ಪ್ರಕಟಣಾ ದಿನಾಂಕ:
11 SEP 2023 3:29PM by PIB Bengaluru
ಆಚಾರ್ಯ ವಿನೋಬಾ ಭಾವೆ ಅವರ ಜನ್ಮದಿನದಂದು ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದರು.
ಪ್ರಧಾನ ಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;
“ಆಚಾರ್ಯ ವಿನೋಬಾ ಭಾವೆ ಅವರ ಜನ್ಮದಿನದಂದು ಅವರಿಗೆ ಗೌರವಾರ್ಪಣೆ. ಸಮಾಜ ಸುಧಾರಣೆ ಮತ್ತು ಅಂಚಿನಲ್ಲಿರುವವರ ಉನ್ನತಿಗಾಗಿ ಅವರ ಅಚಲವಾದ ಸಮರ್ಪಣೆ ನಮಗೆ ಸದಾ ಸ್ಫೂರ್ತಿ ನೀಡುತ್ತಲೇ ಇದೆ. ಅವರ ನಿಸ್ವಾರ್ಥತೆ ಮತ್ತು ಏಕತೆಯ ಪರಂಪರೆಯು ಶತಮಾನಗಳವರೆಗೆ ಮಾನವಕುಲಕ್ಕೆ ಮಾರ್ಗದರ್ಶನ ನೀಡಲಿ.
***