ಸಂಸ್ಕೃತಿ ಸಚಿವಾಲಯ

“ಮೇರಿ ಮಾಟಿ ಮೇರಾ ದೇಶ್” (ನನ್ನ ಮಣ್ಣು-ನನ್ನ ದೇಶ) ಆಜಾದಿ ಕಾ ಅಮೃತ್ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಗೌರವ ಸಲ್ಲಿಸಲಿರುವ ಪ್ರಧಾನಿ ನರೇಂದ್ರ ಮೋದಿ


ಅಕ್ಟೋಬರ್ 31 ರಂದು ನಡೆಯಲಿರುವ ಕಾರ್ಯಕ್ರಮಕ್ಕಾಗಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಿಂದ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು 8000 ಅಮೃತ ಕಲಶದೊಂದಿಗೆ ರಾಷ್ಟ್ರ ರಾಜಧಾನಿಗೆ ಆಗಮಿಸುತ್ತಿದ್ದಾರೆ.

Posted On: 27 OCT 2023 5:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 31 ಅಕ್ಟೋಬರ್ 2023 ರಂದು ವಿಜಯ್ ಚೌಕ್/ಕರ್ತವ್ಯ ಪಥದಲ್ಲಿ “ಮೇರಿ ಮಾಟಿ ಮೇರಾ ದೇಶ್” ಅಭಿಯಾನದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು “ಮೇರಿ ಮಾಟಿ ಮೇರಾ ದೇಶ್” ಅಭಿಯಾನದ ಅಮೃತ್ ಕಲಶ ಯಾತ್ರೆಯ ಅಂತಿಮ ಕಾರ್ಯಕ್ರಮವಾಗಿದೆ. ಇದರಲ್ಲಿ 7000 ಬ್ಲಾಕ್‌ಗಳಿಂದ ಅಮೃತ ಕಲಶ ಯಾತ್ರಿಗಳು 766 ಜಿಲ್ಲೆಗಳಿಂದ ಗಮಿಸುತ್ತಿದ್ದಾರೆ. ಇದು ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ 2021 ರ ಮಾರ್ಚ್ 12 ರಂದು ಪ್ರಾರಂಭವಾದ ಆಜಾದಿ ಕಾ ಅಮೃತ್ ಮಹೋತ್ಸವದ ಅಭಿಯಾನ ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ದೇಶಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಈ ಘಟನೆಯು ಸ್ವಾಯತ್ತ ಸಂಸ್ಥೆ ಮೇರಾ ಯುವ ಭಾರತ್ (MY ಭಾರತ್) ಅನ್ನು ಪ್ರಾರಂಭಿಸಲು ಪೂರಕವಾಗಿದೆ. ಇದು ಯುವ ನೇತೃತ್ವದ ಅಭಿವೃದ್ಧಿಯ ಮೇಲೆ ಸರ್ಕಾರದ ಗಮನವನ್ನು ಹೊಂದಿಸಲು ಮತ್ತು ಯುವಕರನ್ನು ಅಭಿವೃದ್ಧಿಯ "ಸಕ್ರಿಯ ಪಾಲುದಾರರನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಈ ಸ್ವಾಯತ್ತ ಸಂಸ್ಥೆಯ ಉದ್ದೇಶವು ಯುವಜನರು ಸಮುದಾಯ ಬದಲಾವಣೆಯ ನಾಯಕರಾಗಲು ಮತ್ತು ರಾಷ್ಟ್ರ ನಿರ್ಮಾಣಕಾರರಾಗಲು ಪ್ರೇರೇಪಿಸುವುದು ಮತ್ತು ಸರ್ಕಾರ ಮತ್ತು ನಾಗರಿಕರ ನಡುವೆ ಯುವಸೇತುವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

“ಮೇರಿ ಮಾಟಿ ಮೇರಾ ದೇಶ್‌” ಅಂತಿಮ ಕಾರ್ಯಕ್ರಮಕ್ಕಾಗಿ, 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 20 ಸಾವಿರಕ್ಕೂ ಹೆಚ್ಚು ಅಮೃತ ಕಲಶ ಯಾತ್ರಿಗಳು ವಿಶೇಷವಾಗಿ ಮೀಸಲಾದ ರೈಲುಗಳು, ಬಸ್‌ಗಳು ಮತ್ತು ಸ್ಥಳೀಯ ಸಾರಿಗೆಯಂತಹ ವಿವಿಧ ಸಾರಿಗೆ ವಿಧಾನಗಳ ಮೂಲಕ ಅಕ್ಟೋಬರ್ 29 ರಂದು ರಾಷ್ಟ್ರ ರಾಜಧಾನಿಯನ್ನು ತಲುಪುತ್ತಿದ್ದಾರೆ. ಅಕ್ಟೋಬರ್ 30 ಮತ್ತು 31 ರಂದು ಕರ್ತವ್ಯ ಪಥ/ವಿಜಯ್ ಚೌಕ್‌ನಲ್ಲಿ ಎರಡು ದಿನಗಳ ಕಾರ್ಯಕ್ರಮ ನಡೆಯಲಿದೆ. ಈ ಅಮೃತ್ ಕಲಶ ಯಾತ್ರಿಗಳು ಗುರ್ಗಾಂವ್‌ನ ಧಂಚಿರಿ ಶಿಬಿರ ಮತ್ತು ದೆಹಲಿಯ ರಾಧಾ ಸೋಮಿ ಸತ್ಸಂಗ ಬಿಯಾಸ್ ಶಿಬಿರದಲ್ಲಿ ತಂಗಲಿದ್ದಾರೆ.


  


ಅಕ್ಟೋಬರ್ 30 ರಂದು, ಆಯಾ ಬ್ಲಾಕ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಪ್ರತಿನಿಧಿಸುವ ಎಲ್ಲಾ ರಾಜ್ಯಗಳು ಪ್ರತಿನಿಧಿಗಳು ತಮ್ಮ ಕಲಶದಿಂದ ಮಾಟಿಯನ್ನು ಒಂದು ಅಮೃತ ಕಲಶದಲ್ಲಿ ಹಾಕುತ್ತಾರೆ. ಇದು ಏಕ ಭಾರತ ಶ್ರೇಷ್ಠ ಭಾರತವನ್ನು ಪ್ರತಿಬಿಂಬಿಸುತ್ತದೆ. ಅಮೃತ ಕಲಶದಲ್ಲಿ ಮಾಟಿ ಸುರಿಯುವ ಸಮಾರಂಭದಲ್ಲಿ ಪ್ರತಿ ರಾಜ್ಯದ ಜನಪ್ರಿಯ ಕಲಾ ಪ್ರಕಾರಗಳನ್ನು ಪ್ರದರ್ಶಿಸಲಾಗುವುದು. ಕಾರ್ಯಕ್ರಮವು ಬೆಳಗ್ಗೆ 10.30ಕ್ಕೆ ಆರಂಭವಾಗಲಿದ್ದು, ಸಂಜೆಯವರೆಗೂ ನಡೆಯಲಿದೆ.

ಅಕ್ಟೋಬರ್ 31 ರಂದು, ರೋಮಾಂಚಕ ಸಾಂಸ್ಕೃತಿಕ ಪ್ರದರ್ಶನ 12 ರಿಂದ 2 ರವರೆಗೆ ನಡೆಯುತ್ತಿದ್ದು, ಇದು ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ. ಸಂಜೆ 4 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೃತ ಕಲಶ ಯಾತ್ರಿಗಳು ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಭಾರತದ ಸ್ವತಂತ್ರ ಮತ್ತು ಸಮೃದ್ಧಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರನ್ನು ನೆನಪಿಸಿಕೊಳ್ಳಲಾಗುವುದು.

“ಮೇರಿ ಮಾಟಿ ಮೇರಾ ದೇಶ್” ಅಭಿಯಾನ
ಎರಡು ವರ್ಷಗಳ ಸುದೀರ್ಘ ಆಜಾದಿ ಕಾ ಅಮೃತ್ ಮಹೋತ್ಸವದ ಅಭಿಯಾನವಾಗಿ, “ಮೇರಿ ಮಾಟಿ ಮೇರಾ ದೇಶ್” “ಮಟ್ಟಿ ಕೊ ನಮನ್ ವೀರೋನ್ ಕಾ ವಂದನ್” ಭಾರತದ ಮಣ್ಣು ಮತ್ತು ಶೌರ್ಯದ ಏಕೀಕೃತ ಆಚರಣೆಯಾಗಿದೆ. ಇದು ದೇಶದ 766 ಜಿಲ್ಲೆಗಳಿಂದ 7000 ಕ್ಕೂ ಹೆಚ್ಚು ಬ್ಲಾಕ್‌ಗಳೊಂದಿಗೆ ಅತಿ ಹೆಚ್ಚು ಜನರ ಸಂಗಮಕ್ಕೆ ಸಾಕ್ಷಿಯಾಗಿದೆ. ಅಂತಿಮ ಕಾರ್ಯಕ್ರಮಕ್ಕಾಗಿ 8500 ಕ್ಕೂ ಹೆಚ್ಚು ಕಲಶ(ಗಳು) ಅಕ್ಟೋಬರ್ 29 ರಂದು ದೆಹಲಿಯನ್ನು ತಲುಪಲಿವೆ. ಮೇರಿ ಮಾಟಿ ಮೇರಾ ದೇಶ್ ಅಭಿಯಾನವನ್ನು ಎರಡು ಹಂತಗಳಲ್ಲಿ ಆಚರಿಸಲಾಯಿತು, ಇದರಲ್ಲಿ ಮೊದಲ ಹಂತದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭದ್ರತಾ ಪಡೆಗಳಿಗೆ ಶಿಲಾಫಲಕಗಳು, ಪಂಚ ಪ್ರಾಣ ಪ್ರತಿಜ್ಞೆ, ವಸುಧಾ ವಂದನ್ ಮತ್ತು ವೀರೋನ್ ಕಾ ವಂದನ್ ಮುಂತಾದ ಉಪಕ್ರಮಗಳು, ಧೈರ್ಯಶಾಲಿಗಳ ತ್ಯಾಗವನ್ನು ಗೌರವಿಸುತ್ತವೆ.

ಮೊದಲ ಹಂತದಲ್ಲಿ, 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 2.33 ಲಕ್ಷಕ್ಕೂ ಹೆಚ್ಚು ಶಿಲಾಫಲಕಗಳನ್ನು ನಿರ್ಮಿಸಲಾಗಿದೆ, ಸುಮಾರು 4 ಕೋಟಿ ಪಂಚ ಪ್ರಾಣ್ ಪ್ರತಿಜ್ಞೆ ಸೆಲ್ಫಿಗಳನ್ನು ಅಪ್‌ಲೋಡ್ ಮಾಡಲಾಗಿದೆ ಮತ್ತು 2 ಲಕ್ಷಕ್ಕೂ ಹೆಚ್ಚು ವೀರೋನ್ ಕಾ ವಂದನ್ ಕಾರ್ಯಕ್ರಮಗಳು ರಾಷ್ಟ್ರವ್ಯಾಪಿಯಾಗಿ ಭಾರೀ ಯಶಸ್ಸನ್ನು ಕಂಡಿತು. ಹೆಚ್ಚುವರಿಯಾಗಿ, 2.36 ಕೋಟಿಗೂ ಹೆಚ್ಚು ಸ್ಥಳೀಯ ಸಸಿಗಳನ್ನು ನೆಡಲಾಗಿದೆ ಮತ್ತು 2.63 ಲಕ್ಷ ಅಮೃತ ವಾಟಿಕಾಗಳನ್ನು ವಸುಧಾ ವಂದನ್ ಥೀಮ್ ಅಡಿಯಲ್ಲಿ ರಚಿಸಲಾಗಿದೆ.

ಮೇರಿ ಮಾಟಿ ಮೇರಾ ದೇಶ್‌ನ ಎರಡನೇ ಹಂತದಲ್ಲಿ ಅಮೃತಕಲಶ ಯಾತ್ರೆಗಳು ದೇಶದ ಪ್ರತಿ ಮನೆಯನ್ನು ಮುಟ್ಟುವಂತೆ ಯೋಜಿಸಲಾಗಿತ್ತು. ಮಾಟಿ ಮತ್ತು ಅಕ್ಕಿ ಧಾನ್ಯಗಳನ್ನು ಭಾರತದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿನ 6ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಂದ ಮತ್ತು ನಗರ ಪ್ರದೇಶಗಳಲ್ಲಿನ ವಾರ್ಡ್‌ಗಳಿಂದ ಸಂಗ್ರಹಿಸಲಾಗಿದೆ. ಪ್ರತಿ ಗ್ರಾಮದಿಂದ ಸಂಗ್ರಹಿಸಿದ ಮಟ್ಟಿಯನ್ನು ಬ್ಲಾಕ್ ಮಟ್ಟದಲ್ಲಿ ಮಿಶ್ರಣ ಮಾಡಿ ನಂತರ ರಾಜಧಾನಿಗೆ ತಂದು ಅದನ್ನು ವಿಧ್ಯುಕ್ತವಾಗಿ ಕಳುಹಿಸಲಾಯಿತು, ಸಾವಿರಾರು ಅಮೃತ ಕಲಶ ಯಾತ್ರಿಗಳೊಂದಿಗೆ ರಾಷ್ಟ್ರ ರಾಜಧಾನಿಗೆ ಕಳುಹಿಸಲಾಯಿತು.

*****



(Release ID: 1972189) Visitor Counter : 281