ಪ್ರಧಾನ ಮಂತ್ರಿಯವರ ಕಛೇರಿ

ಪಿಎಂ-ಜೆಎವೈ ಕುರಿತು ಸಮಗ್ರ ವ್ಯಾಪ್ತಿ ಮತ್ತು ಜಾಗೃತಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 'ಆಯುಷ್ಮಾನ್ ಭವ' ಅಭಿಯಾನದ ಗುರಿ ಕೇಂದ್ರೀಕರಿಸಿದೆ: ಪ್ರಧಾನಮಂತ್ರಿ

Posted On: 16 SEP 2023 3:03PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರ ಲೇಖನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ, ಹಾಗೂ “ಪಿಎಂ-ಜೆಎವೈ ಕುರಿತು ಜಾಗೃತಿಯನ್ನು ಅಭಿವೃದ್ಧಿಪಡಿಸುವುದು, ಗ್ರಾಮಗಳು ಮತ್ತು ನಗರ ವಾರ್ಡ್ಗಳಲ್ಲಿ ಸೇವೆಗಳ ಪೂರೈಕೆಗಳು, ಆರೋಗ್ಯ ಖಾತೆ ಐಡಿಗಳನ್ನು ರಚಿಸುವುದು ಮತ್ತು ವಿವಿಧ ಆರೋಗ್ಯವನ್ನು ಒದಗಿಸುವುದರ ಕುರಿತು “ಆಯುಷ್ಮಾನ್ ಭವ” ಅಭಿಯಾನವು ಸಮಗ್ರ ವ್ಯಾಪ್ತಿ ಹಾಗೂ ಗುರಿ ಕೇಂದ್ರೀಕರಿಸಿದೆ” ಎಂದು ಹೇಳಿದ್ದಾರೆ. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರ ಎಕ್ಸ್ ಖಾತೆಯ ಸಂದೇಶವನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು, ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಹೇಳಿದ್ದಾರೆ;

" ‘ಆಯುಷ್ಮಾನ್ ಭವ' ಅಭಿಯಾನವು ಸಮಗ್ರ ವ್ಯಾಪ್ತಿಯನ್ನು ಹೊಂದಿದೆ. ಪಿಎಂ-ಜೆಎವೈ ಬಗ್ಗೆ ಜಾಗೃತಿಯನ್ನು ಅಭಿವೃದ್ಧಿಪಡಿಸುವುದು, ಆರೋಗ್ಯ ಖಾತೆ ಐಡಿಗಳನ್ನು ರಚಿಸುವುದು ಮತ್ತು ಹಳ್ಳಿಗಳಲ್ಲಿ ಮತ್ತು ನಗರ ವಾರ್ಡ್ಗಳಲ್ಲಿ ವಿವಿಧ ಆರೋಗ್ಯ ಸೇವೆಗಳನ್ನು ಹೇಗೆ ಒದಗಿಸುತ್ತಿದೆ ಮುಂತಾದ ಮಾಹಿತಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಉತ್ತಮವಾಗಿ ವಿವರಿಸಿದ್ದಾರೆ.” 



(Release ID: 1958026) Visitor Counter : 64