ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಈರುಳ್ಳಿ ಪ್ರತಿ ಕೆಜಿಗೆ ರೂ.25ಯಂತೆ ಎನ್.ಸಿ.ಸಿ.ಎಫ್, ಎನ್.ಎ.ಎಫ್.ಇ.ಡಿ, ಕೇಂದ್ರೀಯ ಭಂಡಾರ್ ಮತ್ತು ರಾಜ್ಯ ಸಹಕಾರಿ ಸಂಸ್ಥೆಗಳ ಮೂಲಕ ತೀವ್ರಗತಿಯಲ್ಲಿ ವಿಲೇವಾರಿಗೆ ವ್ಯವಸ್ಥೆ ಮಾಡಿದ ಕೇಂದ್ರ ಸರ್ಕಾರ


ಇ-ಮಾರಾಟ, ಇ-ನಾಮ್ ಹರಾಜು ಮತ್ತು ಬೃಹತ್ ಮಾರಾಟದ ಮೂಲಕ ವಿಲೇವಾರಿ ಮಾಡಲು 5.06 ಎಲ್.ಎಂ.ಟಿ.ಯಷ್ಟು ಈರುಳ್ಳಿಯನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಸಂಗ್ರಹಿಸಿದೆ

Posted On: 04 NOV 2023 2:04PM by PIB Bengaluru

ಖಾರಿಫ್ ಬೆಳೆಯ ಆಗಮನದ ವಿಳಂಬದಿಂದಾಗಿ ಈರುಳ್ಳಿ ಬೆಲೆಯಲ್ಲಿ ಇತ್ತೀಚಿನ ಸಂಭವಿಸಿದ ಏರಿಕೆಯಿಂದ ಗ್ರಾಹಕರನ್ನು ರಕ್ಷಿಸಲು ಕೇಂದ್ರ ಸರ್ಕಾರವು ಪ್ರತಿ ಕೆಜಿಗೆ ರೂ.25 ರ ಸಬ್ಸಿಡಿ ದರದಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟ ಮಾಡುವ ವ್ಯವಸ್ಥೆಯನ್ನು ತೀವ್ರಗತಿಯಲ್ಲಿ ಪ್ರಾರಂಭಿಸಿದೆ. ದೇಶೀಯ ಗ್ರಾಹಕರಿಗೆ ಈರುಳ್ಳಿಯ ಲಭ್ಯತೆ ಮತ್ತು ಕೈಗೆಟುಕುವಿಕೆಯ ಬೆಲೆಯನ್ನು ಖಚಿತಪಡಿಸಿಕೊಳ್ಳಲು, ರೈತರ ಹಿತ ಕಾಪಾಡಲು, 29 ಅಕ್ಟೋಬರ್, 2023 ರಿಂದ ಜಾರಿಗೆ ಬರುವಂತೆ, ರಫ್ತು ಮಾಡಲು ಪ್ರತಿ ಎಂ.ಟಿ. ಗೆ 800 ಯು.ಎಸ್. ಡಾಲರ್ ಬೆಲೆಯನ್ನು ಕನಿಷ್ಠ ರಫ್ತು ಬೆಲೆ (ಎಂ.ಇ.ಪಿ)  ವಿಧಿಸುವಿಕೆಯಂತಹ ನಿಯಮ ಜಾರಿಗೆ ತರಲಾದ  ನಂತರ, ಅವುಗಳ  ಜೊತೆಗೆ ಇದು ಮತ್ತೊಂದು ಉಪಕ್ರಮವಾಗಿದೆ.

ಚಿಲ್ಲರೆ ಮಾರಾಟ, ಇ-ನಾಮ್ ಹರಾಜು ಮತ್ತು ಸಗಟು ಮಾರುಕಟ್ಟೆಗಳಲ್ಲಿ ಆಗಸ್ಟ್, 2023 ಎರಡನೇ ವಾರದಿಂದ ಈರುಳ್ಳಿಯ ನಿರಂತರ ಸಂಗ್ರಹಣೆ ಕಾರ್ಯ ನಡೆಯುತ್ತಿದ್ದು,  2 ಲಕ್ಷ ಟನ್ ಗಳಷ್ಟು ಹೆಚ್ಚುವರಿ ಈರುಳ್ಳಿಯನ್ನು ಸಂಗ್ರಹಣೆ ಗುರಿಹೊತ್ತಿದ್ದು, ಈಗಾಗಲೇ 5.06 ಲಕ್ಷ ಟನ್ ಗಳಿಗಿಂತ ಹೆಚ್ಚು ಈರುಳ್ಳಿಯನ್ನು ಸಂಗ್ರಹಿಸಲಾಗಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಈರುಳ್ಳಿಯ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಎನ್.ಸಿ.ಸಿ.ಎಫ್, ಎನ್.ಎ.ಎಫ್.ಇ.ಡಿ, ಕೇಂದ್ರೀಯ ಭಂಡಾರ್ ಮತ್ತು ಇತರ ರಾಜ್ಯ ನಿಯಂತ್ರಿತ ಸಹಕಾರಿ ಸಂಸ್ಥೆಗಳ ಮೂಲಕ  ನಿರ್ವಹಿಸಲ್ಪಡುವ ಮೊಬೈಲ್ ವ್ಯಾನ್ ಗಳ ಮೂಲಕ ಪ್ರತಿ ಕೆಜಿಗೆ ರೂ.25 ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ವಿಲೇವಾರಿ ಮಾಡಲು ತೀವ್ರಗತಿಯಲ್ಲಿ ವ್ಯವಸ್ಥೆಗಳನ್ನು ಪ್ರಾರಂಭಿಸಿದೆ. 

ನವೆಂಬರ್ 2 ರವರೆಗೆ, ಎನ್.ಎ.ಎಫ್.ಇ.ಡಿ (ನಫೀಡ್) 21 ರಾಜ್ಯಗಳಾದ್ಯಂತ 55 ನಗರಗಳಲ್ಲಿ ಸ್ಥಾಯಿ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್ ಗಳನ್ನು ಒಳಗೊಂಡಿರುವ 329 ರಿಟೇಲ್ ಕೇಂದ್ರಗಳನ್ನು ಸ್ಥಾಪಿಸಿದೆ. ಅದೇ ರೀತಿ, ಎನ್.ಸಿ.ಸಿ.ಎಫ್ 20 ರಾಜ್ಯಗಳಾದ್ಯಂತ 54 ನಗರಗಳಲ್ಲಿ 457 ರಿಟೇಲ್ ಕೇಂದ್ರಗಳನ್ನು ಸ್ಥಾಪಿಸಿದೆ. ಕೇಂದ್ರೀಯ ಭಂಡಾರ್ ಕೂಡ 2023 ರ ನವೆಂಬರ್ 3 ರಿಂದ ದೆಹಲಿ-ಎನ್.ಸಿ.ಆರ್. ಪ್ರದೇಶಾದ್ಯಂತ ತನ್ನ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಈರುಳ್ಳಿಯ ಚಿಲ್ಲರೆ ಪೂರೈಕೆಯನ್ನು ಪ್ರಾರಂಭಿಸಿದೆ ಮತ್ತು ಸಫಲ್ ಮದರ್ ಡೈರಿಯಲ್ಲಿ ಈ ವಾರಾಂತ್ಯದಿಂದ ಈರುಳ್ಳಿಯ ಚಿಲ್ಲರೆ ಮಾರಾಟ ಪ್ರಾರಂಭವಾಗುತ್ತದೆ. ತೆಲಂಗಾಣ ಹಾಗೂ ದಕ್ಷಿಣದ ಇತರ ರಾಜ್ಯಗಳಲ್ಲಿ ಗ್ರಾಹಕರಿಗಾಗಿ ಸಬ್ಸಿಡಿ ದರದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟವನ್ನು ಹೈದರಾಬಾದ್ ಕೃಷಿ ಸಹಕಾರ ಸಂಘ (ಹೆಚ್.ಎ.ಸಿ.ಎ.) ಮಾಡಲಿದೆ.

ರಬಿ ಮತ್ತು ಖಾರಿಫ್ ಋತುಗಳ ಬೆಳೆಗಳ ನಡುವಿನ ಋತುಮಾನದ ಬೆಲೆ ಏರಿಳಿತವನ್ನು ನಿಯಂತ್ರಿಸಲು ಸರ್ಕಾರವು ನಂತರದ ಮಾನದಂಡಗಳ ನಿರ್ಣಯ ಮತ್ತು ಉದ್ದೇಶಿತ ಬಿಡುಗಡೆಗಾಗಿ ರಬಿ ಋತುವಿನ ಈರುಳ್ಳಿಯನ್ನು ಸಂಗ್ರಹಿಸುವ ಮೂಲಕ ಈರುಳ್ಳಿ ಹೆಚ್ಚುವರಿ ಲಭ್ಯತೆಯನ್ನು ನಿರ್ವಹಿಸುತ್ತದೆ. ಈ ವರ್ಷ ಈರುಳ್ಳಿ ಲಭ್ಯತೆ ಮತ್ತು ಸಂಗ್ರಹಣೆಯ  ಗಾತ್ರವನ್ನು 2022-23 ರಲ್ಲಿ 2.5 ಎಲ್.ಎಂ.ಟಿ.  ನಿಂದ 7 ಎಲ್.ಎಂ.ಟಿ. ಗೆ ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ 5.06 ಎಲ್.ಎಂ.ಟಿ.  ಈರುಳ್ಳಿಯನ್ನು ಖರೀದಿಸಲಾಗಿದೆ ಮತ್ತು ಉಳಿದ ಹೆಚ್ಚುವರಿ 2 ಎಲ್.ಎಂ.ಟಿ.  ಸಂಗ್ರಹಣೆ ಕಾರ್ಯ ಪ್ರಗತಿಯಲ್ಲಿದೆ.

ಹೆಸರಾಂತ ಮಹಾರಾಷ್ಟ್ರದ ಲಾಸಲ್ಗಾಂವ್ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಬಹಳಷ್ಟು ಕಡಿತ ಕಾಣತೊಡಗಿದೆ. ದಿನಾಂಕ 28.102023 ರಂದು ರೂ.4,800 / ಕ್ಯುಟಿಎಲ್ ಬೆಲೆಯಿಂದ 03.11.2023 ರಂದು ರೂ.3,650 / ಕ್ಯುಟಿಎಲ್ ಗೆ ಇಳಿದು 24% ರಷ್ಟು ಇಳಿಕೆಯಾಗಿದೆ.  ಕೇಂದ್ರ ಸರ್ಕಾರವು ತೆಗೆದುಕೊಂಡ ಪೂರ್ವಭಾವಿ ಕ್ರಮಗಳು ಸಕಾರಾತ್ಮಕ ಫಲಿತಾಂಶವನ್ನು ತೋರಿಸಲಾರಂಭಿಸಿದೆ. ಮುಂಬರುವ ವಾರದಿಂದ ಚಿಲ್ಲರೆ ಬೆಲೆಗಳು ಇದೇ ರೀತಿಯ ಕುಸಿತವನ್ನು ತೋರಿಸಲಿವೆ ಎಂದು ನಿರೀಕ್ಷಿಸಲಾಗಿದೆ.

ಮುಂಗಾರು ಮಳೆ ಮತ್ತು ಬಿಳಿ ನೊಣಗಳ ಹಾವಳಿಯಿಂದ ಉಂಟಾದ ಪೂರೈಕೆ ಅಡಚಣೆಯಿಂದಾಗಿ ಜೂನ್, 2023 ರ ಕೊನೆಯ ವಾರದಿಂದ ಟೊಮೆಟೊ ಬೆಲೆ ಗಗನಕ್ಕೇರಿದಾಗ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಉತ್ಪಾದನಾ ರಾಜ್ಯಗಳಿಂದ ಎನ್.ಸಿ.ಸಿ.ಎಫ್ ಮತ್ತು ಎನ್.ಎ.ಎಫ್.ಇ.ಡಿ.ಗಳು ಟೊಮೆಟೊಗಳನ್ನು ಖರೀದಿಸುವ ಮೂಲಕ ಕೇಂದ್ರ ಸರ್ಕಾರವು ಇದರಲ್ಲಿ ಮಧ್ಯಪ್ರವೇಶಿಸಿತು. ಮಹಾರಾಷ್ಟ್ರ ಮತ್ತು ಇತರ ಪ್ರಮುಖ ಬಳಕೆಯ ಕೇಂದ್ರಗಳಲ್ಲಿನ ಗ್ರಾಹಕರಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ಸರಬರಾಜು ಮಾಡಲಾಗುತ್ತದೆ. ಸಂಗ್ರಹಿಸಿದ ಟೊಮೆಟೊಗಳನ್ನು ಸಬ್ಸಿಡಿ ದರದಲ್ಲಿ ಚಿಲ್ಲರೆ ಗ್ರಾಹಕರಿಗೆ ಮಾರಾಟ ಮಾಡಲಾಯಿತು; ಪ್ರತಿ ಕೆ.ಜಿ.ಗೆ ರೂ.90 ರಿಂದ ಪ್ರಾರಂಭವಾಗಿತ್ತು ಮತ್ತು ಈಗ ಅದು ಪ್ರತಿ ಕೆ.ಜಿ.ಗೆ ರೂ.40 ಕ್ಕೆ ಇಳಿಕೆಯಾಗಿದೆ. ಚಿಲ್ಲರೆ ಮಧ್ಯಸ್ಥಿಕೆಯ ಮೂಲಕ, ಟೊಮೆಟೊ ಚಿಲ್ಲರೆ ಬೆಲೆಗಳನ್ನು ಗರಿಷ್ಠ ಮಟ್ಟದಿಂದ ಇಳಿಸಲಾಯಿತು, ಆಗಸ್ಟ್ , 2023 ಮೊದಲ ವಾರದಲ್ಲಿ ಪ್ರತಿ ಕೆಜಿಗೆ ರೂ.140 ರಷ್ಟಿದ್ದ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆಯು ಸೆಪ್ಟೆಂಬರ್, 2023 ರ ಮೊದಲ ವಾರದ ವೇಳೆಗೆ ಕೆಜಿಗೆ ಕೇವಲ ರೂ.40 ರಷ್ಟಿದೆ.

ಹೆಚ್ಚಿನ ಭಾರತೀಯ ಕುಟುಂಬಗಳಿಗೆ ಬೇಳೆಕಾಳುಗಳು ಪೌಷ್ಟಿಕಾಂಶದ ಪ್ರಮುಖ ಮೂಲವಾಗಿದೆ. ಸಾಮಾನ್ಯ ಮನೆಗಳಿಗೆ ಧಾನ್ಯ (ದಾಲ್) ಲಭ್ಯತೆ ಮತ್ತು ಕೈಗೆಟುಕುವಿಕೆಯನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ಸರ್ಕಾರವು ತನ್ನದೇ ಬ್ರಾಂಡ್ “ಭಾರತ್ ದಾಲ್” ಅನ್ನು ಸೃಷ್ಟಿಸಿ ಕಡಲೆಯನ್ನು ಸಬ್ಸಿಡಿ ಬೆಲೆಯಲ್ಲಿ 1 ಕೆಜಿ ಪ್ಯಾಕ್ ಗೆ ರೂ.60 ಮತ್ತು 30 ಕೆಜಿ ಪ್ಯಾಕ್ ಗೆ ರೂ.55 ರ ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಚಿಲ್ಲರೆ ಧಾನ್ಯಗಳ ಮಾರಾಟಕ್ಕಾಗಿ ಮತ್ತು ನ್ಯಾಫೆಡ್, ಎನ್ಸಿಸಿಎಫ್, ಕೇಂದ್ರೀಯ ಭಂಡಾರ್, ಸಫಲ್ ಮತ್ತು ತೆಲಂಗಾಣ ಮತ್ತು ಮಹಾರಾಷ್ಟ್ರದ ರಾಜ್ಯ ನಿಯಂತ್ರಿತ ಸಹಕಾರಿಗಳ ಮೂಲಕ “ಭಾರತ್ ದಾಲ್” ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ, ಹಾಗೂ ಭಾರತೀಯ ಸೇನೆ, ಸಿಎಪಿಎಫ್ ಮತ್ತು ಕಲ್ಯಾಣ ಯೋಜನೆಗಳಿಗೆ ಸರಬರಾಜು ಮಾಡಲು ಸಾಕಷ್ಟು “ಭಾರತ್ ದಾಲ್” ಬ್ರಾಂಡ್ ಧಾನ್ಯಗಳು ಲಭ್ಯವಿದೆ.

ಈಗಾಗಲೇ, 3.2 ಎಲ್.ಎಂ.ಟಿ.ಯಷ್ಟು ಕಡಲೆ( ಚನಾ) ಸಂಗ್ರಹಣೆಯನ್ನು ವಿವಿಧ ಕೇಂದ್ರಗಳಿಗೆ ಹಂಚಲಾಗಿದೆ. ಇದರಲ್ಲಿ 75,269 ಎಂ.ಟಿ.ಯಷ್ಟನ್ನು ಮಿಲ್ ಗಳಿಂದ ಸಂಗ್ರಹಿಸಿ ವಿತರಿಸಲಾಗಿದೆ ಮತ್ತು 59,183 ಎಂ.ಟಿ. ಅನ್ನು 282 ನಗರಗಳ 3010  ರಿಟೇಲ್ ಪಾಯಿಂಟ್ ಗಳ (ಸ್ಟೇಷನರಿ ಔಟ್ಲೆಟ್ / ಮೊಬೈಲ್ ವ್ಯಾನ್ ) ಮೂಲಕ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ, ದೇಶಾದ್ಯಂತ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು 4 ಲಕ್ಷ ಟನ್ ಗಳಷ್ಟು “ಭಾರತ್ ದಾಲ್” ಪ್ಯಾಕ್ ಗಳನ್ನು ಸಿದ್ದಗೊಳಿಸಲಾಗಿದೆ ಮತ್ತು  ಪೂರೈಕೆ ವ್ಯವಸ್ಥೆಯನ್ನು ತೀವ್ರಗತಿಯಲ್ಲಿ ಹೆಚ್ಚಿಸಲಾಗುತ್ತಿದೆ.

******



(Release ID: 1974734) Visitor Counter : 93