ಪ್ರಧಾನ ಮಂತ್ರಿಯವರ ಕಛೇರಿ

​​​​​​​ಏಷ್ಯನ್‌ ಕ್ರೀಡಾಕೂಟದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಚಿನ್ನ ಗೆದ್ದ ಕಬಡ್ಡಿ ಮಹಿಳಾ ತಂಡಕ್ಕೆ ಪ್ರಧಾನ ಮಂತ್ರಿಗಳಿಂದ ಅಭಿನಂದನೆ

Posted On: 07 OCT 2023 8:42AM by PIB Bengaluru

ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಕಬಡ್ಡಿ ಮಹಿಳಾ ತಂಡಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ʼಎಕ್ಸ್‌ʼ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಅವರು,

"ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದೊಂದು ಐತಿಹಾಸಿಕ ಕ್ಷಣ. ನಮ್ಮ ಕಬಡ್ಡಿ ಮಹಿಳಾ ತಂಡವು ಚಿನ್ನದ ಪದಕವನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ವಿಜಯವು ನಮ್ಮ ಮಹಿಳಾ ಅಥ್ಲೀಟ್‌ಗಳಲ್ಲಿನ ಅದಮ್ಯ ಸ್ಫೂರ್ತಿ, ಪ್ರತಿಭೆಯ ಧ್ಯೋತಕವಾಗಿದೆ. ಈ ಯಶಸ್ಸು ಭಾರತದ ಹೆಮ್ಮೆಯನ್ನು ವೃದ್ಧಿಸಿದೆ. ತಂಡಕ್ಕೆ ನನ್ನ ಅಭಿನಂದನೆಗಳು. ಅವರ ಮುಂದಿನ ಯಶಸ್ಸುಗಳಿಗೂ ನನ್ನ ಶುಭ ಹಾರೈಕೆಗಳು,ʼʼ ಎಂದು ಶುಭ ಕೋರಿದ್ದಾರೆ.

***



(Release ID: 1965475) Visitor Counter : 73