ಪ್ರಧಾನ ಮಂತ್ರಿಯವರ ಕಛೇರಿ

ಅಕ್ಟೋಬರ್ 13 ರಂದು 9 ನೇ ಜಿ 20 ಸಂಸದೀಯ ಭಾಷಣಕಾರರ ಶೃಂಗಸಭೆ (ಪಿ 20) ಉದ್ಘಾಟಿಸಲಿರುವ ಪ್ರಧಾನಿ

Posted On: 12 OCT 2023 11:23AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಅಕ್ಟೋಬರ್ 13 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ಯಶೋಭೂಮಿಯಲ್ಲಿ 9 ನೇ ಜಿ 20 ಸಂಸದೀಯ ಭಾಷಣಕಾರರ ಶೃಂಗಸಭೆಯನ್ನು (ಪಿ 20) ಉದ್ಘಾಟಿಸಲಿದ್ದಾರೆ. 

ಭಾರತದ ಜಿ 20 ಅಧ್ಯಕ್ಷತೆಯ ವಿಶಾಲ ಚೌಕಟ್ಟಿನಡಿಯಲ್ಲಿ ಭಾರತದ ಸಂಸತ್ತು ಈ ಶೃಂಗಸಭೆಯನ್ನು ಆಯೋಜಿಸುತ್ತಿದೆ.

ಭಾರತದ ಜಿ 20 ಅಧ್ಯಕ್ಷತೆಯ ವಿಷಯಕ್ಕೆ ಅನುಗುಣವಾಗಿ, 9 ನೇ ಪಿ 20 ಶೃಂಗಸಭೆಯ ಘೋಷವಾಕ್ಯವು "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ ಸಂಸತ್ತುಗಳು," ಎಂಬುದಾಗಿದೆ. ಈ ಕಾರ್ಯಕ್ರಮದಲ್ಲಿ ಜಿ 20 ಸದಸ್ಯ ರಾಷ್ಟ್ರಗಳ ಸಂಸತ್ತಿನ ಸ್ಪೀಕರ್ ಗಳು ಮತ್ತು ಆಹ್ವಾನಿತ ರಾಷ್ಟ್ರಗಳು ಭಾಗವಹಿಸಲಿವೆ. 2023 ರ ಸೆಪ್ಟೆಂಬರ್ 9-10 ರಂದು ನವದೆಹಲಿ ಜಿ 20 ನಾಯಕರ ಶೃಂಗಸಭೆಯಲ್ಲಿ ಆಫ್ರಿಕನ್ ಯೂನಿಯನ್     ಜಿ 20 ಸದಸ್ಯ ರಾಷ್ಟ್ರವಾದ ನಂತರ ಪ್ಯಾನ್-ಆಫ್ರಿಕನ್ ಸಂಸತ್ತು ಮೊದಲ ಬಾರಿಗೆ ಪಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದೆ.

ಈ ಪಿ 20 ಶೃಂಗಸಭೆಯ ವಿಷಯಾಧಾರಿತ ಅಧಿವೇಶನಗಳು ಈ ಕೆಳಗಿನ ನಾಲ್ಕು ವಿಷಯಗಳ ಮೇಲೆ ಕೇಂದ್ರೀಕರಿಸುತ್ತವೆ - ಸಾರ್ವಜನಿಕ ಡಿಜಿಟಲ್ ವೇದಿಕೆಗಳ ಮೂಲಕ ಜನರ ಜೀವನದಲ್ಲಿ ಪರಿವರ್ತನೆ; ಮಹಿಳಾ ನೇತೃತ್ವದ ಅಭಿವೃದ್ಧಿ; ಎಸ್ ಡಿಜಿಗಳನ್ನು ವೇಗಗೊಳಿಸುವುದು; ಮತ್ತು ಸುಸ್ಥಿರ ಇಂಧನ ಪರಿವರ್ತನೆ ಆಗಿದೆ.

ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಹಸಿರು ಮತ್ತು ಸುಸ್ಥಿರ ಭವಿಷ್ಯದ ಉಪಕ್ರಮಗಳ ಬಗ್ಗೆ ಚರ್ಚಿಸಲು 2023 ರ ಅಕ್ಟೋಬರ್ 12 ರಂದು ಲೈಫ್  (ಪರಿಸರಕ್ಕಾಗಿ ಜೀವನಶೈಲಿ) ಕುರಿತ ಪೂರ್ವ ಶೃಂಗಸಭೆಯ ಸಂಸದೀಯ ವೇದಿಕೆಯನ್ನು ಸಹ ಆಯೋಜಿಸಲಾಗಿದೆ.

****



(Release ID: 1967020) Visitor Counter : 74