ಪ್ರಧಾನ ಮಂತ್ರಿಯವರ ಕಛೇರಿ
ಶಿಕ್ಷಕರ ದಿನದಂದು ಶಿಕ್ಷಕರಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದರು
Posted On:
05 SEP 2023 9:12AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶಿಕ್ಷಕರ ದಿನದಂದು ನಮ್ಮ ಭವಿಷ್ಯ ಮತ್ತು ಸ್ಫೂರ್ತಿದಾಯಕ ಕನಸುಗಳನ್ನು ನಿರ್ಮಿಸುವಲ್ಲಿ ಶಿಕ್ಷಕರ ಅಚಲ ಸಮರ್ಪಣೆ ಮತ್ತು ಮಹತ್ತರ ಪ್ರಭಾವಕ್ಕಾಗಿ ಅವರಿಗೆ ನಮನ ಸಲ್ಲಿಸಿದ್ದಾರೆ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ಜಯಂತಿಯಂದು ಶ್ರೀ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದರು.
ಪ್ರಧಾನಮಂತ್ರಿ ಅವರು ನಿನ್ನೆ ಶಿಕ್ಷಕರೊಂದಿಗೆ ನಡೆಸಿದ ಸಂವಾದದ ಮುಖ್ಯಾಂಶಗಳನ್ನು ಹಂಚಿಕೊಂಡರು.
ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;
"ನಮ್ಮ ಭವಿಷ್ಯವನ್ನು ನಿರ್ಮಿಸುವಲ್ಲಿ ಮತ್ತು ಕನಸುಗಳನ್ನು ಪ್ರೇರೇಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. #TeachersDay ರಂದು, ಅವರ ಅಚಲ ಸಮರ್ಪಣೆ ಮತ್ತು ದೊಡ್ಡ ಪ್ರಭಾವಕ್ಕಾಗಿ ನಾವು ಅವರಿಗೆ ವಂದಿಸುತ್ತೇವೆ. ಡಾ. ಎಸ್. ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನಗಳು.
ನಿನ್ನೆ ಶಿಕ್ಷಕರೊಂದಿಗಿನ ಸಂವಾದದ ಮುಖ್ಯಾಂಶಗಳು ಇಲ್ಲಿವೆ...
***
(Release ID: 1954854)
Visitor Counter : 139
Read this release in:
Manipuri
,
English
,
Urdu
,
Hindi
,
Marathi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam