ಬೀನ್ | ನಿರ್ದೇಶನ: ಮೃದುಲ್ ಗುಪ್ತಾ | ಭಾರತ | 2022 | ಕರ್ಬಿ | 89’ | IC

 

ನಿರ್ದೇಶಕರ ಚೊಚ್ಚಲ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ (BD) - 7 ಚಲನಚಿತ್ರಗಳು

ಆಲ್‌ಮೋಸ್ಟ್‌ ಎಂಟೈರ್ಲಿ ಅ ಸ್ಲೈಟ್‌ ಡಿಸಾಸ್ಟರ್‌ | ನಿರ್ದೇಶನ: ಉಮುತ್ ಸುಬಾಸಿ | ಟರ್ಕಿ | 2023 | ಇಂಗ್ಲೀಷ್, ಟರ್ಕಿಶ್ | 88' | BD

ಲೆಟ್‌ ಮಿ ಗೋ | ನಿರ್ದೇಶನ: ಮ್ಯಾಕ್ಸಿಮ್ ರಪ್ಪಾಜ್ | ಸ್ವಿಜರ್ಲ್ಯಾಂಡ್ | 2023 | ಫ್ರೆಂಚ್ | 92' | BD

ಒಕಾರಿನಾ | ನಿರ್ದೇಶನ: ಅಲ್ಬನ್ ಜೋಗ್ಜಾನಿ | ಅಲ್ಬೇನಿಯಾ | 2023 | ಅಲ್ಬೇನಿಯನ್, ಇಂಗ್ಲೀಷ್ | 92' | BD

ಸ್ಲೀಪ್ | ನಿರ್ದೇಶನ: ಜೇಸನ್ ಯು | ದಕ್ಷಿಣ ಕೊರಿಯಾ | 2023 | ಕೊರಿಯನ್ | 95' | BD

ವೆನ್‌ ದ ಸೀಡ್ಲಿಂಗ್ಸ್‌ ಗ್ರೋ | ನಿರ್ದೇಶನ: ರೇಗರ್ ಆಜಾದ್ ಕಾಯಾ | ಸಿರಿಯನ್ ಅರಬ್ ರಿಪಬ್ಲಿಕ್ | 2022 | ಅರೇಬಿಕ್, ಕುರ್ದಿಷ್ | 83' | BD

ಧೈ ಆಖರ್ | ನಿರ್ದೇಶನ: ಪರ್ವೀನ್ ಅರೋರಾ | ಭಾರತ | 2023 | ಹಿಂದಿ | 98 ' | BD

ಇರಟ್ಟ | ನಿರ್ದೇಶನ: ರೋಹಿತ್ ಎಂ.ಜಿ. ಕೃಷ್ಣನ್ | ಭಾರತ | 2023 | ಮಲಯಾಳಂ | 112 ' | BD

 

ಸಿ ಎಫ್ ಟಿ ಯುನೆಸ್ಕೋ ಗಾಂಧಿ ಪದಕ ಪ್ರಶಸ್ತಿ - 10 ಚಲನಚಿತ್ರಗಳು

ಎ ಹೌಸ್‌ ಇನ್‌ ಜೆರುಸಲೇಮ್ | ನಿರ್ದೇಶನ: ಮುಯಾದ್ ಅಲಯಾನ್ | ಪ್ಯಾಲೆಸ್ಟೈನ್, ಯುಕೆ, ಜರ್ಮನಿ, ನೆದರ್ಲ್ಯಾಂಡ್ಸ್, ಕತಾರ್ | 2022 | ಇಂಗ್ಲೀಷ್, ಅರೇಬಿಕ್, ಹೀಬ್ರೂ | 103' | ಐ ಸಿ ಎಫ್‌ ಟಿ ಯುನೆಸ್ಕೋ

ಸಿಟಿಜನ್‌ ಸೇಂಟ್ ದಿರ್: ಟಿನಾಟಿನ್ ಕಜ್ರಿಶ್ವಿಲಿ | ಜಾರ್ಜಿಯಾ | 2023 | ಜಾರ್ಜಿಯನ್ | 100' | ಐ ಸಿ ಎಫ್‌ ಟಿ ಯುನೆಸ್ಕೋ

ಡ್ರಿಫ್ಟ್ | ನಿರ್ದೇಶನ: ಆಂಥೋನಿ ಚೆನ್ | ಯುಕೆ, ಫ್ರಾನ್ಸ್, ಗ್ರೀಸ್ | 2023 | ಇಂಗ್ಲೀಷ್, ಗ್ರೀಕ್ | 93' | ಐ ಸಿ ಎಫ್‌ ಟಿ ಯುನೆಸ್ಕೋ

ಇಟ್ದಸ್ ಸಿರಾ | ನಿರ್ದೇಶನ: ಅಪೋಲಿನ್ ಟ್ರೊರೆ | ಬುರ್ಕಿನಾ ಫಾಸೊ, ಫ್ರಾನ್ಸ್, ಜರ್ಮನಿ, ಸೆನೆಗಲ್ | 2023 | ಫ್ರೆಂಚ್, ಫುಲಾ | 122' | ಐ ಸಿ ಎಫ್‌ ಟಿ ಯುನೆಸ್ಕೋ

ಕಳೆವ್ | ನಿರ್ದೇಶನ: ಓವ್ ಮಸ್ಟಿಂಗ್ | ಎಸ್ಟೋನಿಯಾ | 2022 | ಎಸ್ಟೋನಿಯನ್, ರಷ್ಯನ್ | 94' | ಐ ಸಿ ಎಫ್‌ ಟಿ ಯುನೆಸ್ಕೋ

ದ ಪ್ರೈಜ್! | ನಿರ್ದೇಶನ: ಪಾಲ್ ಫೌಜಾನ್ ಅಗಸ್ಟಾ | ಇಂಡೋನೇಷ್ಯಾ | 2022 | ಇಂಡೋನೇಷಿಯನ್ | 96' | ಐ ಸಿ ಎಫ್‌ ಟಿ ಯುನೆಸ್ಕೋ

ದ ಶುಗರ್‌ ಎಕ್ಸ್ಪೀರಿಮೆಂಟ್ | ನಿರ್ದೇಶನ: ಜಾನ್ ಟೋರ್ನ್ಬ್ಲಾಡ್ | ಸ್ವೀಡನ್ | 2022 | ಸ್ವೀಡಿಷ್ | 91' | ಐ ಸಿ ಎಫ್‌ ಟಿ ಯುನೆಸ್ಕೋ

ಮಂಡಲಳಿ | ನಿರ್ದೇಶನ: ರಾಕೇಶ್ ಚತುರ್ವೇದಿ ಓಂ | ಭಾರತ | 2023 | ಹಿಂದಿ | 118' | ICFT UNESCO

ಮಲಿಕಾಪುರಂ | ನಿರ್ದೇಶನ: ವಿಷ್ಣು ಶಶಿ ಶಂಕರ್ | ಭಾರತ | 2022 | ಮಲಯಾಳಂ | 121' | ICFT UNESCO

ರವೀಂದ್ರ ಕಬ್ಯ ರಹಸ್ಯ | ನಿರ್ದೇಶನ: ಸಯಂತನ್ ಘೋಸನ್ | ಭಾರತ | 2023 | ಬೆಂಗಾಲಿ | 115' | ICFT UNESCO

 

***

 



(Release ID: 1975078) Visitor Counter : 156