ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್‌ನ ಬಿಲ್ಲುಗಾರಿಕೆಯಲ್ಲಿ ಬೆಳ್ಳಿ ಪದಕ ಗೆದ್ದ ರಾಕೇಶ್ ಕುಮಾರ್ ಮತ್ತು ಸೂರಜ್ ಸಿಂಗ್ ಜೋಡಿಗೆ ಪ್ರಧಾನಮಂತ್ರಿ ಅಭಿನಂದನೆ
प्रविष्टि तिथि:
25 OCT 2023 10:08PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನ ಬಿಲ್ಲುಗಾರಿಕೆಯಲ್ಲಿ ಬೆಳ್ಳಿ ಪದಕ ಗೆದ್ದ ರಾಕೇಶ್ ಕುಮಾರ್ ಮತ್ತು ಸೂರಜ್ ಸಿಂಗ್ ಅವರ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಅವರನ್ನು ಕ್ರಿಯಾತ್ಮಕ ಜೋಡಿ ಎಂದು ಕರೆದ ಅವರು, ಅವರ ಸಾಧನೆ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
‘‘ ಪುರುಷರ ಡಬಲ್ಸ್ ಕಾಂಪೌಂಡ್ - ಓಪನ್ ಸ್ಪರ್ಧೆಯ ಪ್ಯಾರಾ ಆರ್ಚರಿಯಲ್ಲಿ ಬೆಳ್ಳಿ ಪದಕ ಗೆದ್ದ ಡೈನಾಮಿಕ್ ಜೋಡಿ ರಾಕೇಶ್ ಕುಮಾರ್ ಮತ್ತು ಸೂರಜ್ ಸಿಂಗ್ ಅವರಿಗೆ ಅಭಿನಂದನೆಗಳು. ಅವರ ಅಸಾಧಾರಣ ತಂಡದ ಕೆಲಸ ಮತ್ತು ನಿಖರತೆ ಭಾರತಕ್ಕೆ ಅಪಾರ ಹೆಮ್ಮೆ ತಂದಿದೆ. ಅವರಿಗೆ ಶುಭ ಹಾರೈಕೆಗಳು,’’ ಎಂದಿದ್ದಾರೆ.
***
(रिलीज़ आईडी: 1971877)
आगंतुक पटल : 151
इस विज्ञप्ति को इन भाषाओं में पढ़ें:
Bengali
,
Malayalam
,
English
,
Urdu
,
Marathi
,
हिन्दी
,
Assamese
,
Manipuri
,
Punjabi
,
Gujarati
,
Odia
,
Tamil
,
Telugu