ಪ್ರಧಾನ ಮಂತ್ರಿಯವರ ಕಛೇರಿ
ದೇಶವನ್ನು ಮುನ್ನಡೆಸಲು ಮಹಿಳಾ ನೇತೃತ್ವದ ಅಭಿವೃದ್ಧಿ ಅತ್ಯಗತ್ಯ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ
Posted On:
15 AUG 2023 2:02PM by PIB Bengaluru
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಇಂದು ಕೆಂಪು ಕೋಟೆಯ ಕೊತ್ತಲಗಳಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಹಿಳಾ ನೇತೃತ್ವದ ಅಭಿವೃದ್ಧಿಯ ಮಹತ್ವವೇನು ಮತ್ತು ದೇಶವನ್ನು ಮುಂದೆ ಕೊಂಡೊಯ್ಯಲು ಇದು ಏಕೆ ಅವಶ್ಯಕ ಎಂಬುದನ್ನು ಒತ್ತಿ ಹೇಳಿದರು. ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಗರಿಷ್ಠ ಸಂಖ್ಯೆಯ ಮಹಿಳಾ ಪೈಲಟ್‌ಗಳನ್ನು ಭಾರತ ಹೊಂದಿದೆ ಎಂದು ಇಂದು ಹೆಮ್ಮೆಯಿಂದ ಹೇಳಬಹುದು ಎಂದು ಪ್ರಧಾನಿ ಸ್ಮರಿಸಿದರು. ಮಹಿಳಾ ವಿಜ್ಞಾನಿಗಳು ಸಹ ಚಂದ್ರಯಾನ ಮಿಷನ್ ಅನ್ನು ಮುನ್ನಡೆಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.
ʻಜಿ-20ʼ ಒಕ್ಕೂಟದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯ ವಿಷಯವನ್ನು ತಾವು ಮುನ್ನೆಲೆಗೆ ತಂದಿರುವುದಾಗಿ ತಿಳಿಸಿದರು. ʻಜಿ-20ʼ ದೇಶಗಳು ಅದನ್ನು ಒಪ್ಪಿಕೊಂಡಿವೆ, ಅದರ ಮಹತ್ವವನ್ನು ಅವು ಗುರುತಿಸುತ್ತಿವೆ ಎಂದು ಪ್ರಧಾನಿ ಹೇಳಿದರು.
'ನಾರಿ ಸಮ್ಮಾನ್' ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ತಮ್ಮ ವಿದೇಶ ಪ್ರವಾಸದ ಅನುಭವವನ್ನು ಹಂಚಿಕೊಂಡರು. ಅಲ್ಲಿ ಆ ದೇಶದ ಹಿರಿಯ ಸಚಿವರೊಬ್ಬರು ಭಾರತದ ಮಹಿಳೆಯರು ವಿಜ್ಞಾನ ಮತ್ತು ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಾರೆಯೇ ಎಂದು ಕೇಳಿದರು. ಇದಕ್ಕೆ ಉತ್ತರವಾಗಿ ಇಂದು ನಮ್ಮ ದೇಶದಲ್ಲಿ ʻಎಸ್‌ಟಿಇಎಂʼ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಅನ್ವೇಷಣೆಯಲ್ಲಿ ಬಾಲಕಿಯರು ಬಾಲಕರಿಗಿಂತ ಹೆಚ್ಚಾಗಿದ್ದಾರೆ. ಇಂದು ಜಗತ್ತು ನಮ್ಮ ಈ ಸಾಮರ್ಥ್ಯವನ್ನು ನೋಡುತ್ತಿದೆ ಎಂದು ಹೇಳಿದ್ದಾಗಿ ಪ್ರಧಾನಿ ಸ್ಮರಿಸಿದರು.
*****
(Release ID: 1949159)
Visitor Counter : 148
Read this release in:
Khasi
,
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam