ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ ನ ಕೆವಾಡಿಯಾದಲ್ಲಿ ರೂಪಾಯಿ160 ಕೋಟಿಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

Posted On: 31 OCT 2023 7:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಕೆವಾಡಿಯಾದಲ್ಲಿ 160 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು.

ಪ್ರಧಾನಮಂತ್ರಿಯವರಿಂದ ಉದ್ಘಾಟನೆಗೊಂಡ ಯೋಜನೆಗಳಲ್ಲಿ ಏಕತಾ ನಗರದಿಂದ ಅಹಮದಾಬಾದ್ಗೆ ಹೆರಿಟೇಜ್ ರೈಲು; ನೇರ ನರ್ಮದಾ ಆರತಿಗಾಗಿ ಯೋಜನೆ; ಕಮಲಂ ಪಾರ್ಕ್; ಏಕತೆ ಪ್ರತಿಮೆ (ಸ್ಟ್ಯಾಚ್ಯೂ ಆಫ್ ಯೂನಿಟಿ) ಒಳಗೆ ಒಂದು ವಾಕ್ ವೇ; 30 ಹೊಸ ಇ-ಬಸ್ಗಳು, 210 ಇ-ಬೈಸಿಕಲ್ಗಳು ಮತ್ತು ಬಹು ಗಾಲ್ಫ್ ಕಾರ್ಟ್ಗಳು; ಏಕ್ತಾ ನಗರದಲ್ಲಿ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ನೆಟ್ವರ್ಕ್ ಮತ್ತು ಗುಜರಾತ್ ಸ್ಟೇಟ್ ಕೋಆಪರೇಟಿವ್ ಬ್ಯಾಂಕ್ನ 'ಸಹಕಾರ್ ಭವನ' ಮುಂತಾದ ಯೋಜನೆಗಳು ಸೇರಿವೆ. ಇದಲ್ಲದೆ, ಕೆವಾಡಿಯಾದಲ್ಲಿ ಟ್ರಾಮಾ ಸೆಂಟರ್ ಮತ್ತು ಸೌರ ಫಲಕದೊಂದಿಗೆ ಉಪ-ಜಿಲ್ಲಾ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಿದರು.

ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಭಾಗವಹಿಸಿದ್ದರು.

 

*****


(Release ID: 1973493) Visitor Counter : 105