ಪ್ರಧಾನ ಮಂತ್ರಿಯವರ ಕಛೇರಿ
ಅಕ್ಟೋಬರ್ 12 ರಂದು ಪ್ರಧಾನಿ ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ
ಪಾರ್ವತಿ ಕುಂಡದಲ್ಲಿ ಪೂಜೆ ಮತ್ತು ದರ್ಶನ ಮಾಡಲಿರುವ ಪ್ರಧಾನಮಂತ್ರಿ
ಪ್ರಧಾನಮಂತ್ರಿಯವರು ಗುಂಜಿ ಗ್ರಾಮಕ್ಕೆ ಭೇಟಿ, ಸ್ಥಳೀಯ ಜನರೊಂದಿಗೆ, ಸೇನೆ, ITBP ಮತ್ತು BRO ಸಿಬ್ಬಂದಿಗಳೊಂದಿಗೆ ಸಂವಾದ
ಜಗೇಶ್ವರ ಧಾಮದಲ್ಲಿ ಪೂಜೆ ಮತ್ತು ದರ್ಶನ ಮಾಡಲಿರುವ ಪ್ರಧಾನಿ
ಪಿಥೋರಗಢದಲ್ಲಿ ಸುಮಾರು 4200 ಕೋಟಿ ರೂಪಾಯಿಗಳ ಬಹುವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿರುವ ಪ್ರಧಾನಿ
Posted On:
10 OCT 2023 7:38PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 12, 2023 ರಂದು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 8:30 ರ ಸುಮಾರಿಗೆ ಪಿಥೋರಗಢ್ ಜಿಲ್ಲೆಯ ಜೋಲಿಂಗ್ಕಾಂಗ್ಗೆ ಪ್ರಧಾನಿ ಆಗಮಿಸಲಿದ್ದು, ಅಲ್ಲಿ ಪಾರ್ವತಿ ಕುಂಡ್ನಲ್ಲಿ ದೇವರ ದರ್ಶನ ನಂತರ ಪೂಜೆ ಮಾಡಲಿದ್ದಾರೆ. ಪ್ರಧಾನಮಂತ್ರಿಯವರು ಈ ಸ್ಥಳದಲ್ಲಿ ಪವಿತ್ರ ಆದಿ-ಕೈಲಾಸರಿಂದ ಆಶೀರ್ವಾದ ಪಡೆಯಲಿದ್ದಾರೆ. ಈ ಪ್ರದೇಶವು ತನ್ನ ಆಧ್ಯಾತ್ಮಿಕ ಪ್ರಾಮುಖ್ಯತೆ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.
ಪ್ರಧಾನಿಯವರು ಬೆಳಿಗ್ಗೆ 9:30 ರ ಸುಮಾರಿಗೆ ಪಿಥೋರಗಢ್ ಜಿಲ್ಲೆಯ ಗುಂಜಿ ಗ್ರಾಮಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಅವರು ಸ್ಥಳೀಯ ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಸ್ಥಳೀಯ ಕಲೆ ಮತ್ತು ಉತ್ಪನ್ನಗಳನ್ನು ಎತ್ತಿ ತೋರಿಸುವ ಪ್ರದರ್ಶನಕ್ಕೆ ಭೇಟಿ ನೀಡಲಿದ್ದಾರೆ. ಅವರು ಸೇನೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಮತ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಅಲ್ಮೋರಾ ಜಿಲ್ಲೆಯ ಜಾಗೇಶ್ವರ್ ತಲುಪಲಿರುವ ಪ್ರಧಾನಿ, ಅಲ್ಲಿ ಜಾಗೇಶ್ವರ ಧಾಮದಲ್ಲಿ ದರ್ಶನ ನಂತರ ಪೂಜೆ ಮಾಡಲಿದ್ದಾರೆ. ಸುಮಾರು 6200 ಅಡಿ ಎತ್ತರದಲ್ಲಿರುವ ಜಾಗೇಶ್ವರ ಧಾಮವು ಸುಮಾರು 224 ಕಲ್ಲಿನ ದೇವಾಲಯಗಳನ್ನು ಒಳಗೊಂಡಿದೆ.
ಅದರ ನಂತರ, ಪ್ರಧಾನಿಯವರು ಮಧ್ಯಾಹ್ನ 2:30 ರ ಸುಮಾರಿಗೆ ಪಿಥೋರಗಡ್ ತಲುಪಲಿದ್ದು, ನೀರು, ತೋಟಗಾರಿಕೆ, ಶಿಕ್ಷಣ, ಆರೋಗ್ಯ ಮತ್ತು ವಿಪತ್ತು ನಿರ್ವಹಣೆ, ಗ್ರಾಮೀಣಾಭಿವೃದ್ಧಿ, ರಸ್ತೆ, ವಿದ್ಯುತ್, ನೀರಾವರಿ, ಪೂರೈಕೆ ಸೇರಿದಂತೆ ಸುಮಾರು 4200 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಪ್ರಧಾನಮಂತ್ರಿಯವರು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿರುವ ಯೋಜನೆಗಳಲ್ಲಿ PMGSY ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾದ 76 ಗ್ರಾಮೀಣ ರಸ್ತೆಗಳು ಮತ್ತು 25 ಸೇತುವೆಗಳು ಸೇರಿವೆ; 9 ಜಿಲ್ಲೆಗಳಲ್ಲಿ ಬಿಡಿಒ ಕಚೇರಿಗಳ 15 ಕಟ್ಟಡಗಳು; ಕೇಂದ್ರೀಯ ರಸ್ತೆ ನಿಧಿಯಡಿ ನಿರ್ಮಿಸಲಾದ ಮೂರು ರಸ್ತೆಗಳಾದ ಕೌಸಾನಿ ಬಾಗೇಶ್ವರ ರಸ್ತೆ, ಧರಿ-ದೌಬಾ-ಗಿರಿಚೀನ ರಸ್ತೆ ಮತ್ತು ನಾಗಲಾ-ಕಿಚ್ಚ ರಸ್ತೆಗಳ ಮೇಲ್ದರ್ಜೆ, ರಾಷ್ಟ್ರೀಯ ಹೆದ್ದಾರಿಗಳಾದ ಅಲ್ಮೋರಾ ಪೆಟ್ಶಾಲ್ - ಪನುವಾನೌಲಾ - ದನ್ಯಾ (NH 309B) ಮತ್ತು ತನಕ್ಪುರ - ಚಲ್ತಿ (NH 125) ಎರಡು ರಸ್ತೆಗಳ ನವೀಕರಣ; ಕುಡಿಯುವ ನೀರಿಗೆ ಸಂಬಂಧಿಸಿದ ಮೂರು ಯೋಜನೆಗಳು ಅಂದರೆ 38 ಪಂಪಿಂಗ್ ಕುಡಿಯುವ ನೀರಿನ ಯೋಜನೆಗಳು, 419 ಗುರುತ್ವಾಕರ್ಷಣೆ ಆಧಾರಿತ ನೀರು ಸರಬರಾಜು ಯೋಜನೆಗಳು ಮತ್ತು ಮೂರು ಕೊಳವೆ ಬಾವಿ ಆಧಾರಿತ ನೀರು ಸರಬರಾಜು ಯೋಜನೆಗಳು; ಪಿಥೋರಗಢದಲ್ಲಿ ಥಾರ್ಕೋಟ್ ಕೃತಕ ಸರೋವರ; 132 KV ಪಿಥೋರಗಢ-ಲೋಹಘಾಟ್ (ಚಂಪಾವತ್) ವಿದ್ಯುತ್ ಪ್ರಸರಣ ಮಾರ್ಗ; ಉತ್ತರಾಖಂಡದಾದ್ಯಂತ 39 ಸೇತುವೆಗಳು ಮತ್ತು ಡೆಹ್ರಾಡೂನ್ನಲ್ಲಿ ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (USDMA) ಕಟ್ಟಡವನ್ನು ವಿಶ್ವಬ್ಯಾಂಕ್ ಅನುದಾನಿತ ಉತ್ತರಾಖಂಡ ವಿಪತ್ತು ಮರುಪಡೆಯುವಿಕೆ ಯೋಜನೆಯಡಿಗೆ ಚಾಲನೆ ನೀಡಲಾಗುತ್ತದೆ. 21,398 ಪಾಲಿ-ಹೌಸ್ ನಿರ್ಮಾಣದ ಯೋಜನೆಯನ್ನು ಒಳಗೊಂಡಿವೆ.
ಇದು ಹೂವುಗಳು ಮತ್ತು ತರಕಾರಿಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಅವುಗಳ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ; ಹೆಚ್ಚಿನ ಸಾಂದ್ರತೆಯ ತೀವ್ರವಾದ ಸೇಬು ತೋಟಗಳ ಕೃಷಿಗಾಗಿ ಯೋಜನೆ; NH ರಸ್ತೆ ನವೀಕರಣದ ಐದು ಯೋಜನೆಗಳು; ರಾಜ್ಯದಲ್ಲಿ ವಿಪತ್ತು ಸನ್ನದ್ಧತೆ ಮತ್ತು ಸ್ಥಿತಿಸ್ಥಾಪಕತ್ವಕ್ಕಾಗಿ ಬಹು ಹಂತಗಳು, ಅಂದರೆ ಸೇತುವೆಗಳ ನಿರ್ಮಾಣ, ಡೆಹ್ರಾಡೂನ್ನಲ್ಲಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಉನ್ನತೀಕರಣ, ಬಲಿಯಾನಲ, ನೈನಿತಾಲ್ನಲ್ಲಿ ಭೂಕುಸಿತವನ್ನು ತಡೆಗಟ್ಟುವ ಕ್ರಮಗಳು ಮತ್ತು ಬೆಂಕಿ, ಆರೋಗ್ಯ ಮತ್ತು ಅರಣ್ಯಕ್ಕೆ ಸಂಬಂಧಿಸಿದ ಇತರ ಮೂಲಸೌಕರ್ಯಗಳಲ್ಲಿ ಸುಧಾರಣೆ; ರಾಜ್ಯಾದ್ಯಂತ 20 ಮಾದರಿ ಪದವಿ ಕಾಲೇಜಿನಲ್ಲಿ ಹಾಸ್ಟೆಲ್ಗಳು ಮತ್ತು ಕಂಪ್ಯೂಟರ್ ಲ್ಯಾಬ್ಗಳ ಅಭಿವೃದ್ಧಿ; ಅಲ್ಮೋರಾದ ಸೋಮೇಶ್ವರದಲ್ಲಿ 100 ಹಾಸಿಗೆಗಳ ಉಪ ಜಿಲ್ಲಾ ಆಸ್ಪತ್ರೆ; ಚಂಪಾವತ್ನಲ್ಲಿ 50 ಹಾಸಿಗೆಗಳ ಆಸ್ಪತ್ರೆ ಬ್ಲಾಕ್; ನೈನಿತಾಲ್ನ ಹಲ್ದ್ವಾನಿ ಕ್ರೀಡಾಂಗಣದಲ್ಲಿ ಆಸ್ಟ್ರೋಟರ್ಫ್ ಹಾಕಿ ಮೈದಾನ; ರುದ್ರಪುರದಲ್ಲಿ ವೆಲೋಡ್ರೋಮ್ ಕ್ರೀಡಾಂಗಣ; ಜಾಗೇಶ್ವರ್ ಧಾಮ್ (ಅಲ್ಮೋರಾ), ಹಾತ್ ಕಾಳಿಕಾ (ಪಿಥೋರಘರ್) ಮತ್ತು ನೈನಾ ದೇವಿ (ನೈನಿತಾಲ್) ದೇವಾಲಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಮನಸ್ಕಂಡ್ ಮಂದಿರ ಮಾಲಾ ಮಿಷನ್ ಯೋಜನೆಗೆ ಚಾಲನೆ ದೊರೆಯಲಿದೆ
****
(Release ID: 1966514)
Visitor Counter : 97
Read this release in:
Odia
,
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam