ಸಂಪುಟ
azadi ka amrit mahotsav

​​​​​​​ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ 2017ರ ಕೈಗಾರಿಕಾ ಅಭಿವೃದ್ಧಿ ಯೋಜನೆ ಅಡಿ, ಹೆಚ್ಚುವರಿ ನಿಧಿ(ಹಣಕಾಸು) ಅಗತ್ಯ ಪೂರೈಸಲು ಕೇಂದ್ರ ಸಂಪುಟ ಅನುಮೋದನೆ


ಹೆಚ್ಚುವರಿ ಹಣಕಾಸು ಗಾತ್ರ 1,164 ಕೋಟಿ ರೂ. ನೀಡಲು ಒಪ್ಪಿಗೆ

Posted On: 06 SEP 2023 3:48PM by PIB Bengaluru

ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟ ಸಭೆಯು  ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ 2017ರ ಕೈಗಾರಿಕಾ ಅಭಿವೃದ್ಧಿ ಯೋಜನೆ(ಐಡಿಎಸ್)ಗೆ ಹೆಚ್ಚುವರಿಯಾಗಿ 1164.53 ಕೋಟಿ ರೂ. ಆರ್ಥಿಕ ನೆರವು ಒದಗಿಸಲು ಅನುಮೋದನೆ ನೀಡಿದೆ.

ಭಾರತ ಸರ್ಕಾರವು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಕ್ಕೆ 2018ರ ಏಪ್ರಿಲ್ 23ರಂದು 2018ರ ಅಧಿಸೂಚನೆ ಸಂಖ್ಯೆ.2(2)/2018-ಎಸ್ಪಿಎಸ್ ಮೂಲಕ 2017ರ ಕೈಗಾರಿಕಾ ಅಭಿವೃದ್ಧಿ ಯೋಜನೆ ಘೋಷಿಸಿತ್ತು. ಈ ಯೋಜನೆಯಡಿ, ಒಟ್ಟು ಹಣಕಾಸಿನ ವೆಚ್ಚ 131.90 ಕೋಟಿ ರೂ. ಆಗಿತ್ತು. 2021-22ರ ಆರ್ಥಿಕ ವರ್ಷದಲ್ಲಿ ಈ ಹಂಚಿಕೆ ನಿಧಿಯು ಖಾಲಿಯಾಗಿದೆ. ಇದಲ್ಲದೆ, 2028-2029ರ ವರೆಗಿನ ಬದ್ಧತೆಯ ಹೊಣೆಗಾರಿಕೆಗಳನ್ನು ಪೂರೈಸಲು ಹೆಚ್ಚುವರಿ ನಿಧಿಯ ಅವಶ್ಯಕತೆ 1164.53 ಕೋಟಿ ರೂ. ಆಗಿದೆ. 2017ರ ಕೈಗಾರಿಕಾ ಅಭಿವೃದ್ಧಿ ಯೋಜನೆ ಅಡಿ, ಈ ಹೆಚ್ಚುವರಿ ಹಣಕಾಸಿನ ವೆಚ್ಚದ ಹಂಚಿಕೆಗಾಗಿ, ಸಚಿವ ಸಂಪುಟದ ಅನುಮೋದನೆ ಕೋರಲಾಗಿತ್ತು.

 2. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮತ್ತು  ಕೇಂದ್ರ ವಲಯದ ಯೋಜನೆಗಾಗಿ ಇರುವ ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯ ಪ್ರಸ್ತಾವನೆಯನ್ನು ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪರಿಗಣಿಸಿ, ಅನುಮೋದಿಸಲಾಗಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ 2017ರ ಕೈಗಾರಿಕಾ ಅಭಿವೃದ್ಧಿ ಯೋಜನೆಯ ಹೆಚ್ಚುವರಿ ನಿಧಿ ಅಗತ್ಯವನ್ನು 2028-29ರ ವರೆಗೆ ಯೋಜನೆಯಡಿ ಬದ್ಧತೆಯ ಹೊಣೆಗಾರಿಕೆಗಳನ್ನು ಪೂರೈಸಲು, ಈ ಒಪ್ಪಿಗೆ ನೀಡಲಾಗಿದೆ. ಮೇಲಿನ ಯೋಜನೆಯಡಿ ಹೆಚ್ಚುವರಿ ನಿಧಿಗಳ ಅನುಮೋದನೆಯ ಪ್ರಕಾರ, ಈ ಕೆಳಗಿನ ಉತ್ತೇಜನಾ ಕ್ರಮಗಳು ಯೋಜನೆಯ ಅಡಿ ಪ್ರಯೋಜನ ಪಡೆಯುತ್ತವೆ.

i. ಸಾಲ ಸೌಲಭ್ಯ ಪಡೆಯುವ ಉದ್ದೇಶಕ್ಕಾಗಿ ಕೇಂದ್ರ ಬಂಡವಾಳ ಹೂಡಿಕೆ ಪ್ರೋತ್ಸಾಹಕ (ಸಿಸಿಐಐಎಸಿ):
ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಯಾವುದೇ ಭಾಗದಲ್ಲಾದರೂ ಉತ್ಪಾದನೆ(ತಯಾರಿಕೆ) ಮತ್ತು ಸೇವಾ ವಲಯದಲ್ಲಿ ಉದ್ಯಮಗಳ ಗಣನೀಯ ವಿಸ್ತರಣೆಗಾಗಿ ಎಲ್ಲಾ ಅರ್ಹ ಹೊಸ ಕೈಗಾರಿಕಾ ಘಟಕಗಳು ಮತ್ತು ಅಸ್ತಿತ್ವದಲ್ಲಿರುವ ಕೈಗಾರಿಕಾ ಘಟಕಗಳು ಸಾಲ ಸೌಲಭ್ಯ ಪಡೆಯಲು (CCIIAC) ಸ್ಥಾವರ ಮತ್ತು ಯಂತ್ರೋಪಕರಣಗಳ ಮೇಲಿನ 30% ಹೂಡಿಕೆಗೆ ಕೇಂದ್ರದ ಬಂಡವಾಳ ಹೂಡಿಕೆಯ ಪ್ರೋತ್ಸಾಹ ನೀಡಲಾಗುತ್ತದೆ. ಅದು 5  ಕೋಟಿ ರೂ.ಗರಿಷ್ಠ ಮಿತಿಗೆ ಒಳಪಟ್ಟಿರುತ್ತದೆ.

ii. ಕೇಂದ್ರದ ಸಮಗ್ರ ವಿಮಾ ಪ್ರೋತ್ಸಾಹಕ (ಸಿಸಿಐಐ):
ಎಲ್ಲಾ ಅರ್ಹ ಹೊಸ ಕೈಗಾರಿಕಾ ಘಟಕಗಳು ಮತ್ತು ಚಾಲ್ತಿಯಲ್ಲಿರುವ ಕೈಗಾರಿಕಾ ಘಟಕಗಳು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಎಲ್ಲೇ ಇದ್ದರೂ ಅವುಗಳ ಗಣನೀಯ ವಿಸ್ತರಣೆಗೆ ವಾಣಿಜ್ಯ ಉತ್ಪಾದನೆ/ಕಾರ್ಯಾಚರಣೆ ಆರಂಭಿಸಿದ ದಿನಾಂಕದಿಂದ ಗರಿಷ್ಠ 5 ವರ್ಷಗಳವರೆಗೆ ಕಟ್ಟಡ, ಘಟಕ ಮತ್ತು ಯಂತ್ರೋಪಕರಣಗಳ ಮೇಲಿನ ವಿಮೆಯ ಮೇಲೆ 100% ವಿಮಾ ಕಂತು ಮರುಪಾವತಿಗೆ ಅರ್ಹವಾಗಿರುತ್ತವೆ.

3. ಒಳಗೊಂಡಿರುವ ಖರ್ಚು:
2017ರ ಕೈಗಾರಿಕಾ ಅಭಿವೃದ್ಧಿ ಯೋಜನೆ ಅಡಿ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಕ್ಕೆ 2021-2022ರ ಅವಧಿಯಲ್ಲಿ ಬಿಡುಗಡೆಯಾದ 131.90 ಕೋಟಿ ರೂ. ಇದಲ್ಲದೆ, 2028-29ರ ವರೆಗಿನ ಯೋಜನೆಯಡಿ, ಹೆಚ್ಚುವರಿ ಹಣದ ಅವಶ್ಯಕತೆಗಳ ಮೂಲಕ ಬದ್ಧತೆಯ ಹೊಣೆಗಾರಿಕೆಗಳನ್ನು ಪೂರೈಸಲು 1164.53 ಕೋಟಿ ರೂ. ಮೊತ್ತದ ಹೆಚ್ಚುವರಿ ಹಣಕಾಸಿನ ವೆಚ್ಚ ಒದಗಿಸಲು ಸಂಪುಟ ಅನುಮೋದನೆ ನೀಡಿದೆ.
ನೋಂದಾಯಿತ 774 ಕೈಗಾರಿಕಾ ಘಟಕಗಳಿಂದ ಸುಮಾರು 48,607 ಜನರಿಗೆ ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

****
 


(Release ID: 1955191) Visitor Counter : 137