ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯು 2023 ರ ಸೆಪ್ಟೆಂಬರ್ 4 ರಿಂದ 6 ರವರೆಗೆ ಹೈದರಾಬಾದ್‌ನಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವ ಹೊಂದಿರುವ ಕೃಷಿ ಕುರಿತು ಜಿ20 ತಾಂತ್ರಿಕ ಕಾರ್ಯಾಗಾರವನ್ನು ಆಯೋಜಿಸಿದೆ


ಹವಾಮಾನ ಬದಲಾವಣೆಯ ಸವಾಲುಗಳನ್ನು ಚರ್ಚಿಸಲು ಮತ್ತು ಪ್ರಾಧಾನ್ಯತೆ ನೀಡಲು ಪ್ರಪಂಚದಾದ್ಯಂತದ ತಜ್ಞರನ್ನು ಒಟ್ಟುಗೂಡಿಸುವ ಗುರಿಯನ್ನು ಈ ಕಾರ್ಯಾಗಾರ ಹೊಂದಿದೆ.

ಹವಾಮಾನ ಬದಲಾವಣೆಯಿಂದ ಎದುರಾಗುವ ಸವಾಲುಗಳನ್ನು ಎದುರಿಸುವಲ್ಲಿ ದೇಶಗಳ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಲು ಕಾರ್ಯಾಗಾರವು ಸಹಕಾರ ಮತ್ತು ಮಾಹಿತಿಯ ವಿನಿಮಯಕ್ಕೆ ಪ್ರಾಮುಖ್ಯತೆ ನೀಡುತ್ತದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಕು.  ಶೋಭಾ ಕರಂದ್ಲಾಜೆ ಅವರು ಇಂದು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಈ ಕಾರ್ಯಾಗಾರದಿಂದ ಹೊರಹೊಮ್ಮುವ ಶಿಫಾರಸುಗಳು ಹವಾಮಾನ-ಸಹಿಷ್ಣು ಕೃಷಿಯನ್ನು ಸಾಧಿಸುವತ್ತ ರೈತರಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಭರವಸೆ ವ್ಯಕ್ತಪಡಿಸಿದರು.

ಉನ್ನತ ಮಟ್ಟದ ಹವಾಮಾನ ಸ್ಥಿತಿಸ್ಥಾಪಕ ಕೃಷಿ ಪ್ರಕರಣದ ಅಧ್ಯಯನಗಳು ಮತ್ತು ಅನುಭವಗಳು, ನೀತಿ, ಹಣಕಾಸು ಮತ್ತು ಹವಾಮಾನ ಸ್ಥಿತಿಸ್ಥಾಪಕ ಕೃಷಿಗಾಗಿ ಸಾಂಸ್ಥಿಕ ಅಗತ್ಯಗಳನ್ನು ಮುಂಬರುವ ತಾಂತ್ರಿಕ ಅಧಿವೇಶನಗಳಲ್ಲಿ ಚರ್ಚಿಸಲಾಗುವುದು

Posted On: 04 SEP 2023 5:02PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ (ಡಿ.ಎ.ಆರ್.ಇ), 4-6 ಸೆಪ್ಟೆಂಬರ್ 2023 ರಂದು ಹೈದರಾಬಾದ್‌ನಲ್ಲಿ “ಹವಾಮಾನ ಸ್ಥಿತಿಸ್ಥಾಪಕ ಕೃಷಿ” ಕುರಿತು ಜಿ20 ತಾಂತ್ರಿಕ ಕಾರ್ಯಾಗಾರವನ್ನು ಆಯೋಜಿಸುತ್ತಿದೆ. 

ಕಾರ್ಯಾಗಾರವು ಹವಾಮಾನ ಬದಲಾವಣೆಯ ಸವಾಲುಗಳನ್ನು ಚರ್ಚಿಸಲು ಮತ್ತು ಪ್ರಾಮುಖ್ಯತೆಯನ್ನು ತೋರಿಸಲು ಪ್ರಪಂಚದಾದ್ಯಂತದ ತಜ್ಞರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ದೇಶಗಳ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಕಾರ ಮತ್ತು ಮಾಹಿತಿಯ ವಿನಿಮಯಕ್ಕೆ ಪ್ರಾಧಾನ್ಯತೆ ನೀಡುತ್ತದೆ.  

ಮೂರು ದಿನಗಳ ಕಾರ್ಯಕ್ರಮವು ಇಂದು ಉದ್ಘಾಟನಾ ಅಧಿವೇಶನದೊಂದಿಗೆ ಪ್ರಾರಂಭವಾಯಿತು. ಇದನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಕು.  ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು.  

ಮೊದಲ ದಿನವು "ಹವಾಮಾನ ಸ್ಥಿತಿಸ್ಥಾಪಕ ಕೃಷಿ ಸಂಶೋಧನೆ  ಮತ್ತು ಆವಿಷ್ಕಾರಗಳ ಅಗತ್ಯಗಳು" ಎಂಬ ವಿಷಯಕ್ಕೆ ಕೇಂದ್ರೀಕೃತವಾಗಿತ್ತು, ಇದರಲ್ಲಿ ಗಣ್ಯ ಭಾಷಣಕಾರರು ಕೃಷಿಯಲ್ಲಿ ಸ್ಥಿತಿಸ್ಥಾಪಕತ್ವವನ್ನು ಸಾಧಿಸಲು ತಮ್ಮ ದೇಶಗಳಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.  ಕೃಷಿ ಆಹಾರ ವ್ಯವಸ್ಥೆಗಳಲ್ಲಿನ ಅನಿಶ್ಚಿತತೆಯನ್ನು ಕಡಿಮೆ ಮಾಡಲು ಈ ಉದಯೋನ್ಮುಖ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ವೈಜ್ಞಾನಿಕ ಮತ್ತು ನವೀನ ಪರಿಹಾರಗಳನ್ನು ಅವರು ಪಟ್ಟಿ ಮಾಡುತ್ತಾರೆ.  ಜಿ20 ಸದಸ್ಯ ರಾಷ್ಟ್ರಗಳು, ಅತಿಥಿ-ಆಹ್ವಾನಿತ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ವಿದೇಶಿ ಪ್ರತಿನಿಧಿಗಳು ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.  ಕೃಷಿ ಸಚಿವಾಲಯ ಮತ್ತು ಇತರ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಸಹ ತಾಂತ್ರಿಕ ಅಧಿವೇಶನಗಳಲ್ಲಿ ಹವಾಮಾನ ಬದಲಾವಣೆ ಮತ್ತು ಜಾಗತಿಕ ಸನ್ನಿವೇಶದಲ್ಲಿ ಕೃಷಿಯ ಸುಸ್ಥಿರ ಅಭಿವೃದ್ಧಿಗೆ ಇತರ ತಂತ್ರಗಳು ಮತ್ತು ವಿಧಾನಗಳ ಕುರಿತು ಕೃಷಿ ಸಂಶೋಧನೆಯ ವಿವಿಧ ವಿಷಯಗಳ ಕುರಿತು ಚರ್ಚಿಸಲು ಸಭೆಯಲ್ಲಿ ಭಾಗವಹಿಸುತ್ತಾರೆ

"ಕೃಷಿಯು ಅತ್ಯಂತ ಸೂಕ್ಷ್ಮ ಕ್ಷೇತ್ರವಾಗಿದ್ದು, ಜಿ 20 ರಾಷ್ಟ್ರಗಳಲ್ಲಿ ಈಗಾಗಲೇ ಆಗುತ್ತಿರುವ ಹವಾಮಾನ ಬದಲಾವಣೆಯಿಂದ ಹೆಚ್ಚು ಪ್ರಭಾವಿತವಾಗಿದೆ" ಎಂದು ಕೇಂದ್ರ ಸಚಿವರು ಹೇಳಿದರು. "ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಾವೆಲ್ಲರೂ ಈಗಾಗಲೇ ಅನುಭವಿಸುತ್ತಿದ್ದೇವೆ ಮತ್ತು ಈ ಕಾರ್ಯಾಗಾರದಿಂದ ಹೊರಹೊಮ್ಮುವ ಶಿಫಾರಸುಗಳು ಹವಾಮಾನ-ಸ್ಥಿತಿಸ್ಥಾಪಕತ್ವ ಹೊಂದಿರುವ ಕೃಷಿಯನ್ನು ಸಾಧಿಸುವತ್ತ ಮಾರ್ಗದರ್ಶನ ನೀಡುತ್ತವೆ" ಎಂದು ಅವರು ಹೇಳಿದರು.

ಭಾರತದಲ್ಲಿ ಕೃಷಿಯು ಹವಾಮಾನ ಬದಲಾವಣೆ ಮತ್ತು ವ್ಯತ್ಯಾಸಕ್ಕೆ ಹೆಚ್ಚು ದುರ್ಬಲವಾಗಿದೆ ಎಂದು ಡಿ.ಎ.ಆರ್.ಇ. ಕಾರ್ಯದರ್ಶಿ ಮತ್ತು ಐ.ಸಿ.ಎ.ಆರ್. ಮಹಾನಿರ್ದೇಶಕರಾದ ಡಾ. ಹಿಮಾಂಶು ಪಾಠಕ್ ಅವರು ಹೇಳಿದರು. 

ಇತ್ತೀಚಿನ ವರ್ಷಗಳಲ್ಲಿ, ಹವಾಮಾನ ವೈಪರೀತ್ಯಗಳ ಆವರ್ತನವು ಹೆಚ್ಚಿದೆ, ಇದರ ಪರಿಣಾಮವಾಗಿ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಕೃಷಿ ಉತ್ಪಾದನೆ ಮತ್ತು ಆಹಾರ ಭದ್ರತೆಗೆ ಹೆಚ್ಚಿನ ಅಪಾಯಗಳಿವೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಭಾರತದಲ್ಲಿ ಎದುರಿಸುವಲ್ಲಿ ಐ.ಸಿ.ಎ.ಆರ್. ನ ಪ್ರಯತ್ನಗಳು ಬಹಳ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.  

"ಹವಾಮಾನ ಅಪಾಯವು ಬರಗಳು, ಪ್ರವಾಹಗಳು ಮತ್ತು ಮಳೆಯಲ್ಲಿನ ಹೆಚ್ಚಿನ ಅಂತರ್-ಋತುವಿನ ವ್ಯತ್ಯಾಸದ ಸಂಭವದ ವಿಷಯದಲ್ಲಿ ಪ್ರಕಟವಾಗುತ್ತದೆ. ಆದ್ದರಿಂದ, ಅಪಾಯ - ಹವಾಮಾನ ಮತ್ತು ಇತರ ರೀತಿಯ ಅಪಾಯಗಳು - ಸಂಶೋಧಕರು ಮತ್ತು ನೀತಿ ನಿರೂಪಕರಿಗೆ ಪ್ರಮುಖ ಸವಾಲಾಗಿ ಉಳಿದಿದೆ " ಎಂದು ಹೆಚ್ಚುವರಿ ಕಾರ್ಯದರ್ಶಿ ಮತ್ತು ಡಿ.ಎ.ಆರ್.ಇ. ಎಫ್.ಎ. ಶ್ರೀಮತಿ  ಅಲ್ಕಾ ನಂಗಿಯಾ ಅರೋರಾ ಅವರು  ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತದ ಜಿ20 ನ ನಾಯಕತ್ವದ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಜಿ20 ರಾಷ್ಟ್ರಗಳು ಆಹಾರ ಭದ್ರತೆಯನ್ನು ಹೆಚ್ಚಿಸಲು ಸುಸ್ಥಿರ ಕೃಷಿಗಾಗಿ ಹವಾಮಾನ-ಸ್ಥಿತಿಸ್ಥಾಪಕ ಅಭ್ಯಾಸಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರವರ್ತಕರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಬಹುದು ಎಂದು ಹವಾಮಾನ-ಸ್ಥಿತಿಸ್ಥಾಪಕ ಕೃಷಿಯ ತಾಂತ್ರಿಕ ಕಾರ್ಯಾಗಾರದ ಅಧ್ಯಕ್ಷ ಡಾ. ಎಸ್.ಕೆ.  ಚೌಧರಿ ಅವರು ಹೇಳಿದರು. 

" ಜಾಗೃತಿ ಮೂಡಿಸಲು ಮತ್ತು ರೈತರು ಮತ್ತು ಇತರ ಮಧ್ಯಸ್ಥಗಾರರ ಸಾಮರ್ಥ್ಯವನ್ನು ನಿರ್ಮಿಸಲು ಭಾರತದ ದುರ್ಬಲ ಜಿಲ್ಲೆಗಳಲ್ಲಿ ಹವಾಮಾನ ವ್ಯತ್ಯಾಸವನ್ನು ನಿಭಾಯಿಸಲು ಸ್ಥಳ-ನಿರ್ದಿಷ್ಟ ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನಗಳನ್ನು ಭಾರತದಲ್ಲಿ ಪ್ರದರ್ಶಿಸಲಾಗುತ್ತಿದೆ.  ಈ ಕಾರ್ಯಾಗಾರದ ಚರ್ಚೆಗಳು ಕೃಷಿ ಕ್ಷೇತ್ರದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಸಮಗ್ರವಾಗಿ ಪರಿಹರಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಸೂಚಿಗೆ ಮಾರ್ಗಸೂಚಿಯನ್ನು ಒದಗಿಸುತ್ತದೆ ಎಂದು ಖಚಿತಪಡಿಸಿದೆ ಎಂದು ಅವರು ಹೇಳಿದರು

 ವಿವಿಧ ರಾಷ್ಟ್ರಗಳಿಂದ ಆಗಮಿಸಿ ತಾಂತ್ರಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಕ್ಕಾಗಿ  ಗಣ್ಯರು ಮತ್ತು ಪ್ರತಿನಿಧಿಗಳಿಗೆ ಐಸಿಎಆರ್ - ಸಿ‌.ಆರ್.ಐ.ಡಿ.ಎ. ನಿರ್ದೇಶಕ ಡಾ.  ವಿ.ಕೆ.  ಸಿಂಗ್ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

ಜಿ20ಯ ಭಾರತದ ಅಧ್ಯಕ್ಷೀಯ ವಿಷಯವು ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯವಾಗಿದೆ. ಇದು ಜಗತ್ತಿಗೆ ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ನಮ್ಮ ನಡುವಿನ ಒಗ್ಗಟ್ಟು ಮತ್ತು ಸಾಮರಸ್ಯದ ಮನೋಭಾವವನ್ನು ವಿವರಿಸುತ್ತದೆ.  ಮೂರು ದಿನಗಳ ಕಾರ್ಯಕ್ರಮದ ಮುಂಬರುವ ತಾಂತ್ರಿಕ ಅಧಿವೇಶನಗಳಲ್ಲಿ ಉನ್ನತ ಮಟ್ಟದ ಹವಾಮಾನ ಸ್ಥಿತಿಸ್ಥಾಪಕ ಕೃಷಿ ಪ್ರಕರಣಗಳ ಅಧ್ಯಯನಗಳು ಮತ್ತು ಅನುಭವಗಳು, ನೀತಿ, ಹಣಕಾಸು ಮತ್ತು ಹವಾಮಾನ ಸ್ಥಿತಿಸ್ಥಾಪಕ ಕೃಷಿಗಾಗಿ ಸಾಂಸ್ಥಿಕ ಅಗತ್ಯಗಳನ್ನು ಚರ್ಚಿಸಲಾಗುವುದು. 

ಕಾರ್ಯಕ್ರಮದ ಭಾಗವಾಗಿ, ಸೆಪ್ಟೆಂಬರ್ 5, 2023 ರಂದು, ಪ್ರತಿನಿಧಿಗಳನ್ನು ಐಸಿಎಆರ್-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ (ಐಐಎಂಆರ್) ಹೈದರಾಬಾದ್‌ಗೆ ವಿಹಾರ ಭೇಟಿಗೆ ಕರೆದೊಯ್ಯಲಾಗುತ್ತದೆ. ಇಲ್ಲಿ  ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ 2023 ಪ್ರಯುಕ್ತ ಸಿರಿಧಾನ್ಯ ಕುರಿತು ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ವೈಜ್ಞಾನಿಕ ಪ್ರಗತಿಯನ್ನು ಪ್ರದರ್ಶಿಸಲಾಗುತ್ತದೆ.

ಭಾರತವು ಸಿರಿಧಾನ್ಯ ಕ್ಷೇತ್ರದಲ್ಲಿ ತನ್ನ ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿ ಉಪಕ್ರಮಗಳನ್ನು ಬಲಪಡಿಸಲು ಜಾಗತಿಕ ಅವಕಾಶಗಳನ್ನು ಎದುರು ನೋಡುತ್ತಿದೆ ಮತ್ತು ತಮ್ಮತಮ್ಮ ದೇಶಗಳಲ್ಲಿ ಈ ಬೆಳೆಗಳನ್ನು ಅಭಿವೃದ್ಧಿಪಡಿಸಲು ಬೇಕಾದ ಪೂರಕ ಸಹಾಯ ಮಾಡಲು ಇತರ ದೇಶಗಳೊಂದಿಗೆ ಭಾರತ ಸಹಕರಿಸುತ್ತದೆ.

ಇದಾದ ನಂತರ ಪ್ರತಿನಿಧಿಗಳನ್ನು 5 ಸೆಪ್ಟೆಂಬರ್ 2023 ರಂದು ಒಂದು ಸಣ್ಣ ಪ್ರವಾಸವಾಗಿ, ಸಂಗೀತದ ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಚಿತ್ರಿಸುವ ಭಾರತೀಯ ಜಾನಪದ ಕಲಾವಿದರ ನೇರ ನೃತ್ಯ ಪ್ರದರ್ಶನಗಳನ್ನು ವೀಕ್ಷಿಸಲು ಹೈದರಾಬಾದ್‌ನ ಶಿಲ್ಪಾರಾಮಕ್ಕೆ ಕರೆದೊಯ್ಯಲಾಗುವುದು. ಭಾರತದ ಸಾಂಪ್ರದಾಯಿಕ ಉತ್ಪನ್ನಗಳನ್ನು ಮತ್ತು ಹೈದರಾಬಾದ್‌ನ ಶಿಲ್ಪರಾಮಮ್ ಕಾಂಪ್ಲೆಕ್ಸ್‌ನಲ್ಲಿ ಅವುಗಳನ್ನು ಖರೀದಿಸುವ ಅವಕಾಶವಿರುತ್ತದೆ.

6ನೇ ಸೆಪ್ಟೆಂಬರ್ 2023 ರಂದು ಪ್ರತಿನಿಧಿಗಳನ್ನು ಐಸಿಎಆರ್ - ಸಿ‌.ಆರ್.ಐ.ಡಿ.ಎ. ಹಯತ್‌ ನಗರ ಸಂಶೋಧನಾ ಫಾರ್ಮ್‌ಗೆ ವಿಹಾರ ಭೇಟಿಗೆ ಕರೆದೊಯ್ಯಲಾಗುತ್ತದೆ, ಅಲ್ಲಿ ಅವರನ್ನು ಹೊಲ ಫಾರ್ಮ್‌ಗಳಿಗೆ ಕರೆದೊಯ್ಯಲಾಗುತ್ತದೆ ಮತ್ತು ಬೆಳೆಗಳು ಮತ್ತು ಅವುಗಳ ನಿರ್ವಹಣೆಯ ಅವಲೋಕನಕ್ಕೆ ಅವಕಾಶವನ್ನು ನೀಡಲಾಗುತ್ತದೆ.  

ಸ್ಥಳೀಯ ಜಿಲ್ಲಾಡಳಿತದ ಬೆಂಬಲದೊಂದಿಗೆ, ನಿಕಟ ಸಮನ್ವಯದೊಂದಿಗೆ ಕೇಂದ್ರ ಕೃಷಿ ಇಲಾಖೆಯು ಪ್ರತಿನಿಧಿಗಳ ಸುರಕ್ಷತೆ ಮತ್ತು ಭದ್ರತೆಗಾಗಿ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ.  ಸೆಪ್ಟೆಂಬರ್ 6-7, 2023 ರಂದು ಪ್ರತಿನಿಧಿಗಳು ತಮ್ಮ ದೇಶಗಳಿಗೆ ಹೊರಡುತ್ತಾರೆ.

 

***

 


(Release ID: 1954727) Visitor Counter : 213