ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಪುರುಷರ ಹಾಕಿ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ 

प्रविष्टि तिथि: 06 OCT 2023 10:02PM by PIB Bengaluru

ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಪುರುಷರ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

ತಂಡದ ಅಚಲ ಬದ್ಧತೆ, ಉತ್ಸಾಹ ಮತ್ತು ಸಹಯೋಗವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು ಮತ್ತು ತಂಡದ ಭವಿಷ್ಯದ ಪ್ರಯತ್ನಗಳಿಗೆ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ತಿಳಿಸಿದ್ದಾರೆ;

"ಏಷ್ಯನ್ ಕ್ರೀಡಾಕೂಟದಲ್ಲಿ ನಮ್ಮ ಪುರುಷರ ಹಾಕಿ ತಂಡದಿಂದ ಚಿನ್ನದ ಪದಕದ ಚೇತೋಹಾರಿ ವಿಜಯ! 

ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ತಂಡಕ್ಕೆ ಅಭಿನಂದನೆಗಳು. ಈ ತಂಡದ ಅಚಲ ಬದ್ಧತೆ, ಉತ್ಸಾಹ ಮತ್ತು ಸಹಯೋಗವು ಪಂದ್ಯವನ್ನು ಮಾತ್ರವಲ್ಲದೆ ಅಸಂಖ್ಯಾತ ಭಾರತೀಯರ ಹೃದಯವನ್ನೂ ಗೆದ್ದಿದೆ. ಈ ಗೆಲುವು ಅವರ ಕ್ರೀಡಾ ಆತ್ಮಧೈರ್ಯಕ್ಕೆ ಸಾಕ್ಷಿ. ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು.

 

***


(रिलीज़ आईडी: 1965858) आगंतुक पटल : 125
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam