ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಬೆಟ್ಟಿಂಗಿಗೆ ಸಂಬಂಧಪಟ್ಟ ನೇರ ಮತ್ತು ಪರೋಕ್ಷ ಜಾಹೀರಾತುಗಳಿಗೆ ಅವಕಾಶ ನೀಡದಂತೆ  ಮಾಧ್ಯಮ ಸಂಸ್ಥೆಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಲಹೆ


ಜೂಜು/ಬೆಟ್ಟಿಂಗ್ ಜಾಹೀರಾತುಗಳಲ್ಲಿ ಕಾಳಧನದ ಪಾಲುದಾರಿಕೆ ಇರುವ ಸಾಧ್ಯತೆ; ಪ್ರಮುಖ ಕ್ರೀಡಾ ಕೂಟಗಳ ಸಂದರ್ಭದಲ್ಲಿ ಇವುಗಳ ಹೆಚ್ಚಳ ಕಂಡುಬಂದಿದೆ; ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗುವ ಸಾಧ್ಯತೆ ಇದೆ. 

Posted On: 25 AUG 2023 1:20PM by PIB Bengaluru

ಬೆಟ್ಟಿಂಗ್ / ಜೂಜು ಆಡುವ  ಬಗ್ಗೆ ಯಾವುದೇ ರೂಪದಲ್ಲಿ ಜಾಹೀರಾತುಗಳು / ಪ್ರಚಾರ ಮಾಹಿತಿಯನ್ನು ಪ್ರಕಟಿಸದಂತೆ/ತೋರಿಸದಂತೆ ಮಾಧ್ಯಮ ಸಂಸ್ಥೆಗಳು, ಆನ್ಲೈನ್ ಜಾಹೀರಾತು ಮಧ್ಯವರ್ತಿಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಸೇರಿದಂತೆ ಎಲ್ಲಾ ಭಾಗೀದಾರರಿಗೆ  ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇಂದು ಸಲಹೆ ನೀಡಿದೆ. ಈ ಸಲಹೆಯನ್ನು ಅನುಸರಿಸಲು ವಿಫಲವಾದರೆ ವಿವಿಧ ಕಾನೂನುಗಳ ಅಡಿಯಲ್ಲಿ ಭಾರತ ಸರ್ಕಾರದಿಂದ ಸೂಕ್ತ ಕ್ರಮವನ್ನು ಆಹ್ವಾನಿಸಿದಂತಾಗಬಹುದು  ಎಂದು ಅದು ಹೇಳಿದೆ.

ಜೂಜಿನ ಅಪ್ಲಿಕೇಶನ್ ಗಳ ಬಳಕೆದಾರರಿಂದ ಗಣನೀಯ ಹಣವನ್ನು ಸಂಗ್ರಹಿಸಿದ ಏಜೆಂಟರ ಜಾಲದ ವಿರುದ್ಧ ಇತ್ತೀಚೆಗೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮವನ್ನು ಸಚಿವಾಲಯವು ಉಲ್ಲೇಖಿಸಿದೆ. ಮತ್ತು ಆ ಹಣ ಭಾರತದಿಂದ ಹೊರಗೆ ಹೋಗಿದೆ. ಜೂಜಿನ / ಬೆಟ್ಟಿಂಗ್ ವೇದಿಕೆಗಳ (ಪ್ಲಾಟ್ಫಾರ್ಮ್ಗಳ) ಜಾಹೀರಾತುಗಳು ಗ್ರಾಹಕರಿಗೆ, ವಿಶೇಷವಾಗಿ ಯುವಕರು ಮತ್ತು ಮಕ್ಕಳಿಗೆ ಗಮನಾರ್ಹ ಆರ್ಥಿಕ ಮತ್ತು ಸಾಮಾಜಿಕ-ಆರ್ಥಿಕ ಅಪಾಯವನ್ನುಂಟುಮಾಡುತ್ತವೆ ಎಂದು ಅದು ಪುನರುಚ್ಚರಿಸಿದೆ. ಈ ಕಾರ್ಯವಿಧಾನವು ಮನಿ ಲಾಂಡರಿಂಗ್ ಜಾಲಗಳೊಂದಿಗೆ ಸಂಪರ್ಕವನ್ನು ಹೊಂದಿದೆ, ಆ ಮೂಲಕ ದೇಶದ ಆರ್ಥಿಕ ಭದ್ರತೆಗೆ ಬೆದರಿಕೆ ಹಾಕುತ್ತದೆ ಎಂದು ಅದು ಹೇಳಿದೆ.

ಈ ಅಕ್ರಮಗಳ ಜೊತೆಗೆ, ಅಂತಹ ಜಾಹೀರಾತುಗಳಿಗೆ ಪಾವತಿಸಲು ಕಾಳಧನವನ್ನು ಬಳಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಚಿವಾಲಯವು  ತಿಳಿಸಿದೆ. ಆ ನಿಟ್ಟಿನಲ್ಲಿ, ಜಾಹೀರಾತು ಮಧ್ಯವರ್ತಿಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಸೇರಿದಂತೆ ಕೆಲವು ಮಾಧ್ಯಮ ಸಂಸ್ಥೆಗಳು ಕ್ರಿಕೆಟ್ ಪಂದ್ಯಾವಳಿಗಳು ಸೇರಿದಂತೆ ಪ್ರಮುಖ ಕ್ರೀಡಾಕೂಟಗಳ ಸಮಯದಲ್ಲಿ ಬೆಟ್ಟಿಂಗ್ ಮತ್ತು ಜೂಜಿನ ವೇದಿಕೆಗಳ ನೇರ ಮತ್ತು ಪರೋಕ್ಷ ಜಾಹೀರಾತುಗಳಿಗೆ ಅವಕಾಶ ನೀಡುತ್ತಿರುವುದನ್ನು  ಸಚಿವಾಲಯ ಗಮನಿಸಿದೆ.  ಇದಲ್ಲದೆ, ಪ್ರಮುಖ ಕ್ರೀಡಾಕೂಟದಲ್ಲಿ, ವಿಶೇಷವಾಗಿ ಕ್ರಿಕೆಟ್ ಸಮಯದಲ್ಲಿ ಅಂತಹ ಬೆಟ್ಟಿಂಗ್ ಮತ್ತು ಜೂಜಿನ ವೇದಿಕೆಗಳ ಪ್ರಚಾರದಲ್ಲಿ ಭಾರೀ  ಹೆಚ್ಚಳವಾಗುವ ಪ್ರವೃತ್ತಿ ಕಂಡುಬಂದಿದೆ  ಮತ್ತು ಅಂತಹ ಒಂದು ಪ್ರಮುಖ ಅಂತರರಾಷ್ಟ್ರೀಯ ಪಂದ್ಯಾವಳಿ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ ಎಂಬುದನ್ನೂ  ಸಚಿವಾಲಯ ಗಮನಿಸಿದೆ.

ಬೆಟ್ಟಿಂಗ್ / ಜೂಜಿನ ವೇದಿಕೆಗಳನ್ನು ಪ್ರಚಾರ ಮಾಡದಂತೆ ಮಾಧ್ಯಮ ವೇದಿಕೆಗಳನ್ನು ಎಚ್ಚರಿಸಲು ಸಚಿವಾಲಯ ಸಲಹೆಗಳನ್ನು ನೀಡಿದೆ. ಭಾರತೀಯ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಇಂತಹ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಆನ್ ಲೈನ್ ಜಾಹೀರಾತು ಮಧ್ಯವರ್ತಿಗಳಿಗೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಸಚಿವಾಲಯವು 13.06.2022, 03.10.2022 ಮತ್ತು 06.04.2023 ರಂದು ನೀಡಿರುವ ಸಲಹೆಗಳನ್ನು ಉಲ್ಲೇಖಿಸಲಾಗಿದ. ಬೆಟ್ಟಿಂಗ್ ಮತ್ತು ಜೂಜಾಟವು ಕಾನೂನುಬಾಹಿರ ಚಟುವಟಿಕೆಯಾಗಿದೆ ಮತ್ತು ಆದ್ದರಿಂದ ಯಾವುದೇ ಮಾಧ್ಯಮ ವೇದಿಕೆಗಳಲ್ಲಿ ಅಂತಹ ಚಟುವಟಿಕೆಗಳ ನೇರ ಅಥವಾ ಪರೋಕ್ಷ ಜಾಹೀರಾತು / ಪ್ರಚಾರವು ಗ್ರಾಹಕ ಸಂರಕ್ಷಣಾ ಕಾಯ್ದೆ, 2019, ಪ್ರೆಸ್ ಕೌನ್ಸಿಲ್ ಕಾಯ್ದೆ 1978 ಸೇರಿದಂತೆ ವಿವಿಧ ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದು ಈ ಸಲಹೆಗಳು ತಿಳಿಸಿವೆ.

ಇದಲ್ಲದೆ, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು 2021 ಕ್ಕೆ ಸಂಬಂಧಿಸಿ  ಇತ್ತೀಚೆಗೆ ತಿದ್ದುಪಡಿ ಮಾಡಲಾದ ನಿಯಮ 3 (1) (ಬಿ) ಮಧ್ಯವರ್ತಿಗಳು ಸ್ವತಃ ಸಮಂಜಸವಾದ ಪ್ರಯತ್ನಗಳನ್ನು ಮಾಡಬೇಕು ಮತ್ತು ಕಂಪ್ಯೂಟರ್ ಸಂಪನ್ಮೂಲದ ಬಳಕೆದಾರರು " ಅನುಮತಿಸದ ಆನ್ಲೈನ್ ಆಟದ ಸ್ವರೂಪದಲ್ಲಿರುವಂತಹ ಯಾವುದೇ ಮಾಹಿತಿಯನ್ನು ಪ್ರದರ್ಶಿಸಲು, ಅಪ್ಲೋಡ್ ಮಾಡಲು, ಮಾರ್ಪಡಿಸಲು, ಪ್ರಕಟಿಸಲು, ರವಾನಿಸಲು, ಸಂಗ್ರಹಿಸಲು, ನವೀಕರಿಸಲು ಅಥವಾ ಹಂಚಿಕೊಳ್ಳದಿರಲು ಕ್ರಮಕೈಗೊಳ್ಳಬೇಕು. (x) ಜಾಹೀರಾತು ಅಥವಾ ಸರಕಾರಿ ನಿಯಮಗಳು ಅನುಮತಿಸದ/ನಿಷೇದಿಸಿದ ಜಾಹೀರಾತು ಅಥವಾ ಅನುಮತಿ ಇಲ್ಲದ  ಆನ್ ಲೈನ್ ಆಟವಲ್ಲದೆ ಆನ್ ಲೈನ್ ಆಟದ ಪ್ರಚಾರದ ಸ್ವರೂಪದಲ್ಲಿರುವ, ಅಥವಾ ಆನ್ ಲೈನ್ ಆಟವನ್ನು ನೀಡುವ ಯಾವುದೇ ಆನ್ ಲೈನ್ ಗೇಮಿಂಗ್ ಗಳಿಗೆ ಮಧ್ಯವರ್ತಿಯು ಅವಕಾಶ ಕೊಡಬಾರದು.

ಲಗತ್ತಿಸಲಾದ ಹಿಂದಿನ ಸಲಹೆಗಳೊಂದಿಗೆ ಈಗಿನ ಸಲಹೆಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

*****

 


(Release ID: 1952106) Visitor Counter : 113