ಸಹಕಾರ ಸಚಿವಾಲಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಭಾರತ ಸರ್ಕಾರವು ದೇಶದ ಎಲ್ಲಾ ಸಹಕಾರಿ ಸಂಘಗಳನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.


ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ರಿಜಿಸ್ಟ್ರಾರ್‌ ಕಚೇರಿಗಳು ಮತ್ತು 13 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,851 ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ಎ ಆರ್‌ ಡಿ ಬಿ) ಗಳ ಗಣಕೀಕರಣ ಮತ್ತು ಸಬಲೀಕರಣಕ್ಕಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
 
ದೇಶದ ಎಲ್ಲಾ ಪಿಎಸಿಎಸ್‌ ಗಳ ಗಣಕೀಕರಣ ಯೋಜನೆಯ ಮಾದರಿಯಲ್ಲಿಯೇ, 13 ರಾಜ್ಯಗಳ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ಎ ಆರ್‌ ಡಿ ಬಿ)  ಗಳ 1,851 ಘಟಕಗಳನ್ನು ರಾಷ್ಟ್ರೀಯ ಏಕೀಕೃತ ಸಾಫ್ಟ್‌ವೇರ್ ಮೂಲಕ ಗಣಕೀಕರಣಗೊಳಿಸಲಾಗುವುದು. 
 
ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಕಾರಿಗಳ ರಿಜಿಸ್ಟ್ರಾರ್ ಕಚೇರಿಗಳನ್ನು ಕೇಂದ್ರ ರಿಜಿಸ್ಟ್ರಾರ್‌ ನಂತೆಯೇ ಗಣಕೀಕರಣಗೊಳಿಸಲಾಗುವುದು
 
ಈ ಯೋಜನೆಗಾಗಿ ಕೇಂದ್ರ ಯೋಜನಾ ಮೇಲ್ವಿಚಾರಣಾ ಘಟಕ (ಪಿಎಂಯು) ಸ್ಥಾಪಿಸಲಾಗುವುದು, ಇದು ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಕೆಲಸ ಮಾಡುತ್ತದೆ, ಈ ಯೋಜನೆಗೆ ಒಟ್ಟು ಅಂದಾಜು ವೆಚ್ಚ 225.09 ಕೋಟಿ ರೂ.ಗಳಾಗಿರಲಿದೆ
 
ಈ ಯೋಜನೆಯ ಅನುಷ್ಠಾನವು ರಾಜ್ಯಗಳ ಸಹಕಾರಿ ಇಲಾಖೆಗಳು ಮತ್ತು ಎ ಆರ್‌ ಡಿ ಬಿ ಗಳ ಕಚೇರಿಗಳು ಒದಗಿಸುವ ಸೇವೆಗಳನ್ನು ತ್ವರಿತವಾಗಿ ಪಡೆಯಲು ಜನರಿಗೆ ಅನುವು ಮಾಡಿಕೊಡುತ್ತದೆ, ಹೆಚ್ಚುವರಿಯಾಗಿ ಇದು ಈ ಕಚೇರಿಗಳ ಕಾರ್ಯನಿರ್ವಹಣೆಯ

Posted On: 08 OCT 2023 3:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಭಾರತ ಸರ್ಕಾರವು ದೇಶದ ಎಲ್ಲಾ ಸಹಕಾರಿ ಸಂಘಗಳನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ರಿಜಿಸ್ಟ್ರಾರ್‌ ಕಚೇರಿಗಳನ್ನು ಮತ್ತು 13 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,851 ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಗಳನ್ನು (ಎ ಆರ್‌ ಡಿ ಬಿ) ಗಣಕೀಕರಣಗೊಳಿಸುವ ಮತ್ತು ಸಶಕ್ತಗೊಳಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ದೇಶದ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ (ಪಿಎಸಿ) ಗಣಕೀಕರಣ ಯೋಜನೆಯ ಮಾದರಿಯಲ್ಲಿ, ರಾಷ್ಟ್ರೀಯ ಏಕೀಕೃತ ಸಾಫ್ಟ್‌ ವೇರ್ ಮೂಲಕ 13 ರಾಜ್ಯಗಳ 1,851 ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಗಳು (ಎ ಆರ್‌ ಡಿ ಬಿ) ಗಣಕೀಕರಣ ಮತ್ತು ಕೇಂದ್ರ ರಿಜಿಸ್ಟ್ರಾರ್‌ ನಂತೆಯೇ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಕಾರಿಗಳ ರಿಜಿಸ್ಟ್ರಾರ್ ಕಚೇರಿಗಳ ಗಣಕೀಕರಣಕ್ಕಾಗಿ ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಅನುಮೋದಿಸಲಾಗಿದೆ. 

ಈ ಯೋಜನೆಗಾಗಿ ಕೇಂದ್ರೀಯ ಯೋಜನಾ ಮೇಲ್ವಿಚಾರಣಾ ಘಟಕ (ಪಿಎಂಯು) ಸ್ಥಾಪಿಸಲಾಗುವುದು, ಇದು ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಕೆಲಸ ಮಾಡುತ್ತದೆ. ಈ ಯೋಜನೆಗೆ ಒಟ್ಟು ಅಂದಾಜು ವೆಚ್ಚ 225.09 ಕೋಟಿ ರೂ.ಗಳಾಗಿರುತ್ತದೆ.

ಈ ಯೋಜನೆಯ ಅನುಷ್ಠಾನವು ರಾಜ್ಯಗಳ ಸಹಕಾರಿ ಇಲಾಖೆಗಳು ಮತ್ತು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳ ಕಛೇರಿಗಳು ಒದಗಿಸುವ ಸೇವೆಗಳನ್ನು ತ್ವರಿತವಾಗಿ ಪಡೆಯಲು ಜನರಿಗೆ ಅನುವು ಮಾಡಿಕೊಡುತ್ತದೆ, ಅಲ್ಲದೆ, ಈ ಕಚೇರಿಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಏಕರೂಪತೆಯನ್ನು ತರುತ್ತದೆ. ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ.

*****
 



(Release ID: 1965776) Visitor Counter : 176