ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸಿಕ್ಕಿಂನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ


ಸಿಕ್ಕಿಂಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (ಎಸ್.ಡಿ.ಆರ್.ಎಫ್.) ತನ್ನ ಪಾಲನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ

ರಾಜ್ಯದಲ್ಲಿ ಉಂಟಾದ ಹಾನಿಗಳ ಮೌಲ್ಯಮಾಪನ ಮಾಡಲು ಅಂತರ್-ಸಚಿವಾಲಯದ ಕೇಂದ್ರ ತಂಡವನ್ನು (ಐ.ಎಂ.ಸಿ.ಟಿ) ರಚಿಸಲಾಗಿದೆ

Posted On: 06 OCT 2023 10:11AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸಿಕ್ಕಿಂ ರಾಜ್ಯದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಕೇಂದ್ರ ಸರ್ಕಾರ ಸಿಕ್ಕಿಂ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸಿಕ್ಕಿಂಗೆ ರಾಜ್ಯ ವಿಪತ್ತು ಪರಿಹಾರ ನಿಧಿಯ (ಎಸ್.ಡಿ.ಆರ್.ಎಫ್) ಕೇಂದ್ರೀಯ ಪಾಲನ್ನು, ರೂ.44.80 ಕೋಟಿ ಎರಡೂ ಕಂತುಗಳನ್ನು , ಸಂತ್ರಸ್ತ ಜನರಿಗೆ ಪರಿಹಾರ ಕ್ರಮಗಳನ್ನು 2023-24 ನೇ ಸಾಲಿಗೆ ಮುಂಗಡವಾಗಿ ಬಿಡುಗಡೆ ಮಾಡಿದರು.  

ಇದಲ್ಲದೆ, ಗ್ಲೇಶಿಯಲ್ ಲೇಕ್ ಸ್ಫೋಟದ ಪ್ರವಾಹ / ಕ್ಲೌಡ್ ಬರ್ಸ್ಟ್ / ಫ್ಲ್ಯಾಶ್ ಪ್ರವಾಹದಿಂದ ಉಂಟಾದ ಹಾನಿಗಳ ಮೌಲ್ಯಮಾಪನವನ್ನು ಮಾಡಲು, ಗೃಹ ವ್ಯವಹಾರಗಳ ಸಚಿವಾಲಯವು ಅಂತರ-ಸಚಿವಾಲಯದ ಕೇಂದ್ರ ತಂಡವನ್ನು ರಚಿಸಿದೆ, ಇದು ಶೀಘ್ರದಲ್ಲೇ ರಾಜ್ಯಗಳ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ. ಐ.ಎಂ.ಸಿ.ಟಿ.ಯ ಮೌಲ್ಯಮಾಪನದ ಆಧಾರದ ಮೇಲೆ, ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಸಿಕ್ಕಿಂ ರಾಜ್ಯಕ್ಕೆ ಹೆಚ್ಚುವರಿ ಕೇಂದ್ರ ಸಹಾಯವನ್ನು ಅನುಮೋದಿಸಲಾಗುತ್ತದೆ.


ಅಕ್ಟೋಬರ್ 4, 2023 ರ ಮುಂಜಾನೆ, ಗ್ಲೇಶಿಯಲ್ ಲೇಕ್ ಸ್ಫೋಟದ ಪ್ರವಾಹ / ಕ್ಲೌಡ್ ಬರ್ಸ್ಟ್ / ಫ್ಲ್ಯಾಶ್ ಪ್ರವಾಹದ ಘಟನೆಗಳಿಂದಾಗಿ, ತೀಸ್ತಾ ನದಿಯಲ್ಲಿ ನೀರಿನ ಹರಿವು ಹಠಾತ್ ಉಲ್ಬಣಗೊಂಡಿತ್ತು. ಇದರಿಂದಾಗಿ, ಹಲವಾರು ಸೇತುವೆಗಳು, ರಾಷ್ಟ್ರೀಯ ಹೆದ್ದಾರಿ-10 ನ ಭಾಗಗಳು, ಚುಂಗ್ಥಾಂಗ್ ಅಣೆಕಟ್ಟುಗಳನ್ನು ಕೊಚ್ಚಿಕೊಂಡು ಹೋಗಿದೆ ಮತ್ತು ಹಲವಾರು ಪರಿಣಾಮಗಳನ್ನು ಬೀರಿದೆ. ಸಿಕ್ಕಿಂನ ನದಿ ಕಣಿವೆಯ ಮೇಲ್ಭಾಗದಲ್ಲಿ ಸಣ್ಣ ಪಟ್ಟಣಗಳು ಮತ್ತು ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಕೂಡಾ ಕೊಚ್ಚಿಕೊಂಡು ಹೋಗಿ ಗಂಭೀರ ಪರಿಣಾಮಗಳನ್ನು ಬೀರಿದೆ.

ಸಿಕ್ಕಿಂನಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರವು 24x7 ಆಧಾರದ ಮೇಲೆ ಉನ್ನತ ಮಟ್ಟದಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಸಕಾಲಿಕ ಸಾಗಾಣಿಕಾ (ಲಾಜಿಸ್ಟಿಕ್ಸ್ ) ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಮೂಲಕ ಕೇಂದ್ರ ಸರ್ಕಾರ ಸಿಕ್ಕಿಂ ಸರ್ಕಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ. ಒದಗಿಸಲಾದ ಸಾಗಾಣಿಕಾ (ಲಾಜಿಸ್ಟಿಕ್ಸ್ ) ಬೆಂಬಲವು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳು ಮತ್ತು ಸೇನಾ ಸಿಬ್ಬಂದಿ ಅಗತ್ಯ ಶೋಧ ಮತ್ತು ರಕ್ಷಣಾ ಸಾಧನಗಳೊಂದಿಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಸಾಕಷ್ಟು ತಂಡಗಳ ನಿಯೋಜನೆಯನ್ನು ಕೂಡಾ ಒಳಗೊಂಡಿದೆ. ಇದಲ್ಲದೆ, ವಿದ್ಯುತ್, ದೂರಸಂಪರ್ಕ ಮತ್ತು ರಸ್ತೆಗಳು, ಹೆದ್ದಾರಿಗಳು ಮತ್ತು ಸಾರಿಗೆ ಸಚಿವಾಲಯಗಳ ತಾಂತ್ರಿಕ ತಂಡಗಳು ರಾಜ್ಯದಲ್ಲಿ ಹಾನಿಗೊಳಗಾದ ಮೂಲಸೌಕರ್ಯ ಮತ್ತು ಸಂವಹನ ಜಾಲವನ್ನು ಸಮಯೋಚಿತವಾಗಿ ಸಕಾಲಿಕವಾಗಿ ಮರುಸ್ಥಾಪಿಸಲು ಕೇಂದ್ರ ಸರ್ಕಾರವು ಸಹಾಯ ಮಾಡುತ್ತಿದೆ.

****


(Release ID: 1965025) Visitor Counter : 133