ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​9 ವರ್ಷ ಪೂರೈಸಿದ ಪ್ರಧಾನಿಯವರ ಮನ್ ಕಿ ಬಾತ್ 

प्रविष्टि तिथि: 03 OCT 2023 3:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಇಂದಿಗೆ ಒಂಬತ್ತು ವರ್ಷಗಳನ್ನು ಪೂರೈಸಿದೆ.

ಈ ಸಂದರ್ಭದಲ್ಲಿ ಮನ್ ಕಿ ಬಾತ್ನಲ್ಲಿ ಒಳಗೊಂಡಿರುವ ಕೆಲವು ವಿಷಯಗಳು ಮತ್ತು ಅವುಗಳ ಸಾಮಾಜಿಕ ಪ್ರಭಾವವನ್ನು ಎತ್ತಿ ತೋರಿಸುವ ಅಧ್ಯಯನವನ್ನು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಐಎಂ ಬೆಂಗಳೂರು ನಡೆಸಿದ ಸಂಶೋಧನಾ ನಡೆಸಿ ಪ್ರಧಾನ ಮಂತ್ರಿಗಳ ಮನ್ ಕಿ ಬಾತ್ನ 105 ಸಂಚಿಕೆಗಳ ಪರಿಣಾಮದ ಕುರಿತು ವಿಶ್ಲೇಷಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ ಪೋಸ್ಟ್ ಮಾಡಿದ್ದಾರೆ.

"ಮನ್ ಕಿ ಬಾತ್ 9 ವರ್ಷಗಳನ್ನು ಪೂರೈಸಿದ್ದು, ಸ್ಟೇಟ್ ಆಫ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಒಂದು ಆಸಕ್ತಿದಾಯಕ ಅಧ್ಯಯನ ನಡೆಸಿದ್ದು ನಾವು ಆಯ್ಕೆ ಮಾಡಿಕೊಂಡಿದ್ದ ವಿಷಯಗಳು ಮತ್ತು ಅವುಗಳ ಸಾಮಾಜಿಕ ಪ್ರಭಾವವನ್ನು ಎತ್ತಿ ತೋರಿಸಿದೆ. ಈ ಮಾಧ್ಯಮದ ಮೂಲಕ ಜೀವನದ ಪ್ರಯಾಣ ಮತ್ತು ಸಾಮೂಹಿಕ ಪ್ರಯತ್ನಗಳು ಅದ್ಭುತವಾಗಿದೆ ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.

http://nm-4.com/hqauwf"

***


(रिलीज़ आईडी: 1963713) आगंतुक पटल : 139
इस विज्ञप्ति को इन भाषाओं में पढ़ें: Bengali , Assamese , English , Urdu , Marathi , हिन्दी , Manipuri , Punjabi , Gujarati , Odia , Tamil , Telugu , Malayalam