ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
azadi ka amrit mahotsav

​​​​​​​ವರ್ಲ್ಡ್‌ ಫುಡ್‌ ಇಂಡಿಯಾ – 2023 ಉದ್ಯಮದ ಸಹಯೋಗ ಮತ್ತು ಹೂಡಿಕೆಗೆ ಉತ್ತೇಜನ – ಒಂದು ಅದ್ಭುತ ಯಶಸ್ಸು 

Posted On: 06 NOV 2023 2:41PM by PIB Bengaluru

ದೆಹಲಿಯ ಪ್ರಗತಿ ಮೈದಾನದ ಭಾರತ್‌ ಮಂಟಪಂನಲ್ಲಿ ಆಹಾರ ಸಂಸ್ಕರಣಾ ಸಚಿವಾಲಯ ಆಯೋಜಿಸಿದ್ದ ವರ್ಲ್ಡ್‌ ಫುಡ್‌ ಇಂಡಿಯಾ – 2023 ನವೆಂಬರ್‌ 5 ರಂದು ಸಂಪನ್ನಗೊಂಡಿದ್ದು, ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಪಸ್ಥಿತಿ ಸಮಾವೇಶಕ್ಕೆ ಭೂಷಣವಾಗಿತ್ತು. ಭಾರತದ ರೋಚಕ ಪಾರಂಪರಿಕ ಪಾಕಶಾಲೆಯನ್ನು ಪ್ರದರ್ಶಿಸುವಲ್ಲಿ ಮತ್ತು ವಿವಿಧ ಕೈಗಾರಿಕೆಗಳ ನಡುವೆ ದೃಢವಾದ ಪಾಲುದಾರಿಕೆ ಏರ್ಪಡಿಸುವ ಬೆಳವಣಿಗೆಗೆ ರಾಷ್ಟ್ರಪತಿಯವರು ಸಾಕ್ಷಿಯಾಗಿದರು ಮತ್ತು ಸಮಾರೋಪ ಸಮಾರಂಭ ಅದ್ಭುತ ಯಶಸ್ಸಿಗೆ ಕಾರಣವಾಯಿತು. ಜಾಗತಿಕ ಪಾಕಶಾಲೆಯಾಗಿ ದೇಶದ ಸಾಮರ್ಥ್ಯ ಮತ್ತು ಜಾಗತಿಕ ಹಸಿವು ಎದುರಿಸಲು ಆಹಾರ ಪೂರೈಕೆಯ ಪ್ರಾಮುಖ್ಯತೆಯನ್ನು ರಾಷ್ಟ್ರಪತಿಯವರು ಒತ್ತಿ ಹೇಳಿದರು.    

ನವೆಂಬರ್‌ 3 ರಂದು ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿ, ಒಂದು ಲಕ್ಷಕ್ಕೂ ಅಧಿಕ ಸ್ವಸಹಾಯ ಗುಂಪುಗಳಿಗೆ ಮೂಲ ಬಂಡವಾಳದ ನೆರವು ವಿತರಿಸಿದರು. ಭಾರತ “ಜಗತ್ತಿನ ಆಹಾರ ಕಣಜ” ಎಂದು ನಿರೂಪಿಸುವಲ್ಲಿ ಈ ಕಾರ್ಯಕ್ರಮದ ಪಾತ್ರವನ್ನು ಅವರು ಒತ್ತಿ ಹೇಳಿದರು ಮತ್ತು 2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಆಚರಿಸುತ್ತಿರುವುದನ್ನು ಸ್ಮರಿಸಿಕೊಂಡರು. ತಂತ್ರಜ್ಞಾನ ಮತ್ತು ನವೋದ್ಯಮ ಆವರಣ ಹಾಗೂ ಆಹಾರ ಬೀದಿಯಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಇವು ಭಾರತದ ಆರ್ಥಿಕತೆಗೆ ಸ್ಪಷ್ಟ ಸ್ವರೂಪ ನೀಡಲಿದೆ ಎಂದು ಹೇಳಿದರು. ಆಹಾರ ಸಂಸ್ಕರಣಾ ವಲಯ “ಉದಯೋನ್ಮುಖ ಕ್ಷೇತ್ರ” ಎಂದು ಮಾನ್ಯತೆ ನೀಡಲಾಗಿದ್ದು, ಕಳೆದ ೯ ವರ್ಷಗಳಲ್ಲಿ 50,000 ಕೋಟಿ ರೂಪಾಯಿ ವಿದೇಶಿ ನೇರ ಬಂಡವಾಳವನ್ನು ದೇಶ ಆಕರ್ಷಿಸಿದೆ. ಸಬ್ಸಿಡಿ ಸಂಪರ್ಕಿತ ಪ್ರೋತ್ಸಾಹ – ಪಿ.ಎಲ್.ಐ ಯೋಜನೆ ಬಗ್ಗೆ ಒತ್ತಿ ಹೇಳಿದ ಅವರು, ಕೃಷಿ ಮೂಲಸೌಕರ್ಯ ನಿಧಿ, ಮೀನುಗಾರಿಕೆ ಮತ್ತು ಪಶು ಸಂಗೋಪನಾ ವಲಯದಲ್ಲಿ ಸಂಸ್ಕರಣೆಗಾಗಿ ಮೂಲ ಸೌಕರ್ಯ ಕಲ್ಪಿಸಲು ಸಹಸ್ರಾರು ಕೋಟಿ ರೂಪಾಯಿ ಹೂಡಿಕೆಯಾಗಿರುವುದನ್ನು ಒತ್ತಿ ಹೇಳಿದರು. 

ಭಾರತ ಸರ್ಕಾರದ ಹತ್ತು ಸಚಿವಾಲಯಗಳು/ಇಲಾಖೆಯ ಬೆಂಬಲದೊಂದಿಗೆ ಅತಿ ದೊಡ್ಡ ಆಹಾರ ಮೇಳ ಆಯೋಜಿಸಿದ್ದು, ಆರು ಸರಕು ಮಂಡಳಿಗಳು, 25 ರಾಜ್ಯಗಳು ಗಣನೀಯವಾಗಿ ಜಾಗತಿಕ ಮತ್ತು ದೇಶೀಯ ಪಾಲುದಾರರ ಗಮನ ಸೆಳೆದವು. ಈ ಕಾರ್ಯಕ್ರಮದಲ್ಲಿ 1208 ಪ್ರದರ್ಶನಕಾರರು, 14 ದೇಶಗಳ ವೇದಿಕೆಗಳು ಮತ್ತು 715 ಅಂತರರಾಷ್ಟ್ರೀಯ ಖರೀದಿದಾರರು, 218 ದೇಶೀಯ ಖರೀದಿದಾರರು ಮತ್ತು 97 ಕಾರ್ಪೋರೇಟ್‌ ವಲಯದ ನಾಯಕರು ಭಾಗವಹಿಸಿದ್ದರು. 5೦,೦೦೦ ಚದರ ಮೀಟರ್‌ ಪ್ರದೇಶದ ಆವರಣಗಳಲ್ಲಿ ಅತ್ಯಾಧುನಿಕ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಾಮರ್ಥ್ಯವನ್ನು ಪ್ರದರ್ಶಿಸಲಾಗಿತ್ತು. 14 ದೇಶಗಳ ಪ್ರತಿನಿಧಿಗಳು, ಏಳು ಸಚಿವಾಲಯಗಳ ಪ್ರತಿನಿಧಿಗಳು ಸಹ ಭಾಗಿಯಾಗಿದ್ದರು. ನೆದರ್‌ ಲ್ಯಾಂಡ್ಸ್‌ ಪಾಲುದಾರ ದೇಶವಾಗಿ ಮತ್ತು ಜಪಾನ್‌ ಕೇಂದ್ರೀಕೃತ ದೇಶವಾಗಿ ವಿಶೇಷವಾಗಿ ಪಾಲ್ಗೊಳ್ಳುವ ಮೂಲಕ ಈ ಕಾರ್ಯಕ್ರಮ ಜಾಗತಿಕವಾಗಿ ಪಾಲ್ಗೊಳ್ಳುವಿಕೆ ಮತ್ತಷ್ಟು ಬಲಗೊಳ್ಳುವಂತೆ ಮಾಡಿತು.   

ಸಿಇಒ ದುಂಡು ಮೇಜಿನ ಸಭೆಯ ಆರಂಭದ ದಿನದಂದು ವರ್ಲ್ಡ್‌ ಫುಡ್‌ ಇಂಡಿಯಾ – ೨೦೨೩ ರಲ್ಲಿ ಸಹ ಅಧ್ಯಕ್ಷತೆಯನ್ನು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದಿಂದ ಸಚಿವ ಶ್ರೀ ಪಶುಪತಿ ಕುಮಾರ್‌ ಪರಾಸ್‌ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದಿಂದ ಸಚಿವ ಶ್ರೀ ಪಿಯೂಶ್‌ ಗೋಯಲ್‌ ವಹಿಸಿಕೊಂಡಿದ್ದರು. ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ವಲಯದ 7೦ ಕ್ಕೂ ಅಧಿಕ ಸಿಇಒಗಳ ಗಣನೀಯ ಉಪಸ್ಥಿತಿಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು. ದುಂಡು ಮೇಜಿನ ಸಭೆಯ ಪ್ರಮುಖ ಚರ್ಚೆಗಳು, ವ್ಯಾಪಾರ ಕಾರ್ಯಾಚರಣೆಗಳು, ಹೂಡಿಕೆ ತಂತ್ರಗಳು, ಮೂಲ ಆಸಕ್ತಿ ವಿಷಯಗಳು, ಭಾರತೀಯ ಆಹಾರ ಸಂಸ್ಕರಣಾ ಕ್ಷೇತ್ರದ ಮೌಲ್ಯ ಸರಪಳಿಯಲ್ಲಿ ಅಸ್ಥಿತ್ವದಲ್ಲಿರುವ ಅಂತರಗಳ ಸಮಗ್ರ ಪರೀಕ್ಷೆಯನ್ನು ಇದು ಒಳಗೊಂಡಿತ್ತು.   

ಆರು ಜಿ20 ಸಭೆಗಳಲ್ಲಿ ಸಚಿವ ಶ್ರೀ ಪಶುಪತಿ ಕುಮಾರ್‌ ಪರಾಸ್‌ ಅವರು ಭಾಗವಹಿಸಿದ್ದರು. ಅವರು ಫಿಜಿ, ಮಾರಿಷಸ್‌ ನೊಂದಿಗೆ ಆಹಾರ ಸಂಸ್ಕರಣೆಯಲ್ಲಿ ಜಾಗತಿಕ ಸಹಭಾಗಿತ್ವ ಕುರಿತು ಚರ್ಚಿಸಿದರು. ಇದೇ ಸಂದರ್ಭದಲ್ಲಿ ಅವರು ಗ್ರೀಸ್‌ ಮತ್ತು ಲೆಬೆನಾನ್‌ ನ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದು, ಅಂತರರಾಷ್ಟ್ರೀಯ ಸಹಕಾರ ಕುರಿತ ಕಾರ್ಯಕ್ರಮದ ಬದ್ಧತೆ ಬಗ್ಗೆ ಈ ಸಂದರ್ಭದಲ್ಲಿ ಬೆಳಕು ಚೆಲ್ಲಿದರು. ಕೃಷಿ ಕೈಗಾರಿಕೆ ಮತ್ತು ಆಹಾರ ಭದ್ರತೆ ಕುರಿತು ಮಾರಿಷಸ್‌ ಮತ್ತು ಆಸ್ಟ್ರೇಲಿಯಾ ಸಂಸತ್‌ ಸದಸ್ಯರೊಂದಿಗೆ ಚರ್ಚಿಸಿದ್ದು, ಕಾರ್ಯಕ್ರಮ ಜ್ಞಾನ ಹಂಚಿಕೆ ಮತ್ತು ಅಂತರರಾಷ್ಟ್ರೀಯ ಒಡಂಬಡಿಕೆಗೆ ಸಾಕ್ಷಿಯಾಯಿತು.    

ಮೂರು ದಿನಗಳ ಕಾರ್ಯಕ್ರಮ 48 ಅಧಿವೇಶನಗಳನ್ನು ಒಳಗೊಂಡಿದ್ದು, ವಿಷಯಾಧಾರಿತ ಚರ್ಚೆಗಳಲ್ಲಿ ಸಂಬಂಧಿತ ಸಚಿವಾಲಗಳು, ರಾಜ್ಯಗಳು, ದೇಶಗಳು ಮತ್ತು ಸಂಘಟನೆಗಳು ಭಾಗಿಯಾಗಿದ್ದವು. ಹಣಕಾಸು ಸಬಲೀಕರಣ, ಗುಣಮಟ್ಟದ ಖಾತರಿ, ಯಂತ್ರಗಳು ಮತ್ತು ತಂತ್ರಜ್ಞಾನದಲ್ಲಿ ನಾವೀನ್ಯತೆ, ಇ-ವಾಣಿಜ್ಯ ಮತ್ತು ಆಹಾರ ಸಂಸ್ಕರಣೆಯಲ್ಲಿ ಸಾಗಾಣೆ ವ್ಯವಸ್ಥೆ ಒಳಗೊಂಡಂತೆ ನಿರ್ಣಾಯಕವಾದ ೧೬ ವಿಷಯಾಧಾರಿತ ಅಧಿವೇಶಗಳು ನಡೆದವು. ಹೆಚ್ಚಿನದಾಗಿ 12 ರಾಜ್ಯ ಕೇಂದ್ರಿತ ವಿಚಾರಗೋಷ್ಠಿಗಳು ಮತ್ತು 11 ಡಿಪಿಐಐಟಿ ಮತ್ತು ಎಫ್.ಎಸ್.ಎಸ್.ಎ.ಐ ನಿಂದ ಸಂಬಂಧಪಟ್ಟ ಸಚಿವಾಲಯಗಳನ್ನು ಒಳಗೊಂಡಂತೆ ಎದುರಾಗಬಹುದಾದ ಸವಾಲುಗಳ ಕುರಿತ ಅಧಿವೇಶನಗಳು ನಡೆದವು. ಗುಜರಾತ್‌, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸಚಿವರ ಉಪಸ್ಥಿತಿಯಲ್ಲಿ ಅಧಿವೇಶನಗಳು ನಡೆದವು. ನೆದರ್‌ ಲ್ಯಾಂಡ್ಸ್‌ ಮತ್ತು ಜಪಾನ್‌ ನಿಂದ ಜ್ಞಾನಾಧಾರಿತ ಅಧಿವೇಶನಗಳನ್ನು ಆಯೋಜಿಸಲಾಗಿದ್ದು, ಜ್ಞಾನ ಹಂಚಿಕೆ ಮತ್ತು ಉತ್ತಮ ಅಭ್ಯಾಸಗಳನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ನೆದರ್‌ ಲ್ಯಾಂಡ್ಸ್‌, ಅಮೆರಿಕ – ಭಾರತ ಕಾರ್ಯತಂತ್ರ ಸಹಭಾಗಿತ್ವ ಒಕ್ಕೂಟ, ಬ್ರಿಜಿಲ್‌ ಮತ್ತು ಸಂಯುಕ್ತ ಅರಬ್‌ ಒಕ್ಕೂಟವನ್ನೊಳಗೊಂಡಂತೆ ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯ ಅವಕಾಶಗಳ ಕುರಿತು ಚರ್ಚಿಸಲಾಯಿತು.   

ತಂತ್ರಜ್ಞಾನ ಮತ್ತು ಸುಸ್ಥಿರ ವೇದಿಕೆ ಕಾರ್ಯಕ್ರಮದ ಪ್ರಮುಖ ಕೇಂದ್ರ ಬಿಂದುವಾಗಿತ್ತು. ಆಹಾರ ಸಂಸ್ಕರಣಾ ಕೈಗಾರಿಕಾ ವಲಯದಲ್ಲಿ ನಾವೀನ್ಯತೆಗಳು, ಪರಿಸರ ಸ್ನೇಹಿ ಮತ್ತು ಆಹಾರೋತ್ಪಾದನೆಯಲ್ಲಿ ಪುಟಿದೇಳುವ ಅಭ್ಯಾಸಗಳು ಕುರಿತು ಬೆಳಕು ಚೆಲ್ಲಲಾಯಿತು. ಪ್ರಸಿದ್ಧ ಬಾಣಸಿಗ ರಣವೀರ್‌ ಬ್ರಾರ್‌ ಅವರಿಂದ ಆಹಾರ ಬೀದಿಯನ್ನು ವಿನ್ಯಾಸಗೊಳಿಸಲಾಗಿತ್ತು. ಇದು ಭಾರತದ ಶ್ರೀಮಂತ ಪಾಕಶಾಲೆಯ ಪರಂಪರೆ ಮತ್ತು ವೈವಿಧ್ಯಮಯ ಪ್ರಾದೇಶಿಕ ಪಾಕ ಪದ್ಧತಿಗಳ ಅನುಭವ ನೀಡುವ ಸಂತಸದಾಯಕ ಆಕರ್ಷಣೆಯಾಗಿತ್ತು. ಚೆಫ್‌ ಸರಹ್‌ ಮತ್ತು ಚೆಫ್‌ ಕುನಾಲ್‌ ಕಪೂರ್‌ ಒಳಗೊಂಡಂತೆ 200 ಕ್ಕೂ ಅಧಿಕ ಪಾಕ ಪ್ರವೀಣರು ಭಾಗವಹಿಸಿದ್ದರು. ಇವರು ಅಡುಗೆ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಐಸಿಸಿ23, ಅಂತರರಾಷ್ಟ್ರೀಯ ಪಾಕಶಾಲೆಯ ಸ್ಪರ್ಧೆ, ಪೂರ್ವ ಸಿರಿಧಾನ್ಯಗಳ ಭಕ್ಷ್ಯಗಳು, ಲೈವ್‌ ಪಾಸ್ಟಾದಂತಹ ಅಡುಗೆ, ಮಾಸ್ಟರ್‌ ಕ್ಲಾಸ್‌ ಗಳು, ಪ್ರಶಸ್ತಿ ಪ್ರಧಾನ ಸಮಾರಂಭದೊಂದಿಗೆ ಕಾರ್ಯಕ್ರಮ ಶ್ರೇಷ್ಠತೆಗೆ ಕಾರಣವಾಯಿತು.

ಕಾರ್ಯಕ್ರಮದಲ್ಲಿ 33,129 ಕೋಟಿ ರೂಪಾಯಿ ಗಣನೀಯ ಪ್ರಮಾಣದ ಹೂಡಿಕೆ, ಪ್ರಮುಖ ತಿಳಿವಳಿಕೆ ಪತ್ರಗಳಿಗೆ [ಎಂಒಯುಗಳು] ಸಹಿಹಾಕುವ ಮೂಲಕ ಭಾರತದ ಆಹಾರ ಸಂಸ್ಕರಣಾ ಉದ್ಯಮವನ್ನು ಮುನ್ನಡೆಸುವ ಗಮನಾರ್ಹವಾದ ಪರಿಣಾಮಕ್ಕೆ ಸಾಕ್ಷಿಯಾಯಿತು. ಅಮುಲ್‌, ಐಟಿಸಿ, ಮೊಂಡೆಲೆಝ್‌, ಕೊಲ್ಲೊಗ್ಗ್ಸ್‌, ಎಬಿ ಇನ್‌ ಬೇವ್‌, ಐಬಿ ಗ್ರೂಪ್‌, ಬಾಲಾಜಿ ವೆಲ್ಫೇರ್‌, ಅನುರಾಧ ಡೈರಿ, ಫೆರ್ಟೀಸ್‌ ಮತ್ತು ಬಿಕನೆರ್ವಾಲ ಮತ್ತಿತರೆ ಕಂಪೆನಿಗಳು ಒಡಂಬಡಿಕೆಗೆ ಸಹಿಹಾಕಿದವು. 15200 ಕ್ಕೂ ಅಧಿಕ ಬಿ2ಬಿ ಮತ್ತು ಬಿ2ಜಿ ಸಭೆಗಳು ನಡೆದಿದ್ದು, ಈ ಸಂದರ್ಭದಲ್ಲಿ ಅರ್ಥಪೂರ್ಣ ಚರ್ಚೆ, ಪಾಲ್ಗೊಳ್ಳುವಿಕೆ, ಜ್ಞಾನ ವಿನಿಮಯ ಮತ್ತು ಉದ್ಯಮದ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿತು.

*****

 


(Release ID: 1975070) Visitor Counter : 127