ಪ್ರಧಾನ ಮಂತ್ರಿಯವರ ಕಛೇರಿ
ಟರ್ಕಿಯೆ ಗಣರಾಜ್ಯದ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಸಭೆ ನಡೆಸಿದರು
प्रविष्टि तिथि:
10 SEP 2023 8:03PM by PIB Bengaluru
ನವದೆಹಲಿಯಲ್ಲಿ 2023 ರ ಸೆಪ್ಟೆಂಬರ್ 10 ರಂದು ನಡೆದ ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಟರ್ಕಿಯೆ(ಟರ್ಕಿ) ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಭೆ ನಡೆಸಿದರು.
ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ನಾಗರಿಕ ವಿಮಾನಯಾನ ಮತ್ತು ಹಡಗು ಮುಂತಾದ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಸಾಮರ್ಥ್ಯದ ಕುರಿತು ಚರ್ಚೆಗಳು ನಡೆದವು.
ಅಧ್ಯಕ್ಷ ಶ್ರೀ ಎರ್ಡೊಗನ್ ಅವರು ಭಾರತದ ಜಿ20 ಅಧ್ಯಕ್ಷೀಯತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು. ಫೆಬ್ರವರಿ 2023 ರಲ್ಲಿ ಟರ್ಕಿಯೆ(ಟರ್ಕಿ)ಯಲ್ಲಿ ಸಂಭವಿಸಿದ ಭೂಕಂಪದ ನಂತರ ಆಪರೇಷನ್ ದೋಸ್ತ್ ಯೋಜನೆಯಡಿಯಲ್ಲಿ ತ್ವರಿತ ಪರಿಹಾರ ಕಾರ್ಯ ಏರ್ಪಡಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರು ಭಾರತಕ್ಕೆ ಧನ್ಯವಾದ ಅರ್ಪಿಸಿದರು.
ಅಧ್ಯಕ್ಷ ಶ್ರೀ ಎರ್ಡೋಗನ್ ಅವರು ಚಂದ್ರಯಾನ ಮಿಷನ್ ನ ಯಶಸ್ಸಿಗೆ ಪ್ರಧಾನಮಂತ್ರಿಯವರನ್ನು ಅಭಿನಂದಿಸಿದರು ಮತ್ತು ಸೂರ್ಯ ಗ್ರಹದ “ ಆದಿತ್ಯ ಮಿಷನ್”ಗೆ ಕೂಡಾ ಶುಭಾಶಯಗಳನ್ನು ತಿಳಿಸಿದರು.
***
(रिलीज़ आईडी: 1956120)
आगंतुक पटल : 175
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam