ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬೆಳ್ಳಿ ಪದಕ ಗೆದ್ದ ಮಹಿಳಾ ಟ್ರ್ಯಾಪ್ ತಂಡಕ್ಕೆ ಪ್ರಧಾನಮಂತ್ರಿ ಮೆಚ್ಚುಗೆ

ಪ್ರಕಟಣಾ ದಿನಾಂಕ: 01 OCT 2023 8:19PM by PIB Bengaluru

ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಮಹಿಳಾ ಟ್ರ್ಯಾಪ್ ತಂಡ, ಮನೀಶಾ ಕೀರ್, ಪ್ರೀತಿ ರಾಜಕ್ ಮತ್ತು ರಾಜೇಶ್ವರಿ ಕುಮಾರಿ ಅವರ ಅದ್ಭುತ ಪ್ರದರ್ಶನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂದೇಶ ನೀಡಿದ್ದಾರೆ.

“ನಮ್ಮ ಮಹಿಳಾ ಟ್ರ್ಯಾಪ್ ತಂಡದಿಂದ ಕೌಶಲ್ಯ ಮತ್ತು ನಿಖರತೆಯ ಅದ್ಭುತ ಪ್ರದರ್ಶನ ಹೊರಹೊಮ್ಮಿದೆ. ಭಾರತವು ಬೆಳ್ಳಿ ಪದಕವನ್ನು ಗೆದ್ದಿದೆ! ಅಸಾಧಾರಣ ಪ್ರದರ್ಶನ ನೀಡಿದ ಮನಿಶಾ ಕೀರ್, ಪ್ರೀತಿ ರಾಜಕ್ ಮತ್ತು ರಿಯಾ ಕುಮಾರಿಗೆ ಅಭಿನಂದನೆಗಳು” ಎಂದು ಶ್ರೀ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.

 

***


(ಪ್ರಕಟಣೆ ಐ.ಡಿ.: 1963684) ವಿಸಿಟರ್ ಕೌಂಟರ್ : 128