ಪ್ರಧಾನ ಮಂತ್ರಿಯವರ ಕಛೇರಿ
ನಮ್ಮ ಗ್ರಂಥಾಲಯಗಳಲ್ಲಿ ಮೂಲಸೌಕರ್ಯಗಳ ಸುಧಾರಣೆಗೆ ವಿಶೇಷ ಒತ್ತು ನೀಡುವುದರಿಂದ ಓದಿನ ಮಹತ್ವದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿದಂತಾಗಲಿದೆ: ಪ್ರಧಾನ ಮಂತ್ರಿಗಳು
Posted On:
06 AUG 2023 7:14PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ಗ್ರಂಥಾಲಯಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಸೃಜನಶೀಲ ಬರವಣಿಗೆಗೆ ಉತ್ತೇಜನ ನೀಡುವುದರಿಂದ ಓದುವ ಮಹತ್ವವನ್ನು ಅದರಲ್ಲೂ ಯುವಜನತೆಯಲ್ಲಿ ಓದಿನ ಮಹತ್ವದ ಕುರಿತು ಹೆಚ್ಚಿನ ಅರಿವು ಮೂಡಿಸುತ್ತದೆ ಎಂದು ಹೇಳಿದರು.
ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿ ಇಂದು ' ಗ್ರಂಥಾಲಯಗಳ ಉತ್ಸವ- 2023' ಅನ್ನು ಉದ್ಘಾಟಿಸಿರುವುದಕ್ಕೆ ಪ್ರಧಾನ ಮಂತ್ರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜಾ ರಾಮ್ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನದ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿಗಳು, "ಈ ರೀತಿಯ ಪ್ರಯತ್ನಗಳು ಓದಿನ ಮಹತ್ವದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುತ್ತವೆ. ಅದರಲ್ಲೂ ವಿಶೇಷವಾಗಿ ಯುವಜನತೆಗೆ ಓದಿನ ಮಹತ್ವದ ಅರಿವಾಗುತ್ತದೆ. ನಮ್ಮ ಗ್ರಂಥಾಲಯಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ನೀಡುತ್ತಿರುವ ಮಹತ್ವ ಹಾಗೂ ಸೃಜನಶೀಲ ಬರವಣಿಗೆಗೆ ಉತ್ತೇಜಿಸುವ ಪ್ರಯತ್ನಗಳನ್ನು ಕಂಡಾಗ ಸಂತಸವಾಗುತ್ತದೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
******
(Release ID: 1946282)
Visitor Counter : 112
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam