ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖ್ಯಾತ ಕ್ರಿಕೆಟಿಗ ಶ್ರೀ ಬಿಷನ್ ಸಿಂಗ್ ಬೇಡಿ ನಿಧನಕ್ಕೆ ಪ್ರಧಾನ ಮಂತ್ರಿ ತೀವ್ರ ಸಂತಾಪ   

प्रविष्टि तिथि: 23 OCT 2023 5:21PM by PIB Bengaluru

ಖ್ಯಾತ ಕ್ರಿಕೆಟಿಗ ಶ್ರೀ ಬಿಷನ್ ಸಿಂಗ್ ಬೇಡಿ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು:

“ಖ್ಯಾತ ಕ್ರಿಕೆಟಿಗ ಶ್ರೀ ಬಿಷನ್ ಸಿಂಗ್ ಬೇಡಿ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಕ್ರೀಡೆಯಲ್ಲಿ ಅವರು ತೋರುತ್ತಿದ್ದ ಉತ್ಸಾಹ ಅಚಲವಾಗಿತ್ತು. ಅವರ ಅನುಕರಣೀಯ ಬೌಲಿಂಗ್ ಪ್ರದರ್ಶನಗಳು ಭಾರತ ಕ್ರಿಕೆಟ್ ತಂಡದ ಹಲವಾರು ಸ್ಮರಣೀಯ ವಿಜಯಗಳಿಗೆ ಕಾರಣವಾಯಿತು. ಅವರು ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ಸ್ಫೂರ್ತಿ ಆಗಿದ್ದಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ”.

 
 
 
 
 
***
 


(रिलीज़ आईडी: 1970530) आगंतुक पटल : 86
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam