ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

1947ರ ನಂತರ ಇದೇ ಮೊದಲ ಬಾರಿಗೆ ಈ ವರ್ಷ ಕಾಶ್ಮೀರದ ಐತಿಹಾಸಿಕ ಶಾರದಾ ದೇವಾಲಯದಲ್ಲಿ ನವರಾತ್ರಿ ಪೂಜೆಗಳು ನಡೆದಿರುವುದು ಅಗಾಧವಾದ ಆಧ್ಯಾತ್ಮಿಕ ಮಹತ್ವದ ವಿಷಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದ್ದಾರೆ.


ಈ ವರ್ಷದ ಆರಂಭದಲ್ಲಿ ಚೈತ್ರ ನವರಾತ್ರಿ ಪೂಜೆಯನ್ನು ಆಚರಿಸಲಾಯಿತು ಮತ್ತು ಇದೀಗ ಶಾರದೀಯ ನವರಾತ್ರಿಯ ಸಂದರ್ಭದಲ್ಲಿ ದೇಗುಲದಲ್ಲಿ ಪೂಜೆಯ ಮಂತ್ರಗಳು ಅನುರಣಿಸುತ್ತಿವೆ.

ಜೀರ್ಣೋದ್ಧಾರದ ನಂತರ 2023 ರ ಮಾರ್ಚ್ 23ರಂದು ದೇವಾಲಯವನ್ನು ಪುನಃ ತೆರೆಯುವ ಅದೃಷ್ಟ ನನ್ನದಾಗಿತ್ತು  ಎಂದು ಗೃಹ ಸಚಿವರು ಹೇಳಿದ್ದಾರೆ

ಇದು ಕಣಿವೆಯಲ್ಲಿ ಶಾಂತಿಯ ಮರಳುವಿಕೆಯನ್ನು ಸೂಚಿಸುತ್ತದೆ ಮಾತ್ರವಲ್ಲದೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜ್ವಾಲೆಯ ಪುನರುಜ್ಜೀವನವನ್ನು ಸೂಚಿಸುತ್ತದೆ.

Posted On: 16 OCT 2023 4:00PM by PIB Bengaluru

1947ರ ನಂತರ ಮೊದಲ ಬಾರಿಗೆ ಕಾಶ್ಮೀರದ ಐತಿಹಾಸಿಕ ಶಾರದಾ ದೇವಾಲಯದಲ್ಲಿ ನವರಾತ್ರಿ ಪೂಜೆಗಳು ಈ ವರ್ಷ ನಡೆದಿರುವುದು ಗಹನವಾದ ಆಧ್ಯಾತ್ಮಿಕ ಮಹತ್ವದ ವಿಷಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದ್ದಾರೆ.  ಈ ವರ್ಷದ ಆರಂಭದಲ್ಲಿ ಚೈತ್ರ ನವರಾತ್ರಿ ಪೂಜೆಯನ್ನು ಆಚರಿಸಲಾಯಿತು ಮತ್ತು ಇದೀಗ ಶಾರದೀಯ ನವರಾತ್ರಿಯ ಸಂದರ್ಭದಲ್ಲಿ ದೇಗುಲದಲ್ಲಿ ಪೂಜೆಯ ಮಂತ್ರಗಳು ಅನುರಣಿಸುತ್ತಿವೆ . ಜೀರ್ಣೋದ್ಧಾರದ ನಂತರ 2023 ರ ಮಾರ್ಚ್ 23 ರಂದು ದೇವಾಲಯವನ್ನು ಪುನಃ ತೆರೆಯುವ ಅದೃಷ್ಟ ನನ್ನದಾಗಿತ್ತು. ಇದು ಕಣಿವೆಯಲ್ಲಿ ಶಾಂತಿಯ ಮರಳುವಿಕೆಯನ್ನು ಸೂಚಿಸುತ್ತದೆ ಮಾತ್ರವಲ್ಲದೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜ್ವಾಲೆಯ ಪುನರುಜ್ಜೀವನವನ್ನು ಸೂಚಿಸುತ್ತದೆ ಎಂದು ಎಕ್ಷ್ ಪೋಸ್ಟ್ನಲ್ಲಿ ಶ್ರೀ ಅಮಿತ್ ಶಾ ಹೇಳಿದ್ದಾರೆ.

*****


(Release ID: 1968145) Visitor Counter : 114