ಪ್ರಧಾನ ಮಂತ್ರಿಯವರ ಕಛೇರಿ
ಸಂವಿಧಾನದ [ನೂರಾ ಇಪ್ಪತ್ತೆಂಟನೇ ತಿದ್ದುಪಡಿ] ಮಸೂದೆ 2023 ಲೋಕಸಭೆಯಲ್ಲಿ ಅಂಗೀಕಾರ : ಪ್ರಧಾನಮಂತ್ರಿ ಶ್ಲಾಘನೆ
प्रविष्टि तिथि:
20 SEP 2023 9:36PM by PIB Bengaluru
ಲೋಕಸಭೆಯಲ್ಲಿ ಸಂವಿಧಾನ [ನೂರಾ ಇಪ್ಪತ್ತೆಂಟನೇ ತಿದ್ದುಪಡಿ] ಮಸೂದೆ 2023 ಅಂಗೀಕಾರವಾಗಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಮಂತ್ರಿಯವರು;
“ಅಭೂತಪೂರ್ವ ಬೆಂಬಲದೊಂದಿಗೆ ಲೋಕಸಭೆಯಲ್ಲಿ ಸಂವಿಧಾನ [ನೂರಾ ಇಪ್ಪತ್ತೆಂಟನೇ ತಿದ್ದುಪಡಿ] ಮಸೂದೆ 2023 ಅಂಗೀಕಾರವಾಗಿರುವುದರಿಂದ ಸಂತೋಷವಾಗಿದೆ. ಪಕ್ಷಾತೀತವಾಗಿ ಮಸೂದೆಯನ್ನು ಬೆಂಬಲಿಸಿ ಮತ ನೀಡಿದ ಸಂಸದರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.
ನಾರಿ ಶಕ್ತಿ ವಂದನ್ ಅಧಿನಿಯಮ್ ಒಂದು ಐತಿಹಾಸಿಕ ಶಾಸನವಾಗಿದ್ದು, ಇದು ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ ಮತ್ತು ರಾಜಕೀಯ ಪ್ರಕ್ರಿಯೆಯಲ್ಲಿ ನಮ್ಮ ಮಹಿಳೆಯರು ಇನ್ನೂ ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳುವುದನ್ನು ಸಕ್ರಿಯಗೊಳಿಸುತ್ತದೆ” ಎಂದು ಹೇಳಿದ್ದಾರೆ.
***
(रिलीज़ आईडी: 1959309)
आगंतुक पटल : 436
इस विज्ञप्ति को इन भाषाओं में पढ़ें:
Malayalam
,
English
,
Urdu
,
हिन्दी
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu