ಸಂಪುಟ

“ಮೇರಾ ಯುವ ಭಾರತ್” ಸ್ವಾಯತ್ತ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ

Posted On: 11 OCT 2023 3:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟವು “ಮೇರಾ ಯುವ ಭಾರತ್(ಎಂವೈ ಭಾರತ್)” ಸ್ವಾಯತ್ತ ಸಂಸ್ಥೆ ಸ್ಥಾಪನೆಗೆ ಅನುಮೋದನೆ ನೀಡಿದೆ. ಯುವ ಸಮುದಾಯದ ಅಭಿವೃದ್ಧಿ ಮತ್ತು ತಂತ್ರಜ್ಞಾನದಿಂದ ಮುನ್ನಡೆಸಲ್ಪಡುವ ಯುವಜನರ ನೇತೃತ್ವದಲ್ಲಿ ದೇಶದ ಅಭಿವೃದ್ಧಿ ಮತ್ತು ಯುವಜನತೆಗೆ ಸಮಾನವಾದ ಪ್ರವೇಶ ಒದಗಿಸುವ ಒಂದು ವ್ಯಾಪಕ  ಸಕ್ರಿಯಗೊಳಿಸುವ ಕಾರ್ಯವಿಧಾನವಾಗಿ ಇದುಕಾರ್ಯ ನಿರ್ವಹಿಸಲಿದೆ. ಜತೆಗೆ, ಇದು ಯುವ ಜನರ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಮತ್ತು ಸರ್ಕಾರದ ಸಂಪೂರ್ಣ ಆಡಳಿತದ ವಿಕ್ಷಿತ್ ಭಾರತ ನಿರ್ಮಿಸಲು ನೆರವಾಗಲಿದೆ.

ಪರಿಣಾಮ:

ಯುವಕರ ಅಭಿವೃದ್ಧಿಗಾಗಿ ಇದನ್ನು ಸಂಪೂರ್ಣ ಸರ್ಕಾರಿ ವೇದಿಕೆಯನ್ನಾಗಿ ಮಾಡುವುದೇ ಮೇರಾ ಯುವ ಭಾರತ್(ಎಂವೈ ಭಾರತ್)ನ ಪ್ರಾಥಮಿಕ ಉದ್ದೇಶವಾಗಿದೆ. ಈ ಹೊಸ ವ್ಯವಸ್ಥೆಯ ಅಡಿ, ಸಂಪನ್ಮೂಲಗಳ ಪ್ರವೇಶ ಮತ್ತು ಅವಕಾಶಗಳ ಸಂಪರ್ಕದೊಂದಿಗೆ, ಯುವಕರು ಸಮುದಾಯ ಬದಲಾವಣೆಯ ಏಜೆಂಟ್ ಆಗುತ್ತಾರೆ. ಸರ್ಕಾರ ಮತ್ತು ನಾಗರಿಕರ ನಡುವೆ ಯುವ ಸೇತುವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವ ರಾಷ್ಟ್ರ ನಿರ್ಮಾಪಕರಾಗಲಿದ್ದಾರೆ. ಇದು ರಾಷ್ಟ್ರ ನಿರ್ಮಾಣಕ್ಕಾಗಿ ಅಪಾರ ಯುವ ಶಕ್ತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸಲಿದೆ.

ವಿವರಗಳು:

ಸ್ವಾಯತ್ತ ಸಂಸ್ಥೆಯಾದ ಮೇರಾ ಯುವ ಭಾರತ್ (ಎಂವೈ ಭಾರತ್), ರಾಷ್ಟ್ರೀಯ ಯುವ ನೀತಿಯಲ್ಲಿರುವ ‘ಯುವ’ ವ್ಯಾಖ್ಯಾನಕ್ಕೆ ಅನುಗುಣವಾಗಿ 15-29 ವರ್ಷ ವಯಸ್ಸಿನ ಯುವಕರಿಗೆ ಪ್ರಯೋಜನ ನೀಡುತ್ತದೆ. ಒಂದು ವೇಳೆ ಹದಿಹರೆಯದವರಿಗೆ  ನಿರ್ದಿಷ್ಟವಾಗಿ ಸಂಬಂಧಿಸಿದ ಕಾರ್ಯಕ್ರಮಗಳಾದರೆ, ಫಲಾನುಭವಿಗಳು 10-19 ವರ್ಷ ವಯಸ್ಸಿನ ಗುಂಪಿನಲ್ಲಿರುತ್ತಾರೆ.

ಮೇರಾ ಯುವ ಭಾರತ್ (ಎಂವೈ ಭಾರತ್) ಸ್ಥಾಪನೆಯು ಈ ಕೆಳಗಿನ ಅಂಶಗಳಿಗೆ ಕಾರಣವಾಗುತ್ತದೆ:

ಎ. ಯುವಕರಲ್ಲಿ ನಾಯಕತ್ವ ಅಭಿವೃದ್ಧಿಪಡಿಸುವುದು:

1. ಪ್ರತ್ಯೇಕವಾದ ದೈಹಿಕ ಸಂವಹನದಿಂದ ಕಾರ್ಯಕ್ರಮ ಕೌಶಲ್ಯಗಳಿಗೆ ಬದಲಾಯಿಸುವ ಮೂಲಕ ಅನುಭವದ ಕಲಿಕೆಯ ಮೂಲಕ ನಾಯಕತ್ವ ಕೌಶಲ್ಯಗಳನ್ನು ಸುಧಾರಿಸುವುದು.

2. ಯುವಕರನ್ನು ಸಾಮಾಜಿಕ ನವೋದ್ಯಮಿಗಳಾಗಿ, ಸಮುದಾಯಗಳಲ್ಲಿ ನಾಯಕರನ್ನಾಗಿ ಮಾಡಲು ಅವರಲ್ಲಿ ಹೆಚ್ಚು ಹೂಡಿಕೆ ಮಾಡುವುದು.

3. ಯುವ ನೇತೃತ್ವದ ಅಭಿವೃದ್ಧಿಯ ಮೇಲೆ ಸರ್ಕಾರದ ಸಂಪೂರ್ಣ ಗಮನ  ಹೊಂದಿಸುವುದು, ಯುವಕರನ್ನು ನಾಮಕಾವಸ್ತೆ ಪಾಲ್ಗೊಳ್ಳುವಿಕೆಯಿಂದ ಹೊರತಂದು, ಅವರನ್ನುಅಭಿವೃದ್ಧಿಯ "ಸಕ್ರಿಯ ಚಾಲಕರ"ನ್ನಾಗಿ ಮಾಡುವುದು.

ಬಿ. ಯುವ ಆಕಾಂಕ್ಷೆಗಳು ಮತ್ತು ಸಮುದಾಯದ ಅಗತ್ಯಗಳ ನಡುವೆ ಉತ್ತಮ ಹೊಂದಾಣಿಕೆ.

ಸಿ. ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳ ಒಮ್ಮುಖದ ಮೂಲಕ ದಕ್ಷತೆ ಹೆಚ್ಚಿಸುವುದು.

ಡಿ. ಯುವಜನರಿಗೆ ಮತ್ತು ಸಚಿವಾಲಯಗಳಿಗೆ ಒಂದು ನಿಲುಗಡೆ ತಾಣವಾಗಿ ಕಾರ್ಯ ನಿರ್ವಹಿಸುವುದು.

ಇ. ಕೇಂದ್ರೀಕೃತ ಯುವ ಡೇಟಾ ಬೇಸ್(ದತ್ತಾಂಶ ನೆಲೆ) ರೂಪಿಸುವುದು.

ಎಫ್. ಸರ್ಕಾರದ ಯುವ ಉಪಕ್ರಮಗಳು ಮತ್ತು ಯುವಕರೊಂದಿಗೆ ತೊಡಗಿಸಿಕೊಳ್ಳುವ ಇತರೆ ಪಾಲುದಾರರ ಚಟುವಟಿಕೆಗಳನ್ನು ಸಂಪರ್ಕಿಸಲು ಸುಧಾರಿತ ದ್ವಿಮುಖ ಸಂವಹನ.

ಜಿ. ಯುವ ಸಮುದಾಯದ ಪ್ರವೇಶ ಖಚಿತಪಡಿಸಿಕೊಳ್ಳುವುದು, ಭೌತಿಕ ಪರಿಸರ ವ್ಯವಸ್ಥೆ ರೂಪಿಸುವುದು.

ಹಿನ್ನೆಲೆ:

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, 'ಇಡೀ ಸರ್ಕಾರಿ ಕಾರ್ಯವಿಧಾನ' ತತ್ವಗಳಿಂದ ಮಾರ್ಗದರ್ಶಿಸಲ್ಪಟ್ಟ ಯುವ ಜನರನ್ನು ಮತ್ತು ಅವರ ಸಬಲೀಕರಣಕ್ಕೆ ಸಂಪೂರ್ಣ ತೊಡಗಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ವೇಗದ ಸಂವಹನಗಳು, ಸಾಮಾಜಿಕ ಮಾಧ್ಯಮಗಳು, ಹೊಸ ಡಿಜಿಟಲ್ ಅವಕಾಶಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ವಾತಾವರಣ ಹೊಂದಿರುವ “ಮೇರಾ ಯುವ ಭಾರತ್ (ಎಂವೈ ಭಾರತ್)” ಎಂಬ ಹೊಸ ಸ್ವಾಯತ್ತ ಸಂಸ್ಥೆಯ ರೂಪದ ಸಕ್ರಿಯಗೊಳಿಸುವ ಕಾರ್ಯವಿಧಾನ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.

 

*****

 



(Release ID: 1966663) Visitor Counter : 171